ಮನೆ ಬಿಟ್ಟು ಹೋದ ಜನನಿ: ಮೋನಿಕಾ ಮೋಸಾದಾಟಕ್ಕೆ ತೆರೆ ಬೀಳುತ್ತಾ?

By ಪೂರ್ವ

'ಪಾರು' ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಜನನಿ, ಪ್ರೀತಮ್ ಜೊತೆ ಮಾತನಾಡಿ ಬಹಳ ಖುಷಿಯಲ್ಲಿ ಇರುತ್ತಾಳೆ. ಇದನ್ನು ನೋಡಿದ ಪಾರು-ಆದಿ ಹೇಳುತ್ತಾರೆ ಯಾವತ್ತೂ ಹೀಗೆ ಖುಷಿ ಆಗಿ ಇರಿ ಎಂದಾಗ ಜನನಿ ಮಾತ್ರ ನನ್ನ ಮನಸಿನ ಭಾರ ಇಳಿಯಿತು ಮನಸ್ಸು ಬಹಳ ಹಗುರ ಆದ ಹಾಗೆ ಕಾಣುತ್ತಿದೆ ಎನ್ನುತ್ತಾಳೆ. ಬಳಿಕ ದೇವರಿಗೆ ದೀಪ ಹಚ್ಚಲು ಅಲ್ಲಿಂದ ತೆರಳುತ್ತಾಳೆ.

ಮೋನಿಕಾ ಇನ್ನೂ ಇಲ್ಲೇ ನಿಂತರೆ ಎಲ್ಲಾ ಕೆಲಸ ಕೆಟ್ಟು ಹೋಗುತ್ತದೆ ಎಂದು ತಿಳಿದು ಅಲ್ಲಿಂದ ಓಡಿ ಹೋಗಲು ಯತ್ನಿಸುತ್ತಾಳೆ. ಆಗ ಅಲ್ಲಿಗೆ ಬಂದ ಸೆಕ್ಯುರಿಟಿ ಗಾರ್ಡ್, 'ಮೇಡಂ ನೀವು ಇಲ್ಲಿ ಏನು ಮಾಡುತ್ತಾ ಇದ್ದೀರಾ? ಎಂದೆಲ್ಲ ಕೇಳುತ್ತಾನೆ. ಅದಕ್ಕೆ ಮೋನಿಕಾ ನಾನು ಹೊರಗೆ ಹೋಗಬೇಕಿತ್ತು ಎಂದು ಹೇಳುತ್ತಾಳೆ.

ಆದರೆ ಸೆಕ್ಯುರಿಟಿ ಗಾರ್ಡ್ ಮಾತ್ರ ಮೋನಿಕಾ ಮೇಡಂ ನಿಮಗೆ ಏನು ಬೇಕೋ ಕೇಳಿ ನಾನು ತಂದು ಕೊಡುತ್ತೇನೆ ಆದರೆ ನೀವು ಮನೆಯ ಹೊರಗೆ ಹೋಗುವ ಹಾಗೆ ಇಲ್ಲ. ಇದು ಪಾರು ಆರ್ಡರ್ ಎಂದು ಹೇಳುತ್ತಾಳೆ. ಮೋನಿಕಾ ಎಷ್ಟೇ ಮನವಿ ಮಾಡಿದರು ಸೆಕ್ಯುರಿಟಿ ಗಾರ್ಡ್ ಮಾತ್ರ ಮನೆಯಿಂದ ಹೊರಗೆ ಬಿಡುವುದಿಲ್ಲ. ಇನ್ನು ರಾಣಾ ಹಾಗೂ ಅರುಂಧತಿ ಮಾತನಾಡುತ್ತಾ ಇರುತ್ತಾರೆ. ಮೋನಿಕಾಳ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಮೋನಿಕಾ ಈಗಾಗಲೇ ಅರಸನ ಕೋಟೆಯವರಿಗೆ ಎಲ್ಲಾ ವಿಚಾರ ಹೇಳಿರಬೇಕು ಎಂದು ರಾಣಾ ಹೇಳಿದಾಗ ಅರುಂಧತಿ ಅಣ್ಣನನ್ನು ಸಮಾಧಾನ ಮಾಡುತ್ತಾ ಇರುತ್ತಾಳೆ.

ಕರೆ ಸ್ವೀಕರಿಸದ ರಾಣಾ

ಕರೆ ಸ್ವೀಕರಿಸದ ರಾಣಾ

ಇನ್ನು ಮೋನಿಕಾ ರಾಣನಿಗೆ ಕರೆ ಮಾಡಿದರೆ ರಾಣಾ ಕರೆ ಸ್ವೀಕರಿಸದೆ ಇರುವುದರಿಂದ ಮೋನಿಕಾ ಆತಂಕಗೊಳ್ಳುತ್ತಾಳೆ. ಇನ್ನು ಪಾರು ಹಾಗೂ ಆದಿ, ಪ್ರೀತಮ್ ಹಾಗೂ ಜನನಿ ಒಂದಾದ ಕಾರಣಕ್ಕೆ ಬಹಳ ಖುಷಿಗೊಂಡು ಇರುತ್ತಾರೆ. ಜನನಿ ದೇವರ ಕೋಣೆಗೆ ಹೋಗಿ ದೀಪ ಹೆಚ್ಚುತ್ತಾಳೆ. ಮೋನಿಕಾ ಮಾತ್ರ ಈ ಮನೆಯಲ್ಲಿ ಏನು ಕುತಂತ್ರ ಮಾಡಬಹುದು. ಈ ಮನೆ ಮಂದಿಯ ನಿದ್ದೆಗೆಡಿಸುವುದು ಹೇಗೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಪ್ರೀತಮ್‌ಗೆ ಕರೆ ಮಾಡಿದ ಮೋನಿಕಾ ನನ್ನ ಫೋನ್ ಕಳವು ಆಗಿದೆ ನನಗೆ ಬೇರೆ ಹೊಸ ಫೋನ್ ಬೇಕು ಎಂದು ಹೇಳುತ್ತಾಳೆ.

ಪ್ರೀತಮ್ ಬಳಿ ಹೊಸ ಫೋನ್ಗೆ ಬೇಡಿಕೆ ಇಟ್ಟ ಮೋನಿಕಾ

ಪ್ರೀತಮ್ ಬಳಿ ಹೊಸ ಫೋನ್ಗೆ ಬೇಡಿಕೆ ಇಟ್ಟ ಮೋನಿಕಾ

ಇದನ್ನು ಕೇಳಿದ ಪ್ರೀತಮ್ ನಮ್ಮ ಮನೆಯಲ್ಲಿ ಯಾರು ಫೋನ್ ಕದಿಯುತ್ತಾರೆ ಎಂದೆಲ್ಲ ಹೇಳಿದಾಗ ವಿಡಿಯೋ ಬಗ್ಗೆಯೂ ಮಾತನಾಡುತ್ತಾನೆ. ಫೋನ್ ಲಾಕ್ ಆದ ಕಾರಣ ಯಾವ ವಿಡಿಯೋ ಕೂಡ ನೋಡಲು ಅಸಾಧ್ಯ ಎಂದು ಹೇಳಿದ ಮೇಲೆಯೇ ಪ್ರೀತಮ್‌ಗೆ ಮರು ಜೀವ ಬಂದ ಹಾಗೆ ಆಗುತ್ತದೆ. ಮೋನಿಕಾ ಪ್ರೀತಮ್ ಎದುರು ಹೋಸ ವರಸೆ ತೋರಿಸುತ್ತಾ ಇದ್ದಾಳೆ. ಇದೀಗ ಮೋನಿಕಾ ಹೊಸ ಬಲೆ ಹೆಣೆದಿದ್ದಾಳೆ. ಪ್ರೀತಮ್ ಅನ್ನು ಹೇಗಾದರೂ ಜನನಿಯಿಂದ ದೂರ ಮಾಡಲೇ ಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ. ಈ ವೇಳೆ ಮನೆಯ ಕೆಲಸದಾಕೆಯ ಫೋನ್ ಹಿಡಿದುಕೊಂಡು ಪ್ರೀತಮ್‌ಗೆ ಕರೆಮಾಡಿದ್ದಾಳೆ ಮೋನಿಕಾ.

ಮೋನಿಕಾಗೆ ಐ ಲವ್‌ ಯೂ ಎಂದ ಪ್ರೀತಮ್

ಮೋನಿಕಾಗೆ ಐ ಲವ್‌ ಯೂ ಎಂದ ಪ್ರೀತಮ್

ಆದರೆ ಪ್ರೀತಮ್ ಮಾತ್ರ ಹೊಸ ಫೋನ್ ಕೊಡುವ ಯೋಚನೆಯೇ ಇಲ್ಲದೆ ಹಳೆಯ ಫೋನ್ ಹುಡುಕಾಟದಲ್ಲಿ ಇರುತ್ತಾನೆ. ದೇವರ ಮನೆಯಲ್ಲಿ ಜನನಿ, ಮೋನಿಕಾ ಮಾತನಾಡುತ್ತಿರುವುದು ಕೇಳಿಸಿಕೊಳ್ಳುತ್ತಾ ಇರುತ್ತಾಳೆ. ಮೋನಿಕಾ, ಪ್ರೀತೂ ಎಂದ ಕೂಡಲೇ ಜನನಿ ಮೋನಿಕಾಳನ್ನು ನೋಡುತ್ತಾಳೆ. ಇದನ್ನು ನೋಡಿದ ಮೋನಿಕಾ ಮನದಲ್ಲಿ ಜೋರಾಗಿ ನಗುತ್ತಾಳೆ. ಇನ್ನು ಪ್ರೀತಮ್ ನನ್ನು ಬ್ಲಾಕ್ ಮೇಲ್ ಮಾಡಿ ಏನೇನೆಲ್ಲ ಮಾತನಾಡುತ್ತಾಳೆ ಮೋನಿಕಾ ಕೊನೆಗೆ ಪ್ರೀತೂ ಬಾಯಿಯಿಂದ ಐ ಲವ್ ಯು ಎಂದು ಹೇಳಿಸುತ್ತಾಳೆ. ಇದನ್ನು ಕೇಳಿದ ಜನನಿಗೆ ಸಿಡಿಲು ಬಡಿದ ಹಾಗೆ ಆಗುತ್ತದೆ.

ಮನೆ ಬಿಟ್ಟು ಹೋದ ಜನನಿ

ಮನೆ ಬಿಟ್ಟು ಹೋದ ಜನನಿ

ರೂಮಿಗೆ ಬಂದ ಜನನಿ ಜೋರಾಗಿ ಅಳುತ್ತಾಳೆ ಬಳಿಕ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡುತ್ತಾಳೆ . ಜನನಿ ಬಳಿ ಬಂದ ಪ್ರೀತಮ್‌ನನ್ನು ನೋಡಿ ಕೋಪಗೊಂಡ ಜನನಿ ಕತ್ತಲ್ಲಿದ್ದ ತಾಳಿಯನ್ನು ಪ್ರೀತಮ್ ಕೈ ಗೆ ಕೊಡುತ್ತಾಳೆ. ಬಳಿಕ ಪಾರು ಬಳಿ ನಡೆದ ವಿಚಾರ ತಿಳಿಸಿ ಮನೆ ಬಿಟ್ಟು ಹೋಗುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 5th December episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X