ಆದಿಗೆ ಎರಡನೇ ಮದುವೆ ಭಾಗ್ಯ! ಹಾಗಿದ್ರೆ ಪಾರು ಕತೆ ಏನು?
ಪಾರು' ಧಾರವಾಹಿ ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ಈಗಾಗಲೆ ಅಖಿಲಾಂಡೇಶ್ವರಿ ಮನೆಗೆ ಶತ್ರು ಅರುಂಧತಿ ಎಂಟ್ರಿ ನೀಡಿದ್ದಾಳೆ. ಮನೆಯವರ ಮನಃಶಾಂತಿಯನ್ನು ಹೇಗೆ ಕದಡಿಸುವುದು ಎಂದೆಲ್ಲಾ ಯೋಚನೆ ಮಾಡುತ್ತಾ ಇದ್ದಾಳೆ. ಹೀಗೆ ಏನೋ ಯೋಜನೆ ಹಾಕಿಕೊಂಡು ಮುಗುಳು ನಗುತ್ತಾ ಹಿಂದಿರುಗಿ ಹೋಗಬೇಕಾದರೆ ಎದುರಿಗೆ ಪಾರು ಬಂದು, ಅಥಿತಿ ಆದವರು ಒಂದು ಮೂಲೆಯಲ್ಲಿ ಇರಬೇಕು ಮನೆಯಲ್ಲಿ ಎಲ್ಲಾ ಯಾಕೆ ಓಡಾಡುತ್ತಾ ಇದ್ದೀಯಾ ಎಂದೆಲ್ಲಾ ಕೇಳಿದಾಗ ಅರುಂಧತಿ ಹಿಂದೆ ನಡೆದ ವಿಚಾರವನ್ನು ಹೇಳುತ್ತಾಳೆ.
ಆವತ್ತು ನಮ್ಮ ಮನೆಗೆ ಹೀಗೆ ಗೂಳಿ ನುಗ್ಗಿದ ರೀತಿ ನುಗ್ಗಿದ್ದೀರಿ ಇದೀಗ ನಾನು ಆ ರೀತಿ ನಡೆದುಕೊಂಡರೆ ನಿನಗೆ ಆಗೋದಿಲ್ಲ ಅಲ್ವಾ ಎಂದು ಕೆರಳಿ ಹೇಳುತ್ತಾಳೆ. ಇದನ್ನು ಕೇಳಿದ ಪಾರು ಕೋಪದಿಂದ ಮಾತನಾಡುತ್ತಾಳೆ. ಆವತ್ತು ಅರುಂಧತಿ ಮಾಡಿದ ಘನ ಕಾರ್ಯಕ್ಕೆ ಅಖಿಲಾಂಡೇಶ್ವರಿ ಅಷ್ಟು ಮಾಡಿರುವುದು ಪುಣ್ಯ. ಇದನ್ನೆಲ್ಲ ಯೋಚಿಸದ ಅರುಂಧತಿ ತನ್ನ ಮೂಗಿನ ನೇರಕ್ಕೆ ಮಾತನಾಡುತ್ತಾಳೆ. ಪಾರುವನ್ನು ಚೇಡಿಸುತ್ತಾಳೆ.
ಪಾರು ಏನೇ ಹೇಳಿದರೂ ಅದಕ್ಕೆ ತಕ್ಕ ಉತ್ತರ ರೆಡಿ ಮಾಡಿ ಇಟ್ಟುಕೊಂಡಿರುತ್ತಾಳೆ ಅರುಂಧತಿ. ಪೂಜೆ ಆಗಿ ತೆರಳುವಂತೆ ಸೂಚನೆ ನೀಡುತ್ತಾಳೆ ಪಾರು. ಇದನ್ನು ಕೇಳಿದ ಅರುಂಧತಿ ಸಿಟ್ಟಿನಿಂದ ಅಖಿಲಾಂಡೇಶ್ವರಿ ಇನ್ನೂ ನಿನ್ನನ್ನು ಸೊಸೆ ಎಂದು ಒಪ್ಪಿಕೊಂಡಿಲ್ಲ. ಆದರೂ ಇಷ್ಟು ಪೊಗರು ತೋರಿಸುತ್ತಿದ್ದಿಯ, ಎಲ್ಲಾದರೂ ಒಪ್ಪಿಕೊಂಡರೆ ಅಷ್ಟೇ ನಾಯಿಯನ್ನು ಸಿಂಹಾಸನದ ಮೇಲೆ ಕೂರಿಸಿದರು ಅದರ ಬುದ್ದಿ ಬಿಡುತ್ತದ ಎಂದು ಕುಹಕ ಆಡುತ್ತಾಳೆ.

