For Quick Alerts
  ALLOW NOTIFICATIONS  
  For Daily Alerts

  Paaru Serial: ಅರಸನ ಕೋಟೆ ಇಬ್ಭಾಗ ಆಗುವ ಸಮಯ ಬಂದೇ ಬಿಟ್ಟಿದೆ!

  By Poorva
  |

  ಹಾಲ್‌ನಲ್ಲಿ ಸೋಫಾ ಮೇಲೆ ಅಖಿಲ ಕುಳಿತಿರುತ್ತಾಳೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ದಾಮಿನಿ ನಾನು ನಿಮ್ಮ ಬಳಿ ಪಾರು ಬಗ್ಗೆ ಕಂಪ್ಲೇಂಟ್ ಮಾಡಲು ಬಂದಿಲ್ಲ, ನೀವು ಹಾಗೆ ಅಂದುಕೊಳ್ಳಬೇಡಿ ಎಂದು ಹೇಳುತ್ತಾಳೆ. ಅದಕ್ಕೆ ಅಖಿಲ ಜಾಸ್ತಿ ರಾಗ ಎಳೆಯಬೇಡ ಎನು ವಿಚಾರ ಹೇಳು ಎಂದು ಹೇಳುತ್ತಾಳೆ. ಇದನ್ನು ಕೇಳಿದ ದಾಮಿನಿ ಕಳೆದ ಬಾರಿ ದೇವಾಸ್ಥಾನದ ಅಧಿಕಾರಿಗಳು ಬಂದಾಗ ಎಷ್ಟು ವಿನಯದಿಂದ ವಿನಮ್ರತೆಯಿಂದ ನಡೆದುಕೊಂಡು ಇದ್ದಳು, ಗೌರವಪೂರ್ವಕವಾಗಿ ಎಷ್ಟು ಜನ ಬಂದಿದ್ದರು ವಿಧ ವಿಧವಾದ ಅಡುಗೆ ಮಾಡಿ ಊಟ ಬಡಿಸಿದಳು, ಆದರೆ ಈ ಬಾರಿ ಅನ್ನ ಸಾಂಬಾರ್‌ನಲ್ಲಿ ಮುಗಿಸುತ್ತೇನೆ ಎಂದು ಹೇಳಿದಾಗ ನಮ್ಮ ಅರಸನ ಕೋಟೆಯ ಮರ್ಯಾದೆ ಏನು ಆಗಬೇಡ ಎಂದು ಹೇಳುತ್ತಾಳೆ..

  ಇಷ್ಟೆಲ್ಲ ದಾಮಿನಿ ಅಖಿಲ ಕಿವಿ ಊದಿದರು ಅಖಿಲ ಹೇಳುವುದು ಇಷ್ಟೇ ನನ್ನ ಸೊಸೆ ಏನೇ ಮಾಡಿದರೂ ಅದಕ್ಕೆ ಒಂದು ಕಾರಣ ಇರುತ್ತದೆ. ಕಳೆದ ಬಾರಿ ಇವರೆಲ್ಲ ಮನೆಗೆ ಬಂದಾಗ ನಾನೇ ನನ್ನ ಕೈಯಾರೆ ಪಾಯಸ ಮಾಡಿ ಬಡಿಸಿದ್ದೆ. ಅದನ್ನು ಚೆನ್ನಾಗಿ ತಿಂದರು. ಆದರೆ ಅವರಲ್ಲಿ ಇಬ್ಬರಿಗೂ ಶುಗರ್ ಜಾಸ್ತಿ ಆಗಿ ಆರೋಗ್ಯದಲ್ಲಿ ಏರುಪೇರು ಆಯಿತು. ಇಂಥ ಇಕ್ಕಟ್ಟಿನ ಪರಿಸ್ಥಿಯಲ್ಲಿ ಪಾರ್ವತಿ ಈ ರೀತಿ ಯೋಚನೆ ಮಾಡಿದ್ದಾಳೆ. ನಮ್ಮ ಗೌರವ ಇನ್ನೂ ಹೆಚ್ಚಾಗಿದೆ ಹೊರತು ಕಮ್ಮಿ ಆಗಿಲ್ಲ ಎಂದು ಅಖಿಲ ಹೇಳುತ್ತಾಳೆ.

  ಇದನ್ನೆಲ್ಲ ಮರೆಯಲ್ಲಿ ಕೇಳಿಸಿಕೊಂಡ ಪಾರು ನನ್ನನ್ನು ಎಷ್ಟು ನಂಬುತ್ತೀರಾ ಅತ್ತೆಯಮ್ಮ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾಳೆ.. ಈ ವೇಳೆ ಅಖಿಲ ದಾಮಿನಿ ಬಳಿ ನನ್ನ ಸೊಸೆ ಅನ್ನ ಸಾರು ಪಲ್ಯ ಬಡಿಸಿದಳು. ಆದರೆ ಅದರ ರುಚಿ ಹೇಗಿತ್ತು. ನೀನು ಹೊಟ್ಟೆ ತುಂಬಾ ಊಟ ಮಾಡಿದೆ ಅಲ್ವಾ ಎಂದು ಹೇಳುತ್ತಾಳೆ. ದಾಮಿನಿ ಬೇಳೆ ಬೇಯುವುದಿಲ್ಲ ಎಂದು ಗೊತ್ತಾಗಿ ಹೌದು ಅಕ್ಕ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇನ್ನು ಪಾರು ಕೂಡ ಅಲ್ಲಿಂದ ಮೆತ್ತಗೆ ಹೋಗುತ್ತಾಳೆ.. ಈ ವೇಳೆ ಜಯ ಅಖಿಲ ಬಳಿ ಬಂದು ಮೇಡಂ ಲೆಕ್ಕಾಚಾರ ಬಂದಿದ್ದಾರೆ ಅವರು ನಿಮ್ಮ ಬಳಿ ಪರ್ಸ್ನಲ್ ಆಗಿ ಮಾತನಾಡಬೇಕು ಅಂತೆ ಎಂದಾಗ ಅಖಿಲ ಯಾರು ಮುರಳಿಯವರ ಬರ ಹೇಳು ಎಂದು ಹೇಳುತ್ತಾಳೆ.

  ಇನ್ನು ಮುರಳಿ ಅಖಿಲ ಬಳಿ ಬರುತ್ತಾರೆ. ರಾಣಾ ಅರುಂಧತಿ ಬಳಿ ಬಂದು ಅರೂ ಎಂದು ಕರೆಯುತ್ತಾನೆ. ಪ್ರೀತಮ್ ಕರೆ ಮಾಡಿದ್ದ, ಅವನ ಹೆಂಡತಿ ಮೊಬೈಲ್‌ನಲ್ಲಿ ಇದ್ದ ನಮ್ಮ ನಂಬರ್ ಅನ್ನು ಡಿಲಿಟ್ ಮಾಡಿದ್ದಾನಂತೆ ಎಂದು ಖುಷಿಯಿಂದ ಹೇಳುತ್ತಾನೆ..

  ರಾಣಾನಿಗೆ ಬುದ್ದಿ ಹೇಳಿದ ಅರುಂಧತಿ

  ರಾಣಾನಿಗೆ ಬುದ್ದಿ ಹೇಳಿದ ಅರುಂಧತಿ

  ಇದನ್ನು ಕೇಳಿದ ಅರುಂಧತಿ ಸುಮ್ಮನೆ ಇರುತ್ತಾಳೆ. ಈ ವೇಳೆ ರಾಣಾ ತಂಗಿಯನ್ನು ಸಮಾಧಾನ ಮಾಡುತ್ತಾ ಇರುತ್ತಾನೆ. ಅರುಂಧತಿಗೆ ಬೇರೆ ಯಾರ ಹೆದರಿಕೆ ಇಲ್ಲ, ವೀರಯ್ಯ ದೇವನ ಭಯದಿಂದ ಅರುಂಧತಿ ತತ್ತರಿಸುತ್ತಾ ಇರುತ್ತಾಳೆ. ಜನನಿ ವೀರಯ್ಯ ದೇವನ ಮಗಳು ಆದ ಕಾರಣ ಜನನಿ ಬಗ್ಗೆ ಭಯ ಪಟ್ಟುಕೊಳ್ಳುತ್ತಾಳೆ. ಜನನಿ ಬಗ್ಗೆ ಬಹಳ ಜಾಗರೂಕತೆಯಿಂದ ಇರಬೇಕು ಎಂದು ರಾಣಾ ಕಿವಿ ಮಾತು ಹೇಳುತ್ತಾನೆ.

