ಸ್ವಾಮಿಗಳನ್ನು ಭೇಟಿಯಾಗಲು ಹೊರಟ ಅಖಿಲ, ಆದಿ ತಲೆಯಲ್ಲಿ ನೂರಾರು ಪ್ರಶ್ನೆ!

By ಪೂರ್ವ

ಅಖಿಲಾಂಡೇಶ್ವರಿ ತನ್ನ ದೊಡ್ಡ ಮಗನ ಜೀವನ ಚೆನ್ನಾಗಿರಬೇಕು ಆದಿ-ಪಾರು ಇಬ್ಬರು ಒಟ್ಟಾಗಿ ಸಂತಸದಿಂದ ಇರಬೇಕು ಎನ್ನುವ ದೃಷ್ಟಿಯಿಂದ ಚಿಕ್ಕ ಸ್ವಾಮಿಗಳನ್ನು ನೋಡಲು ತೆರಳಬೇಕು ಎಂದು ಕೊಳ್ಳುತ್ತಾರೆ. ಈ ವೇಳೆ ರಘು ಚಿಕ್ಕ ಸ್ವಾಮಿಗಳಿಗೆ ಕರೆ ಮಾಡಿದರೂ ಸ್ವೀಕರಿಸದ ಕಾರಣ ಅವರನ್ನು ನೇರವಾಗಿ ನೋಡಲು ತೆರಳುತ್ತಾರೆ. ಇದನ್ನೆಲ್ಲ ನೋಡುತ್ತಿದ್ದ ಪಾರುಗೆ ಇದೇನು ಇಷ್ಟು ತರಾತುರಿಯಲ್ಲಿ ಅತ್ತೆಯಮ್ಮ ಚಿಕ್ಕ ಸ್ವಾಮಿಗಳನ್ನು ಮಾತನಾಡಲು ತೆರಳುತ್ತಿದ್ದಾರೆ. ಏನು ಕಾರಣ ಇರಬಹುದು ಎಂದು ಯೋಚನೆ ಮಾಡುತ್ತಾಳೆ.

ಬಳಿಕ ಚಿಕ್ಕ ಸ್ವಾಮಿಗಳನ್ನು ನೋಡಲು ಹೊರಟು ನಿಂತ ಅಖಿಲಾಂಡೇಶ್ವರಿ ಬಳಿ ಪಾರು ಕೇಳುತ್ತಾಳೆ ಇದೇನಿದು ಇಷ್ಟು ತರಾತುರಿಯಲ್ಲಿ ಹೋಗುವ ಅಗತ್ಯ ಏನಿದೆ ಎಂದು ಕೇಳಿದಾಗ ಅಖಿಲ ಸುಮ್ಮನಾಗುತ್ತಾರೆ. ಬಳಿಕ ಆದಿ ಮನದಲ್ಲಿ ಅಮ್ಮನ ಬಗ್ಗೆ ತಪ್ಪಾಗಿ ಗ್ರಹಿಸುತ್ತಾನೆ. ಏನಾಗಿದೆ? ಯಾಕೆ ಅಮ್ಮ ಸ್ವಾಮಿಗಳನ್ನು ಮಾತನಾಡಲು ತೆರಳುತ್ತಿದ್ದಾರೆ ನನ್ನ ಹಾಗೂ ಪಾರುವನ್ನು ದೂರ ಮಾಡುವುದೇ ಇವರ ಉದ್ದೇಶ ಆಗಿರಬೇಕು ಎಂದೆಲ್ಲ ಯೋಚನೆ ಮಾಡುತ್ತಾನೆ ಬಳಿಕ ಆದಿ ಹೇಳುತ್ತಾನೆ, ಯಾರು ಎಲ್ಲಿಗೆ ಹೋಗಲಿ ನನ್ನ ಹಾಗೂ ಪಾರುವನ್ನು ಯಾರಿಂದಲೂ ದೂರ ಮಾಡಲು ಆಗುವುದಿಲ್ಲ ಎನ್ನುತ್ತಾನೆ.

