For Quick Alerts
  ALLOW NOTIFICATIONS  
  For Daily Alerts

  ಆದಿಗೆ ಸಿಕ್ಕಿತು ಪ್ರೀತಮ್ ಕಾಲ್ ಡೀಟೇಲ್ಸ್! ಇನ್ನಾದರೂ ಸಿಗುತ್ತಾ ಕೇಡಿಗಳ ಸುಳಿವು

  By ಪೂರ್ವ
  |

  ಕೊನೆಗೂ ಪ್ರೀತಂ ಯಾರದ್ದೋ ಒತ್ತಡಕ್ಕೆ ಮಣಿದು ಈ ರೀತಿ ಎಲ್ಲಾ ಮಾಡುತ್ತಿದ್ದಾನೆ ಎಂಬುವುದು ಮನೆಯವರಿಗೆ ತಿಳಿದು ಹೋಗಿದೆ. ಅರುಂಧತಿ, ರಾಣಾ ಎಷ್ಟೆಲ್ಲ ಮಾಡಿದರು ಅಖಿಲಾಂಡೇಶ್ವರಿ ಮಾತ್ರ ಅರುಂಧತಿದ್ದು ಇದರಲ್ಲಿ ಕೈವಾಡ ಇರಲಿಕ್ಕೆ ಇಲ್ಲ ಎನ್ನುತ್ತಿದ್ದಾಳೆ, ಯಾಕೆಂದರೆ ಆಕೆ ನನಗೆ ಬೇಲ್ ವ್ಯವಸ್ಥೆ ಮಾಡಿದ್ದಳು ಆಕೆ ಈ ಕೆಲಸವನ್ನು ಮಾಡಿರಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾಳೆ. ರಘುಗೆ ಮಾತ್ರ ಇದು ಅರುಂಧತಿಯದ್ದೇ ಕೆಲಸ ಆಗಿರಬೇಕು ಎಂಬ ನಂಬಿಕೆ ಆದರೆ ಅಖಿಲಾ ಮಾತ್ರ ನಂಬುತ್ತಿಲ್ಲ.

  ಅಖಿಲಾ ಹೇಳುತ್ತಿರುವುದು ಒಂದೇ ಮಾತು, ''ಅರುಂಧತಿಯ ಮೃದು ಸ್ವಭಾವದವಳು ಕೆಲವು ದಿನಗಳ ಹಿಂದೆ ನನ್ನ ಆದಿ ಮಧ್ಯ ಅಂತರ ಸೃಷ್ಟಿ ಮಾಡಬೇಕು ಎನ್ನುವ ಕಾರಣಕ್ಕೆ ಪಾರ್ವತಿಯನ್ನು ನಾನೇ ಕಿಡ್ನಾಪ್ ಮಾಡಿದ್ದು ಎಂದು ಡ್ರಾಮಾ ಮಾಡಿ ಫೋನ್‌ನಲ್ಲಿ ಹೇಳಿದ್ದಳು. ಪ್ರೀತಂನನ್ನು ಅವಳೇ ಟ್ರಾಪ್ ಮಾಡಿದ್ದರೆ ಸ್ಟೇಶನ್‌ನಲ್ಲಿ ನನ್ನ ಜೊತೆ ಹೇಳಿಕೊಂಡು ಬಿಡುತ್ತಿದ್ದಳು. ನಾನು ಅರೆಸ್ಟ್ ಆಗೋದರಲ್ಲಿ ಅವಳ ಕೈವಾಡ ಇದೆ ಅಂದರೆ ಅವಳೇ ಯಾಕೆ ಬಂದು ಬೇಲ್ ಕೊಡುತ್ತಿದ್ದಳು ಎಂದು ಹೇಳಿದಾಗ ಎಲ್ಲರೂ ಸುಮ್ಮನಾಗುತ್ತಾರೆ.

