Don't Miss!
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru Serial : ಆತ್ಮಹತ್ಯೆಗೆ ಮುಂದಾದ ಪ್ರೀತಂ, ಕಾಪಾಡುತ್ತಾನಾ ಆದಿ?
'ಪಾರು' ಧಾರಾವಾಹಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ಜನನಿಗೆ ಪ್ರೀತಮ್ ವಿಚಾರ ಎಲ್ಲವನ್ನೂ ಪಾರು ಸ್ಪಷ್ಟವಾಗಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಜನನಿ, ಪಾರು ಬಳಿ 'ಯಾಕೆ ನನ್ನ ಬಳಿ ಏನೂ ಹೇಳಿಲ್ಲ. ನನ್ನ ಗಂಡನ ಜೊತೆ ಇಷ್ಟೆಲ್ಲ ನಡೆಯುತ್ತಾ ಇದ್ದರೂ ನನಗೆ ಒಂದು ಮಾತು ಹೇಳಬೇಕು ಎಂದು ಯಾರಿಗೂ ಅನ್ನಿಸಲಿಲ್ವ ಎಂದೆಲ್ಲ ಕೋಪದಿಂದ ಹೇಳುತ್ತಾಳೆ ಇದನ್ನು ಕೇಳಿದ ಪಾರು ಮತ್ತು ಆದಿ ಸುಮ್ಮನಾಗುತ್ತಾರೆ.
ಬಳಿಕ ಜನನಿ ಬಳಿ ಪಾರು ಹೇಳುತ್ತಾಳೆ. ನಮಗೆ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚದೇ ಆಯಿತು ಆದ ಕಾರಣ ಈ ರೀತಿ ಎಲ್ಲಾ ನಡೆಯಿತು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಜನನಿಗೆ ಕೊಂಚ ಕೋಪ ಕಡಿಮೆ ಆಗುತ್ತದೆ. ಇದನ್ನೆಲ್ಲ ನೋಡಿದ ಪ್ರೀತಮ್ ಮನದಲ್ಲಿ ಮಾತನಾಡಿಕೊಳ್ಳುತ್ತಾನೆ, ನನ್ನ ಜನನಿಗೆ ನನ್ನ ಮೇಲೆ ವಿಪರೀತ ಸಿಟ್ಟು ಬಂದಿದೆ ಆದ ಕಾರಣ ಆಕೆ ನನ್ನಿಂದ ದೂರ ಹೋಗುವ ಸಾಧ್ಯತೆ ಹೆಚ್ಚಿದೆ ಹೇಗಾದರೂ ಮಾಡಿ ಪಾರು ಅತ್ತಿಗೆ ಒಪ್ಪಿಸಿದರು ಆಕೆ ಮಾತ್ರ ನನ್ನ ಗಂಡ ಎಂದು ಸ್ವೀಕಾರ ಮಾಡಲಾರಳು. ನಾನು ಇದನ್ನೆಲ್ಲ ನೋಡುವುದಕ್ಕಿಂತ ಸಾಯುವುದೇ ಉತ್ತಮ ಎಂದುಕೊಂಡು ಅಮ್ಮ ಅಪ್ಪ ಜನನಿ ಅಣ್ಣ ಅತ್ತಿಗೆಗೆ ಸಾರಿ ಹೇಳಿ ಅಲ್ಲಿಂದ ತೆರಳುತ್ತಾನೆ.
ಮನೆ
ಬಿಟ್ಟು
ಹೋದ
ಜನನಿಯನ್ನು
ವಾಪಸ್
ಬರುವಂತೆ
ಮಾಡ್ತಾಳಾ
ಪಾರು?

ಆತ್ಮಹತ್ಯೆಗೆ ಮುಂದಾದ ಪ್ರೀತಮ್
ಇನ್ನು ಜನನಿ ಮಾತ್ರ ನಾನೆಂತ ದೊಡ್ಡ ತಪ್ಪು ಮಾಡುತ್ತಿದೆ. ಪ್ರೀತಮ್ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ದುಡುಕಿ ಬಿಡುತ್ತಿದೆ. ಇದನ್ನು ನೋಡಿದ ಪಾರು ಮಾತ್ರ ಜನನಿ ಬಳಿ ಹೇಳುತ್ತಾಳೆ ಜನನಿ ಅವರೇ ನೀವು ಇನ್ನೂ ಪ್ರೀತಿಯಿಂದ ನಿಮ್ಮ ಗಂಡನನ್ನು ನೋಡಿಕೊಳ್ಳಬೇಕು. ಮೋನಿಕಾ ಕೈ ಗೆ ನಿಮ್ಮ ಗಂಡ ಸಿಗದೆ ಇರುವ ಹಾಗೆ ನೋಡಿಕೊಳ್ಳಬೇಕು ಎಂದು ಹೇಳುತ್ತಿರುವಾಗ ಪ್ರೀತಮ್ ಬೆಟ್ಟದ ತುದಿಯಲ್ಲಿ ನಿಂತಿರುವುದನ್ನು ಕಂಡ ಆದಿ, ಪ್ರೀತಮ್ ನನ್ನು ರಕ್ಷಣೆ ಮಾಡಲು ಓಡುತ್ತಾನೆ ಬಳಿಕ ಪ್ರೀತಮ್ ನನ್ನು ದೂರಕ್ಕೆ ತಳ್ಳುತ್ತಾನೆ.

