For Quick Alerts
  ALLOW NOTIFICATIONS  
  For Daily Alerts

  ಅರುಂಧತಿ-ರಾಣಾ ಆಡಿದ ಮೋಸದಾಟ ಬಯಲಾಗುತ್ತಾ?

  By ಪೂರ್ವ
  |

  'ಪಾರು' ಧಾರಾವಾಹಿ ವೀಕ್ಷಕರಿಗೆ ಕುತೂಹಲ ಮೂಡಿಸಿದೆ. ಅರುಂಧತಿ ಇದೀಗ ಅರಸನಕೋಟೆಗೆ ೦ ಕೊಟ್ಟಿದ್ದಾಳೆ. ಅಖಿಲಾಂಡೇಶ್ವರಿ ಮನೆಗೆ ಗಣೇಶನ ಮೂರ್ತಿ ಜೊತೆ ಆಗಮಿಸಿದ್ದಾಳೆ. ಮನೆಯಲ್ಲಿ ಗಣೇಶನ ಮೂರ್ತಿ ತರಲು ಅಖಿಲಾಂಡೇಶ್ವರಿ ತನ್ನ ಮಕ್ಕಳಿಗೆ ಹೇಳುತ್ತಿದ್ದ ವೇಳೆಗೆ ಅರುಂಧತಿಯೆ ಗಣೇಶನ ವಿಗ್ರಹ ತಂದಿದ್ದು ನೋಡಿ ಮನೆಯವರಿಗೆ ಶಾಕ್ ಆಗಿದೆ. ಏನಿದು ಅರುಂಧತಿ ನಮ್ಮ ಮನೆಗೆ ಬಂದಿದ್ದಾಳ ಇನ್ನೂ ಏನೇನೆಲ್ಲಾ ಗ್ರಹಚಾರ ನಮಗೆ ಕಾದಿದೆಯೋ ಎಂದು ಯೋಚನೆ ಮಾಡುತ್ತಿರುತ್ತಾರೆ ಮನೆ ಮಂದಿ.

  ಅರುಂಧತಿ, ಅಖಿಲಾಂಡೇಶ್ವರಿಯನ್ನು ನೋಡಿ ಪೂಜೆ ಮುಗಿಯುವ ತನಕ ಇಲ್ಲೇ ಇರುತ್ತೇನೆ ಆ ಬಳಿಕ ಇಲ್ಲಿಂದ ತೆರಳುತ್ತೇನೆ ಎಂದು ಹೇಳುತ್ತಾಳೆ. ಇದನ್ನು ನಂಬಿ ಅಖಿಲಾಂಡೇಶ್ವರಿ, ಅರುಂಧತಿಯನ್ನು ಒಳ ಬರಲು ಹೇಳುತ್ತಾರೆ. ಏನಪ್ಪ ಅಖಿಲಾಂಡೇಶ್ವರಿ ಅಷ್ಟು ಸುಲಭವಾಗಿ ಅರುಂಧತಿಯನ್ನು ನಂಬಿ ಬಿಟ್ಟರಾ ಎಂಬ ಯೋಚನೆಯೂ ಬರುತ್ತದೆ. ಇನ್ನೂ ರಘು, ಅಖಿಲಾಂಡೇಶ್ವರಿಯನ್ನು ಕರೆದು ಏನು ಅಖಿಲ ಇದೆಲ್ಲ ಏಷ್ಟು ಸುಲಭವಾಗಿ ಆಕೆಯನ್ನು ನಂಬಿದೆ ನೀನು ಏನಾಗಿದೆ ನಿನಗೆ. ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಕೇಳುತ್ತಾನೆ.

