ರಾಣಾ-ಅರುಂಧತಿಯನ್ನು ಹಿಡಿದೇ ಬಿಟ್ಟ ಆದಿ!

By ಪೂರ್ವ

'ಪಾರು' ಧಾರವಾಹಿ ಚೆನ್ನಾಗಿ ಮೂಡಿ ಬಂದಿದೆ. ಆದಿಗೆ ಕಿಡಿಗೇಡಿಗಳು ಅದೆಷ್ಟೆ ಕಾಟ ಕೊಟ್ಟರು ಆದಿ ಮಾತ್ರ ಎಲ್ಲವನ್ನು ಸಹಿಸಿಕೊಂಡು ಮನೆಗೆ ಮರಳಿದ್ದಾನೆ. ಪಾರು ಬಳಿಯೂ ಕೇಡಿಗಳು ಮಾಡಿದ ಉಪಟಳವನ್ನು ಹೇಳದೆ ಮರೆಮಾಚಿದ್ದಾನೆ. ಆದರೆ ತಾಯಿ ಅಖಿಲ ಮಾತ್ರ ಉಗ್ರ ಕೋಪದಲ್ಲಿದ್ದಾಳೆ. ಮನೆಗೆ ಬಂದ ಪ್ರೀತುವನ್ನು ನೋಡಿದ ಅಖಿಲಾಂಡೆಶ್ವರಿಗೆ ಬಹಳ ಖುಷಿಯಾಗುತ್ತದೆ. ಬಾ ಪ್ರೀತು ಬಾ ಶಬ್ಬಾಷ್ ಮಗನೇ ಅಣ್ಣ ಮಾಡದೇ ಇರೋ ಕೆಲಸವನ್ನು ನೀನು ಮಾಡಿ ತೋರಿಸಿದ್ದು ಬಹಳ ಖುಷಿ ಆಯಿತು. ಹೀಗೆ ಗೆಲುವಿನ ಮೆಟ್ಟಿಲನ್ನು ಯಾವತ್ತೂ ಏರುತ್ತಾ ಬಾ. ನಿನಗೆ ನನ್ನ ಆಶಿರ್ವಾದ ಯಾವಾಗಲೂ ಇರುತ್ತೆ ಎಂದಾಗ ಆದಿ ಚಿಕ್ಕಪ್ಪ ಹೇಳುತ್ತಾರೆ ಆದರೂ ಆದಿ ಇದ್ದಿದ್ದರೆ ಇನ್ನೂ ಖುಷಿಯಾಗುತ್ತಿತ್ತು ಎಂದಾಗ ಅಖಿಲ ಕೋಪದಿಂದ ಹೇಳುತ್ತಾಳೆ ಮೀಟಿಂಗ್ ಗೆ ಬಾರದೆ ಇದ್ದವರ ಬಗ್ಗೆ ಮಾತನಾಡುವುದು ಬೇಡ ಎಂದೆಲ್ಲ ಹೇಳಿದಾಗ ಆದಿ ಮತ್ತು ಪಾರು ಮನೆಗೆ ಬರುತ್ತಾರೆ.

ಮನೆಗೆ ಬಂದವರನ್ನು ನೋಡಿದ ಅಖಿಲಾಂಡೆಶ್ವರಿ ಹೋ ಬಂದ್ಯಾ. ಇವತ್ತು ಒಂದು ಇಂಪಾರ್ಟೆಂಟ್ ಮೀಟಿಂಗ್ ಇದೆ ಅದಕ್ಕೆ ನೀನೇ ಅಟೆಂಡ್ ಆಗಬೇಕು ಎಂದೆಲ್ಲ ಹೇಳಿದ್ದೆ ನೆನಪು ಇದೆ ಅಲ್ವಾ. ಅದರಲ್ಲೂ ನಿನಗೆ ಏಷ್ಟು ಕಾಲ್ ಮಾಡಿದೆ. ಕಾಲ್ ರಿಸೀವ್ ಮಾಡದಷ್ಟು ಸೊಕ್ಕ ನಿನಗೆ ಎಂದು ಕೇಳುತ್ತಾಳೆ. ಇಲ್ಲ ಅಮ್ಮ ಅದು ಎಂದು ಆದಿ ಕಾರಣ ನೀಡಲು ಮುಂದಾಗುತ್ತಾನೆ ಅಷ್ಟರಲ್ಲಿ ಅಖಿಲಾಂಡೆಶ್ವರಿ ಆದಿಯನ್ನು ತಡೆಯುತ್ತಾಳೆ.

ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಆಫೀಸಿಗೆ ತೆರಳಲು ಆಗುತ್ತಿರಲಿಲ್ಲ ಅಲ್ವಾ ಇದೀಗ ನೀನು ಮಾಡಿದ ನಿರ್ಲಕ್ಷಕ್ಕೆ ನನ್ನ ಸಾವಿರಾರು ಕೋಟಿ ಹೂಡಿಕೆ ಮಾಡಲು ಇದ್ದವರನ್ನು ಕಳೆದುಕೊಳ್ಳಬೇಕಾಯಿತು. ಯಾಕೆ ಹೀಗೆ ಮಾಡಿದೆ ನೀನು. ಮುಂಚೆ ನೀನು ಹೇಗೆ ಇರಲಿಲ್ಲ. ಕೆಲಸ ಎಂದರೆ ಅದನ್ನು ಮುಂಚೆ ಹೋಗಿ ಮಾಡುತ್ತಿದ್ದದ್ದು ನೀನೇ ಆದರೆ ಇದೀಗ ನೀನು ಇಷ್ಟು ಕೆಲಸವನ್ನು ತಾತ್ಸರವಾಗಿ ತೆಗೆದುಕೊಂಡಿರುವುದು ಸರಿಯಲ್ಲ. ಅದಕ್ಕೆ ಆದಿ ಇಲ್ಲ ಅಮ್ಮ ಮನಸ್ಸಿಗೆ ಮನೆಯಲ್ಲಿ ಸಮಾಧಾನ ಸಿಕ್ಕಿರಲಿಲ್ಲ. ಅದಕ್ಕೆ ನಾನು ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದೆ ಮೊಬೈಲ್ ಅನ್ನು ಕಾರಲ್ಲೆ ಬಿಟ್ಟಿದ್ದೆ ಹಾಗೆ ಮೊಬೈಲ್ ನೋಡಲು ಆಗಲಿಲ್ಲ ಎಂದಾಗ ಅಖಿಲಾಂಡೆಶ್ವರಿಗೆ ಎನು ಹೇಳಬೇಕು ಎಂದು ಗೊತ್ತಾಗದೆ ಸುಮ್ಮನಿರುತ್ತಾರೆ.

ಬಳಿಕ ಆದಿ ಅಲ್ಲಿಂದ ತೆರಳುತ್ತಾನೆ. ಇದನ್ನು ನೋಡಿದ ಪಾರು ಆದಿ ಹಿಂದೆ ಹೋಗುತ್ತಾಳೆ. ಇದನ್ನು ನೋಡಿದ ಪ್ರೀತು ಕೂಡ ಅಣ್ಣನ ಬಳಿಗೆ ಬರುತ್ತಾನೆ. ಆ ವೇಳೆ ಪಾರು ಆದಿಯನ್ನು ಕೇಳುತ್ತಾಳೆ ಏನ್ರೀ ಇದೆಲ್ಲ ಯಾಕೆ ಹೀಗೆ ಮಾಡಿದ್ರಿ. ನಾನು ಕೇಳಿದಾಗ ಮೀಟಿಂಗ್ ಗೆ ಹೋದೆ ಎಂದು ಹೇಳಿದ್ರಿ ಆದರೆ ಈಗ ಮೀಟಿಂಗ್ ಗೆ ಹೋಗೆ ಇಲ್ಲ ಅಂತ ಅಮ್ಮ ಹೇಳುತ್ತಿದ್ದಾರೆ. ಅವರು ಆ ರೀತಿ ಎಲ್ಲಾ ಮಾತನಾಡಿದರು. ಯಾಕೆ ರೀ ಏನಾಯ್ತು ಎಂದಾಗ ಪ್ರೀತು ಅಲ್ಲಿಗೆ ಬರುತ್ತಾನೆ.

