For Quick Alerts
    ALLOW NOTIFICATIONS  
    For Daily Alerts

    ಅರುಂಧತಿ ಬಲೆಯಲ್ಲಿ ಬಿದ್ದಿರುವ ಪ್ರೀತೂವನ್ನು ರಕ್ಷಣೆ ಮಾಡುತ್ತಾನಾ ಆದಿ?

    By ಪೂರ್ವ
    |

    ಜೈಲಿನಲ್ಲಿದ್ದ ಅಖಿಲಾಂಡೇಶ್ವರಿಗೆ ಇದೀಗ ಬೇಲ್ ಸಿಕ್ಕಿ ಹೊರಬಂದಿದ್ದಾರೆ. ಮನೆ ಒಳಗೆ ಬಂದಾಗ ಅಖಿಲಾಂಡೇಶ್ವರಿಗೆ ಆರತಿ ಎತ್ತಿ ಮನೆಯ ಒಳಗೆ ಕರೆದುಕೊಂಡಿದ್ದಾರೆ ಕುಟುಂಬಸ್ಥರು. ಇದನ್ನೆಲ್ಲ ನೋಡಿದ ಅಖಿಲಾಗೆ ಕಣ್ಣು ತುಂಬಿ ಬರುತ್ತದೆ. ಇದನ್ನೆಲ್ಲ ನೋಡಿದ ಅರುಂಧತಿಗೆ ಇದೀಗ ಅಖಿಲಾ ಮೇಲೆ ಅನುಮಾನ ಬಂದಿದೆ. ಪ್ರೀತಮ್ ಶೂಟ್ ಮಾಡಿದ್ದು ಎಂದು ಅಖಿಲಾಗೆ ಕ್ಲಿಯರ್ ಆಗಿ ಗೊತ್ತಿದೆ ಆದರೆ ಅಖಿಲಾ ಯಾಕೆ ಆ ತಪ್ಪನ್ನು ತಾನೇ ಮಾಡಿದೆ ಎಂದು ಒಪ್ಪಿಕೊಂಡು ಪೊಲೀಸರಿಗೆ ಶರಣಾದಳು ಎಂಬುವುದೇ ಅರುಂಧತಿ ಗೆ ಕಾಡುತ್ತಿರುವ ಬಹು ದೊಡ್ಡ ಪ್ರಶ್ನೆ.

    ಜೈಲಿನಲ್ಲಿ ಊಟ-ನಿದ್ದೆ ಸರಿಯಾಗಿ ಆಗದ ಕಾರಣ ಅಖಿಲಾಗೆ ಬಹಳ ಸುಸ್ತಾಗಿದೆ. ಅಖಿಲಾ ತನ್ನ ಗಂಡನಿಗೂ ಮಲಗಲು ಹೇಳುತ್ತಾಳೆ. ರಘು ನೀವು ಮಲಗಿ ನೋಡಿ ನಿಮ್ಮ ಮುಖ ಎಷ್ಟೊಂದು ಸಪ್ಪಗೆ ಆಗಿದೆ ನೀವು ರೆಸ್ಟ್ ಮಾಡಿ ಎನ್ನುತ್ತಾಳೆ ಅದಕ್ಕೆ ರಘು ಅಖಿಲಾ ನನಗೆ ಯಾವ ಊಟ ನಿದ್ದೇನೂ ಬೇಕಾಗಿಲ್ಲ. ನೀನು ಮನೆಗೆ ಬಂದೆ ಅಲ್ಲ ಅಷ್ಟೇ ಸಾಕು ಈ ಸಂತೋಷಕ್ಕೆ ನನ್ನ ಮನಸಲ್ಲಿ ಇದ್ದ ಎಲ್ಲಾ ಭಾರವೂ ಇಳಿದು ಹೋಗಿದೆ. ನಾನು ದೇವರಲ್ಲಿ ಬೇಡಿ ಕೊಳ್ಳುವುದು ಇಷ್ಟೇ ಆವತ್ತು ಆದ ಘಟನೆ ಇನ್ಯಾವತ್ತೂ ಆಗಬಾರದು ಎಂದು. ಏನೇ ಕಷ್ಟ ಬಂದರು ಅದು ನನಗೆ ಬರಲಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖಿಲ ಗಾಬರಿಗೊಂಡು ಬೇಡ ರಘು ಆ ರೀತಿ ಮಾತನಾಡಬೇಡಿ. ಮನಸ್ಸಿಗೆ ಬಹಳ ಕಷ್ಟ ಆಗುತ್ತದೆ. ಎಂದಾಗ ರಘು ಪುನಃ ಪ್ರೀತೂ ಹೆಸರು ತೆಗೆಯುತ್ತಾನೆ ಆತ ಒಬ್ಬ ಸರಿಯಾಗಿ ಇದ್ದಿದ್ದರೆ ಈ ರೀತಿ ಆಗುತ್ತಾ ಇರಲಿಲ್ಲ ಎಂದು ಹೇಳುತ್ತಾನೆ.