ಏನು ಅರ್ಥ ಆಗದೆ ನಿಂತ ಪಾರು

ಏನು ಅರ್ಥ ಆಗದೆ ನಿಂತ ಪಾರು

ಇದನ್ನು ಕೇಳಿದ ಅಖಿಲಾಗೆ ಶಾಕ್ ಆದರೆ ಆದಿ ಏನು ಮಾತನಾಡುತ್ತಿದ್ದಾನೆ ಎಂಬುವುದು ಪಾರುಗೆ ತಿಳಿಯುತ್ತಿಲ್ಲ. ಪಾರು ಹೇಳುತ್ತಾಳೆ ನಾನು ಅತ್ತೆಯ ಬಳಿ ಕೇಳುತ್ತಿರುವುದು ಏನು ನೀವು ಹೇಳುತ್ತಿರುವುದು ಏನು ಎಂದು ಅರ್ಥವಾಗದೆ ಕೇಳುತ್ತಾಳೆ. ಆದಿ, ಮನದಲ್ಲೆ ಯೋಚಿಸುತ್ತಾ ಸತ್ಯ ಏನು ಎಂದು ಗೊತ್ತಾದರೆ ನೀನು ಅಮ್ಮನ ಬಳಿ ಮಾತನಾಡುವುದನ್ನೆ ಬಿಡುತ್ತಿಯಾ ಎಂದು ಹೇಳಿ ಸುಮ್ಮನಾಗಿ ಬಿಡುತ್ತಾನೆ. ಬಳಿಕ ಅಲ್ಲಿಂದ ಅಖಿಲಾಂಡೇಶ್ವರಿ ಹೊರಟು ಹೋಗುತ್ತಾರೆ.

ಅತ್ತಿಗೆ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ ಪ್ರೀತು

ಅತ್ತಿಗೆ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ ಪ್ರೀತು

ಇತ್ತ ಕುತಂತ್ರಿ ರಾಣಾ ಹಾಗೂ ಅರುಂಧತಿ ಹುಟ್ಟು ಅಡಗಿಸುವುದು ಹೇಗೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ ಪ್ರೀತು. ಆ ವೇಳೆ ಆದಿ ಹಾಗೂ ಪಾರು ಪ್ರೀತು ನಡವಳಿಕೆಯನ್ನು ನೋಡುತ್ತಾ ಇರುತ್ತಾರೆ. ಇನ್ನು ದೇವರ ಫೋಟೋ ಬಳಿ ಬಂದ ಪ್ರೀತು ವಿನ ಹಿಂದೆ ಆದಿ ಹಾಗೂ ಪಾರು ಬರುತ್ತಾರೆ. ಅವರಿಬ್ಬರನ್ನು ನೋಡುತ್ತಾ ಇದೆ ಸರಿಯಾದ ಸಮಯ ಎಂದುಕೊಂಡು ಇಬ್ಬರ ಕಾಲಿಗೆ ಬೀಳುತ್ತಾನೆ. ನನ್ನ ಕ್ಷಮಿಸಿ ಅತ್ತಿಗೆ. ಅಣ್ಣ ನೀನು ನನ್ನ ಕ್ಷಮಿಸು ಎಂದು ಹೇಳುತ್ತಾನೆ. ಆಗ ತಮ್ಮನನ್ನು ಎದ್ದೇಳಿಸಿ ಏನಾಯ್ತು ಪ್ರೀತು ಒಂದೊಂದು ಸಲ ಒಂದೊಂದು ರೀತಿ ಇರುತ್ತಿಯಾ ಏನಾಯ್ತು ಎಂದು ಕೇಳುತ್ತಾನೆ.

ಪ್ರೀತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾನಾ ಆದಿ?

ಪ್ರೀತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾನಾ ಆದಿ?

