ಆದಿ ಕೈಗೆ ಸಿಕ್ಕಿ ಬಿದ್ದ ರಾಣಾ: ಹೊಸದೊಂದು ತಿರುವಿನ ಆರಂಭ?

By ಪೂರ್ವ

ಪಾರು ಧಾರವಾಹಿ ದಿನಕ್ಕೊಂದು ಟ್ವಿಸ್ಟ್ ನೀಡುತ್ತಿದೆ. ಪಾರುವಿನ ಮುಗ್ಧತೆ ಅಖಿಲಾಂಡೆಶ್ವರಿ ದರ್ಪ, ಅರುಂಧತಿ ಕುತಂತ್ರ ಇದಕ್ಕೆಲ್ಲ ಬಲಿ ಪಶು ಆದಿ. ಆದರೆ ಇದೆಲ್ಲ ಅಖಿಲಾಂಡೆಶ್ವರಿಗೆ ಯಾವಾಗ ಅರ್ಥ ಆಗುತ್ತದೆ? ಪಾರೂವನ್ನು ಯಾವಾಗ ಮನೆ ಸೊಸೆ ಎಂದು ಒಪ್ಪಿಕೊಳ್ಳುತ್ತಾಳೆ ಅಖಿಲ? ಈ ಪ್ರಶ್ನೆಗಳಿಗೆ ಶೀಘ್ರದಲ್ಲಿ ಅಂತೂ ಉತ್ತರ ಸಿಗಲಾರದು ಧಾರಾವಾಹಿ ವೀಕ್ಷಕರಿಗೆ.

ಇತ್ತ ಜನನಿ ಬಹಳ ಖುಷಿಯಾಗಿದ್ದಾರೆ. ನನ್ನ ಗಂಡ ಆಫೀಸಿನಲ್ಲಿ ಎಲ್ಲಾ ಕೆಲಸ ಮಾಡಿದ್ದಾನೆ. ಆದಿ ಬಾವನನ್ನು ಮಿರಿಸುತ್ತಿದ್ದಾನೆ ಎಂದೆಲ್ಲ ಖುಷಿ ಪಡುತ್ತಾಳೆ. ಇತ್ತ ಅಖಿಲಾಂಡೇಶ್ವರಿ ಬಹಳ ದುಃಖದಲ್ಲಿ ಇದ್ದಾರೆ, ಮಗ ಪ್ರೀತು ಅಮ್ಮನಿಗೆ ಊಟ ತಂದು ಕೊಡುತ್ತಾನೆ ಇದನ್ನು ನೋಡಿದ ಅಖಿಲಾಂಡೆಶ್ವರಿಗೆ ಬಹಳ ಖುಷಿಯಾಗುತ್ತದೆ. ನಾನು ನಂಬಿದ ಮಗ ಹೆಂಡತಿ ಅಡಿಯಾಳಗಿದ್ದಾನೆ. ಆದರೆ ನಾನು ನಂಬದೆ ಇರೋ ಮಗ ನನ್ನ ಮರ್ಯಾದೆ ಕಾಪಾಡಿದ ಹಾಗೆಯೇ ನನಗೆ ಊಟ ಮಾಡಲು ಊಟ ತಂದುಕೊಟ್ಟಿದ್ದಾನೆ, ಇದೇ ಕಾರಣಕ್ಕೆ ದೇವರು ಹೇಳಿರುವುದು ಯಾರನ್ನು ತಾತ್ಸರಾವಾಗಿ ನೋಡಬಾರದು ಎಂದು ಪ್ರೀತು ಬಳಿ ಹೇಳುತ್ತಾಳೆ.

ಬಳಿಕ ಪ್ರೀತುಗೆ ಕೈ ತುತ್ತು ನೀಡುತ್ತಾಳೆ. ಆ ಬಳಿಕ ಬಹಳ ಬೇಸರದಿಂದ ಅಮ್ಮ ಕೊಡು ನಾನು ನಿನಗೆ ತಿನ್ನಿಸುತ್ತೇನೆ ಎಂದು ಹೇಳುತ್ತಾನೆ ಪ್ರೀತು, ಬಳಿಕ ಅಮ್ಮನಿಗೆ ಊಟ ತಿನ್ನಿಸುತ್ತಾನೆ. ಇದನ್ನು ಆದಿ ನೋಡುತ್ತಿರುತ್ತಾನೆ. ಅವನಿಗೆ ಅಮ್ಮ ಬೇಸರದಿಂದ ಇರುವುದನ್ನು ನೋಡಿ ಬಹಳ ಕಷ್ಟವಾಗುತ್ತದೆ. ಯಾಕೆ ಹೀಗಾಯ್ತು? ಅಮ್ಮನಿಗೆ ಎಷ್ಟೊಂದು ನೋವಾಯಿತು ಎಂದೆಲ್ಲ ಯೋಚಿಸುತ್ತಾ ಬೇಸರ ಪಡುತ್ತಾನೆ.