    ಆದಿಗೆ ಪ್ರೀತುಗೆ ಜವಾಬ್ದಾರಿ ವಹಿಸಿದ ಅಖಿಲಾ!ಆದಿಗೆ ಪ್ರೀತುಗೆ ಜವಾಬ್ದಾರಿ ವಹಿಸಿದ ಅಖಿಲಾ!

    ಅಖಿಲ ಜೊತೆ ನಗುಮೊಗದಿಂದ ಇದ್ದ ಮನೆಮಂದಿ

    ಅಖಿಲ ಜೊತೆ ನಗುಮೊಗದಿಂದ ಇದ್ದ ಮನೆಮಂದಿ

    ಇನ್ನೂ ಅಖಿಲಾಂಡೇಶ್ವರಿ ಎಲ್ಲರಿಗೂ ಕೈ ತುತ್ತು ನೀಡುತ್ತಾಳೆ. ಅರಸನಕೋಟೆ ಯಾವತ್ತೂ ಹೀಗೆ ಇರಬೇಕು, ಬಹಳ ಆನಂದದಿಂದ ಇರಬೇಕು ಎಂದು ಹೇಳುತ್ತಾಳೆ. ಬಳಿಕ ಅಖಿಲಾ ಮಾತ್ರ ಸರಿಯಾಗಿ ಊಟ ಮಾಡದೇ ಮಲಗಿ ಬಿಡುತ್ತಾಳೆ ಇದನ್ನು ನೋಡಿದ ರಘು ಗೆ ಬಹಳ ಬೇಸರ ಆಗುತ್ತದೆ. ಆದಿ ಬಳಿ ರಘು ಹೇಳುತ್ತಾನೆ ಅಖಿಲಾ ನಿದ್ದೇನೆ ಮಾಡಿಲ್ಲ. ಮನೆಗೆ ಬಂದ ಕೂಡಲೇ ನಿದ್ದೆ ಮಾಡಿದಳು. ಪ್ರೀತೂನ ಒಂದು ಮಾತು ಕೂಡ ಏನೂ ಅಂದಿಲ್ಲ. ಇಂತಹ ಮಹಾನ್ ತಾಯಿ ಅಖಿಲಾ. ಅಂತವರ ಹೊಟ್ಟೆಯಲ್ಲಿ ಇಂಥ ಮಗ ಹುಟ್ಟಿಬಿಟ್ಟನಲ್ಲ. ಕರುಳು ಹಿಂಡಿದ ಹಾಗೆ ಆಗುತ್ತದೆ ಎನ್ನುತ್ತಾನೆ.

    ಪ್ರೀತೂ ವರ್ತನೆಯಿಂದ ಬೇಸತ್ತ ರಘು

    ಪ್ರೀತೂ ವರ್ತನೆಯಿಂದ ಬೇಸತ್ತ ರಘು

    ಅಪ್ಪ ಅಮ್ಮನಿಗೆ ನಿಜವಾದ ಸಾವು ಯಾವಾಗ ಎಂದರೆ ಮಕ್ಕಳು ಬೆಳೆದು ನಿಂತಾಗ ಎಂದು ಹೇಳುತ್ತಾರೆ. ಬಳಿಕ ಮಾತು ಮುಂದುವರಿಸಿದ ರಘು ಎಲ್ಲಿ ದಾರಿ ತಪ್ಪುತ್ತಾರೋ ಏನು ಆಗುತ್ತೋ ಎಂಬ ಭಯದಲ್ಲಿಯೇ ಹೆತ್ತವರ ಮನಸ್ಸು ಬೇಸರ ಪಟ್ಟುಕೊಳ್ಳುತ್ತಾ ಇರುತ್ತದೆ. ಮುಂದೊಂದು ದಿನ ಅದೇ ಪ್ರೀತಿ ಕಾಳಜಿಗೆ ಅವರಿಗೇ ಮುಳ್ಳಾಗಿ ಚುಚ್ಚುತ್ತೆ ಎಂಬುವುದಕ್ಕೆ ನಮ್ಮ ಪ್ರೀತೂ ಸಾಕ್ಷಿ ಎಂದು ಹೇಳುತ್ತಾನೆ.

