ಪಾರು ಗರ್ಭಿಣಿ ಆಗಿರುವ ವಿಚಾರ ರಘುಗೆ ತಿಳಿಯಿತು! ಅಖಿಲ ಬಳಿ ನಿಜ ಹೇಳುತ್ತಾನಾ ರಘು?

By Poorva

ಜನನಿ ಗರ್ಭಿಣಿ ಆಗಿರುವುದನ್ನು ತಿಳಿದು ಆಕೆಯ ಅತ್ತೆ ಹಾಗೂ ಮನೆಯವರು ಬಹಳ ಖುಷಿ ಪಡುತ್ತಾರೆ. ಪಾರು ಆದಿ ಕೂಡ ಬಹಳ ಖುಷಿ ಪಡುತ್ತಾರೆ. ಜನನಿಗೆ ಬಯಕೆ ಶಾಸ್ತ್ರ ಮಾಡುತ್ತಿರುವ ಕಾರಣ ಪಾರು ಯೋಚನೆ ಮಾಡುತ್ತಾ ಇರುತ್ತಾಳೆ. ಜನನಿಗೆ ನಾನು ಮಾಡುವ ಸಿಹಿ ಬಹಳ ಇಷ್ಟ ಏನಾದರು ಒಂದು ಸಿಹಿ ಮಾಡಿಕೊಡುವ ಎಂದು ಆದಿ ಬಳಿ ಹೇಳುತ್ತಿರುವಾಗ ಆದಿ ಅದನ್ನು ಕೊಡುವ ವೇಳೆ ನಾನು ಬರುತ್ತೇನೆ ಎಂದು ಹೇಳುತ್ತಾನೆ.

ಆ ಬಳಿಕ ಇಬ್ಬರೂ ಅರಸನ ಕೋಟೆಯ ಮನೆಗೆ ಹೋಗುತ್ತಾರೆ. ಜನನಿಗೆ ಬಯಕೆ ಶಾಸ್ತ್ರ ಮಾಡಲು ಅಖಿಲಾಂಡೇಶ್ವರಿ ಆಕೆಗೆ ಬಂಗಾರದ ಒಡವೆಗಳನ್ನು ಹಾಗೆಯೇ ಒಳ್ಳೆಯ ಡ್ರೆಸ್ ಅನ್ನು ಕೊಡುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ಪಾರು ಆದಿ ಬಂದಿರುವುದನ್ನು ಗಮನಿಸಿದ ಜನನಿ ಬಹಳ ಖುಷಿ ಪಡುತ್ತಾಳೆ. ಅಕ್ಕ ಬಾವ ಎಂದಾಗ ಅಖಿಲಗೆ ಕೋಪ ಬರುತ್ತದೆ. ಆ ವೇಳೆ ಅಲ್ಲಿಗೆ ಬಂದ ದಾಮಿನಿ ಕೂಡ ಕುಹಕ ಆಡುತ್ತಾಳೆ. ಏನಮ್ಮ ಪಾರ್ವತಿ ನಿನ್ನ ಗಂಡನಿಗೆ ಕೆಲಸ ಆಗಿಲ್ಲ ಅದಕ್ಕೆ ಏನಾದರು ಮನೆಗೆ ಬಂದಿದ್ದೀರಾ ಎಂದಾಗ ದಾಮಿನಿಗೆ ಮುಖಕ್ಕೆ ಹೊಡೆದ ಹಾಗೆ ಆದಿ ಮಾತನಾಡುತ್ತಾನೆ.

ಇದನ್ನು ಕೇಳಿದ ದಾಮಿನಿ ಏನಪ್ಪಾ ನನ್ನ ಬಳಿಯೇ ನೀನು ಈ ರೀತಿ ಮಾತನಾಡುತ್ತಾ ಇದ್ದೀಯಾ ಅಲ್ವಾ ಎಂದಾಗ ಕೋಪದಿಂದ ಅಖಿಲ ಮನೆಗೆ ಬಂದ ಅಪರಿಚಿತರ ಬಳಿ ಎಂಥ ಮಾತು ನಿಂದು ಎಂದೆಲ್ಲ ಹೇಳುತ್ತಾರೆ. ಇದನ್ನು ಕೇಳಿದ ಆದಿ ಪಾರುಗೆ ನೋವಾಗುತ್ತದೆ. ಬಳಿಕ ಜನನಿಗಾಗಿ ಸಿಹಿ ಮಾಡಿದ್ದೇವೆ, ಅದನ್ನು ಕೊಡಲು ಬಂದಿದ್ದೇವೆ, ನಾವು ಈ ಮನೆಯಲ್ಲಿ ಇರಲು ಬಂದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾರೆ.