ಕಮಿಟ್ಮೆಂಟ್ ಬಗ್ಗೆ ಹೇಳಿದ ಪ್ರೀತು

ಕಮಿಟ್ಮೆಂಟ್ ಬಗ್ಗೆ ಹೇಳಿದ ಪ್ರೀತು

ನಾನು ಮತ್ತು ಅಣ್ಣ ಒಂದು ಇಂಪಾರ್ಟೆಂಟ್ ಕಮಿಟ್ಮೆಂಟ್ ಮಾಡಿಕೊಂಡಿದ್ದೆವು ಇದು ಅಣ್ಣನಿಗೆ ಮತ್ತು ನನಗೆ ಮಾತ್ರ ಗೊತ್ತಿರುವುದು ಬೇರೆಯವರಿಗೆ ಯಾರಿಗೂ ಗೊತ್ತಿಲ್ಲ ಎಂದು ಹೇಳುತ್ತಾನೆ. ಅಮ್ಮನಿಗೆ ಇದರ ಬಗ್ಗೆ ಎನು ಗೊತ್ತಿಲ್ಲ. ಎಂದು ಹೇಳಿದಾಗ ಪಾರು ಸ್ವಲ್ಪ ಮಟ್ಟಿಗೆ ಸಮಾಧಾನ ಮಾಡಿಕೊಳ್ಳುತ್ತಾಳೆ. ಬಳಿಕ ಪಾರು ಇಷ್ಟೇನಾ.. ಇದನ್ನು ಆದಷ್ಟು ಬೇಗ ಅಮ್ಮನಿಗೆ ತಿಳಿಸಿ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಬಳಿಕ ಆದಿ ಮತ್ತು ಪ್ರೀತು ಮಾತನಾಡಿಕೊಳ್ಳುತ್ತಾ ಅಲ್ಲಿ ನಡೆದ ವಿಚಾರವನ್ನು ಆದಿ ,ಪ್ರೀತು ಬಳಿ ಹೇಳುತ್ತಾನೆ. ಬಳಿಕ ಪ್ರೀತು ಹೇಳುತ್ತಾನೆ ಅಣ್ಣ ನಿನ್ನ ಮೊಬೈಲ್ ನಲ್ಲಿ ಅವನ ನಂಬರ್ ಇದೆ ಅಲ್ವಾ ಅದನ್ನು ಟ್ರಾಪ್ ಮಾಡಿ ಅವನ ಅಡ್ರಸ್ ತಿಳಿದುಕೊಳ್ಳುವ ಬಳಿಕ ಅವನನ್ನು ಮಟ್ಟ ಹಾಕುವ ಎಂದು ಹೇಳುತ್ತಾನೆ. ಅದನ್ನು ಕೇಳಿಸಿಕೊಂಡ ಆದಿ ಎಸ್ ಗುಡ್ ಐಡಿಯಾ ಎನ್ನುತ್ತಾನೆ.

ಆದಿ ಹಾಗೂ ಅಖಿಲಾಂಡೇಶ್ವರಿಯನ್ನು ಬೇರೆ ಮಾಡಿದ ಖುಷಿ ಅರುಂಧತಿಗೆ

ಆದಿ ಹಾಗೂ ಅಖಿಲಾಂಡೇಶ್ವರಿಯನ್ನು ಬೇರೆ ಮಾಡಿದ ಖುಷಿ ಅರುಂಧತಿಗೆ

ಇನ್ನೂ ಇತ್ತ ಅರಂಧತಿ ಮತ್ತು ರಾಣಾ ಇಬ್ಬರು ಮಾತನಾಡಿಕೊಳ್ಳುತ್ತಿರುತ್ತಾರೆ. ಆದಿಯನ್ನು ಮೀಟಿಂಗ್‌ನಿಂದ ತಪ್ಪಿಸಿದರೂ ಮೀಟಿಂಗ್ ನಿಲ್ಲಿಸಲು ಆಗಲಿಲ್ಲ. ಅಖಿಲಾ ಮತ್ತು ಆಕೆಯ ಮಗನನ್ನು ದೂರ ಮಾಡೊವಲ್ಲಿ ನಮ್ಮ ಪ್ಲಾನ್ ಸಫಲ ಆಯ್ತು. ಎಂದು ಹೇಳಿದಾಗ ರಾಣಾ ಹೇಳುತ್ತಾನೆ ಎಲ್ಲಾ ಓಕೆ ಆದರೆ ನಾನು ಒಂದು ಎಡವಟ್ಟು ಮಾಡಿಕೊಂಡಿದ್ದೇನೆ ಅದೇನೆಂದರೆ ಮೊಬೈಲ್ ಅನ್ನು ಆದೀಗೆ ಕೊಟ್ಟಿದ್ದೇನೆ. ಛೇ ಎಂತಹ ಕೆಲಸ ಆಗೋಯ್ತು. ನನ್ನ ನಂಬರ್ ಅದರಲ್ಲಿ ಇದೆ ಅಲ್ವಾ ಎಂದು ಕೊಂಡು ಅರುಂಧತಿ ಬಳಿ ಹೇಳಿದಾಗ ಆರುಂಧತಿಗೆ ಶಾಕ್ ಆಗುತ್ತದೆ..

