Paaru serial: ಪಾರು ತಾಯಿ ಆಗುತ್ತಿರುವ ವಿಚಾರ ಆದಿಗೆ ತಿಳಿದೇಹೋಯಿತು!

By Poorva

ಆದಿಗೆ ಪಾರು ಸರ್ಪ್ರೈಸ್ ನೀಡಿದ್ದಾಳೆ. ತನ್ನ ತಮ್ಮನ ಹೆಂಡತಿ ಜನನಿ ಗರ್ಭಿಣಿ ಆಗಿರುವುದಕ್ಕೆ ಸಂತಸ ಪಡುತ್ತಿದ್ದ ಆದಿಗೆ ತಾನು ತಂದೆಯಾಗುತ್ತೇನೆ ಎಂದು ತಿಳಿದರೆ ಇನ್ನೆಷ್ಟು ಖುಷಿ ಆಗಬಾರದು ಆದಿಯನ್ನು ಹೊರಗೆ ಕೂರಿಸಿ ಏನೋ ಹೇಳಲು ಇದೆ ಎಂದು ಹೇಳಿ ಪಾರು ಆದಿ ಹಿಂದೆ ನಿಂತಿರುತ್ತಾಳೆ. ಆದರೆ ಆದಿ ಬಹಳ ಕಾತರದಿಂದ ಪಾರು ದಾರಿ ಕಾಯುತ್ತಾ ಕುಳಿತಿರುತ್ತಾನೆ. ಆದಿಯ ಕಾತರತೆ ಕಂಡು ಪಾರು ಮನಸು ಹಿರಿ ಹಿರಿ ಹಿಗ್ಗಿದೆ ಜೊತೆಗೆ ನಾಚಿಕೆಯಿಂದ ಆದಿಯತ್ತ ನೋಡುತ್ತಾ ಇರುತ್ತಾಳೆ.

ಇನ್ನು ಪಾರುಗೆ ಸಾವಿತ್ರಮ್ಮ ಹೇಳಿದ ಮಾತುಗಳು ನೆನಪಾಗುತ್ತದೆ. ಪಾರು ನೀನು ತಾಯಿ ಆಗುತ್ತಾ ಇದ್ದೀಯಾ ಎಂದು ಹೇಳಿದ್ದು ಹಾಗೆಯೇ ಆದಿ ಬಳಿ ಮಗು ಆದರೆ ನಿಮಗೆ ಕಷ್ಟ ಆಗುತ್ತ ಎಂದಾಗ ಆದಿ ತನ್ನ ಮಗು ಬಗ್ಗೆ ಸಾವಿರಾರು ಕನಸಿನ ಗೋಪುರ ಕಟ್ಟಿಕೊಂಡು ಇರುತ್ತಾನೆ, ಇದೆಲ್ಲ ನೆನಪು ಮಾಡಿಕೊಂಡ ಪಾರು ಆದಿ ಹತ್ತಿರ ಬರುತ್ತಾಳೆ. ಜೊತೆಗೆ ಆಕೆ ಕೈಯನ್ನು ಹಿಂದೆ ಇಟ್ಟುಕೊಂಡು ಬರುತ್ತಾಳೆ. ಆದಿ ಹತ್ತಿರ ಬಂದು ಹೂವಿನಿಂದ ಅಲಂಕಾರ ಮಾಡಿದ ಟೇಬಲ್ ಮೇಲೆ ರಾಮನ ಫೋಟೋ ಇಡುತ್ತಾಳೆ.

ಇದನ್ನು ನೋಡಿದ ಆದಿ ಸೀತೆ ಎಲ್ಲಿ ಎಂದು ಕೇಳಿದಾಗ ಪಾರು ಸೀತೆ ಗೊಂಬೆಯನ್ನು ಇಡುತ್ತಾಳೆ. ಬಳಿಕ ಕೃಷ್ಣನ ಗೊಂಬೆ ಇಟ್ಟಾಗ ಆದಿಗೆ ಕೊಂಚ ಶಾಕ್ ಆಗುತ್ತದೆ. ಆಗ ಆದಿಗೆ ಅಮ್ಮ ಹೇಳಿದ್ದು ನೆನಪು ಆಗುತ್ತದೆ. ಅಂದು ಪೂಜೆಯ ದಿನದಂದು ಅಮ್ಮ ನನಗೆ ಕೃಷ್ಣನ ಗೊಂಬೆ ಕೊಟ್ಟು ಇದೆ ತರ ಪುಟಾಣಿ ನಮಗೆ ಬೇಕು ಎಂದು ಹೇಳಿದ್ದರು. ಇದೀಗ ಪಾರು ಗೊಂಬೆ ತಂದು ಇಡುತ್ತಾ ಇದ್ದಾಳೆ ಅರೆರೆ ಏನಾಗಿರಬಹುದು ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಪಾರುವನ್ನು ಎತ್ತಿ ಕುಣಿದಾಡಿದ ಆದಿ

