ಆತಂಕದಲ್ಲಿ ಅಖಿಲಾಂಡೇಶ್ವರಿ: ಅರುಂಧತಿಗೆ ತಿಳಿಯುತ್ತಾ ಅರಸನ ಕೋಟೆಯ ಗುಟ್ಟು?
'ಪಾರು' ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಪಾರುವಂತಹ ಒಳ್ಳೆ ಸೊಸೆಯನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೆ ಎಂಬ ಭಯ ಅಖಿಲಾಂಡೇಶ್ವರಿಯಲ್ಲಿ ಇದೀಗ ಮೂಡಿದೆ. ಆದಿಗೆ ಎರಡನೇ ಮದುವೆ ಯೋಗ ಇದೆ ಎಂದು ಸ್ವಾಮೀಜಿಗಳು ಹೇಳಿರುವುದು ಅಖಿಲಾಂಡೇಶ್ವರಿಯ ಆಘಾತಕ್ಕೆ ಕಾರಣವಾಗಿದೆ.
ಆದಿಗೆ ಎರಡನೇ ಆಗುವುದನ್ನು ತಪ್ಪಿಸಲು ಸದಾ ದೇವರ ನಾಮವನ್ನು ಜಪಿಸುತ್ತ ಇರಬೇಕು ಎಂದು ಕಿರಿಯ ಸ್ವಾಮಿಗಳು ಅಖಿಲಾಂಡೇಶ್ವರಿ ಬಳಿ ಹೇಳಿದ್ದಾರೆ. ಇದನ್ನು ಕೇಳಿದ ಅಖಿಲ ಕುಸಿದು ಹೋಗುತ್ತಾಳೆ. ನನ್ನ ಮಗನಿಗೆ ಇನ್ನೊಂದು ಮದುವೆಯಾ? ಇಂತಹ ಒಳ್ಳೆ ಸೊಸೆಯನ್ನು ಬಿಟ್ಟು ನಾವು ಯಾತಕ್ಕೆ ಆದಿ ಗೆ ಬೇರೆ ಮದುವೆ ಮಾಡುತ್ತೇವೆ. ಯಾಕೆ ಹೀಗೆಲ್ಲಾ ಆಗುತ್ತಿದೆ. ಪಾಪ ಆ ಹುಡುಗಿ ಜೀವನದಲ್ಲಿ ಹೀಗೆಲ್ಲಾ ಆಗಬೇಕಾ. ಆದಿ ಪಾರು ಇಬ್ಬರು ಪ್ರೀತಿಸಿ ಮದುವೆ ಆದವರು ನಾನು ಇವತ್ತು ಆಕೆಯನ್ನು ಹಿರಿಯ ಸೊಸೆ ಎಂದು ತೀರ್ಮಾನಿಸಿ ಮನೆ ತುಂಬಿಸಿಕೊಳ್ಳಬೇಕಿತ್ತು. ಆದರೆ ಈ ರೀತಿ ವಿಚಾರ ಕೇಳಿ ತಲೆ ಕೆಟ್ಟು ಹೋಗುತ್ತಿದೆ ಎಂದು ಬೇಸರಿಸಿಕೊಳ್ಳುತ್ತಾಳೆ.