ಆದಿ ಬಗ್ಗೆ ಬೇಸರಪಟ್ಟುಕೊಂಡ ಅಖಿಲಾಂಡೇಶ್ವರಿ

ಆದಿ ಬಗ್ಗೆ ಬೇಸರಪಟ್ಟುಕೊಂಡ ಅಖಿಲಾಂಡೇಶ್ವರಿ

ಇತ್ತ ಅಖಿಲಾಂಡೆಶ್ವರಿ ತಾನು ಅಷ್ಟು ಮುದ್ದಾಗಿ ಪ್ರೀತಿಸಿದ ಆದಿಯೇ ಈ ತರಹ ತಪ್ಪು ಮಾಡಿದ್ದಾನೆ ಎಂದು ನೆನೆದು ಮರುಗುತ್ತಿದ್ದಾಳೆ. ಅಖಿಲಾಂಡೆಶ್ವರಿ ಬಳಿಗೆ ಬಂದ ಆದಿ ಚಿಕ್ಕಪ್ಪ. ಏನು ಅತ್ತಿಗೆ ಊಟಕ್ಕೆ ಬರಲೇ ಇಲ್ಲ. ಎಂದು ಕೇಳಿದಾಗ ಅಖಿಲಾಂಡೆಶ್ವರಿ ಹೇಳುತ್ತಾರೆ ನಾನು ಪ್ರೀತಿಸಿದ ಮಗ ಈ ರೀತಿ ಮಾಡಿದಾಗ ಯಾರಿಗೆ ತಾನೆ ಬೇಸರವಾಗುವುದಿಲ್ಲ ಹೇಳಿ ಮನಸ್ಸಿಗೆ ಬಹಳ ಬೇಸರ ಉಂಟು ಮಾಡಿದೆ. ಆದಿ ಚಿಕ್ಕ ವಯಸ್ಸಿನಿಂದಲೂ ಇಲ್ಲಿಯ ತನಕ ಇಷ್ಟು ಬೇಜವಬ್ದಾರಿಯಿಂದ ನಡೆದುಕೊಂಡಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ನಡೆದುಕೊಂಡು ಬೇಸರ ಮೂಡಿಸಿದ್ದಾನೆ. ಅವನಿಗೆ ನೆಮ್ಮದಿ ಇಲ್ಲ ಅಂತೆ. ನಾನೇನು ಅವನ ಹೆಂಡತಿಗೆ ಅಷ್ಟು ಕಾಟ ಕೊಡುತ್ತಿದ್ದೇನೆಯೇ ಎಂದು ಹೇಳುತ್ತಾರೆ ಬೇಸರದಿಂದ. ಇದನ್ನೆಲ್ಲ ಪಾರು ಮಾತು ಆದಿ ಮರೆಯಿಂದ ಕೇಳಿಸಿಕೊಂಡು ಬೇಸರ ಪಡುತ್ತಾರೆ.

ಕೇಡಿಗಳನ್ನು ಹಿಡಿದೇ ಬಿಟ್ಟ ಆದಿ!

ಕೇಡಿಗಳನ್ನು ಹಿಡಿದೇ ಬಿಟ್ಟ ಆದಿ!

ಇತ್ತ ಪ್ರೀತುವಿನ ಬಳಿ, ''ಅಮ್ಮನಿಗೆ ಬಹಳ ಬೇಸರವಾಗಿದೆ. ಅಮ್ಮನಿಗೆ ನೀವು ಅಂದ್ರೆ ಈಗ ಬಾರಿ ಇಷ್ಟ. ನೀವೇ ಅವರಿಗೆ ಊಟ ಕೊಡಿ'' ಎಂದು ಪಾರು ಹೇಳುತ್ತಾಳೆ. ಬಳಿಕ ಪ್ರೀತು ಅಮ್ಮನಿಗೆ ಊಟ ತೆಗೆದುಕೊಂಡು ಹೋಗುತ್ತಾನೆ. ಅಮ್ಮನ ಕೈ ತುತ್ತು ತಿನ್ನುತ್ತಿದ್ದ ಪ್ರೀತು ಕಣ್ಣಲು ನೀರು ಬಂತು ಇದನ್ನು ನೋಡಿದ ಆದಿಗೆ ಬಹಳ ಬೇಸರವಾಗುತ್ತದೆ. ಅರುಂಧತಿ ರಾಣಾನ ಬಳಿ ಹೇಳುತ್ತಾಳೆ, ನಾವು ಆದಷ್ಟು ಬೇಗ ಈ ಮನೆ ಖಾಲಿ ಮಾಡಬೇಕು ಇಲ್ಲವಾದರೆ ನಮಗೆ ಆಪತ್ತು ಎಂದು ಹೇಳುತ್ತಿರುವಾಗ ರಾಣಾ ಹೇಳುತ್ತಾನೆ ಈಗಲೆ ಖಾಲಿ ಮಾಡಬೇಕಾ ಎಂದು ಹೇಳಿದಾಗ ಮನೆಯ ಕಾಲಿಂಗ್ ಬೇಲ್ ಅನ್ನು ಯಾರೋ ಒತ್ತುತ್ತಾರೆ. ಇನ್ನೂ ರಾಣಾ ಭಯಭೀತರಾಗಿ ಬಾಗಿಲು ತೆರೆದು ನೋಡಿದಾಗ ಆದಿ ನಿಂತಿದ್ದನ್ನು ಕಂಡು ಶಾಕ್ ಆಗುತ್ತಾನೆ.

More from Filmibeat

English summary
Kannada serial paaru written updated on 4 July. In serial Paru is missing now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X