Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅರಸನ ಕೋಟೆಯಲ್ಲಿ ಹೊಸ ವರುಷದ ಸಂಭ್ರಮ, ಅಖಿಲಾ ಮುಂದೆ ಸಿಕ್ಕಿ ಹಾಕಿಕೊಂಡಳಾ ಮೋನಿಕಾ?
ಮೋನಿಕಾ ಮಾತು ಕೇಳಿದ ಪ್ರೀತಮ್ ನೇರವಾಗಿ ಅಮ್ಮನ ಬಳಿ ಹೋಗುತ್ತಾನೆ. ಪ್ರೀತಮ್ ನನ್ನು ನೋಡಿದ ಅಖಿಲಾ 'ಏನು ಪ್ರೀತಮ್ ಏನಾದರು ಹೇಳುವುದು ಇತ್ತಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್ 'ಹೂ ಅಮ್ಮ ನಾನು ನಿಮ್ಮ ಜೊತೆ ಹೊರಗಡೆ ಬರುವುದಿಲ್ಲ ಸಾರಿ' ಎಂದು ಹೇಳುತ್ತಾನೆ ಇದನ್ನು ಕೇಳಿದ ಅಖಿಲಾಗೆ ಶಾಕ್ ಆಗುತ್ತದೆ ಹಾಗೂ ಬೇಸರ ಕೂಡ ಆಗುತ್ತದೆ. ಬಳಿಕ ಕಾರಣ ಕೇಳುತ್ತಾಳೆ, ಅಷ್ಟರಲ್ಲಿ ಅಲ್ಲಿಗೆ ಜನನಿ ಬರುತ್ತಾಳೆ, ಅಖಿಲಾ ಗಟ್ಟಿ ಧ್ವನಿಯಲ್ಲಿ ಪ್ರೀತಮ್ ಜೊತೆ ಕಾರಣ ಹೇಳು ಪ್ರೀತಮ್ ಎಂದು ಕೇಳುತ್ತಾಳೆ. ನಮ್ಮ ಜೊತೆ ಹೊರಗಡೆ ಊಟಕ್ಕೆ ಬರೋದಿಲ್ಲ ಎಂದು ಯಾಕೆ ಹೇಳಿದೆ. ಎಂದು ಕೇಳಿದಾಗ ಅಲ್ಲಿಗೆ ಪಾರು ಬರುತ್ತಾಳೆ.
ಪಾರು, ಇದಕ್ಕೆ ಕಾರಣ ನನಗೆ ತಿಳಿದಿದೆ ಅಮ್ಮ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್ ಹಾಗೂ ಜನನಿಗೆ ಕೊಂಚ ಶಾಕ್ ಆದರೂ ಸುಮ್ಮನೆ ಇರುತ್ತಾರೆ. 'ಪಾರು' ಮಾತು ಮುಂದುವರೆಸಿ, ಹೊಸ ವರ್ಷವನ್ನು ಯಾಕೆ ಹೊರಗಡೆ ಆದರಣೆ ಮಾಡಬೇಕು. ಮನೆಯಲ್ಲಿ ಒಳ್ಳೆಯ ಅಡುಗೆ ಮಾಡಿ ಒಟ್ಟಿಗೆ ಆಚರಣೆ ಮಾಡಬಹುದು ಅಲ್ವಾ ಎನ್ನುವುದು ಅವರ ಆಸೆ. ಅಷ್ಟೆ ಅಲ್ಲ ಅಮ್ಮ ಮಹಡಿ ಮೇಲೆ ಕೇಕ್ ಕಟ್ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಇದನ್ನೆಲ್ಲ ನಿಮ್ಮ ಬಳಿ ಹೇಳಲು ಯೋಚನೆ ಮಾಡುತ್ತಾ ಇದ್ದಾರೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಅಖಿಲಾಗೆ ಬಹಳ ಖುಷಿ ಆಗುತ್ತದೆ ಯಾವ ಉದ್ದೇಶಕ್ಕಾಗಿ ಹೊರಗಡೆ ಹೋಗಿ ಊಟ ಮಾಡಬೇಕು ಅಂದುಕೊಂಡಿದ್ದೆವು ಅದು ಮನೆಯಲ್ಲಿ ಈಡೇರುತ್ತೆ ಅನ್ನುವುದೇ ಆದರೆ ಯಾಕೆ ಆಗಬಾರದು ಪ್ರೀತಿ ಹೇಳುವ ಪ್ರಕಾರ ಹೊಸ ವರುಷದ ಆಚರಣೆಯನ್ನು ಮನೆಯಲ್ಲಿಯೇ ಮಾಡೋಣ ಎಂದು ಹೊಸ ಉಡುಪುಗಳನ್ನು ತೊಟ್ಟುಕೊಳ್ಳಲು ಹೋಗುತ್ತಾರೆ. ಇದರಿಂದ ಮನೆ ಮಂದಿಗೆಲ್ಲ ಖುಷಿ ಆಗುತ್ತದೆ. ಪಾರು ಆಡಿದ ಮಾತುಗಳನ್ನು ಕೇಳಿ ಜನನಿಗೆ ಖುಷಿ ಆಗುತ್ತದೆ.

ಪಾರು ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತಾಳಾ ಜನನಿ?
ಪಾರು ಹಾಗೂ ಆದಿ ಮುನಿಸಿನ ಹಿಂದೆ ಇರುವ ಪ್ರೀತಿಯನ್ನು ಜನನಿ ಅರ್ಥ ಮಾಡಿಕೊಳ್ಳುತ್ತಾಳೆ. ಇನ್ನು ಮೋನಿಕಾ ಮನದಲ್ಲಿಯೇ ಯೋಚನೆ ಮಾಡುತ್ತಾರೆ ಪ್ರೀತಮ್ ನನ್ನ ಜೊತೆ ಲಾಕ್ ಆಗಿದ್ದಾನೆ. ಹಾಗೆಯೇ ಆತ ಹೋಗದೆ ಇರುವುದಕ್ಕೆ ಏನು ಕಾರಣ ಕೊಡುತ್ತಾನೆ ನೋಡಲೇ ಬೇಕು ಎಂದುಕೊಳ್ಳುತ್ತಾ ಇರುತ್ತಾಳೆ. ಆ ವೇಳೆ ಜನನಿ ಮೋನಿಕಾ ಬಳಿಗೆ ಬರುವಾಗ ಮೋನಿಕಾ ಜನನಿಯನ್ನು ಕೇಳುತ್ತಾರೆ ಜನನಿ ಅವರೇ ನಿಮ್ಮ ಡ್ರೆಸ್ ಚೆನ್ನಾಗಿ ಇದೆ. ನೀವು ಎಲ್ಲಿಯಾದರೂ ಹೊರಟಿದ್ದೀರಾ ಎಂದು ಕೇಳುತ್ತಾಳೆ.

ಮೋನಿಕಾ ಬಳಿ ಸುಳ್ಳು ಹೇಳಿದ ಜನನಿ
ಇದನ್ನು ಕೇಳಿದ ಜನನಿಗೆ ಆದಿ ಹಾಗೂ ಪಾರು ಮಾತನಾಡುತ್ತಾ ಇರುವುದನ್ನು ನೆನಪು ಮಾಡಿಕೊಂಡ ಜನನಿ ಬಳಿಕ ಮೋನಿಕಾ ಬಳಿ ಹೇಳುತ್ತಾ ಇರುತ್ತಾಳೆ ಹಾ ಹೌದು ಅತ್ತೆಯ ಜೊತೆ ಹೊರಟೆವು ಎಂದು ಹೇಳುತ್ತಾಳೆ ಇದನ್ನು ಕೇಳಿದ ಮೋನಿಕಾ ಬಹಳ ಖುಷಿ ಪಡುತ್ತಾಳೆ ಜನನಿ ಬಳಿ ಎಲ್ಲವನ್ನೂ ವಿಚಾರಣೆ ಮಾಡುತ್ತಾಳೆ. ಜನನಿ ಎಲ್ಲವನ್ನೂ ಸುಳ್ಳು ಹೇಳುತ್ತಾಳೆ. ಇತ್ತ ಮೋನಿಕ ಜನನಿ ಹೇಳುವುದೇ ನಿಜ ಎಂದುಕೊಂಡು ಖುಷಿ ಪಡುತ್ತಾಳೆ.

