Don't Miss!
- News
ಕಿಚ್ಚ ಸುದೀಪ್ ಭೇಟಿಯ ಹಿಂದಿನ ಕಾರಣ ಬಹಿರಂಗಪಡಿಸಿದ ಡಿಕೆಶಿ: ಏನದು ಕುತೂಹಲಕರ ಸಂಗತಿ?
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮನೆ ಬಿಟ್ಟು ಹೋದ ಜನನಿಯನ್ನು ವಾಪಸ್ ಬರುವಂತೆ ಮಾಡ್ತಾಳಾ ಪಾರು?
ಪ್ರೀತಮ್, ಮೋನಿಕಾ ಆತ್ಮೀಯತೆಯನ್ನು ಕಣ್ಣಾರೆ ಕಂಡ ಜನನಿ ಮನೆ ಬಿಟ್ಟು ಹೋಗುವ ನಿರ್ಧಾರ ಕೈ ಗೊಂಡಿದ್ದಾಳೆ. ಇನ್ನು ಈ ನಿರ್ಧಾರ ಒಳ್ಳೆಯದಲ್ಲ ಎಂದು ಹೇಳಿ ಪಾರು ಎಷ್ಟು ತಡೆದರು ಪಾರು ಮಾತು ಕೇಳದೇ ಅಲ್ಲಿಂದ ಹೊರಟು ಹೋಗುತ್ತಾಳೆ. ಈ ವೇಳೆ ನಡೆದ ವಿಚಾರವನ್ನು ಪಾರು-ಆದಿ ಬಳಿ ಹೇಳುತ್ತಾಳೆ. ಆದಿ ಜನನಿಯನ್ನು ಮನೆ ಬಿಟ್ಟು ಹೋಗದಂತೆ ತಡೆಯಬೇಕು ಎಂದು ಹೇಳಿ ಅಲ್ಲಿಂದ ಮನೆಯ ಹೊರಗೆ ಹೋಗುತ್ತಾಳೆ ಆದರೆ ಜನನಿ ಮಾತ್ರ ಆಗಲೇ ಆಟೋ ಹಿಡಿದು ಹೋಗಿರುತ್ತಾಳೆ.
ಜನನಿಯನ್ನು ಫಾಲೋ ಮಾಡಿಕೊಂಡು ಆದಿ,ಪಾರು ಹಾಗೂ ಪ್ರೀತಮ್ ಹೋಗುತ್ತಾರೆ. ಆ ವೇಳೆ ಆದಿ ಕಾರಿನಲ್ಲಿ ಏನಾಯಿತು ಪ್ರೀತಮ್, ಜನನಿ ಯಾಕೆ ಮನೆ ಬಿಟ್ಟು ಹೋಗಿದ್ದು ಎಂದೆಲ್ಲ ಕೇಳುತ್ತಾನೆ. ಈ ವೇಳೆ ಪಾರು. 'ಯಜಮಾನರೆ ಜನನಿ ಅನ್ನು ಎಲ್ಲಿ ಅಂತ ಹುಡುಕುವುದು ಎಂದು ಹೇಳುತ್ತಾರೆ ಇದನ್ನು ಕೇಳಿದ ಆದಿ ತಲೆಯಲ್ಲಿ ನೂರಾರು ಪ್ರಶ್ನೆಗಳು ಮೂಡುತ್ತದೆ.
ಆಕೆ ತವರು ಮನೆಗೆ ಹೋಗಲು ಸಾಧ್ಯವೇ ಇಲ್ಲ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವವರು ಅಲ್ಲ ಎಲ್ಲಿಗೆ ಹೋಗಬಹುದು ಎಂದು ಯೋಚನೆ ಮಾಡಿದಾಗ ಪ್ರೀತಮ್ ಹೇಳಿದ ಜಾಗಕ್ಕೆ ಹೋದಾಗ ಅಲ್ಲಿ ಜನನಿ ಇರುವುದನ್ನು ಕಂಡು ಸಮಾಧಾನ ಪಟ್ಟುಕೊಳ್ಳುತ್ತಾರೆ. ಈ ವೇಳೆ ಜನನಿ ಯಾಕಮ್ಮ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದೆ ಇದರಿಂದ ಅರಸನ ಕೋಟೆಯ ಮರ್ಯಾದೆ ಮಣ್ಣು ಪಾಲಾಗುವುದಂತು ಖಚಿತ ಎಂದೆಲ್ಲ ಪಾರು ಹೇಳುತ್ತಾಳೆ.

