ಆದಿಗೆ ಎರಡನೇ ಮದುವೆ ಪ್ರಯತ್ನ: ವಿಷಯ ತಿಳಿಯಿತು ಪಾರುಗೆ
'ಪಾರು' ಧಾರವಾಹಿ ನೋಡುಗರಿಗೆ ಮುದ ನೀಡುತ್ತಿದೆ. ಅಖಿಲಾಂಡೇಶ್ವರಿ ಎಲ್ಲಾ ಅನುಮಾನಗಳಿಗೆ ಪರಿಹಾರ ಸಿಕ್ಕಿದೆ. ಕಿರಿಯ ಸ್ವಾಮಿಗಳನ್ನು ಹುಡುಕಿಕೊಂಡು ಹೋದ ಅಖಿಲಾಂಡೇಶ್ವರಿಗೆ ಸ್ವಾಮಿಗಳನ್ನು ಎಷ್ಟು ಹುಡುಕಿದರೂ ಸಿಗಲಿಲ್ಲ. ಕೊನೆಗೆ ನಿರಾಸೆಯಿಂದ ದೇವಾಸ್ಥಾನದ ಮೆಟ್ಟಿಲು ಇಳಿದು ಬರಬೇಕಾದರೆ ಅಖಿಲಮ್ಮ ಎಂದು ಕರೆಯುವ ಶಬ್ದ ಆಗುತ್ತದೆ ಅದನ್ನು ಕೇಳಿದ ಅಖಿಲಾಗೆ ಆಶ್ಚರ್ಯ ಆಗುತ್ತದೆ. ಅಖಿಲಾಂಡೇಶ್ವರಿ ತಲೆ ಎತ್ತಿ ನೋಡಿದಾಗ ದೊಡ್ಡ ಸ್ವಾಮಿಗಳು ಕಾಣಿಸುತ್ತಾರೆ. ಅದನ್ನು ನೋಡಿದ ಅಖಿಲಾಂಡೇಶ್ವರಿ ಖುಷಿಯಾಗುತ್ತಾರೆ.
ತನ್ನ ಗಂಡ ರಘು ಮುಖ ನೋಡಿ ನಗು ಬೀರುತ್ತಾಳೆ. ಇದನ್ನು ನೋಡಿದ ದೊಡ್ಡ ಸ್ವಾಮಿಗಳು ಅಖಿಲಮ್ಮ ನಿಮ್ಮನ್ನು ತುಂಬಾ ಹುಡುಕಿದೆ. ನೀವು ದೇವಾಲಯಕ್ಕೆ ಬಂದ ವಿಚಾರ ನನಗೆ ತಿಳಿಯಿತು ಆದರೆ ಮೆಟ್ಟಿಲು ಇಳಿದು ಕೆಳಗೆ ಬರಬೇಕು ಎನ್ನುವಷ್ಟರಲ್ಲಿ ನೀವು ಇರಲಿಲ್ಲ. ಹಾಗೆ ಹುಡುಕಿಕೊಂಡು ಬಂದೆ ಎಂದು ಹೇಳುತ್ತಾರೆ. ಬಳಿಕ ಅಖಿಲಾ ತನ್ನ ಮನದ ವೇದನೆಯನ್ನು ಸ್ವಾಮಿಗಳ ಬಳಿ ತೋಡಿಕೊಳ್ಳುತ್ತಾರೆ. ಕಿರಿಯ ಸ್ವಾಮಿಗಳು ಮನೆಗೆ ಬಂದಾಗ ದೊಡ್ಡ ಮಗನ ಜಾತಕ ತೋರಿಸಿದೆ ಆದರೆ ಕಿರಿಯ ಸ್ವಾಮಿಗಳು ಆದಿಗೆ ಎರಡನೆ ಮದುವೆ ಯೋಗ ಇದೆ ಎಂದು ಹೇಳಿದರು. ಇದರಿಂದ ನನಗೆ ಬಹಳ ಭಯ ಆಗುತ್ತಿದೆ ಪಾರುವೇ ಅರಸನ ಕೋಟೆಯ ಸೊಸೆಯಾಗಿ ಇರಬೇಕು ಆದಿತ್ಯನ ಹೆಂಡತಿಯಾಗಿ ಇರಬೇಕು ಇದು ನಮ್ಮೆಲ್ಲರ ಆಸೆ ಎಂದು ಹೇಳುತ್ತಾನೆ. ಅದಕ್ಕೆ ಸ್ವಾಮಿಗಳು ಆದಿ ಜಾತಕ ತೋರಿಸುವಂತೆ ಹೇಳುತ್ತಾರೆ.

