ಮೋನಿಷಾ ಮಾಯಾಜಾಲದಲ್ಲಿ ಸಿಲುಕಿರುವ ಪ್ರೀತಂ!
ಪಾರು ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಖುಷಿ ನೀಡುತ್ತಿದೆ. ತಮ್ಮನನ್ನು ಯಾರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ತಿಳಿಯಲು ಆದಿ ಹಲವು ಪ್ಲ್ಯಾನ್‌ಗಳನ್ನು ಮಾಡುತ್ತಿದ್ದಾನೆ. ಇದೀಗ ಆದಿ ತನಗೆ ದೊರೆತ ಅಡ್ರೆಸ್ ಅನ್ನು ಹಿಡಿದುಕೊಂಡು ಒಂದು ಮನೆಗೆ ಹೋಗುತ್ತಾನೆ. ಆದರೆ ಅಲ್ಲಿ ಗಂಡ ತೀರಿ ಹೋಗಿರುವ ಒಂಟಿ ಮಹಿಳೆ ಮಾತ್ರ ಅಲ್ಲಿರುತ್ತಾನೆ. ಅದನ್ನು ನೋಡಿದ ಆದಿಗೆ ಬಹಳ ಬೇಸರ ಆಗುತ್ತದೆ. ಪ್ರೀತಂನನ್ನು ಆಟ ಆಡಿಸುತ್ತಿರುವವರು ಬಹಳ ಕಿಲಾಡಿಗಳು ಇರಬೇಕು ಎಂದು ಯೋಚನೆ ಮಾಡುತ್ತಾನೆ.
ಪ್ರೀತೂ ನಂಬರ್ ಅನ್ನು ಟ್ರೇಸ್ ಮಾಡಿದರೆ ಹೇಗೆ, ಅಡ್ರೆಸ್ ಯಾವುದು ಆದರೆ ಏನಂತೆ ಅವರು ಅದೇ ನಂಬರ್ ಅನ್ನು ತಾನೇ ಯೂಸ್ ಮಾಡುವುದು. ಅಲ್ಲಿಗೆ ಕಳ್ಳರು ಸಿಕ್ಕಿಬೀಳುವುದು ಫಿಕ್ಸ್. ಅಲ್ಲಿಗೆ ಪ್ರೀತಂಗೆ ಕಾಟ ಕೊಡುತ್ತಿರುವುದು ಯಾರು ಎಂಬುದು ತಿಳಿದು ಹೋಗುತ್ತದೆ. ಆಟ ಈಗ ಶುರು ಆಗಿದೆ ಎಂದು ಮನದಲ್ಲೇ ಯೋಚನೆ ಮಾಡುತ್ತಾನೆ. ಈ ವಿಚಾರವನ್ನು ಪಾರು ಬಳಿ ಹೇಳುತ್ತಾನೆ. ಇನ್ನು ರಾಣಾನ ಮನೆಗೆ ಮೋನಿಕಾ ಎಂಟ್ರಿ ಆಗುತ್ತಾಳೆ.
ಕಾಲಿಂಗ್ ಬೇಲ್ ಸದ್ದಿಗೆ ರಾಣಾ ಕೊಂಚ ಬೆದರಿದರು ಬಳಿಕ ಬಾಗಿಲು ತೆಗೆದು ನೋಡುತ್ತಾನೆ. ಹೊರಗೆ ಮೋನಿಕಾ ನಿಂತಿರುವುದನ್ನು ಕಂಡ ರಾಣಾ ನೀನಾ ಬಂದಿದ್ದು ಒಳ್ಳೇದಾಯ್ತು ಬಾ ಎಂದು ಹೇಳಿದಾಗ ಮೋನಿಕಾ ನಗುತ್ತಾ ಒಳಗೆ ಬಂದು ಕುಳಿತುಕೊಳ್ಳುತ್ತಾಳೆ ಇದನ್ನು ನೋಡಿದ ರಾಣಾ ಕೊಂಚ ನಗುತ್ತಾ ಪ್ರೀತಮ್ ಗೆ ಕರೆ ಮಾಡಲು ಹೇಳುತ್ತಾನೆ. ಬಳಿಕ ಪ್ರೀತಮ್‌ಗೆ ಕರೆ ಮಾಡುತ್ತಾರೆ. ಪ್ರೀತಮ್ ಮೊಬೈಲ್ ರಿಂಗ್ ಆಗುತ್ತದೆ ಆದರೆ ಕರೆ ಸ್ವೀಕಾರ ಮಾಡದೇ ಇರುವುದನ್ನು ನೋಡಿದ ಅಖಿಲಾ ಆಕೆ ಫೋನ್ ಪಿಕ್ ಮಾಡಲು ಹೋಗುತ್ತಾಳೆ.

ಅಮ್ಮನ ಬಳಿ ಸುಳ್ಳು ಹೇಳಿದ ಪ್ರೀತಂ
ಇದನ್ನು ನೋಡಿದ ಪ್ರೀತಮ್ ಓಡಿ ಬಂದು ಮೊಬೈಲ್ ಅನ್ನು ಕಸಿದು ಕೊಳ್ಳುತ್ತಾನೆ. ಬಳಿಕ ಅಮ್ಮನ ಬಳಿ ನಗುತ್ತಾ ಹೇಳುತ್ತಾನೆ ಅದು ನನ್ನ ಗೆಳೆಯ ಮೋನಿಷ್ ಕರೆ ಮಾಡಿದ್ದು ಬೇರೆ ಯಾರು ಅಲ್ಲ ಎಂದು ಹೇಳುತ್ತಾನೆ ಇದನ್ನು ಕೇಳಿದ ಅಖಿಲಾ ಸರಿಯಪ್ಪಾ ಯಾಕೆ ಕರೆ ಕಟ್ ಮಾಡಿದೆ ಮಾತನಾಡಬೇಕಿತ್ತು ಎಂದಾಗ ಇಲ್ಲ ಅಮ್ಮ ಮೋನಿಷ್ ಕೊಂಚ ಬ್ಯುಸಿ ಇದ್ದಾನೆ ಅದಕ್ಕೆ ಮಾತನಾಡಲಿಲ್ಲ ಎಂದು ಸುಳ್ಳು ಹೇಳುತ್ತಾನೆ ಇದನ್ನು ಕೇಳಿದ ಆಕೆ ಆಗ ಮೋನಿಷ್ ಎಂದೇ ಈಗ ಮನೀಶ್ ಅನ್ನುತ್ತಿದ್ದಿಯಾ ಎನು ಕಥೆ ಎಂದು ಕೇಳುತ್ತಾಳೆ.

ಮೋನಿಷಾ ಕಾಟಕ್ಕೆ ಪೇಚಾಟಕ್ಕೆ ಸಿಲುಕಿದ ಪ್ರೀತಂ
ಇದನ್ನು ಕೇಳಿಸಿಕೊಂಡ ಪ್ರೀತಂ ಇಲ್ಲ ಆಗ ಕೂಡ ಮನೀಶ್ ಎಂದೇ ನಿನಗೆ ಕೇಳಿಸಲಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಖಿಲಾಗೆ ಕೊಂಚ ಡೌಟ್ ಬರುತ್ತದೆ. ಬಳಿಕ ಸುಮ್ಮನಾಗುತ್ತಾರೆ, ಅಲ್ಲಿಂದ ತೆರಳಿದ ಪ್ರೀತೂ ಮೋನಿಷಾಗೆ ಕರೆ ಮಾಡುತ್ತಾನೆ. ಬಳಿಕ ಕರೆ ಮಾಡಿದ ಉದ್ದೇಶ ಕೂಡ ಕೇಳುತ್ತಾನೆ. ಅದಕ್ಕೆ ಮೋನಿಷಾ ಉಡಾಫೆ ಉತ್ತರ ಹೇಳುತ್ತಾರೆ ಇದನ್ನು ಕೇಳಿ ಇನ್ನೂ ಕೋಪ ಉಕ್ಕಿ ಹರಿಯುತ್ತದೆ. ಯಾಕೆ ಹೀಗೆ ಮಾತನಾಡುತ್ತಾ ಇದ್ದೀಯಾ ಪ್ರೀತಮ್ ನಿನ್ನನ್ನು ನೋಡಬೇಕು ಅನ್ನಿಸಿತು ಅದಕ್ಕೆ ಕರೆ ಮಾಡಿದೆ ಎಂದು ಮೋನಿಷಾ ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್‌ಗೆ ಕೊಂಚ ಕೋಪ ಬರುತ್ತದೆ.

ಪ್ರೀತಂ ಅನ್ನು ಭೇಟಿಯಾಗುವಂತೆ ಒತ್ತಾಯಿಸುವ ಮೋನಿಷಾ
ಬಳಿಕ ಪ್ರೀತಮ್ ಬಳಿ ಮಾತನಾಡಿದ ಮೋನಿಷಾ ಹೇಳುತ್ತಾಳೆ ಎನು ಪ್ರೀತಮ್ ನಿನ್ನ ಮನೆಗೆ ಬರಬೇಕಾ ನೋಡಲು ಅಥವಾ ಇಲ್ಲಿಗೆ ಬರುತ್ತೀಯಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತಮ್ ಮೋನಿಷಾ ಮೇಲೆ ರೇಗಾಡುತ್ತಾನೆ. ನನಗೆ ಈ ರೀತಿ ಎಲ್ಲಾ ಟಾರ್ಚರ್ ಕೊಟ್ಟರೆ ನನಗೆ ಬಹಳ ಕೋಪ ಬರುತ್ತದೆ. ಕೋಪದಲ್ಲಿ ನಾನು ಏನು ಮಾಡಲು ಹೇಸುವುದಿಲ್ಲ ಅದಕ್ಕಾಗಿ ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಹೇಳುತ್ತ ಇರುತ್ತಾನೆ. ಆದರೆ ಈ ಮೋನಿಷಾ, ಅಲ್ಲಿಗೆ ಬಾ ಇಲ್ಲಿಗೆ ಬಾ ಎಂದು ಪ್ರೀತೂವನ್ನು ಆಟ ಆಡಿಸಿಕೊಂಡು ಬರುತ್ತಿದ್ದಾಳೆ. ಇದನ್ನು ನೋಡಿ ಅರುಂಧತಿ ನಗುತ್ತಾ ಇದ್ದರೆ, ರಾಣಾ ಮಾತ್ರ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾನೆ. ಫೋನ್ ಸಿಮ್ ಅನ್ನು ಬೇರೆಯವರ ಹೆಸರಲ್ಲಿ ತೆಗೆದುಕೊಂಡು ತನ್ನ ಬುಡಕ್ಕೆ ಬಾರದೆ ಇರುವ ಹಾಗೆ ನೋಡಿಕೊಂಡು ಇರುತ್ತಾನೆ. ಇದನ್ನೆಲ್ಲ ನೋಡಿ ಅರುಂಧತಿ ನಗುತ್ತಾಳೆ.


Click it and Unblock the Notifications