ಮೋನಿಕಾ ವಿಚಾರಕ್ಕೆ ಭಯಗೊಂಡ ರಾಣಾ
ಮೋನಿಕಾ ವಿಚಾರ ಅರುಂಧತಿ ಹಾಗೂ ರಾಣಾಗೆ ತಿಳಿಯದೇ ಹೋಗುತ್ತದೆ ಇದರಿಂದ ರಾಣಾ ಕಂಗೆಟ್ಟು ಹೋಗುತ್ತಾನೆ. ಏನು ಮಾಡುವುದು ಎಂದು ತೋಚದೇ ಅರಸನ ಕೋಟೆಯ ಲ್ಯಾಂಡ್ ನಂಬರ್ ಗೆ ಕರೆ ಮಾಡುತ್ತಾನೆ. ಕರೆ ಸ್ವೀಕರಿಸಲು ಮೋನಿಕಾ ಓಡಿ ಬರುತ್ತಾಳೆ. ಆ ವೇಳೆ ಅಖಿಲಾ ಫೋನ್ ತೆಗೆದು ಮಾತನಾಡುತ್ತಾಳೆ ಆದರೆ ಅತ್ತ ಕಡೆಯಿಂದ ಯಾರು ಮಾತನಾಡದೆ ಇರುವುದನ್ನು ಕಂಡು ಫೋನ್ ಇಟ್ಟು ಹಿಂದಿರುಗಿ ನೋಡಿದಾಗ ಮೋನಿಕಾ ಇರುತ್ತಾಳೆ.

ಅಖಿಲಾ ಕಂಡು ಶಾಕ್ ಆದ ಮೋನಿಕಾ
ಮೋನಿಕಾ ಗರಬಡಿದವರ ಹಾಗೆ ನಿಂತಿರುವುದನ್ನು ಕಂಡ ಅಖಿಲಾ ಮೆತ್ತಗೆ 'ಆಕೆಯ ಮನದಲ್ಲಿ ಅನುಮಾನದ ಹುತ್ತ ಬೆಳೆಯಲು ಶುರು ಮಾಡುತ್ತದೆ. ಪಾರ್ವತಿ ಹೇಳಿದ ಹಾಗೆಯೇ ಈಕೆ ಆ ಊರ ಚೇರ್ ಮ್ಯಾನ್ ಮಗಳು ಹೌದಾ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಈ ವಿಚಾರವನ್ನು ರಘು ಬಳಿ ಕೂಡ ಪ್ರಸ್ತಾಪ ಮಾಡುತ್ತಾಳೆ. ಮೋನಿಕಾ ನೋಡಿದರೆ ನಿಮಗೆ ಏನು ಅನ್ನಿಸುತ್ತದೆ ರಘು. ಎಂದಾಗ ರಘು ಸುಮ್ಮನಾಗುತ್ತಾರೆ.

ರಘು ಬಳಿ ತನ್ನ ಅನುಮಾನ ಹೇಳಿಕೊಂಡ ಅಖಿಲ
ಈ ಪ್ರಶ್ನೆ ಅಖಿಲಾ, ಕೇಳಿದಕ್ಕೆ ಕೊಂಚ ಶಾಕ್ ಆದ ರಘು ಯಾಕೆ ಏನಾಯಿತು? ಎನ್ನುತ್ತಾನೆ. ಆಗ ಅಖಿಲಾ, ಮೋನಿಕಾ ನನ್ನ ನೋಡಿದ ವೇಳೆ ಶಾಕ್ ಹೊಡೆದವಳ ಹಾಗೆ ನಿಂತಿರುತ್ತಾಳೆ. ಊರಿನ ದೊಡ್ಡ ಮನೆತನದ ಮಗಳು ಹೇಗಿರಬೇಕು ಆದರೆ ಮೋನಿಕಾ ಬಳಿ ನಾನು ಅದನ್ನೆಲ್ಲ ನೋಡಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಘು ಕೂಡ ಮನದಲ್ಲಿ ನನಗೂ ಕೂಡ ಹಾಗೆಯೇ ಅನ್ನಿಸಿತು ಎಂದು ಹೇಳಿಕೊಳ್ಳುತ್ತಾ ಇರುತ್ತಾನೆ.

ಜನನಿಗೆ ಮತ್ತೆ ತಾಳಿ ಕಟ್ಟಿದ ಪ್ರೀತಮ್
ಇನ್ನು ಮೋನಿಕಾ ಮಟ್ಟ ಹಾಕಲು ಆದಿ ಪಾರು ಜನನಿ ಒಟ್ಟಾಗಿ ನಿಂತಿದ್ದಾರೆ. ರಾಣಾ ಹಾಗೂ ಅರುಂಧತಿ ಮಾಡುತ್ತಿರುವ ಕುತಂತ್ರ ಬುದ್ದಿಯನ್ನು ಬಯಲಿಗೆ ಎಳೆಯುವ ಕಾಲ ಹತ್ತಿರದಲ್ಲಿ ಇದೆ. ಇನ್ನು ಮನೆಗೆ ಬಂದ ಪಾರು, ಜನನಿ, ಪ್ರೀತಮ್, ಆದಿ ದೇವರ ಕೋಣೆಯ ಎದುರು ಬಂದು ನಿಲ್ಲುತ್ತಾರೆ. ತಾಳಿ, ಜನನಿ ಕುತ್ತಿಗೆಗೆ ಕಟ್ಟುವಂತೆ ಪಾರು ಹೇಳುತ್ತಾಳೆ. ಈ ವೇಳೆ ಸರಿಯಾಗಿ ಅಲ್ಲಿಗೆ ಅಖಿಲಾನು ಬರುತ್ತಾಳೆ ಮುಂದೇನು ಕಾದು ನೋಡಬೇಕಿದೆ.