ಅಮ್ಮ ಅಖಿಲಾಳ ಕಾಲು ಹಿಡಿದು ಕ್ಷಮೆ ಕೇಳಿದ ಆದಿ

By ಪೂರ್ವ

'ಪಾರು' ಧಾರವಾಹಿಯಲ್ಲಿ ಇದೀಗ ಆದಿಗೆ ತನ್ನ ತಪ್ಪಿನ ಅರಿವಾಗುವ ಸಂದರ್ಭ ಬಂದೊದಗಿದೆ. ತನ್ನ ಅಮ್ಮನನ್ನೆ ತಪ್ಪಾಗಿ ತಿಳಿದುಕೊಂಡೆ ಅಲ್ಲ ಎಂದು ಮನದಲ್ಲಿಯೇ ಕೊರಾಗುತ್ತಿದ್ದಾನೆ ಆದಿ. ಪಾರು ಬಳಿ ಹೇಳುತ್ತಾನೆ ಪಾರು ವೃತ ಮಾಡಬೇಡ ಮಾಡಿದರೆ ನಾವಿಬ್ಬರೂ ಬೇರೆ ಆಗುವ ಎಲ್ಲ ಲಕ್ಷಣಗಳೂ ಇದೆ ಎಂದು ಹೇಳಿದಾಗ ಪಾರುಗೆ ಶಾಕ್ ಆಗುತ್ತದೆ. ಆದಿ ಏನು ಹೇಳುತ್ತಿದ್ದಾನೆ ಎಂದು ಅರ್ಥ ಆಗದೆ ಪಾರು ಕೇಳುತ್ತಾಳೆ ಏನು ಹೇಳುತ್ತಿದ್ದೀರಿ ನೀವು ಈ ರೀತಿ ಯಾರಾದರೂ ಮಾತನಾಡುತ್ತಾರ ಎಂದು ಕೇಳುತ್ತಾಳೆ.

ಆದರೆ ತಾನು ಸತ್ತರೂ ಅತ್ತೆಯಮ್ಮನ ಪರ ಇರುತ್ತೇನೆ. ನೀವು ಅವರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಾ. ಎಂದೆಲ್ಲಾ ಹೇಳುವಾಗ ಆದಿ ಹೇಳುತ್ತಾನೆ ನೀನು ಅವರನ್ನು ಅತ್ತೆ ಆಗಿ ಎಷ್ಟು ಅರ್ಥ ಮಾಡಿಕೊಂಡಿದ್ದೀಯೋ ನಾನು ಅವರ ಮಗನಾಗಿ ಅದಕ್ಕಿಂತ ಹೆಚ್ಚು ಅರ್ಥ ಮಾಡಿಕೊಂಡಿದ್ದೇನೆ. ಅವರಲ್ಲಿ ಎಲ್ಲರಿಗಿಂತ ಒಳ್ಳೆ ಗುಣ ಇದೆ ಎಂಬುವುದು ಎಷ್ಟು ಸತ್ಯನೋ ಅವರಲ್ಲಿ ಅಷ್ಟೇ ಕೆಟ್ಟ ಗುಣ ಇದೆ ಅನ್ನುವುದು ಅಷ್ಟೇ ಸತ್ಯ ಎಂದು ಹೇಳುತ್ತಾನೆ. ಗಂಡ ಹೆಂಡತಿ ಮಾತನಾಡುವುದನ್ನು ಯಾಮಿನಿ ಕದ್ದಾಲಿಸುತ್ತಿದ್ದಾಳೆ. ಬಳಿಕ ಆದಿ ಹೇಳುತ್ತಾನೆ ಪಾರು ನನ್ನ ತಾಯಿಗೆ ನಮ್ಮಿಬ್ಬರನ್ನೂ ದೂರ ಮಾಡಿ ಎರಡನೇ ಮದುವೆ ಮಾಡಿಸುವುದು ಒಂದೇ ಸತ್ಯ ಎಂದು ಹೇಳಿದಾಗ ಪಾರು ಶಾಕ್ ಆಗುತ್ತದೆ.