ಆಗ ಪ್ರೀತು ಹೇಳುತ್ತಾನೆ ನನಗೆ ನನ್ನದೇ ಆದ ತೊಂದರೆಗಳು ಇದೆ. ಆದರೆ ಈಗ ಅದನ್ನು ನಿಮ್ಮ ಮುಂದೆ ಹೇಳಲು ಆಗಲ್ಲ ಎಂದೆಲ್ಲ ಹೇಳುತ್ತಾನೆ. ಬಳಿಕ ಅಲ್ಲಿಂದ ಪ್ರೀತು ಹೋಗುತ್ತಾನೆ. ಬಳಿಕ ಪಾರು ತನ್ನ ಅತ್ತೆ ಅಂದುಕೊಂಡದ್ದು ನೆರವೇರಲಿ ಎಂದು ವೃತ ಆಚರಣೆಗೆ ಮುಂದಾಗಿದ್ದಾಳೆ ಪಾರು. ತಾನು ಏನೇ ಮಾಡಿದರು ಅತ್ತೆಗೆ ಒಳ್ಳೆಯದಾಗುತ್ತದೆ. ಅವರು ಅಂದುಕೊಂಡದ್ದು ನೆರವೇರುತ್ತದೆ ಎಂದು ಸಾವಿತ್ರಕ್ಕನ ಬಳಿ ಪಾರು ಹೇಳಿಕೊಳ್ಳುತ್ತಿರುವುದನ್ನು ಆದಿ ನೋಡುತ್ತಾನೆ.

ಪಾರು ಕೆಲಸಕ್ಕೆ ಅಡ್ಡಿ ಬರುತ್ತಿದ್ದಾನೆ ಆದಿ

ಪಾರು ಕೆಲಸಕ್ಕೆ ಅಡ್ಡಿ ಬರುತ್ತಿದ್ದಾನೆ ಆದಿ

ಆಗ ಆದಿ ಮನದಲ್ಲಿ ಇದೇನು ಮಾಡಲು ಹೊರತಿದ್ದಿಯಾ ಪಾರು? ಅಮ್ಮ ಕೇಳಲು ಹೋಗಿದ್ದೆ ನಾವಿಬ್ಬರೂ ದೂರ ಆಗಲಿ ಎಂದು ಅದು ನೆರವೇರಲಿ ಎಂದು ನೀನು ವೃತ ಮಾಡುತ್ತೀಯಾ ಬೇಡ ಇದಕ್ಕೆ ನಾನು ಖಂಡಿತ ಒಪ್ಪಲ್ಲ ಎಂದು ಮನದಲ್ಲಿ ಹೇಳುತ್ತಾನೆ. ಬಳಿಕ ದುರ್ಗಾ ಮಾತೆಯ ಬಳಿ ಬೇಡಿಕೊಳ್ಳುತ್ತಾಳೆ ನನ್ನ ಅತ್ತೆ ಕೆಲವು ದಿನಗಳಿಂದ ಬಹಳ ತೊಂದರೆಯಲ್ಲಿ ಇದ್ದಾರೆ ಎಂದು ಅನ್ನಿಸುತ್ತಿದೆ. ಅದು ಏನೇ ಸಮಸ್ಯೆ ಇದ್ದರೂ ಅದನ್ನು ಬಗೆ ಹರಿಸು ತಾಯಿ ಎಂದು ಹೇಳುತ್ತಾಳೆ. ಆದರೆ ಆದಿ ಮಾತ್ರ ಪಾರು ವ್ರತ ಮಾಡಲು ಬಿಡದ ಲಕ್ಷಣ ಕಾಣುತ್ತಿದೆ. ಮುಂದೇನು ಮಾಡುತ್ತಾನೆ ಎಂಬುವುದನ್ನು ಕಾದು ನೋಡಬೇಕಿದೆ

More from Filmibeat

English summary
Kannada serial Paaru written updated on 5th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X