  ಗಣೇಶನ ವಿಗ್ರಹ ಹಿಡಿದು ಮನೆಗೆ ಬಂದ ಅರುಂಧತಿ

  ಗಣೇಶನ ವಿಗ್ರಹ ಹಿಡಿದು ಮನೆಗೆ ಬಂದ ಅರುಂಧತಿ

  ಅದಕ್ಕೆ ಅಖಿಲಾಂಡೇಶ್ವರಿ ಹೇಳುತ್ತಾರೆ ಏನು ಇಲ್ಲ, ಅರುಂಧತಿ ಗಣೇಶನ ವಿಗ್ರಹ ಹಿಡಿದುಕೊಂಡು ನಮ್ಮ ಮನೆಗೆ ಬಂದ ಕಾರಣ ಆಕೆಯನ್ನು ಮನೆ ಒಳಗೆ ಪ್ರವೇಶಿಸಲು ಬಿಟ್ಟೆ. ಹಾಗೆಯೇ ಪೂಜೆ ಮುಗಿಯುವವರೆಗೆ ಆಕೆ ಇಲ್ಲಿ ಇದ್ದು ಹೋಗುತ್ತೇನೆ ಎಂದು ಹೇಳಿದಾಗ ನನಗೆ ಏನು ಹೇಳಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ರಘು ಹೇಳುತ್ತಾರೆ ನೀನು ಏಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಿಯಾ ಎಂಬ ಅರಿವು ಇದೆಯಾ ಎಂದೆಲ್ಲಾ ಕೇಳುತ್ತಾನೆ. ಅದಕ್ಕೆ ಅಖಿಲಾಂಡೇಶ್ವರಿ, ರಘುಗೆ ಎಷ್ಟೇ ಸಮಜಾಯಿಷಿ ನೀಡಿದರು ರಘು ಮಾತ್ರ ಇದಕ್ಕೆಲ್ಲ ಮೌನವಾಗಿ ಇರುತ್ತಾರೆ.

  ಮುಂದೇನು ಮಾಡುತ್ತಾಳೆ ಅಖಿಲ

  ಮುಂದೇನು ಮಾಡುತ್ತಾಳೆ ಅಖಿಲ

  ಇನ್ನು ಪ್ರೀತು, ಆದಿ ಹಾಗೂ ಪಾರು ಅವರ ಫೋಟೋ ನೋಡಿ ಅಳುತ್ತಾನೆ. ಅತ್ತಿಗೆ ನಾನು ಏಷ್ಟು ತೊಂದರೆ ಮಾಡಿದರು ಅಷ್ಟು ಜೋರಾಗಿ ನಿಮ್ಮನ್ನು ದೂಡಿ ಹಾಕಿದರು ನೀವು ಮಾತ್ರ ನನಗೆ ಏನು ಅನ್ನದೆ ಸಮಾಧಾನದಿಂದ ಇದ್ದೀರಾ ನನಗೆ ನನ್ನ ಬಗ್ಗೆಯೇ ಬೇಸರ ಮೂಡುತ್ತಿದೆ ಎಂದುಕೊಳ್ಳುತ್ತಾನೆ. ಈ ವೇಳೆ ಆದಿ ಅಲ್ಲಿಗೆ ಬರುತ್ತಾನೆ ಪ್ರೀತು ನಿನಗೆ ಏನಾಗಿದೆ ಹೇಳು ನಾನು ಸರಿ ಪಡಿಸುತ್ತೇನೆ. ನೀನು ಮನದಲ್ಲಿ ಬೇಸರ ಪಟ್ಟುಕೊಳ್ಳಬೇಡ ಎಂದೆಲ್ಲಾ ಹೇಳುತ್ತಾನೆ.