ಪಾರುವನ್ನು ಎತ್ತಿ ಕುಣಿದಾಡಿದ ಆದಿ

ಪಾರು ನೀನು ತಾಯಿ ಆಗುತ್ತಾ ಇದ್ದೀಯಾ ಎಂದಾಗ ಪಾರು ನಾಚಿಕೆಯಿಂದ ಹೌದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಆದಿ ಖುಷಿಯಿಂದ ಪಾರುವನ್ನು ಎತ್ತಿಕೊಂಡು ತನ್ನ ಸಂತಸ ವ್ಯಕ್ತ ಪಡಿಸುತ್ತಾನೆ. ಪಾರು ಮೆತ್ತಗೆ ಗಂಡನ ಬಳಿ ನಾವೀಗ ಇಬ್ಬರು ಇದ್ದೇವೆ ಎಂದು ಹೇಳಿದಾಗ ಪಾರುವನ್ನು ಇಳಿಸಿದ ಆದಿ ನಾವು ಈಗ ಮೂರು ಮಂದಿ ಎಂದು ಹೇಳಿ ಖುಷಿ ಪಡುತ್ತಾನೆ. ಇನ್ನು ಹೆಂಡತಿ ಬಳಿ ಆದಿ ಯಾವುದೇ ಕೆಲಸ ಮಾಡಬಾರದು ನಾನೇ ಇನ್ನೂ ಎಲ್ಲಾ ಕೆಲಸ ಮಾಡುತ್ತೇನೆ, ಟೆನ್ಶನ್ ಮಾಡಬಾರದು ಎಂದೆಲ್ಲ ಹೇಳಿ ಹೆಂಡತಿಗೆ ಹೇಳುತ್ತಾನೆ.

ಸಾರಥಿಗೆ ವಿಚಾರ ತಿಳಿಸಲು ಮುಂದಾದ ಆದಿ

ಸಾರಥಿಗೆ ವಿಚಾರ ತಿಳಿಸಲು ಮುಂದಾದ ಆದಿ

ಇನ್ನು ಪಾರು ತಂದೆಗೆ ಈ ವಿಚಾರ ತಿಳಿದಿಲ್ಲದ ಕಾರಣ ಸಾರಥಿಗೆ ಈ ವಿಚಾರ ಹೇಳಿದರೆ ಬಹಳ ಖುಷಿ ಪಡಬಹುದು ಎಂದುಕೊಂಡು ಸಾರಥಿಗೆ ಸರ್ಪ್ರೈಸ್ ಕೊಡಲು ಆದಿ ಹಾಗೂ ಪಾರು ಹೊರಡುತ್ತಾರೆ. ಇನ್ನು ಆದಿ ಪಾರು ಮನೆ ಮುಂದೆ ಹೋಗಿ ಕೊರಿಯರ್ ಎಂದು ಜೋರಾಗಿ ಕೂಗಿ ಅಲ್ಲಿಂದ ಹೋಗುತ್ತಾನೆ. ಇದನ್ನು ಕೇಳಿಸಿಕೊಂಡ ಸಾರಥಿ ಯಾರದು ಎಂದು ಕೇಳಿಕೊಂಡು ಹೊರಗೆ ಬರುತ್ತಾನೆ

ಹನುಮಂತುಗೆ ಸರ್ಪ್ರೈಸ್ ಕೊಟ್ಟ ಪಾರು ಆದಿ

ಹನುಮಂತುಗೆ ಸರ್ಪ್ರೈಸ್ ಕೊಟ್ಟ ಪಾರು ಆದಿ

ಆ ವೇಳೆ ಆತನಿಗೆ ಕೊರಿಯರ್ ಇರುವುದು ಕಾಣಿಸುತ್ತದೆ. ಅದನ್ನು ತೆಗೆದುಕೊಂಡು ಒಳಗೆ ಹೋದ ಹನುಮಂತು ಪಾರು ಬಳಿ ಯಾರು ಕೊರಿಯರ್ ಕಳುಹಿಸಿದ್ದು ಗೊತ್ತಾಗಲಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಪಾರು ಸುಮ್ಮನೆ ಇರುತ್ತಾಳೆ. ಅಲ್ಲಿಗೆ ಬಂದ ಆದಿ ಏನು ಎತ್ತ ಎಂದು ಗೊತ್ತಿಲ್ಲದ ಹಾಗೆ ವಿಚಾರಣೆ ಮಾಡುತ್ತಾನೆ. ಇನ್ನು ಕೊರಿಯರ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಮಗುವಿನ ಚಪ್ಪಲಿ ಇರುತ್ತದೆ. ಹನುಮಂತುಗೆ ಇದು ಅರ್ಥನೇ ಆಗಲಿಲ್ಲ. ಕೊನೆಗೆ ಅದು ಹೇಗೋ ತಿಳಿಯುತ್ತದೆ. ಪಾರು ತಾಯಿ ಆಗುತ್ತಾ ಇದ್ದಾಳೆ, ನಾನು ತಾತ ಆಗುತ್ತಾ ಇದ್ದೇನೆ ಎಂದುಕೊಂಡು ಖುಷಿ ಪಡುತ್ತಾನೆ. ಇದನ್ನು ಅರಸನ ಕೋಟೆಯವರಿಗೆ ಹೇಳಬೇಕು ಎಂದು ಯೋಚನೆ ಮಾಡುತ್ತಾ ಇರುವಾಗ ಪಾರು ತಂದೆಯ ಬಳಿ ಈ ವಿಚಾರ ಅರಸನ ಕೋಟೆಗೆ ತಿಳಿಸಬಾರದು ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾಳೆ.

More from Filmibeat

English summary
Kannada serial paaru written updated on 3rd February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X