ಆದಿ ಜಾತಕ ತೋರಿಸಿದ ಅಖಿಲ
ಕಾರಿನಲ್ಲಿ ಆದಿ ಜಾತಕ ಇದ್ದ ಕಾರಣ ರಘು ಜಾತಕ ತರಲು ಹೋಗುತ್ತಾರೆ. ಬಳಿಕ ಬಂದ ರಘು ಸ್ವಾಮಿಗಳ ಬಳಿ ಜಾತಕವನ್ನು ನೀಡುತ್ತಾರೆ. ಜಾತಕ ನೋಡಿದ ಸ್ವಾಮಿಗಳು ಹೇಳುತ್ತಾರೆ. ಈಗಾಗಲೇ ನಿಮ್ಮ ಮಗನಿಗೆ ಎರಡನೇ ಮದುವೆ ಆಗಿದೆ ಎಂದು ಹೇಳುತ್ತಾರೆ ಇದನ್ನು ಕೇಳಿದ ಅಖಿಲಾಂಡೇಶ್ವರಿಗೆ ಶಾಕ್ ಆಗುತ್ತದೆ. ಯಾವಾಗ ಆದಿ ಮದುವೆ ಆಯಿತು ಎಂದು ಚಡಪಡಿಸುತ್ತಾ ಇರುತ್ತಾಳೆ. ಅದಕ್ಕೆ ಸ್ವಾಮಿಗಳು ಸ್ಪಷ್ಟೀಕರಣ ನೀಡುತ್ತಾರೆ. ನಿಮ್ಮ ಮಗನ ಎರಡನೇ ಮದುವೆ ಕೂಡ ಪಾರು ಜೊತೆಯೇ ನಡೆದಿದೆ ಎಂದಾಗ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಷ್ಟರ ಮಟ್ಟಿಗೆ ಖುಷಿ ಪಡುತ್ತಾಳೆ ಅಖಿಲಾಂಡೇಶ್ವರಿ.

ಪಾರು ವ್ರತ ಭಂಗ ಮಾಡಿದ ಆದಿ
ಇನ್ನು ಪಾರು ಅತ್ತೆ ಅಂದುಕೊಂಡಿರುವ ಕಾರ್ಯ ನಿರ್ವಿಘ್ನವಾಗಿ ಆಗಲಿ ಎಂದು ವ್ರತ ಮಾಡುತ್ತಾ ಇರುತ್ತಾಳೆ. ಇದನ್ನು ಕಂಡ ಆದಿ ದೇವರ ಬಳಿ ಬಂದು ಕೈ ಮುಗಿಯುತ್ತಾನೆ ದೇವರೇ ನಾನು ಪಾರು ವ್ರತ ಮಾಡುತ್ತಿರುವುದನ್ನು ಭಂಗ ಮಾಡುತ್ತಿದ್ದೇನೆ ನನ್ನನ್ನು ಕ್ಷಮಿಸು ಎಂದು ಹೇಳಿ ಪಾರುವನ್ನು ಕರೆಯುತ್ತಾನೆ. ಆ ವೇಳೆ ದೇವರ ನಾಮ ಸ್ಮೃತಿ ಮಾಡುತ್ತಿದ್ದ ಪಾರು ಮೆತ್ತಗೆ ಕಣ್ಣು ತೆಗೆಯುತ್ತಾರೆ. ಬಳಿಕ ಆದಿ ಪಾರು ಬಳಿ ಪಾರು ತಿಂಡಿ ತಿಂದ್ಯಾ ಎಂದೆಲ್ಲ ಕೇಳುತ್ತಾರೆ.

