For Quick Alerts
  ALLOW NOTIFICATIONS  
  For Daily Alerts

  ಅಖಿಲಾಂಡೇಶ್ವರಿಯನ್ನು ಗಂಡಾಂತರದಿಂದ ಕಾಪಾಡಿದ ಪಾರು!

  By ಪೂರ್ವ
  |

  'ಪಾರು' ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಪ್ರೀತು ನಡವಳಿಕೆಯಿಂದ ಆದಿಗೆ ಅನುಮಾನ ಬಲಗೊಳ್ಳುತ್ತಿದೆ. ಪ್ರೀತು ಕೋಪದಿಂದ ರಾಣಾನಿಗೆ ಕರೆ ಮಾಡಿ ಇವತ್ತು ನಾನಾ ನೀನಾ ಎಂಬುವುದನ್ನು ನೋಡೆ ಬಿಡೋಣ ಎಂದು ಹೇಳುತ್ತಾನೆ.

  ಆದರೆ ರಾಣಾ ಈ ಬಗ್ಗೆ ಅರುಂಧತಿ ಬಳಿ ಹೇಳಿದಾಗ ರಾಣಾಗೆ ಸುಮ್ಮನಿರುವಂತೆ ಆಜ್ಞಾಪಿಸುತ್ತಾಳೆ. ಇಲ್ಲಿಗೆ ಬಂದ ಮೇಲೆ ಆತ ಎಗರಾಡಿದರೆ ಮತ್ತೆ ನೋಡಿಕೊಳ್ಳೋಣ ಎಂದು ಹೇಳುತ್ತಾಳೆ. ತಂಗಿ ಮಾತಿಗೆ ಬೆಲೆಕೊಟ್ಟು ಏನು ಮಾತನಾಡದೆ ಸುಮ್ಮನಿರುತ್ತಾನೆ. ಅರುಂಧತಿ, ಅಖಿಲಾಂಡೇಶ್ವರಿ ಮನೆಯವರಿಗೆ ಏಷ್ಟು ಕಾಟ ಕೊಡಬೇಕೋ ಅಷ್ಟೂ ಕಾಟ ಕೊಡುತ್ತಾಳೆ.

  ಕುಪಿತಗೊಂಡಿದ್ದ ಪ್ರೀತು ಕಾರಿನಲ್ಲಿ ರಾಣಾನ ಬಳಿ ಹೋಗುತ್ತಿರುತ್ತಾನೆ. ಇವತ್ತು ಏನಾದರೊಂದು ತೀರ್ಮಾನ ಆಗಲೇ ಬೇಕು ಎಂದು ಹೇಳುತ್ತಿರುತ್ತಾನೆ. ಪ್ರೀತು ಏನೋ ಕೋಪದಲ್ಲಿ ಇದ್ದಾನೆ. ಆತನನ್ನು ಯಾರೋ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಾ ಇದ್ದಾರೆ ಎಂದೆಲ್ಲ ಯೋಚಿಸುತ್ತಾ ಪ್ರೀತು ಹಿಂದೆಯೇ ಬರುತ್ತಾನೆ ಆದಿ. ಅಣ್ಣ ಹಿಂದಿನಿಂದ ಬರುತ್ತಿರುವುದನ್ನು ನೋಡಿದ ಪ್ರೀತು ಅಲರ್ಟ್ ಆಗುತ್ತಾನೆ. ಅಣ್ಣ ನನ್ನ ಫಾಲೋ ಮಾಡಿಕೊಂಡು ಬರುತ್ತಿದ್ದಾನೆ ಈಗ ರಾಣಾನ ಬಳಿ ಹೋದರೆ ಕೆಲಸ ಕೆಟ್ಟು ಹೋಗುತ್ತದೆ ಎಂದು ತಿಳಿದು ಕಾರನ್ನು ಬದಿಗೆ ಹಾಕುತ್ತಾನೆ.

  ಆಫೀಸಿಗೆ ತೆರಳಿದ ಆದಿ

  ಆಫೀಸಿಗೆ ತೆರಳಿದ ಆದಿ

  ಬಳಿಕ ಸುಮ್ಮನೆ ಅಣ್ಣನ ಹಾದಿ ತಪ್ಪಿಸಲು ಫೋನ್‌ನಲ್ಲಿ ಇವತ್ತು ಬರಲು ಸಾದ್ಯವಿಲ್ಲ ಗೆಳೆಯ ಇನ್ನೊಂದು ಬಾರಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇದನ್ನು ನೋಡಿದ ಆದೀಗೆ ಕೊಂಚ ಶಾಕ್ ಆದರೂ ಸಾವಾರಿಸಿಕೊಂಡು ಆಫೀಸಿಗೆ ಹೋಗುತ್ತಾನೆ. ಅಖಿಲಾಂಡೇಶ್ವರಿ ನಾಳೆ ಮಾಡಲಿರುವ ವ್ರತದ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ನಾಳೆ ಎಲ್ಲರೂ ಪೂಜೆಗೆ ಬರಬೇಕು. ದೇವಸ್ಥಾನಕ್ಕೆ ತೆರಳಿ ವ್ರತಗಳನ್ನು ಮಾಡಬೇಕು ಎಂದೆಲ್ಲ ಮನೆಯವರಿಗೆ ತಿಳಿ ಹೇಳುತ್ತಿರುತ್ತಾರೆ.

  ಒಂದು ತುತ್ತು ಅನ್ನ ತಿನ್ನದೆ ದೇವಾಲಯಕ್ಕೆ ತೆರಳಿದ ಅಖಿಲ

  ಒಂದು ತುತ್ತು ಅನ್ನ ತಿನ್ನದೆ ದೇವಾಲಯಕ್ಕೆ ತೆರಳಿದ ಅಖಿಲ

  ನಾಳೆ ವ್ರತ ನಡೆಯುವ ವೇಳೆ ಎಲ್ಲರೂ ದೇವಸ್ಥಾನದಲ್ಲಿ ಇರಬೇಕು ಎಂದು ಹೇಳುತ್ತಾರೆ. ಇನ್ನೂ ಅರುಂಧತಿ ಮಾತ್ರ ವ್ರತ ನಡೆದರೆ ನಮಗೆ ಕಂಟಕ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಈ ವ್ರತ ನಡೆಯಬಾರದು ಇದನ್ನು ತಡೆಯ ಬೇಕು ಎಂದುಕೊಳ್ಳುತ್ತಾಳೆ. ಇತ್ತ ಅಖಿಲಂಡೇಶ್ವರಿ ಮಾತನಾಡುತ್ತಿರುವ ದೃಶ್ಯಾವಳಿಯನ್ನು ನೋಡುತ್ತಿದ್ದ ಅರುಂಧತಿ, ರಾಣಾನ ಬಳಿ ಪ್ರೀತುಗೆ ಕರೆ ಮಾಡಲು ಹೇಳುತ್ತಾಳೆ. ಪ್ರೀತುಗೆ ರಾಣಾ ಕರೆ ಮಾಡಿ ದೇವಾಲಯಕ್ಕೆ ಹೋಗದಂತೆ ತಡೆಯುವ ಪ್ರಯತ್ನ ಮಾಡುತ್ತಾನೆ.

  ರಾಣಾನ ಮಾತು ಕೇಳದ ಪ್ರೀತು

  ರಾಣಾನ ಮಾತು ಕೇಳದ ಪ್ರೀತು

  ಆದರೆ ಪ್ರೀತೂ ಈ ಬಗ್ಗೆ ರಾಣಾನ ಬಳಿ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. ಬಳಿಕ ಕರೆ ಸ್ಥಗಿತಗೊಳಿಸಿ ಅಮ್ಮನ ಬಳಿ ಪ್ರೀತು ಹೇಳುತ್ತಾನೆ. ಅಮ್ಮ ಬನ್ನಿ ದೇವಾಲಯಕ್ಕೆ ಹೋಗೋಣ ಎಂದಾಗ ಅಖಿಲಾಂಡೇಶ್ವರಿ ಗೆ ಬಹಳ ಖುಷಿ ಆಗುತ್ತದೆ ಬಳಿಕ ದೇವಾಲಯಕ್ಕೆ ಕುಟುಂಬ ಸಮೇತರಾಗಿ ತೆರಳುತ್ತಾರೆ. ದೇವಾಲಯದಲ್ಲಿ ಅಖಿಲಾಂಡೇಶ್ವರಿ ವ್ರತವನ್ನು ಮಾಡಲು ಸಿದ್ದಳಾಗುತ್ತಾಳೆ. ಬಳಿಕ ತಲೆಯ ಮೇಲೆ ನೀರಿನ ಕೊಡಪಾನವನ್ನು ಇಟ್ಟುಕೊಂಡು ದೇವರ ದರ್ಶನ ಮಾಡಬೇಕು ಎಂದು ನಂಬಿಕೆ. ಅರ್ಚಕರು ಈ ವೇಳೆ ಬಹಳ ಸ್ಪಷ್ಟವಾಗಿ ಹೇಳುತ್ತಾರೆ. ಈ ಕೊಡವನ್ನು ಎಲ್ಲಿಯೂ ಬೀಳಿಸಬಾರದು ಎಂದು.

  ಅಪಾಯದಲ್ಲಿ ಸಿಲುಕಿದ ಪಾರು

  ಅಪಾಯದಲ್ಲಿ ಸಿಲುಕಿದ ಪಾರು

  ಇದನ್ನು ಕೇಳಿಸಿಕೊಂಡ ಅಖಿಲಾಂಡೇಶ್ವರಿ ವ್ರತವನ್ನು ಮಾಡಲು ಹೊರಡುತ್ತಾರೆ. ದೇವಾಲಯದ ಮೆಟ್ಟಿಲು ಹತ್ತುತ್ತಾ ಇರಬೇಕಾದರೆ ಗಾಜಿನ ಚೂರುಗಳು ಪಾರೂಗೆ ಕಾಣಿಸುತ್ತದೆ. ಇದನ್ನು ನೋಡಿದ ಪಾರು ಗಾಜಿನ ಚೂರುಗಳ ಮೇಲೆ ಮಲಗಿ ಬಿಡುತ್ತಾಳೆ. ಅಖಿಲಂಡೇಶ್ವರಿ ಪಾರು ಮೇಲೆಯೇ ಹತ್ತಿ ದೇವಾಲಯಕ್ಕೆ ಹೋಗುತ್ತಾಳೆ. ಪಾರು ಮೆಟ್ಟಿಲ ಮೇಲೆ ಮಲಗಿರುವುದನ್ನು ನೋಡಿದ ಆದಿ ಏನು ಮಾಡುತ್ತಿದ್ದಿ ಪಾರು ಎಂದು ಹೇಳಿ ಆಕೆಯನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಾನೆ. ಆಗ ಪಾರು ಹೊಟ್ಟೆಗೆ ಗಾಜಿನ ಚೂರು ಚುಚ್ಚಿಕೊಂಡಿರುವುದನ್ನು ನೋಡಿ ಶಾಕ್ ಆಗುತ್ತಾನೆ. ಮುಂದೇನು ಎಂದು ಕಾದು ನೋಡಬೇಕಿದೆ.

  English summary
  Kannada serial Paaru written updated on 30th August. Know more about the episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X