ಪ್ರೀತಮ್ ಮುಖಕ್ಕೆ ಮಂಗಳಾರತಿ ಮಾಡಿದ ಜನನಿ
ಇದನ್ನು ಕೇಳಿದ ಜನನಿ, 'ಇಂಥಹವನ ಜೊತೆ ಯಾವ ಮನಸ್ಸು ಇಟ್ಟುಕೊಂಡು ಇರಬೇಕು ಹೇಳಿ. ದಯವಿಟ್ಟು ನನ್ನನ್ನು ಹೋಗುವುದಕ್ಕೆ ಬಿಟ್ಟು ಬಿಡಿ ಎಂದು ಹೋಗಲು ಅನುವಾಗುತ್ತಾಳೆ. ಇದನ್ನು ನೋಡಿದ ಜನನಿಯನ್ನು ಪಾರು ತಡೆದು ನಿಲ್ಲಿಸುತ್ತಾಳೆ. ಬಳಿಕ ಪಾರು, ನೀವು ಮನೆ ಬಿಟ್ಟು ಹೋಗುವುದರಿಂದ ಎಲ್ಲರ ನೆಮ್ಮದಿ ಹಾಳಾಗುತ್ತದೆ. ಅರಸನ ಕೋಟೆಯ ಮರ್ಯಾದೆ ಹೋಗುತ್ತದೆ. ನಾವು ಯಾರು ಸಂತೋಷವಾಗಿ ಇರಲು ಸಾಧ್ಯ ಇಲ್ಲ ಜನನಿ ಅವರೇ. ಎಂದಾಗ ಜನನಿ ಹೇಳುತ್ತಾಳೆ ನೀವು ಹೇಳುತ್ತಿರುವುದು ನಿಜ ನನಗೆ ಆ ರೀತಿ ಮಾಡುವ ಉದ್ದೇಶ ಇಲ್ಲ. ಆದರೆ ನಾನು ಮನೆ ಬಿಟ್ಟು ಹೋಗುವ ಅನಿವಾರ್ಯತೆ ಬಂದಿದೆ. ನಾನು ಏನು ಎಂಬ ವಿಚಾರ ನಿಮಗೆ ಗೊತ್ತಿದೆ ಅಲ್ವಾ ಎಂದು ಅಳುತ್ತಾ ಹೇಳುತ್ತಾಳೆ.

ಪಾರು ಬಳಿ ದೂರು ಹೇಳಿದ ಜನನಿ
ಬಳಿಕ ಮಾತು ಮುಂದುವರೆಸಿದ ಜನನಿ ಮನೆ ಬಿಟ್ಟು ಬಂದಿದ್ದೇನೆ ಅಂದರೆ ನನ್ನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಮನೆತನದ ಮರ್ಯಾದೆ ಸಂಬಂಧದ ಬಗ್ಗೆ ಆಲೋಚನೆ ಮಾಡಿ ಒಂದು ಸಲ ನನ್ನ ಜಾಗದಲ್ಲಿ ನಿಂತು ಯೋಚಿಸಿ. ನನ್ನ ನೋವು ನಿಮಗೆ ಅರ್ಥ ಆಗುತ್ತದೆ. ನನಗೆ ನಿಮ್ಮ ಗೆಳತಿ, ಪ್ರೀತೂಗೆ ಏನು ಹೇಳಿದರು ಬೇಸರ ಆಗುತ್ತಾ ಇರಲಿಲ್ಲ. ಆದರೆ ಈ ಪುಣ್ಯಾತ್ಮ ಐ ಲವ್ ಯು ಎಂದು ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ಅದಕ್ಕೆ ಕಟ್ಟಿದ ತಾಳಿಯನ್ನು ತೆಗೆದು ಆತನ ಬಳಿ ಕೊಟ್ಟೆ, ನಾನು ಮಾತ್ರ ಅಲ್ಲ ನನ್ನ ಜಾಗದಲ್ಲಿ ಬೇರೆ ಯಾರೇ ಹೆಣ್ಣು ಇದ್ದರೂ ಇದನ್ನೇ ಮಾಡುತ್ತಾ ಇದ್ದಳು. ನನಗೆ ನೀವೆಲ್ಲರೂ ಬುದ್ಧಿ ಹೇಳುತ್ತಾ ಇದ್ದೀರಾ ನೀವು ಮಾಡಿದ್ದು ಸರಿಯಾ ಎಂದು ಹೇಳುತ್ತಾಳೆ.

ಜನನಿಗೆ ಸಮಾಧಾನ ಮಾಡಿದ ಪಾರು
ಇದನ್ನು ಕೇಳಿದ ಪಾರು, ಜನನಿ ಬಳಿ 'ನಿಮಗೆ ಪೂರ್ತಿ ವಿಚಾರ ತಿಳಿದಿಲ್ಲ. ನಿಮಗೆ ತಿಳಿಯ ಬೇಕಾದುದು ಬಹಳ ಇದೆ. ಬನ್ನಿ ಜನನಿ ಅವರೇ ಎಂದು ಕರೆದುಕೊಂಡು ಹೋಗುತ್ತಾಳೆ. ಇದನ್ನು ನೋಡಿದ ಪ್ರೀತಮ್ ನಾನು ಜನನಿ ಮುಂದೆ ತಪ್ಪಿತಸ್ಥ ಆದರೂ ಪರವಾಗಿ ಇಲ್ಲ. ಆದರೆ ಜನನಿಯನ್ನು ನನಗೆ ಕಳೆದುಕೊಳ್ಳಲು ಇಷ್ಟ ಇಲ್ಲ. ಅತ್ತಿಗೆ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳುತ್ತಾನೆ. ಇನ್ನು ಮನೆಗೆ ಬಂದ ಅಖಿಲಾಂಡೆಶ್ವರಿ ಮನೆಯಲ್ಲಿ ಮಕ್ಕಳು ಇರದ್ದನ್ನು ನೋಡಿ ಜಯಳನ್ನು ಕರೆದು ಮನೆಯಲ್ಲಿ ಯಾರು ಇಲ್ಲದನ್ನು ವಿಚಾರಣೆ ಮಾಡುತ್ತಾಳೆ ಇದನ್ನು ಕೇಳಿದ ಜಯ ನನಗೆ ಯಾರು ಎನು ಹೇಳಿಲ್ಲ ಅಮ್ಮವರೇ ಎಲ್ಲರೂ ಒಟ್ಟಿಗೆ ಹೋದರು ಎಂದು ಹೇಳುತ್ತಾಳೆ ಇದನ್ನು ಕೇಳಿದ ಅಖಿಲನಿಗೆ ಮಕ್ಕಳೆಲ್ಲ ದೂರ ಹೋದರು ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ.