For Quick Alerts
  ALLOW NOTIFICATIONS  
  For Daily Alerts

  ಪ್ರೀತು ನಡವಳಿಕೆಯಿಂದ ಕಂಗಾಲಾದ ಅಖಿಲ! ಆದಿಗೆ ಅಮ್ಮನ ಮೇಲೆ ಅನುಮಾನ

  By ಪೂರ್ವ
  |

  ಪ್ರೀತೂ ನಡವಳಿಕೆ ದಿನ ಕಳೆದಂತೆ ಮಿತಿ ಮೀರುತ್ತಿದೆ. ಇದೀಗ ರಾಣಾ ಹೇಳಿದಂತೆ ಪಾರುವನ್ನು ಜೋರಾಗಿ ಕರೆಯುತ್ತಾನೆ. ಪಾರ್ವತಿ ಒಂದು ಗ್ಲಾಸ್ ನೀರು ಎಂದು ಹೇಳುತ್ತಾನೆ. ಆಗ ಪಾರು ನೀರು ತೆಗೆದುಕೊಂಡು ಬಂದು ಕೊಡುತ್ತಾಳೆ. ಬಳಿಕ ಅಲ್ಲಿಂದ ತೆರಳಲು ಅನುವಾದಾಗ ಲೋಟ ಯಾರು ತೆಗೆದುಕೊಂಡು ಹೋಗುತ್ತಾರೆ ಎಂದಾಗ ಪಾರು ಅಲ್ಲಿಯೇ ನಿಲ್ಲುತ್ತಾಳೆ. ಬಳಿಕ ನೀರು ಕುಡಿದು ಲೋಟವನ್ನು ಕೊಡುತ್ತಾನೆ. ಆ ವೇಳೆ ರಾಣಾ ಪ್ರೀತುಗೆ ಹೇಳುತ್ತಾನೆ ಪಾರು ನಡೆಯುವಾಗ ಕಾಲು ಕೊಟ್ಟು ಆಕೆಯನ್ನು ನೆಲಕ್ಕೆ ಬೀಳಿಸು ಎಂದು ಹೇಳುತ್ತಾನೆ.

  ಆ ವೇಳೆ ಆದಿ ಮಹಡಿ ಮೇಲಿಂದ ಇಳಿದು ಬರುತ್ತಿರುತ್ತಾರೆ. ಪ್ರೀತು, ಪಾರ್ವತಿ ಹೋಗುವ ವೇಳೆ ಕಾಲು ಕೊಡುತ್ತಾನೆ ಪಾರು ಒಮ್ಮೆಲೆ ಬೀಳಬೇಕು ಅನ್ನುವಷ್ಟರಲ್ಲಿ ಆದಿ, ಪಾರುವನ್ನು ಹಿಡಿದುಕೊಳ್ಳುತ್ತಾನೆ ಏನಾಯಿತು ಪಾರು ಎಂದು ಕೇಳುವ ವೇಳೆ ಪ್ರೀತು ಕಾಲನ್ನು ಹಿಂದೆ ತೆಗೆದುಕೊಂಡು ಹೋಗುವುದನ್ನು ನೋಡಿದ ಆದಿ ಕೋಪ ನೆತ್ತಿ ಗೇರುತ್ತದೆ. ಅತ್ತಿಗೆ ಎಂದು ನೋಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೆ ಆಕೆಯನ್ನು ಇವತ್ತು ಬೀಳಿಸಲು ನೋಡಿದೆ ಅಲ್ವಾ ಎಂದು ಹೇಳಿ ಆತನ ಕೆನ್ನೆಗೆ ಜೋರಾಗಿ ಹೊಡೆಯುತ್ತಾನೆ ಆದಿ.