  ಸಮಂತಾ ಮತ್ತು ನನ್ನ ನಡುವಿನ ವದಂತಿಗೆ ನಾಗ ಚೈತನ್ಯ ಅಂತ್ಯ ಹಾಡಬಹುದಿತ್ತು: ಸ್ಟೈಲಿಸ್ಟ್ ಪ್ರೀತಂ ಬೇಸರ ಸಮಂತಾ ಮತ್ತು ನನ್ನ ನಡುವಿನ ವದಂತಿಗೆ ನಾಗ ಚೈತನ್ಯ ಅಂತ್ಯ ಹಾಡಬಹುದಿತ್ತು: ಸ್ಟೈಲಿಸ್ಟ್ ಪ್ರೀತಂ ಬೇಸರ

  ತಮ್ಮನ ಕಾಡುವವರಿಗಾಗಿ ಅಣ್ಣನ ಹುಡುಕಾಟ

  ತಮ್ಮನ ಕಾಡುವವರಿಗಾಗಿ ಅಣ್ಣನ ಹುಡುಕಾಟ

  ಆದರೆ ಆದಿ ಮಾತ್ರ ತನ್ನ ತಮ್ಮನನ್ನು ಯಾಕಾಗಿ ಟ್ರ್ಯಾಪ್ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಪಣ ತೊಟ್ಟ ಹಾಗೆ ಕಾಣುತ್ತಿದೆ. ಇನ್ನು ಆದಿ, ಮೂರ್ತಿಗೆ ಕರೆ ಮಾಡಿ ಸ್ವಲ್ಪ ಸಹಾಯ ಮಾಡಲು ಕೇಳುತ್ತಾನೆ. ಬಳಿಕ ಮೂರ್ತಿ ಬಳಿ ಹೇಳುತ್ತಾನೆ ಆದಿ ತಮ್ಮನಿಗೆ ಯಾರೋ ಕರೆ ಮಾಡಿ ಬ್ಲಾಕ್ ಮೇಲ್ ಮಾಡುತ್ತಾ ಇದ್ದಾರೆ ಎಂದು ಅನ್ನಿಸುತ್ತಿದೆ. ಅವನಿಗೆ ಬಂದಿರುವ ಕಾಲ್ ಡೀಟೇಲ್ಸ್, ಅಡ್ರಸ್ ಕೊಡಬಹುದಾ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಮೂರ್ತಿ ಖಂಡಿತವಾಗಿ ನೀಡುತ್ತೇನೆ ಎಂದು ಕರೆ ಕಟ್ ಮಾಡುತ್ತಾನೆ.

  ಕಾಲ್ ಡೀಟೇಲ್ಸ್ ತರಿಸಿಕೊಂಡ ಆದಿ

  ಕಾಲ್ ಡೀಟೇಲ್ಸ್ ತರಿಸಿಕೊಂಡ ಆದಿ

  ಆ ವೇಳೆ ಆದಿ ಬಳಿ ಬಂದು ಪಾರು ಕೇಳುತ್ತಾಳೆ ಏನಾಯ್ತು ಯಜಮಾನರೆ ಎಂದು ಕೇಳಿದಾಗ ಆದಿ ಹೇಳುತ್ತಾನೆ ಕಾಲ್ ಡೀಟೇಲ್ ಕಳುಹಿಸಿ ಕೊಡುತ್ತಾರೆ ಎಂದು, ಆಗ ಪಾರು, ಈ ಮೂಲಕ ತನ್ನ ಮೈದುನನ್ನು ಬ್ಲಾಕ್ ಮೇಲ್ ಮಾಡಿರುವವರು ಯಾರು ಎಂದು ತಿಳಿಯಬಹುದು ಅಲ್ವಾ ಎಂದು ಕೊಂಚ ನೆಮ್ಮದಿಯಿಂದ ಹೇಳುತ್ತಾಳೆ. ಆ ವೇಳೆ ಆದಿ, ಮೊದಲು ಆ ಡೀಟೇಲ್ಸ್ ಬರಲಿ ಆ ಬ್ಲಾಕ್ ಮೇಲ್ ಮಾಡುತ್ತಿರುವವರು ಯಾರು ಎಂಬುವುದನ್ನು ನೋಡೋಣ. ಅವನನ್ನು ಮಾತ್ರ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಕೋಪದಿಂದ ಕಿಡಿ ಕಾರುತ್ತಾನೆ.

  ಪ್ರೀತಂನನ್ನು ಅವನ ಪಾಡಿಗೆ ಬಿಡೋಣ: ಅಖಿಲಾಂಡೇಶ್ವರಿ

  ಪ್ರೀತಂನನ್ನು ಅವನ ಪಾಡಿಗೆ ಬಿಡೋಣ: ಅಖಿಲಾಂಡೇಶ್ವರಿ

  ಮರುದಿನ ಆದಿ ಬಳಿಗೆ ಬಂದ ಪಾರು ಕೇಳುತ್ತಾಳೆ ನನ್ನ ಮೈದುನನಿಗೆ ಯಾರು ಕಿರುಕುಳ ಕೊಡುತ್ತಿರುವುದು ಗೊತ್ತಾಯಿತಾ ಎಂದಾಗ ಆದಿ ಸ್ವಲ್ಪ ಹೊತ್ತು ಮೊಬೈಲ್‌ ಅನ್ನು ನೋಡಿ ಅಡ್ರೆಸ್ ಸಿಕ್ಕಿದೆ ಪಾರು ಅಲ್ಲಿ ಹೋಗಿ ನೋಡಬೇಕು ಯಾರು ಎಂಬುವುದನ್ನು ಎಂದು ಹೇಳುತ್ತಾನೆ. ಅಖಿಲಾಂಡೇಶ್ವರಿ ಎಲ್ಲರಿಗೂ ತಿಳಿ ಹೇಳುತ್ತಾ ಇರುತ್ತಾಳೆ ಇದು ಬಹಳ ಸೂಕ್ಷ್ಮವಾದ ವಿಚಾರ. ಪ್ರೀತಂ ಬಹಳ ಕುಗ್ಗಿ ಹೋಗಿದ್ದಾನೆ ಕೂಡ. ಯಾವಾಗ ನೋಡಿದರೂ ಏನೋ ಚಿಂತೆ ಮಾಡುತ್ತಾ, ಯೋಚನೆ ಮಾಡುತ್ತಾ ಇರುತ್ತಾನೆ. ನಾವು ಪದೇ ಪದೇ ಕೇಳಿ ಅವನನ್ನು ಇನ್ನೂ ಒತ್ತಡಕ್ಕೆ ಸಿಕ್ಕಿ ಹಾಕಿಸುವುದು ಬೇಡ. ಪ್ರೀತಂನನ್ನು ಅವನ ಪಾಡಿಗೆ ಬಿಡೋಣ ಏನು ಕೇಳುವುದು ಬೇಡ ಎಂದು ಹೇಳುತ್ತಾರೆ.

  ರಾಣಾ ಮನೆ ಮುಂದೆ ಆದಿ!

  ರಾಣಾ ಮನೆ ಮುಂದೆ ಆದಿ!

  ಅವನನ್ನು ಯಾರು ಬ್ಲಾಕ್ ಮೇಲ್ ಮಾಡುತ್ತಾ ಇದ್ದಾರೆ ಎಂಬುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡು ಆದಿ ಹಾಗೆಯೇ ಈ ವಿಚಾರ ನಮ್ಮ ನಮ್ಮಲ್ಲಿಯೇ ಇರಲಿ ಎಂದು ಹೇಳುತ್ತಾಳೆ ಅಖಿಲಾ. ಬಳಿಕ ಅಲ್ಲಿಂದ ತೆರಳುತ್ತಾಳೆ. ಇತ್ತ ಆದಿಗೆ ಅಡ್ರೆಸ್ ಸಿಗುತ್ತದೆ. ಬಳಿಕ ಸಿಕ್ಕ ಅಡ್ರೆಸ್ ಅನ್ನು ಹುಡುಕಿಕೊಂಡು ರಾಣಾನ ಮನೆ ಮುಂದೆ ಹೋಗಿ ನಿಲ್ಲುತ್ತಾನೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ

  English summary
  Kannada serial Paaru written updated on 3th November episode. Know more about it.
  Friday, November 4, 2022, 22:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X