ನನಗೆ ಇದೆಲ್ಲ ಬೇಡ ಎನ್ನುವ ಪ್ರೀತು

ನನಗೆ ಇದೆಲ್ಲ ಬೇಡ ಎನ್ನುವ ಪ್ರೀತು

ಇತ್ತ ಪ್ರೀತು ಚಡಪಡಿಸುತ್ತಾ ರೂಮಿಗೆ ಬರುತ್ತಾನೆ ಗಂಡನನ್ನು ನೋಡಿದ ಜನನಿ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾಳೆ. ಎಸ್ ಗುಡ್ ಜಾಬ್ ಪ್ರೀತು ಇನ್ನೂ ಅತ್ತೆಗೆ ನಿನ್ನ ಮೇಲೆ ಕಾನ್ಫಿಡೆನ್ಸ್ ಹೆಚ್ಚಾಗಿದೆ. ಎಂದೆಲ್ಲಾ ಹೇಳುವಾಗ ಜನನಿ ನನಗೆ ಅದರಲ್ಲಿ ಎಲ್ಲಾ ಇಂಟರೆಸ್ಟ್ ಇಲ್ಲ. ಪ್ಲೀಸ್ ಫೋರ್ಸ್ ಮಾಡಬೇಡ ಎಂದು ಹೇಳುತ್ತಾನೆ. ಇಲ್ಲ ಪ್ರೀತು ನೀನು ಹೀಗೆಯೇ ಆಫೀಸ್ ನಲ್ಲಿ ಮಿಂಗಲ್ ಆಗುತ್ತಿದ್ದರೆ ನಿನಗೆ ದೊಡ್ಡ ಹುದ್ದೆ ಕೊಡುತ್ತೇನೆ ಎಂದು ಅತ್ತೆ ಹೇಳಿದ್ದರಲ್ವಾ ಎಂದು ಹೇಳಿದಾಗ ಅಣ್ಣ ಇರಬೇಕಾದರೆ ನನಗೆ ಯಾಕೆ ಇದೆಲ್ಲ. ನನಗೆ ಯಾವುದೇ ಪಟ್ಟ ಬೇಡ . ನಾನು ಅದಕ್ಕೆ ಆಸೆ ಪಟ್ಟವನೆ ಅಲ್ಲ. ಅಮ್ಮ ಬಹಳ ಬೇಸರ ಮಾಡಿಕೊಂಡಿದ್ದಾರೆ. ಅಮ್ಮನನ್ನು ಸಮಾಧಾನಿಸಿ ಬಂದೆ ಎಂದು ಹೇಳಿದಾಗ ಜನನಿ ಹೇಳುತ್ತಾಳೆ ಹೀಗೆ ಮಾಡುತ್ತಿರು ಅಮ್ಮನಿಗೆ ನಿನ್ನ ಮೇಲೆ ನಂಬಿಕೆ ಜಾಸ್ತಿಯಾಗುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪ್ರೀತು ಅಲ್ಲಿಂದ ಹೊರಡುತ್ತಾನೆ.

ಮನೆ ಖಾಲಿ ಮಾಡುವ ಧಾವಂತ

ಮನೆ ಖಾಲಿ ಮಾಡುವ ಧಾವಂತ

ಇತ್ತ ಅರುಂಧತಿ ಹಾಗೂ ರಾಣಾ ಆತಂಕದಲ್ಲಿ ಇದ್ದಾರೆ ಅರುಂಧತಿ ಹೇಳುತ್ತಾಳೆ ಆದಿ ನಮ್ಮ ಮನೆಯ ಅಡ್ರೆಸ್ ಹುಡುಕಿಕೊಂಡು ಖಂಡಿತ ಇಲ್ಲಿಗೆ ಬರುತ್ತಾರೆ. ಬೇಗ ಮನೆ ಚೇಂಜ್ ಮಾಡೋಣ ಇಲ್ಲಾಂದ್ರೆ ನಮಗೆ ಪ್ರಾಬ್ಲಂ ಎಂದು ಹೇಳುತ್ತಾರೆ. ಬಳಿಕ ಅರುಂಧತಿ ಹೇಳುತ್ತಾಳೆ ಈ ಯಾಮಿನಿ ಎನು ಮಾಡುತ್ತಿದ್ದಾಳೆ ಎಂಬುವುದನ್ನು ನೋಡಬೇಕಿದೆ ಎಂದು ಲ್ಯಾಪ್ ಟಾಪ್ ತೆಗೆದು ನೋಡಿದಾಗ ಯಾಮಿನಿ ಪಿಜಾ ತಿನ್ನುತ್ತಿರುತ್ತಾಳೆ. ಅದರಲ್ಲೂ ಬಹಳ ಆಸ್ವಧಿಸಿಕೊಂಡು ಹೇಳುತ್ತಾಳೆ ಪಾರು ಮಾಡಿದ ಅಡುಗೆಯನ್ನು ತಿಂದು ತಿಂದು ಸಾಕಾಗಿ ಹೋಗಿದೆ ವಾ ಈ ತಿನಿಸು ನನಗೆ ಬಹಳ ಇಷ್ಟವಾಗುತ್ತಿದೆ ಎಂದು ಹೇಳಿ ತಿನ್ನುತ್ತಿರುತ್ತಾಳೆ. ಇದನ್ನು ನೋಡಿದ ಅರುಂಧತಿಯ ಸಿಟ್ಟು ಜಾಸ್ತಿಯಾಗುತ್ತದೆ. ಇವಲೊಬ್ಬಳು ತಿನ್ನೋದ್ರಲ್ಲೆ ಇದ್ದಾಳೆ. ಇನ್ನೂ ಇವಳಿಂದ ಎನು ಮಾಹಿತಿ ದೊರೆಯುವುದಿಲ್ಲ ಎಂದು ಹೇಳಿ ಲ್ಯಾಪ್ಟಾಪ್ ಮುಚ್ಚುತ್ತಾರೆ.