ಪಾರು ವ್ರತ ಮಾಡದಂತೆ ತಡೆದ ಆದಿ
ಅದಕ್ಕೆ ಪಾರು ತಿಂದೆ ಎಂದು ಸುಳ್ಳು ಬಿಡುತ್ತಾಳೆ ಆ ವೇಳೆ ಆದಿ ನನ್ನ ಬಳಿ ಯಾವತ್ತು ನೀನು ಸುಳ್ಳು ಹೇಳಿಲ್ಲ ದೇವರ ಮುಂದೆ ಆಣೆ ಮಾಡಿ ಹೇಳು. ನೀನು ತಿಂಡಿ ತಿಂದ್ಯಾ ಎಂದು ಕೇಳಿದಾಗ ಇಲ್ಲ ಎಂದು ಹೇಳುತ್ತಾಳೆ ಬಳಿಕ ಹೇಳುತ್ತಾಳೆ ಇವತ್ತು ನಾನು ಉಪವಾಸ ಮಾಡುತ್ತಿದ್ದೇನೆ ಆ ಕಾರಣಕ್ಕೆ ನಾನು ಏನು ತಿನ್ನಲ್ಲ ಅತ್ತೆಯಮ್ಮ ಬಂದ ಮೇಲೆ ತಿನ್ನುತ್ತೇನೆ ಎಂದಾಗ ಆದಿಗೆ ಸಿಟ್ಟು ಬರುತ್ತದೆ. ಯಾಕೆ ತಿನ್ನಲ್ಲ ಏನಾದರು ತಿನ್ನು ಎಂದು ಹಠ ಮಾಡುತ್ತಾನೆ ಬಳಿಕ ತೀರ್ಥ ರೂಪದಲ್ಲಿ ಜೂಸ್ ಕೊಡುತ್ತಾನೆ. ಈ ಬಗ್ಗೆ ತಿಳಿಯದೇ ಅದನ್ನು ತೀರ್ಥ ಎಂದುಕೊಂಡು ಸೇವನೆ ಮಾಡಿದಾಗ ಪಾರುಗೆ ತಿಳಿಯುತ್ತದೆ ಅದು ಜೂಸ್ ಎಂದು. ಬಳಿಕ ಬೇಸರಗೊಂಡ ಪಾರು ಏನ್ಮಾಡಿದ್ರಿ ನೀವು, ಯಾಕೆ ಜೂಸ್ ಕೊಟ್ರಿ ಎಂದಾಗ ಸುಮ್ಮನಾದ ಬಳಿಕ ಟೆನ್ಷನ್‌ನಲ್ಲಿ ಇರುವ ಪಾರುವತ್ತ ನೋಡಿದ ಸಾವಿತ್ರಮ್ಮ ಪಾರುಗೆ ಧೈರ್ಯ ಹೇಳುತ್ತಾರೆ.

ಆದಿಯ ಎರಡನೇ ಮದುವೆಯ ವಿಷಯ ಪಾರುಗೆ ಗೊತ್ತಾಯ್ತು
ಬಳಿಕ ವ್ರತ ಮುಂದುವರಿಸುವಂತೆ ಸೂಚಿಸುತ್ತಾರೆ. ಆದರೆ ಆದಿ ಮಾತ್ರ ಪಾರುಗೆ ತೊಂದರೆ ಮೇಲೆ ತೊಂದರೆ ಕೊಡುತ್ತಾರೆ. ಇದನ್ನು ನೋಡಿದ ಸಾವಿತ್ರಿ ಹೇಳುತ್ತಾರೆ ಯಾಕೆ ಚಿಕ್ಕೆಜಮಾನರೆ ಹೀಗೆ ಮಾಡುತ್ತೀರಿ ಅವಳು ವ್ರತ ಮಾಡಲು ಬಿಡಿ ಎಂದು ಹೇಳಿದರು ಕೇಳದೆ ಪಾರುವಿನ ವೃತ ಭಂಗ ಮಾಡುತ್ತಾನೆ. ಬಳಿಕ ಜೋರಾಗಿ ಪಾರು ವೃತ ಮಾಡಬೇಡ ಅಮ್ಮ ಹೋಗಿರುವುದು ನನಗೆ ಬೇರೆ ಮದುವೆ ಮಾಡಲು ಸ್ವಾಮೀಜಿ ಬಳಿ ಹೋಗಿರುವುದು ಎಂದು ಹೇಳುತ್ತಾನೆ ಇದನ್ನು ಕೇಳಿದ ಪಾರುಗೆ ಶಾಕ್ ಆಗುತ್ತದೆ ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications