ಅರಸನ ಕೋಟೆಯಲ್ಲಿ ದಸರಾ ಹಬ್ಬದ ಸಂಬ್ರಮ: ಅಖಿಲಾಂಡೇಶ್ವರಿ ಯೋಚನೆಯೇ ಬೇರೆ

By ಪೂರ್ವ

ಅಖಿಲಾಂಡೇಶ್ವರಿ ಮನೆಯಲ್ಲಿ ದಸರಾ ಹಬ್ಬ ಜೋರಾಗಿ ನಡೆಯುತ್ತಿದೆ. ಗೊಂಬೆಗಳನ್ನು ಕೂರಿಸಿ ಪೂಜೆ ಮಾಡುವುದೇ ಒಂದು ಸಂಬ್ರಮ ಇದೀಗ ಅಖಿಲಾಂಡೇಶ್ವರಿ, ಪಾರು ಹಾಗೂ ಆದಿಯನ್ನು ಇನ್ನಷ್ಟು ಹತ್ತಿರ ಮಾಡಬೇಕು ಎಂಬುದಾಗಿ ಅಖಿಲ ಪಟ್ಟು ಹಿಡಿದಿದ್ದಾರೆ.

ಈ ವೇಳೆ ಪಾರು, ರಾಮ ಸೀತೆಯ ಗೊಂಬೆಯನ್ನು ಹಿಡಿದುಕೊಂಡು ಬರುತ್ತಾಳೆ. ಇದನ್ನು ನೋಡಿದ ಯಾಮಿನಿ ಇದೇನಮ್ಮ ಪಾರ್ವತಿ ಸೀತಾ-ರಾಮನ ಗೊಂಬೆ ತಂದಿದ್ದಿಯಾ ಎಂದು ಹೇಳುತ್ತಾಳೆ. ಇದಕ್ಕೆ ನಾಚಿಗೆ ಪಟ್ಟುಕೊಳ್ಳುತ್ತಿದ್ದ ಪಾರುವನ್ನೂ ನೋಡಿದ ಅಖಿಲಾಂಡೇಶ್ವರಿ ಯಾರು ನಿನ್ನ ರಾಮ ಕೊಟ್ಟಿದ್ದ ಎಂದು ಕೇಳುತ್ತಾರೆ ಈ ವೇಳೆ ಪಾರು ನಗುತ್ತಾ ಹೌದು ಎಂದು ತಲೆಯಾಡಿಸುತ್ತಾಳೆ.

ಆಗ ರಘು, 'ಮದುವೆಗೂ ಮುಂಚೆ ಪ್ರೇಮ ಬಂಧನದಲ್ಲಿ ಇರುವಾಗ ಕೊಟ್ಟಿದ್ದ' ಎಂದು ಹೇಳುತ್ತಾರೆ ಇದನ್ನು ಕೇಳಿ ಇನ್ನೂ ನಾಚಿದ ಪಾರು, ಆದಿ ಮುಖ ನೋಡುತ್ತಾಳೆ. ಮದುವೆಗೂ ಮುಂಚೆ ಇಷ್ಟೆಲ್ಲ ನಡೆದಿದೆಯೇ ಅದು ನನ್ನ ಕಣ್ಣು ತಪ್ಪಿಸಿ ಎಂದು ಯಾಮಿನಿ ಆಶ್ಚರ್ಯದಿಂದ ಹೇಳುತ್ತಾಳೆ. ಆಗ ಯಾಮಿನಿ ಕಾಲನ್ನು ಆಕೆಯ ಗಂಡ ಎಳೆಯುತ್ತಾರೆ ಇದಕ್ಕೆ ಎಲ್ಲರೂ ಸಂತಸದಿಂದ ನಗುತ್ತಾರೆ.

ರಾಮ ಸೀತೆಯನ್ನು ಒಟ್ಟಾಗಿ ಕೂರಿಸಿದ ಅಖಿಲ

ರಾಮ ಸೀತೆಯನ್ನು ಒಟ್ಟಾಗಿ ಕೂರಿಸಿದ ಅಖಿಲ

ಈ ವೇಳೆ ರಘು ಕೂಡ ಪಾರು, ನಾನು ಇಡುತ್ತೇನೆ ಎಂದಾಗ ಬೇಡ ರಘು ಶಿವ ಸೀತಾ ರಾಮ ಯಾವತ್ತೂ ಒಟ್ಟಾಗಿಯೇ ಇರಬೇಕು ಎಂದು ಹೇಳಿ ಪಾರು ಬಳಿಯಿಂದ ಅಖಿಲ ಆ ಬೊಂಬೆಗಳನ್ನು ತೆಗೆದುಕೊಂಡು ಒಟ್ಟಾಗಿ ಇಡುತ್ತಾಳೆ. ಇದನ್ನು ನೋಡಿದ ಪಾರು ಆದಿ ಖುಷಿ ಪಡುತ್ತಾರೆ. ಬಳಿಕ ನವರಾತ್ರಿಯ ವೈಶಿಷ್ಟ್ಯದ ಬಗ್ಗೆ ಅದನ್ನು ಯಾಕಾಗಿ ಆಚರಣೆ ಮಾಡಲಾಗುತ್ತದೆ ಎಂಬುವುದನ್ನು ವಿವರವಾಗಿ ಹೇಳುತ್ತಾರೆ ಅಖಿಲಾಂಡೇಶ್ವರಿ.