  ಅಮ್ಮನ ಮೇಲೆ ಸಿಟ್ಟಾಗುವ ಆದಿ

  ಅಮ್ಮನ ಮೇಲೆ ಸಿಟ್ಟಾಗುವ ಆದಿ

  ಪ್ರೀತು ಕೆನ್ನೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ. ಅಣ್ಣ ತಮ್ಮನ ಕಾಳಗ ನೋಡಿ ಅಲ್ಲಿದ್ದವರು ಶಾಕ್ ಆದರೆ ಅರುಂಧತಿ ಹಾಗೂ ರಾಣಾ ಇದೆಲ್ಲವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಆ ವೇಳೆ ಅಖಿಲ ಮೊಬೈಲ್‌ನಲ್ಲಿ ಮಾತನಾಡುತ್ತಿರುತ್ತಾಳೆ. ಕೆಳಗಿನಿಂದ ಮೇಲೆ ನೋಡಿದ ಆದಿಗೆ ಅಮ್ಮ ಕಾಣಿಸುತ್ತಾರೆ. ಓಹೋ ಇದೆಲ್ಲ ಅಮ್ಮನ ಕುತಂತ್ರದಿಂದ ಆಗಿದ್ದಾ ಎಂದುಕೊಂಡು ಅಖಿಲಾಂಡೇಶ್ವರಿ ಬಳಿಗೆ ಬಂದು ಜೋರಾಗಿ ಅಮ್ಮ ನನ್ನು ಕರೆಯುತ್ತಾನೆ ಆಗ ರಘು ಕೂಡ ಅಲ್ಲಿಗೆ ಬರುತ್ತಾನೆ.

  ಅಮ್ಮನ ಬಗ್ಗೆ ತಪ್ಪಾಗಿ ಗ್ರಹಿಸಿದ ಆದಿ

  ಅಮ್ಮನ ಬಗ್ಗೆ ತಪ್ಪಾಗಿ ಗ್ರಹಿಸಿದ ಆದಿ

  ಏನಮ್ಮ ಏನು ನಡೆಯದ ಹಾಗೆ, ನಿಮಗೇನು ಗೊತ್ತಿಲ್ಲದ ಹಾಗೆ ನಟಿಸುತ್ತಾ ಇದ್ದೀರಿ ಇದಕ್ಕೆಲ್ಲ ಸೂತ್ರಧಾರಿ ನೀವೇ ಅಲ್ವಾ ಎಂದೆಲ್ಲ ಕುಹಕವಾಡಿ ಅಖಿಲ ಮನಸ್ಸಿಗೆ ನೋವು ಮಾಡುತ್ತಾನೆ. ನನ್ನ ಹಾಗೂ ಪಾರೂನ ಯಾರ ಕೈ ಯಿಂದಲೂ ದೂರ ಮಾಡಲು ಸಾಧ್ಯ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ ಆಗ ರಘು ಮುಖ ನೋಡಿದ ಅಖಿಲ ಪ್ರೀತು ಯಾಕೆ ಹೀಗೆಲ್ಲ ಆಡುತ್ತಿದ್ದಾರೆ. ಏನಾಗಿದೆ ಅವನಿಗೆ. ಎಂದೆಲ್ಲ ಹೇಳುತ್ತ ಕೋಪಗೊಂಡು ರಘು ಪ್ರೀತು ಎಲ್ಲಿ ನಾನು ಮಾತನಾಡಬೇಕು ಎಂದು ಹೇಳುತ್ತಾಳೆ.

  ಅಖಿಲನಿಗೂ ಬಗ್ಗದ ಪ್ರೀತು

  ಅಖಿಲನಿಗೂ ಬಗ್ಗದ ಪ್ರೀತು

  ಬಳಿಕ ಪ್ರೀತು ಮಹಡಿ ಮೇಲೆ ಬರುತ್ತಾನೆ ಬಂದಾಗ ಅಖಿಲ ಬಹಳ ಕೋಪದಲ್ಲಿ ಇರುತ್ತಾಳೆ ಏನಾಗಿದೆ ಪ್ರೀತು ನಿನಗೆ ಅತ್ತಿಗೆ ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದೆ ನಡೆದುಕೊಳ್ಳುತ್ತಿದ್ದಿಯಾ ಎಂದಾಗ ಮೆತ್ತಗೆ ಬಂದ ಯಾಮಿನಿ ಎಲ್ಲವನ್ನೂ ಕದ್ದು ಕೇಳಿಕೊಳ್ಳುತ್ತಾಳೆ. ಬಳಿಕ ಅಖಿಲಾಂಡೇಶ್ವರಿ ಏನಾಗಿದೆ ನಿನಗೆ ಪ್ರೀತು ಅತ್ತಿಗೆಯನ್ನು ಬೀಳಿಸುವ ಮಟ್ಟಕ್ಕೆ ಬಂದಿದ್ದೀಯಾ ಎಂದು ಹೇಳಿ ಕೆನ್ನೆಗೆ ಹೊಡೆಯುತ್ತಾರೆ ಅಖಿಲ. ಇನ್ನೂ ಒಂದೆರಡು ಏಟು ಹೊಡೆಯಲು ಬಂದಾಗ ರಘು ತಡೆಯುತ್ತಾನೆ. ಪ್ರೀತು ಇತ್ತೀಚಿಗೆ ಯಾಕೆ ಹಿಗಾಡುತ್ತಿದ್ದಿಯಾ ನೀನು ನಾನು ಹೆತ್ತ ಮಗನಾ ನಿನಗೆ ಚಿಕ್ಕಂದಿನಿಂದ ಕಲಿಸಿದ ಸಂಸ್ಕಾರ ಆಚಾರ ವಿಚಾರ ಎಲ್ಲಿ ಹೋಯಿತೋ. ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿಯಲ್ಲೋ ಎಂದು ಹೇಳುತ್ತಾಳೆ ಅಖಿಲಾಂಡೇಶ್ವರಿ.