ಪಾರು ಮೇಲೆ ಕೈ ಎತ್ತಿದ ಅರುಂಧತಿ
ಅರುಂಧತಿ ಮಾತಿಗೆ ಕೆರಳಿದ ಪಾರು ಅಂಥಹಾ ಸಂದರ್ಭ ಬಂದರೆ ನಿನ್ನನ್ನು ಮನೆ ಒಳಗೆ ಬಿಡುವುದಿಲ್ಲ. ನಿನ್ನ ಮಗಳು ಸತ್ತ ಹಾಗೆ ನೀನು ಸಾಯುತ್ತಿಯಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅರುಂಧತಿಗೆ ಸಿಟ್ಟು ಬರುತ್ತದೆ ಕೊನೆಗೆ ಪಾರುವಿನ ಕೆನ್ನೆಗೆ ಹೊಡೆಯಲು ಕೈ ಬೀಸುತ್ತಾಳೆ. ಇದನ್ನು ತಡೆದ ಪಾರು ಹೇಳುತ್ತಾಳೆ ಒಂದೇಟು ಹೊಡೆದರೆ ಹತ್ತೇಟು ಹೋಡೆಯುತ್ತೇನೆ. ನನ್ನ ಗಂಡನಿಗೆ ಈ ವಿಚಾರ ತಿಳಿದರೆ ಆಗೋದೇ ಬೇರೆ ಎಂದೆಲ್ಲಾ ಬುದ್ಧಿವಾದ ಹೇಳುತ್ತಾಳೆ ಆದರೆ ಅರುಂಧತಿ ತನ್ನ ಬುದ್ಧಿ ಬಿಡದೆ ಅಲ್ಲಿಂದ ತೆರಳುತ್ತಾರೆ.

ಅರುಂಧತಿ ಕುತ್ತಿಗೆಗೆ ಕತ್ತಿ ಬೀಸಿದ ಹನುಮಂತು
ಗಣೇಶನ ವಿಗ್ರಹದ ಬಳಿ ಇರುವ ದೀಪ ಆರದಂತೆ ನೋಡಿಕೊಳ್ಳಬೇಕು ಎಂದು ಸ್ವಾಮಿಗಳು ಹೇಳಿರುವುದು ಅರುಂಧತಿಗೆ ನೆನಪಾಗುತ್ತದೆ. ಅದನ್ನು ಆರಿಸಲು ಹೋದಾಗ ಹನುಮಂತು ಕತ್ತಿಯನ್ನು ಅರುಂಧತಿ ಕತ್ತಿಗೆ ಇಡುತ್ತಾನೆ. ಅಲ್ಲಿ ಕೂಡ ಸ್ವಲ್ಪ ವಾಗ್ವಾದಗಳು ಆಗುತ್ತದೆ. ಮನೆಯ ದೀಪ ಆರಿಸಲು ನಾನು ಬಿಡಲ್ಲ ಎಂದೆಲ್ಲ ಹನುಮಂತು ಹೇಳುತ್ತಾನೆ ಇದನ್ನು ಕಂಡ ಅರುಂಧತಿಗೆ ಸಿಟ್ಟು ಬರುತ್ತದೆ. ಆ ವೇಳೆ ಅಲ್ಲಿಗೆ ಬಂದ ಅಖಿಲಾಂಡೇಶ್ವರಿ ಏನೆಂದು ಪ್ರಶ್ನೆ ಮಾಡುತ್ತಾಳೆ.

ಅಖಿಲಾಂಡೇಶ್ವರಿ ಮನೆಯಿಂದ ಹೊರಟ ಅರುಂಧತಿ
ಈ ವೇಳೆ ಆತ ನನ್ನ ತಮ್ಮ ಇದ್ದ ಹಾಗೆ ಫೂಜೆ ನಡೆಯಿತಲ್ಲ ಇನ್ನೂ ಹೊರಡು ಅರುಂಧತಿ ಎಂದು ಹೇಳುತ್ತಾಳೆ ಅಖಿಲ. ಇದನ್ನು ಕೇಳಿದ ಅರುಂಧತಿ ಅಖಿಲ ಮುಂದೆ ಸಿಕ್ಕಿಬಿದ್ದರೆ ಕಷ್ಟ ಎಂದು ಅಲ್ಲಿಂದ ಹೋಗಲು ಸಿದ್ದಲಾಗುತ್ತಾಳೆ. ಇತ್ತ ಅಖಿಲಾಂಡೇಶ್ವರಿ ಸ್ವಾಮಿಗಳ ಜೊತೆ ಮಾತನಾಡಲು ತೊಡಗುತ್ತಾಳೆ. ಸ್ವಾಮೀಜಿಯ ಬಳಿ ತನ್ನ ಸೊಸೆ ಪಾರುವನ್ನು ಬಾಯಿ ತುಂಬಾ ಹೊಗಳುತ್ತಾರೆ. ನಾನೇ ಹುಡುಕಿದರೂ ಅಂತ ಸೊಸೆ ನನಗೆ ಸಿಗುತ್ತಿರಲಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸ್ವಾಮೀಜಿಗಳು ಖುಷಿ ಪಡುತ್ತಾರೆ.

ಆದಿ ಜಾತಕ ತೋರಿಸಿದ ಅಖಿಲ
ಬಳಿಕ ಆದಿ ಜಾತಕ ತೋರಿಸುತ್ತಾರೆ. ಇದನ್ನು ನೋಡಿ ಉದ್ಯೋಗದಲ್ಲಿ ಬಹಳ ಒಳ್ಳೆಯದಿದೆ. ತಾನು ಮಾಡಿದ ಕೆಲಸ ಕೈ ಗೂಡುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಸಾಂಸಾರಿಕ ಜೀವನದ ಬಗ್ಗೆ ನೋಡಿದ ಸ್ವಾಮಿಗಳು ಆದಿಗೆ ಎರಡನೇ ಮದುವೆ ಯೋಗ ಇದೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಶಾಕ್ ಆದ ಅಖಿಲ ಇಲ್ಲ ಹಾಗೆ ಆಗಬಾರದು ಎಂದೆಲ್ಲ ಹೇಳುತ್ತಾ ಭಯಗೊಳ್ಳುತ್ತಾಳೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