  ಉಲ್ಟಾ ಹೊಡೆಯಿತು ಆದಿ ಲೆಕ್ಕಾಚಾರ

  ಉಲ್ಟಾ ಹೊಡೆಯಿತು ಆದಿ ಲೆಕ್ಕಾಚಾರ

  ಇನ್ನು ಆದಿ ಲೆಕ್ಕಾಚಾರನ ಬಳಿ ಏನು ಮಾತಾಡಬೇಕು ಎಂಬುವುದು ಗೊತ್ತಲ್ಲ ಆರಾಮವಾಗಿ ಮಾತನಾಡಿ ಎಂದು ಹೇಳುತ್ತಾನೆ. ಅಖಿಲ ಮುರಳಿ ಇರುವಲ್ಲಿಗೆ ಬರುತ್ತಾಳೆ. ಮುರಳಿ ಅಖಿಲ ಬಳಿ ಆದಿ ೫೦ ಲಕ್ಷ ಅವರ ಖಾತೆಗೆ ಟ್ರಾನ್ಸ್ಫರ್ ಮಾಡಬೇಕು ಎಂದು ಹೇಳಿದ್ದಾರೆ ಇದನ್ನು ನಿಮ್ಮ ಬಳಿ ಹೇಳೋಣ ಎಂದು ಎಂದು ಬಂದೆ, ಅವರ ಮಿಸ್ಸೆಸ್ ಪಾರು ಅವರ ಹೆಸರಲ್ಲಿ ಪ್ರಾಪರ್ಟಿ ತೆಗೆದುಕೊಳ್ಳಲು ಈ ಹಣ ಬಳಕೆ ಮಾಡಲಿದ್ದಾರೆ ಎಂದು ಹೇಳಿದಾಗ ಅಖಿಲ ಆದಿಯನ್ನು ಕರೆದು ಕೇಳುತ್ತಾರೆ

  ಆದಿ ನಿರ್ಧಾರಕ್ಕೆ ಖುಷಿ ಪಟ್ಟ ಅಖಿಲ

  ಆದಿ ನಿರ್ಧಾರಕ್ಕೆ ಖುಷಿ ಪಟ್ಟ ಅಖಿಲ

  ಆ ವೇಳೆ ಆದಿ ಹೌದು ಎಂದು ಹೇಳುತ್ತಾನೆ.. ಬಳಿಕ ಎದ್ದು ನಿಂತ ಅಖಿಲ ಖುಷಿಯಿಂದ ಆದೀಯನ್ನೂ ಹಿಡಿದುಕೊಂಡು ನನಗೆ ಬಹಳ ಖುಷಿ ಆಯ್ತು ಎಂದು ಮಗನನ್ನು ಬಿಗಿದು ಅಪ್ಪಿಕೊಳ್ಳುತ್ತ ಇರುತ್ತಾಳೆ.. ಬಳಿಕ ಅಖಿಲ ಮುರಳಿ ಬಳಿ ಇನ್ನೂ ನನ್ನ ಬಳಿ ಕೇಳುವುದೇನು ಬೇಡ, ಎಷ್ಟು ಬೇಕೋ ಅಷ್ಟು ಹಣ ಕೊಡಿ ಎಂದು ಖುಷಿಯಿಂದ ಹೇಳುತ್ತಾಳೆ. ಪಾರು ಆದಿ ಅಖಿಲ ಮುಂದೆ ಕೆಟ್ಟವರು ಆಗಬೇಕು ಎಂದು ಎಷ್ಟೇ ಅಂದುಕೊಂಡರು ಕೆಟ್ಟವರು ಆಗುತ್ತಿಲ್ಲ ಇದರಿಂದ ಆದಿ ಪಾರು ಚಿಂತೆಗೀಡಾಗೀಡಾಗಿದ್ದಾರೆ. ಬಳಿಕ ಅಲ್ಲಿಂದ ಮುರಳಿ ಹೋಗುತ್ತಾರೆ..

  ಆದಿ ವರ್ತನೆಗೆ ದಾಮಿನಿ ಶಾಕ್

  ಆದಿ ವರ್ತನೆಗೆ ದಾಮಿನಿ ಶಾಕ್

  ಬಳಿಕ ಆದಿ ಮುರಳಿ ಬಳಿ ಬಂದು ಕಂಪನಿ ಹಣ ಕಂಪನಿ ಅಕೌಂಟ್ ನಲ್ಲಿ ಇರಲಿ ನನಗೆ ಬೇಡ ಎಂದಾಗ ಮರೆಯಲ್ಲಿ ಕದ್ದು ಕೇಳಿಸಿಕೊಳ್ಳುತ್ತಾ ಇದ್ದ ದಾಮಿನಿಗೆ ಶಾಕ್ ಆಗುತ್ತದೆ. ಇನ್ನು ಮೋನಿಕಾ ಇದೆಲ್ಲವನ್ನೂ ಅರುಂಧತಿ ಬಳಿ ಹೇಳುತ್ತ ಇರುತ್ತಾಳೆ.. ಅಖಿಲ ಆದಿ ಪಾರು ಏನೇ ಮಾಡಿದರೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾ ಇರುವುದನ್ನು ನೋಡಿ ಆದಿ ಪಾರು ತಲೆಕೆಡಿಸಿಕೊಂಡಿದ್ದಾರೆ.

  English summary
  Kannada serial paaru written updated on 5th January
  Thursday, January 5, 2023, 14:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X