ರಾಣ ಮನೆಗೆ ಹೊರಟ ಪ್ರೀತು!

ರಾಣ ಮನೆಗೆ ಹೊರಟ ಪ್ರೀತು!

ಇನ್ನು ಮನೆಯಿಂದ ಮೆತ್ತಗೆ ಹೊರಟ ಪ್ರೀತುವನ್ನೂ ಈ ವೇಳೆ ಯಾರು ಗಮನಿಸುವುದೇ ಇಲ್ಲ. ತನ್ನನ್ನು ತನ್ನ ಮನೆಯಿಂದ ದೂರ ಮಾಡುತ್ತಿದ್ದಾರೆ ಎನ್ನುವ ಕೋಪ ಒಂದು ಕಡೆಯಾದರೆ ಇನ್ನೊಂದು ಕಡೆ ತನ್ನನ್ನು ಇಷ್ಟು ಆಟ ಆಡಿಸಿ ರಾಣಾ ಹಾಗೂ ಅರುಂಧತಿ ತಮಗೆ ಬೇಕಾದ ಹಾಗೆ ಬಳಸಿಕೊಂಡರಲ್ಲ ಎನ್ನುವ ಕೋಪ ಬೇರೆ. ಇದಕ್ಕಾಗಿ ಮೆತ್ತಗೆ ಅರುಂಧತಿ ಮನೆಗೆ ಕನ್ನ ಹಾಕಿದ್ದಾನೆ ಪ್ರೀತು. ಅರುಂಧತಿ ಹಾಗೂ ರಾಣಾ ಗಟ್ಟಿಯಾಗಿ ಮಲಗಿ ಇದ್ದರೂ. ಮನೆಯ ಮಹಡಿ ಮೇಲಿಂದ ಹತ್ತಿದ ಪ್ರೀತು ಮೆತ್ತಗೆ ಡೋರ್ ತೆಗೆದು ಒಳಗೆ ಹೋಗುತ್ತಾನೆ.

ಪೆನ್ ಡ್ರೈವ್ ಹಿಡಿದು ಖುಷಿಯಿಂದ ಆಗಮಿಸಿದ ಪ್ರೀತು

ಪೆನ್ ಡ್ರೈವ್ ಹಿಡಿದು ಖುಷಿಯಿಂದ ಆಗಮಿಸಿದ ಪ್ರೀತು

ಬಳಿಕ ರಾಣಾ ಹಾಗೂ ಅರುಂಧತಿ ಮಲಗಿರುವ ಕೋಣೆಗೆ ಹೋಗಿ ವಿಡಿಯೋ ಮಾಡಿದ್ದ ಕ್ಯಾಮಾರವನ್ನೂ ಚೆಕ್ ಮಾಡುತ್ತಾನೆ. ಬಳಿಕ ರಾಣಾ ತಲೆ ದಿಂಬಿನ ಒಳಗೆ ಕೈ ಹಾಕುತ್ತಾನೆ. ಅಲ್ಲಿ ಕೀ ತೆಗೆದುಕೊಂಡು ಎಲ್ಲಾ ರೂಮ್‌ಗಳನ್ನ ಸರ್ಚ್ ಮಾಡುತ್ತಾನೆ. ಬಳಿಕ ಪ್ರೀತುಗೆ ಪೆನ್ ಡ್ರೈ ಸಿಗುತ್ತದೆ. ಬಳಿಕ ಅಲ್ಲಿಂದ ತೆರಳಿದ ಪ್ರೀತು ಮನೆಗೆ ಬರುತ್ತಾನೆ. ಪಾರು ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಾ ಇರುತ್ತಾಳೆ. ಅಲ್ಲಿಗೆ ಬಂದ ರಘು ಪ್ರೀತು ನೋಡಿದಿಯೇನಮ್ಮ ಪಾರು ಎಂದು ಕೇಳುತ್ತಾನೆ ಅದಕ್ಕೆ ಪಾರು ರೂಮಲ್ಲಿ ಇದ್ದಾರೆ ಮಾವ ಎಂದು ಹೇಳುತ್ತಾರೆ. ಬಳಿಕ ಪ್ರೀತು ಬಳಿ ಮಾತನಾಡಲು ರಘು ಅಲ್ಲಿಂದ ತೆರಳುತ್ತಾನೆ. ಪ್ರೀತು ರೂಮ್ ನಲ್ಲಿ ಲ್ಯಾಪ್ ಟಾಪ್ ಓಪನ್ ಮಾಡಿ ಪೆನ್ ಡ್ರೈವ್ ಹಾಕಿ ವಿಡಿಯೋ ಡಿಲಿಟ್ ಮಾಡಬೇಕು ಎನ್ನುವಷ್ಟರಲ್ಲಿ ಪ್ರೀತು ತಂದೆ ಬರುತ್ತಾರೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 3th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X