  ಅಣ್ಣ ಅತ್ತಿಗೆ ಫೋಟೋ ನೋಡಿ ಅತ್ತ ಪ್ರೀತು

  ಅಣ್ಣ ಅತ್ತಿಗೆ ಫೋಟೋ ನೋಡಿ ಅತ್ತ ಪ್ರೀತು

  ನನ್ನ ಬಳಿ ಯಾವುದೇ ವಿಚಾರವನ್ನು ಹೇಳಿಕೊಳ್ಳಬಹುದು ಎಲ್ಲವನ್ನೂ ನಾನು ಸರಿಪಡಿಸುತ್ತೇನೆ ಎಂದು ಆದಿ ಎಷ್ಟೇ ಹೇಳಿದರೂ ಪ್ರೀತು ಮಾತ್ರ ಏನಿಲ್ಲ ಎಂದಷ್ಟೇ ಹೇಳುತ್ತಾನೆ. ನನ್ನ ಬಳಿ ಆ ವಿಚಾರ ಹೇಳಲು ಆಗುವುದಿಲ್ಲವೇ ಎಂದೆಲ್ಲಾ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾನೆ. ಇದ್ಯಾವುದಕ್ಕೂ ಪ್ರೀತು ಬಳಿ ಉತ್ತರ ಇಲ್ಲ. ಇನ್ನೂ ಅಖಿಲಾಂಡೇಶ್ವರಿ ಮನೆಗೆ ಕಿರಿಯ ಸ್ವಾಮಿಗಳು ಆಗಮಿಸುತ್ತಾರೆ. ಹಿರಿಯ ಸ್ವಾಮಿಗಳು ಪೂಜೆ ನಿಮಿತ್ತ ಹೋಗಿರುವ ಕಾರಣ ಯಾವಾಗ ಬೇಕಾದರೂ ನಿಮ್ಮ ಮನೆಗೆ ಬರಬಹುದು ಎಂದು ಕಿರಿಯ ಸ್ವಾಮಿಗಳು ಅಖಿಲಾಂಡೇಶ್ವರಿ ಬಳಿ ಹೇಳುತ್ತಾರೆ.

  ಅಖಿಲಾಂಡೆಶ್ವರಿ ಮನೆಗೆ ಭೇಟಿ ನೀಡಿದ ಕಿರಿಯ ಶ್ರೀ

  ಅಖಿಲಾಂಡೆಶ್ವರಿ ಮನೆಗೆ ಭೇಟಿ ನೀಡಿದ ಕಿರಿಯ ಶ್ರೀ

  ನಿಮ್ಮ ಕಾರ್ಯಕ್ಕೆ ವಿಘ್ನ ಆಗಬಾರದು ಎಂದು ನನ್ನನ್ನು ಕಳುಹಿಸಿದ್ದಾರೆ ಎಂದು ಕಿರಿಯ ಸ್ವಾಮೀಜಿ ಹೇಳುತ್ತಾರೆ. ಬಳಿಕ ಅರಸನ ಕೋಟೆಯಲ್ಲಿ ಅದ್ಭುತವಾಗಿ ಗಣಪತಿಯ ಪೂಜೆ ನಡೆಯುತ್ತದೆ. ಅರುಂಧತಿ ತಮ್ಮ ಬದ್ದ ಶತ್ರು ಆಗಿದ್ದರು. ಪೂಜೆಗೆ ಆಗಮಿಸಿರುವುದು ಸ್ವಲ್ಪ ಆಶ್ಚರ್ಯದ ಸಂಗತಿಯೇ. ಪೂಜೆ ನಡೆದ ಬಳಿಕ ಪ್ರೀತು ಹಾಗೂ ಅರುಂಧತಿ ಮಾತನಾಡುತ್ತಾ ಇರುವಾಗ ಪ್ರೀತು ಕೋಪನೆತ್ತಿಗೇರಿತು. ಆ ವೇಳೆ ಅರುಂಧತಿ ವಿಡಿಯೋವನ್ನು ಎಲ್ಲರಿಗೂ ತೋರಿಸಿಬಿಡುತ್ತೇನೆ ಎಂದು ಹೆದರಿಸುತ್ತಾರೆ. ಇದನ್ನು ಕಂಡ ಪ್ರೀತು ಅರುಂಧತಿ ಕೈ ಮುಗಿಯುತ್ತಾನೆ ಈ ದೃಶ್ಯವನ್ನು ಆದಿ ನೋಡಿದ್ದಾನೆ ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

  English summary
  Kannada serial Paaru written updated on 2th September. Know more about the episode.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X