ಸ್ವಾಮಿಗಳ ಮಾತು ಕೇಳಿ ಅಖಿಲಾಂಡೇಶ್ವರಿ ಆತಂಕದಲ್ಲಿರುವಾಗಲೇ ಅತ್ತೇಮ್ಮ ಎನ್ನುತ್ತಾ ಪಾರು ಅಲ್ಲಿಗೆ ಬರುತ್ತಾಳೆ. ಸ್ವಾಮಿಗಳ ಬಳಿ ಮಾತನಾಡಲು ಬಂದೆ ಎಂದು ಹೇಳಿ ಆಕೆಯ ಮನದಲ್ಲಿ ಇದ್ದ ಒಂದು ವಿಚಾರವನ್ನು ಪ್ರಸ್ತಾಪ ಮಾಡುತ್ತಾಳೆ ಪಾರು. ಇದಕ್ಕೆ ಸರಿಯಾದ ಉತ್ತರವನ್ನು ಸ್ವಾಮಿಗಳು ನೀಡುತ್ತಾರೆ. ಹಾಗೆಯೇ ಮಂತ್ರ ಒಂದನ್ನು ಹೇಳಿ ಅದನ್ನು ಜಪಿಸುವಂತೆ ಹೇಳುತ್ತಾರೆ. ಬಳಿಕ ಅಲ್ಲಿಂದ ಹೋಗುತ್ತಾಳೆ ಪಾರು. ಅಖಿಲಾಂಡೇಶ್ವರಿ ಬಹಳ ಬೇಸರದಿಂದಲೇ ಸ್ವಾಮಿಯವರನ್ನು ಕಳುಹಿಸಿಕೊಡುತ್ತಾರೆ.

ಸ್ವಾಮೀಜಿ ಹೇಳಿದ ಮಾತು ಕದ್ದಾಲಿಸಿದ ದಾಮಿನಿ
ಇದನ್ನೆಲ್ಲ ಕದ್ದು ನೋಡುತ್ತಿದ್ದ ಧಾಮಿನಿಗೆ ಹಾಲು ಕುಡಿದಷ್ಟು ಸಂತೋಷ ಆಗುತ್ತದೆ. ದಾಮಿನಿ ಬಂದು ಆದಿ ಬಳಿ ಕೆಲ ಹುಡುಗಿಯರ ಫೋಟೋ ತೋರಿಸಿ ಇವರು ಆಗಬಹುದಾ ಎಂದೆಲ್ಲಾ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾಳೆ. ಇದನ್ನು ಕೇಳಿ ಕೋಪದಿಂದ ಯಾಕೆ ಚಿಕ್ಕಮ್ಮ ಏನಾಗಿದೆ ನಿಮಗೆ ನನಗೆ ಯಾಕೆ ಫೋಟೋ ತೋರಿಸುತ್ತಿದ್ದಿರಾ ನನಗೆ ಮದುವೆ ಆಗಿರುವುದು ನಿಮಗೆ ಗೊತ್ತಿಲ್ವಾ ಎಂದು ಹೇಳುತ್ತಾನೆ.

ಎರಡನೇ ಮದುವೆ ಸುದ್ದಿ ಕೇಳಿ ಶಾಕ್ ಆದ ಆದಿ
ಅದಕ್ಕೆ ದಾಮಿನಿ, ನನಗೆ ಎಲ್ಲಾ ಗೊತ್ತು ಈಗ ಅಕ್ಕ ಸ್ವಾಮೀಜಿ ಬಳಿ ನಿನ್ನ ಜಾತಕ ತೋರಿಸಿದರು. ಅದರಲ್ಲಿ ನಿನಗೆ ಎರಡನೇ ಮದುವೆ ಆಗುವ ಯೋಗ ಇದೆ ಅಂತೆ ಎಂದು ಹೇಳಿದ್ದಾರೆ ಎನ್ನುತ್ತಾಳೆ. ಇದನ್ನು ಕೇಳಿ ಆದಿ ಶಾಕ್ ಆಗುತ್ತಾನೆ. ಇದೆಂತ ಹುಡುಗಾಟ ನನಗೆ ಎರಡನೇ ಮದುವೆನಾ ನಾನು ಪಾರುವನ್ನ ಬಿಟ್ಟು ಬೇರೆಯವರನ್ನು ತಲೆ ಎತ್ತಿ ಕೂಡ ನೋಡುವುದಿಲ್ಲ ಎಂದೆಲ್ಲಾ ಯೋಚಿಸುತ್ತಾನೆ. ಬಳಿಕ ಅಮ್ಮನ ಬಳಿ ಮಾತನಾಡುತ್ತೇನೆ ಎಂದು ಹೊರಡಲು ಮುಂದಾದಾಗ ದಾಮಿನಿ ಹೇಳುತ್ತಾಳೆ ನಾನು ಹೇಳಿದ್ದು ಎಂದು ಹೇಳಬೇಡ ಸ್ವಾಮಿಗಳು ಹೇಳುವುದನ್ನು ಕದ್ದು ಕೇಳಿಸಿಕೊಂಡೆ ಎಂದು ಹೇಳುತ್ತಾಳೆ.