ಪಾರು ಹೇಳುತ್ತಾಳೆ ನೀವು ಅದನ್ನೆಲ್ಲ ಹೇಗೆ ಹೇಳುತ್ತೀರಿ. ನಿಮಗೆ ಇನ್ನೊಂದು ಮದುವೆ ಮಾಡಬೇಕು , ನಮ್ಮಿಬ್ಬರನ್ನೂ ದೂರ ಮಾಡಬೇಕು ಎಂದು ಅತ್ತೆ ನಿಮ್ಮತ್ರ ಹೇಳಿದ್ರಾ ಎಂದಾಗ ಆದಿ ನಡೆದ ಎಲ್ಲಾ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಆದರೆ ಅದನ್ನು ನಂಬದ ಪಾರು ಇಲ್ಲ ಯಜಮಾನರೆ ಅತ್ತೆಯಮ್ಮ ಈ ರೀತಿ ಎಲ್ಲಾ ಹೇಳಿದ್ದಾರೆ ಎಂದರೆ ನನಗೆ ನಂಬಲು ಸಾಧ್ಯ ಇಲ್ಲ. ಇದರಲ್ಲಿ ಏನೋ ರಹಸ್ಯ ಇದೆ ನೀವು ಅರ್ಥ ಮಾಡಿಕೊಂಡಿಲ್ಲ ಎಂದು ಹೇಳುತ್ತಾರೆ. ಆದಿ ಪುನಃ ತನ್ನ ತಾಯಿ ಬಗ್ಗೆ ಇಲ್ಲಸಲ್ಲದನ್ನು ಹೇಳುವಾಗ ಪಾರುಗೆ ಇನ್ನಷ್ಟು ಕೋಪ ಬರುತ್ತದೆ. ಆದಿ ಮಾತನ್ನು ಸ್ವಲ್ಪ ಕೂಡ ಕೇಳದೆ ಅಲ್ಲಿಂದ ಹೋಗುತ್ತಾಳೆ ಆದರೆ ಪಾರು ಬೆನ್ನು ಬಿಡದ ಆದಿ ಪಾರು ಹಿಂದೆ ಬರುತ್ತಾನೆ.

ಪಾರು ಆದಿ ಜಗಳ ಕಂಡು ಅರುಂಧತಿ ರಾಣಾಗೆ ಖುಷಿ

ಪಾರು ಆದಿ ಜಗಳ ಕಂಡು ಅರುಂಧತಿ ರಾಣಾಗೆ ಖುಷಿ

ಇದನ್ನೆಲ್ಲ ಅರುಂಧತಿ ಹಾಗೂ ರಾಣಾ ನೋಡಿ ಖುಷಿ ಪಡುತ್ತಿದ್ದಾರೆ. ಆದಿ ಮೆಟ್ಟಿಲು ಇಳಿಯುತ್ತಾ ಪಾರು ನಿಂತುಕೋ ಎಂದು ಹೇಳುತ್ತಾನೆ ಆಗ ಪಾರು ಅತ್ತೆಯಮ್ಮ ಬರುವವರೆಗೂ ಸುಮ್ಮನಿರಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡುತ್ತಾಳೆ. ಆದಿ ಪಾರು ಕಿರುಚಾಟಕ್ಕೆ ಮನೆ ಮಂದಿ ಎಲ್ಲಾ ಬರುತ್ತಾರೆ. ಆದಿ ತನ್ನ ಅಮ್ಮನನ್ನು ತಪ್ಪಾಗಿ ಗ್ರಹಿಸಿದ್ದಾರೆ ಇಷ್ಟರ ಮಟ್ಟಿಗೆ ಅಂದ್ರೆ ಪಾರುವಾನ್ನೂ ಅಮ್ಮನಿಂದ ದೂರ ಮಾಡುವ ಎಲ್ಲಾ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಆದರೆ ಪಾರು ಮಾತ್ರ ಆದಿ ಯೋಚನೆ ಎತ್ತ ಸಾಗುತ್ತಿದೆ ಎಂದೆಲ್ಲ ಯೋಚಿಸುತ್ತಾಳೆ.