ಪಾರು ಕೈಯಿಂದ ಸಿಹಿ ತೆಗೆದುಕೊಂಡ ಜನನಿ

ಪಾರು ಕೈಯಿಂದ ಸಿಹಿ ತೆಗೆದುಕೊಂಡ ಜನನಿ

ಜನನಿ ಸಿಹಿ ತೆಗೆದುಕೊಳ್ಳಲು ಬಹಳ ಕಾತರತೆಯಿಂದ ಇರುತ್ತಾಳೆ. ಆದರೆ ಅತ್ತೆಯ ಮುಖ ನೋಡಿ ಗಾಬರಿ ಪಟ್ಟುಕೊಂಡಿರುತ್ತಾಳೆ. ಆ ವೇಳೆ ಅಖಿಲ ಜನನಿ ಇವತ್ತು ನಿನಗೆ ಬಯಕೆ ಶಾಸ್ತ್ರ, ನಿನಗೆ ಏನೇನೆಲ್ಲ ಇಷ್ಟ ಅದನ್ನೇ ಮಾಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಜನನಿಗೆ ಇನ್ನೂ ಖುಷಿ ಆಗಿ ಪಾರು ಆದಿ ಇರುವಲ್ಲಿಗೆ ಬಂದು ಸಿಹಿ ತೆಗೆದುಕೊಂಡು ಖುಷಿ ಪಡುತ್ತಾಳೆ. ಹಾಗೆಯೇ ಪಾರ್ವತಿಯನ್ನು ತಬ್ಬಿಕೊಂಡು ಖುಷಿ ಪಡುತ್ತಾಳೆ

ಅಕ್ಕನನ್ನು ತಬ್ಬಿ ಸಂತಸಗೊಂಡ ಜನನಿ

ಅಕ್ಕನನ್ನು ತಬ್ಬಿ ಸಂತಸಗೊಂಡ ಜನನಿ

ಪಾರ್ವತಿಗೆ ಬಹಳ ಖುಷಿ ಆಗುತ್ತದೆ. ಆದರೆ ಹೆಚ್ಚು ಮಾತನಾಡಲು ಆಗದೆ ಸುಮ್ಮನೆ ಇರುತ್ತಾಳೆ. ಬಳಿಕ ಜನನಿಗೆ ಸಿಹಿ ತಿನ್ನಿಸಿ ಅಲ್ಲಿಂದ ಹೊರಟು ಹೋಗುತ್ತಾರೆ. ಇನ್ನು ಹನುಮಂತು ಹಾಗೂ ರಘು ದೇವಸ್ಥಾನಕ್ಕೆ ಹೋಗಿರುತ್ತಾರೆ. ಈ ವೇಳೆ ರಘು ಜನನಿ ಗರ್ಭಿಣಿ ಆಗಿರುವುದಕ್ಕೆ ಹಾಗೂ ಹನುಮಂತು ಪಾರು ಗರ್ಭಿಣಿ ಆಗಿರುವುದಕ್ಕೆ ಅವರ ಹೆಸರಲ್ಲಿ ಪೂಜೆ ಮಾಡಿಸುತ್ತಾರೆ . ಈ ವೇಳೆ ರಘು ಹನುಮಂತು ಬಳಿ ಯಾರಿಗೆ ಪೂಜೆ ಮಾಡುತ್ತಾ ಇದ್ದೀಯಾ ಎಂದೆಲ್ಲ ಕೇಳಿದಾಗ ಹನುಮಂತು ಪಾರುಗೆ ಒಳ್ಳೆಯದಾಗಲಿ ಎಂದು ಅರ್ಚನೆ ಮಾಡಿಸಿದೆ ಎಂದು ಸುಳ್ಳು ಹೇಳುತ್ತಾನೆ

ರಘು ಬಳಿ ಸುಳ್ಳು ಹೇಳಿದ ಹನುಮಂತು

ರಘು ಬಳಿ ಸುಳ್ಳು ಹೇಳಿದ ಹನುಮಂತು

ಆದರೆ ಅರ್ಚಕರು ಮಾತ್ರ ಪ್ರಸಾದ ಕೊಡಬೇಕಾದರೆ ನಿಮ್ಮ ಮಗಳು ಗರ್ಭಿಣಿ ಆಗಿರುವುದಕ್ಕೆ ಹಾಗೂ ನಿಮ್ಮ ಸೊಸೆ ಗರ್ಭಿಣಿ ಆಗಿರುವುದಕ್ಕೆ ನೀವು ಕೋರಿಕೊಂಡ ಪೂಜೆ ಮಾಡಿದ್ದೇವೆ ಎಂದು ಹೇಳಿದಾಗ ರಘುಗೆ ಶಾಕ್ ಆಗುತ್ತದೆ. ಪಾರು ಗರ್ಭಿಣಿಯಾ ಎಂದು ಹನುಮಂತು ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದರೂ ಹನುಮಂತು ಮಾತ್ರ ಬಾಯಿ ಬಿಡಲಿಲ್ಲ. ಕೊನೆಗೆ ರಘು ತನ್ನ ಮೇಲೆ ಆಣೆ ಮಾಡಿ ಹೇಳು ಎಂದ ಬಳಿಕ ಹನುಮಂತು ರಘು ಬಳಿ ಸತ್ಯ ಒಪ್ಪಿಕೊಳ್ಳುತ್ತಾನೆ. ಪಾರು ಯಾರ ಬಳಿಯೂ ಹೇಳಬಾರದು ಎಂದು ನನ್ನ ಬಳಿ ಮಾತು ತೆಗೆದುಕೊಂಡಿದ್ದಳು, ಅದಕ್ಕೆ ನಾನು ಹೇಳಲಿಲ್ಲ ಎಂದು ಹೇಳುತ್ತಾನೆ. ಆದರೆ ರಘು ಬಹಳ ಆನಂದದಿಂದ ಇರುತ್ತಾನೆ.

More from Filmibeat

English summary
Kannada serial paaru written updated on 8th February,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X