ಬೇಸರದಲ್ಲಿರುವ ಪಾರು

ಬೇಸರದಲ್ಲಿರುವ ಪಾರು

ಇನ್ನೂ ಆದಿ ಮಹಡಿ ಮೇಲಿಂದ ಇಳಿದು ಬರಬೇಕಾದರೆ ಪಾರು ಏನೋ ಯೋಚಿಸುತ್ತಿರುತ್ತಾಳೆ. ಇದನ್ನು ಗಮನಿಸಿದ ಆದಿ ಪಾರು ಎಂದು ಕರೆಯುತ್ತಾನೆ. ಹಿಂದಿರುಗಿ ನೋಡುತ್ತಾಳೆ ಪಾರು. ಏನು ಪಾರು ಯೋಚಿಸುತ್ತಿದ್ದೆ ಎಂದಾಗ ಹಾ ಯಜಮಾನರೆ ಅಮ್ಮ ಏಷ್ಟು ಬೇಸರ ಮಾಡಿಕೊಂಡಿದ್ದಾರೆ ನೋಡಿದ್ದೀರಿ ಅಲ್ವಾ. ನನಗೂ ಬೇಸರ ವಾಯ್ತು. ಅಖಿಲ ಅಮ್ಮ ದ್ವೇಷ ಮಾಡೋಕೆ ನಾನು ನಿಮ್ಮನ್ನು ಮದುವೆ ಆಗಿದ್ದೆ ಕಾರಣ ನ ಎಂದು ಮನದಲ್ಲಿ ಆಲೋಚಿಸುತ್ತಿದ್ದೇನೆ ಎಂದು ಹೇಳುತ್ತಾಳೆ ಪಾರು. ಇನ್ನೂ ಪಾರುವನ್ನು ಆದಿ ಸಮಾಧಾನ ಪಡಿಸುತ್ತಾನೆ.

ರಾಣಾ ಕುತ್ತಿಗೆ ಪಟ್ಟಿ ಹಿಡಿವ ಆದಿ

ರಾಣಾ ಕುತ್ತಿಗೆ ಪಟ್ಟಿ ಹಿಡಿವ ಆದಿ

ಅಣ್ಣ ಆ ಕೇಡಿಗಳ ಅಡ್ರೆಸ್ ಸಿಕ್ಕಿದೆ ಬಾ ಹೋಗೋಣ ಎಂದಾಗ ಆದಿ ಪ್ರೀತು ಇಬ್ಬರು ಹೋಗುತ್ತಾರೆ. ಇತ್ತ ಅರುಂಧತಿ, ರಾಣಾ ಬೇರೆ ಮನೆಗೆ ಹೋಗುವ ತರಾತುರಿಯಲ್ಲಿ ಇರಬೇಕಾದರೆ ಕಾಲಿಂಗ್ ಬೆಲ್ ಆಗುತ್ತದೆ. ಹೊರಗಡೆ ಆದಿತ್ಯ ನಿಂತಿರುವುದನ್ನು ಕಂಡು ರಾಣಾ ದಂಗಾಗುತ್ತಾನೆ. ಇನ್ನೂ ದಮಯಂತಿ ಅಡಗಿಕೊಳ್ಳುತ್ತಾಳೆ. ರಾಣಾ ಬಾಗಿಲು ತೆರೆಯುತ್ತಾನೆ. ಒಳ ಬಂದವನೇ ರಣಾನ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಎಳೆದಾಡುತ್ತಾನೆ ಆದಿ. ಬಳಿಕ ಅಲ್ಲಿ ಅನುಷ್ಕಾಳ ಫೋಟೋ ಕಂಡು ಶಾಕ್ ಆಗುತ್ತಾನೆ ಆದಿ.

More from Filmibeat

English summary
Kannada serial Paaru written updated on 5th July. Paaru serial story getting many twists and turns.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X