ಗಂಡನ ಬಳಿ ಏರಿದ ದನಿಯಲ್ಲಿ ಮಾತನಾಡಿದ ಪಾರು

ಗಂಡನ ಬಳಿ ಏರಿದ ದನಿಯಲ್ಲಿ ಮಾತನಾಡಿದ ಪಾರು

ಇದನ್ನೆಲ್ಲ ನೋಡಿದ ಮನೆಯವರು ದಂಗಾಗುತ್ತರೆ. ಪಾರು ಆದಿ ಜಗಳವನ್ನು ನೋಡಿದ ರಘು ನಿಲ್ಲಿಸಿ ಎಂದು ಜೋರಾಗಿ ಹೇಳುತ್ತಾರೆ. ಬಳಿಕ ಆದಿ ವಾರ್ನಿಂಗ್ ನೀಡುತ್ತಾನೆ ತನ್ನ ಹೆಂಡತಿ ಬಗ್ಗೆ ಇಲ್ಲ ಸಲ್ಲದಆರೋಪಗಳನ್ನು ಮಾಡಿದರೆ ಸರಿ ಇರುವುದಿಲ್ಲ ಎಂದು ಹೇಳುತ್ತಾನೆ. ಬಳಿಕ ಆದಿಗೆ ಅಮ್ಮನ ಬಗ್ಗೆ ಇರುವ ಯೋಚನೆಗೆ ಬಹಳ ಬೇಸರಗೊಳ್ಳುತ್ತಾನೆ. ಇದನ್ನೆಲ್ಲ ನೋಡಿದ ರಾಣಾ ಅರುಂಧತಿಗೆ ಶಾಕ್ ಆಗುತ್ತದೆ.

ಅಮ್ಮನ ಕಾಲಿಗೆ ಬಿದ್ದ ಆದಿ

ಅಮ್ಮನ ಕಾಲಿಗೆ ಬಿದ್ದ ಆದಿ

ಇನ್ನು ಮಾತು ಮುಂದುವರಿಸಿದ ರಘು ಹೇಳುತ್ತಾನೆ ನನಗೆ ಅಖಿಲ ಎಲ್ಲ ಹೇಳಿದ್ದಾಳೆ ನೀನು ಇನ್ನೂ ಹೇಳುವ ಅಗತ್ಯ ಇಲ್ಲ. ನನಗೆ ಎಲ್ಲಾ ಗೊತ್ತು ಆದರೆ ನಿನಗೆ ಏನೂ ಗೊತ್ತಿಲ್ಲ ತಪ್ಪು ತಿಳಿದುಕೊಂಡಿದ್ದಿಯಾ. ಚಿಕ್ಕ ಗುರುಗಳು ಮನೆಗೆ ಬಂದು ಎರಡನೇ ಮದುವೆ ಬಗ್ಗೆ ಹೇಳಿದಾಗಿನಿಂದ ಇಲ್ಲಿ ಏನೇನೂ ನಡೀತಾ ಇದೆ ಅದೆಲ್ಲವನ್ನೂ ನನಗೆ ಅಖಿಲ ಹೇಳಿದ್ದಾಳೆ. ಅಖಿಲ ನಿಮ್ಮಿಬ್ಬರಿಗೂ ವಿರುದ್ಧವಾಗಿ ನಿಂತಿದ್ದು ನಿಮ್ಮಿಬ್ಬರನ್ನೂ ಒಂದು ಮಾಡಲಿಕ್ಕೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಆದಿಗೆ ಶಾಕ್ ಆಗುತ್ತದೆ. ಬಳಿಕ ತನ್ನ ತಪ್ಪಿನ ಅರಿವಾಗಿ ತನ್ನ ತಾಯಿಯ ಪಾದ ಹಿಡಿದು ಕ್ಷಮೆ ಕೇಳುತ್ತಾನೆ. ಇನ್ನೂ ಮುಂದೆ ಏನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

English summary
Kannada serial Paaru written updated on 7th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X