ಮೋನಿಕಾಗೆ ಬಿಗ್ ಶಾಕ್
ಮೋನಿಕಾ ಮಹಡಿ ಮೇಲೆ ಕೇಕ್ ಹಿಡಿದುಕೊಂಡು ಬರುತ್ತಾಳೆ. ಆ ವೇಳೆ ಮಹಡಿ ಮೇಲೆ ಡೇಕೋರೇಶನ್ ಮಾಡುತ್ತಾ ಇರುತ್ತಾರೆ. ಇದನ್ನೆಲ್ಲ ನೋಡಿದ ಮೋನಿಕಾಗೆ ಏನಿದು ಎಂದು ಅನ್ನಿಸುತ್ತದೆ. ಬಳಿಕ ಅರಸನ ಕೋಟೆಯ ಮನೆಯವರು ಬರುತ್ತಾರೆ. ಅವರನ್ನೆಲ್ಲ ನೋಡಿ ಮೋನಿಕಾಗೆ ಶಾಕ್ ಆಗುತ್ತದೆ ಪ್ರೀತಮ್ ಗೆ ಎಲ್ಲಾ ತಿಳಿದೂ ಇದ್ದರೂ ನಾಟಕ ಆಡುತ್ತಾ ಇರುತ್ತಾನೆ. ಇನ್ನು ಅಖಿಲಾ ಕೇಕ್ ನೋಡಿ ಶಾಕ್ ಆಗುತ್ತಾಳೆ.

ಸಿಕ್ಕಿಹಾಕಿಕೊಂಡಳಾ ಮೋನಿಕಾ
ಕೇಕ್ ನಲ್ಲಿ ಹ್ಯಾಪಿ ನೀವ್ ಇಯರ್ ಮೈ ಡಿಯರ್ ಪ್ರೀತಮ್ ಎಂದು ಬರೆದಿದೆ. ಇದೆಲ್ಲವನ್ನೂ ಯಾರು ಮಾಡಿಸಿದ್ದು ಕಳೆದ ವರುಷ ಪಾರ್ವತಿ ಕೇಕ್ ಮಾಡಿ ತರುತ್ತಾ ಇದ್ದೆ ಈ ಬಾರಿ ಯಾರು ಕೇಕ್ ತೆಗೆದುಕೊಂಡು ಬಂದಿದ್ದು ಎಂದೆಲ್ಲ ಹಲವಾರು ಪ್ರಶ್ನೆಗಳನ್ನು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಇರುತ್ತಾರೆ ಇದನ್ನೆಲ್ಲ ಕೇಳಿದ ಜನನಿ, ಈ ಬಾರಿ ಮೋನಿಕಾ ಕೇಕ್ ತರಿಸಿದ್ದು ಎಂದು ಹೇಳುತ್ತಾಳೆ ಇದನ್ನು ಕೇಳಿ ಅಖಿಲಾಗೆ ಕೊಂಚ ಶಾಕ್ ಆಗುತ್ತದೆ. ಬಳಿಕ ಅಖಿಲಾ ಹೇಳುತ್ತಾಳೆ ಇದೆಲ್ಲವನ್ನೂ ಬರೆದಿದ್ದು ಹಾಗಾದರೆ ಮೋನಿಕಾನ ಎಂದು ಕೇಳಿದಾಗ ಮೋನಿಕಾ ಭಯದಿಂದ ತತ್ತರಿಸಿ ಹೋಗುತ್ತಾಳೆ ಮುಂದೇನು ಕಾದು ನೋಡಬೇಕಿದೆ.