  ರಾಣಾನ ಕರೆ ಸ್ವೀಕರಿಸಿದ ಪ್ರೀತು

  ರಾಣಾನ ಕರೆ ಸ್ವೀಕರಿಸಿದ ಪ್ರೀತು

  ಆ ವೇಳೆ ಇದೆಲ್ಲವನ್ನೂ ನೋಡುತ್ತಿದ್ದ ರಾಣಾ ಪ್ರೀತುಗೆ ಕರೆ ಮಾಡುತ್ತಾನೆ. ಕರೆ ರಿಸೀವ್ ಮಾಡುತ್ತಾನೆ ಪ್ರೀತಮ್. ಬಳಿಕ ಹೇಳುತ್ತಾಳೆ ಅಖಿಲ. ಸಿಇಒ ಸ್ಥಾನದಲ್ಲಿ ನಿನ್ನನ್ನು ಕೂರಿಸಿದ್ದು ಯಾಕೆಂದರೆ ನೀನು ಸ್ವಲ್ಪ ಬುದ್ದಿವಂತ ಹಾಗೆಯೇ ಕೆಲಸವನ್ನು ಬೇಗ ಗ್ರಹಿಸಿ ಮಾಡುತ್ತೀಯಾ ಎಂದು ಆದರೆ ನೀನು ಮಾಡಿದ್ದಾದರೂ ಎನು ಎಂದೆಲ್ಲ ಹೇಳಿ ಬೇಸರ ವ್ಯಕ್ತಪಡಿಸುತ್ತಾರೆ. ಆಗ ರಾಣಾ ಹೇಳಿಕೊಟ್ಟಂತೆ ಪ್ರೀತಮ್ ಮಾತನಾಡಲು ತೊಡಗುತ್ತಾನೆ. ನೀವು ಸಿಇಓ ಪಟ್ಟವನ್ನು ಅಣ್ಣನಿಗೆ ಕೊಡಲು ಸಜ್ಜಾಗಿ ನನ್ನ ಬಳಿ ಮಾತನಾಡಲು ಬಂದಿದ್ದು ಅಲ್ವಾ ಎಂದೆಲ್ಲ ಮಾತನಾಡುತ್ತಾನೆ ಅದಕ್ಕೆ ರಘು ಹೇಳುತ್ತಾನೆ, ನಾಳೆಯಿಂದ ನೀನು ಆಫೀಸ್ ಗೆ ಹೋಗು ವರ್ಕ್ ಮಾಡು ಅದು ನಮ್ಮದೇ ಆಫೀಸ್ ಯಾರು ಏನು ಅನ್ನುವುದಿಲ್ಲ ಎಂದು ಹೇಳುತ್ತಾನೆ ಆ ಮಾತಿಗೆ ಪ್ರೀತಮ್ ಹೇಳುತ್ತಾನೆ ನಾನೇನು ನಾಯಿನಾ ಎಲ್ಲಾ ಬಿಟ್ಟು ಹೋಗಿರುವ ಕೂಳು ತಿನ್ನಲು ಎಂದು ಹೇಳುತ್ತಾನೆ. ಆತ ಮಾತನಾಡಿದ್ದನ್ನು ಕೇಳಿ ರಘು ಅಖಿಲ ಇಬ್ಬರಿಗೂ ಏನು ಮಾಡಬೇಕು ಎಂದು ತೋಚದೇ ಇಬ್ಬರು ಮುಖ ಮುಖ ನೋಡುತ್ತಾ ಇರುತ್ತಾರೆ.

  English summary
  Kannada serial Paaru written updated on 30th September episode. Know more about it.
  Saturday, October 1, 2022, 20:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X