    ಮಗನ ಮೇಲೆ ಕೈ ಮಾಡಲು ಮುಂದಾದ ರಘು

    ಮಗನ ಮೇಲೆ ಕೈ ಮಾಡಲು ಮುಂದಾದ ರಘು

    ಅಪ್ಪನ ಮಾತಿಗೆ ಆದಿಗೆ ಬಹಳ ಬೇಸರ ಆಗುತ್ತದೆ. ಇನ್ನು ಕೋಪದಿಂದ ಬಂದು ರಘು, ಪ್ರೀತಂನ ಕೊರಳ ಪಟ್ಟಿ ಹಿಡಿದುಕೊಂಡು ಆತನ ಕೆನ್ನೆಗೆ ಬಾರಿಸಲು ಮುಂದಾಗುತ್ತಾರೆ. ಆದರೆ ಅವರನ್ನು ಆದಿ ತಡೆಯುತ್ತಾನೆ. ಬಳಿಕ ತಂದೆಯ ಬಳಿ ಕ್ಷಮೆ ಕೇಳುತ್ತಾನೆ. ಯಾಕಪ್ಪ ನೀವು ಪ್ರೀತಂ ಮೇಲೆ ಕೈ ಮಾಡುತ್ತಾ ಇದ್ದೀರಾ? ಎಂದಾಗ ರಘು ಕೋಪದಿಂದ ಮತ್ತೇನು ಮಾಡಬೇಕು. ಇವನು ಮಾಡಿದ ಕೆಲಸಕ್ಕೆ ಇವನಿಗೆ ಕೈ ಮುಗಿಬೇಕ? ಅರಸನ ಕೋಟೆಯ ನೆಮ್ಮದಿ ಹಾಳಾಗಲು ಇವನೇ ಕಾರಣ. ಇಷ್ಟೆಲ್ಲ ಆದರೂ ಇವನು ಮಾತ್ರ ಏನೂ ಆಗಿಲ್ಲ ಅನ್ನೋ ಹಾಗೆ ಸುಮ್ಮನೆ ಕುಳಿತಿದ್ದಾನೆ ಎನ್ನುತ್ತಾನೆ.

    ಅಪ್ಪನಿಗೆ ತಿಳಿ ಹೇಳಿದ ಆದಿ

    ಅಪ್ಪನಿಗೆ ತಿಳಿ ಹೇಳಿದ ಆದಿ

    ಪ್ರೀತೂವನ್ನು ನೋಡಿದ ಆದಿ ಹೇಳುತ್ತಾನೆ, ಪ್ರೀತಮ್ ನೀನು ರೂಮಿಗೆ ಹೋಗು ಎನ್ನುತ್ತಾನೆ ಆದರೆ ಪ್ರೀತೂ ಮಾತ್ರ ಒಬ್ಬನೇ ಸುಮ್ಮನೆ ನಿಂತಿರುವುದನ್ನು ಕಂಡ ಆದಿ ಹೇಳುತ್ತಾನೆ ಪ್ರೀತೂ ನಿನಗೆ ಹೇಳುತ್ತ ಇರುವುದು ಹೋಗು ರೂಮಿಗೆ ಎಂದು ಹೇಳಿದಾಗ ಪ್ರೀತಮ್ ರೂಮ್ ಗೆ ಹೋಗುತ್ತಾನೆ. ಬಳಿಕ ರಘು ಗೆ ನಿಜ ವಿಚಾರ ಹೇಳುತ್ತಾರೆ ಆದಿ. ಪ್ರೀತೂ ಟ್ರಾಪ್ ಗೆ ಒಳಗಾಗಿದ್ದಾನೆ ಅದೇನು ಯಾವ ತರ ಆತನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವುದನ್ನು ಕಂಡು ಹಿಡಿಬೇಕು ಅಪ್ಪ ಎಂದು ಹೇಳುತ್ತಾ ಇರುತ್ತಾರೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

    English summary
    Kannada serial Paaru written updated on 2th November episode. Know more.
    Thursday, November 3, 2022, 23:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X