ದೇವರ ಮುಂದೆ ಕಣ್ಣೀರು ಹಾಕುವ ಅಖಿಲಾಂಡೇಶ್ವರಿ
ಇತ್ತಕಡೆ ಪಾರು, ಅಖಿಲಾಂಡೇಶ್ವರಿ ಬಳಿ ಬಂದು ನಾಳೆ ಪ್ರಸಾದಕ್ಕೆ ಎನು ಮಾಡಲಿ ಅತ್ತೇಮ್ಮಾ ಎಂದು ಕೇಳುತ್ತಾಳೆ. ಅದಕ್ಕೆ ಅಖಿಲಾಂಡೇಶ್ವರಿ ನೀನೇನು ಮಾಡಬೇಡ ರೆಸ್ಟ್ ಮಾಡು ಎಲ್ಲಾ ಜನನಿ ನೋಡಿಕೊಳ್ಳುತ್ತಾರೆ. ನೀನೇನು ಜಾಸ್ತಿ ಕೆಲಸ ಮಾಡಲು ಹೋಗಬೇಡ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಆದರೆ ಪಾರುಗೆ ಕೊಂಚ ಬೇಸರ ಆಗುತ್ತದೆ. ಇತ್ತ ಗಣೇಶನ ಪ್ರತಿಮೆ ಬಳಿ ಬಂದು ಜೋರಾಗಿ ಅಳುತ್ತಾಳೆ ಅಖಿಲಾಂಡೇಶ್ವರಿ. ನನ್ನ ಮಗ ಸೊಸೆ ಚೆನ್ನಾಗಿರಲಿ. ಆದಿ ಯಾವ ಕಾರಣಕ್ಕೂ ಬೇರೆ ಮದುವೆ ಆಗಲು ನಾನು ಬಿಡುವುದಿಲ್ಲ. ಮುಗ್ದ ಪಾರುಗೆ ಒಳಿತು ಆಗಬೇಕು. ಕೆಡುಕು ಆಗಲು ನಾನು ಬಿಡುವುದಿಲ್ಲ ಎಂದೆಲ್ಲಾ ಅಳುತ್ತಾ ಗಣೇಶನ ಬಳಿ ಬೇಡಿಕೊಳ್ಳುತ್ತಾಳೆ.

ಆದಿ ಜೊತೆ ಅಖಿಲಾಂಡೇಶ್ವರಿ ಚರ್ಚೆ
ಅದೇ ಸಮಯಕ್ಕೆ ರಘು ಬಂದು, ಏನಾಯ್ತು ಯಾಕೆ ಅಳುತ್ತಿದ್ದಿಯಾ ಎಂದು ಅಖಿಲಾಂಡೇಶ್ವರಿಯನ್ನು ಕೇಳಿತ್ತಾನೆ. ಆಕೆ ಏನೋ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾಳೆ. ಇತ್ತ ತನ್ನ ಮನದ ಮಾತನ್ನು ಯಾರಾದ್ರೂ ಒಬ್ಬರ ಬಳಿ ಹೇಳಬೇಕು ಎಂದು ಮನ ಹಾತೊರೆಯುತ್ತಾ ಇರುತ್ತದೆ. ಆದಿಯೆ ಅದಕ್ಕೆ ಸೂಕ್ತ ವ್ಯಕ್ತಿ ಎಂದುಕೊಂಡು ಆದಿ ಬಳಿ ಮಾತನಾಡಲು ಹೋಗುತ್ತಾಳೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











