ಅಖಿಲಾಂಡೇಶ್ವರಿ ನಡೆಗೆ ಆದಿ ಶಾಕ್! ಮುಂದೇನು ಮಾಡುತ್ತಾನೆ?
'ಪಾರು' ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದೆ. ಧಾರಾವಾಹಿ ವೀಕ್ಷಕರು ಆದಿ ಪಾರುವನ್ನು ನೋಡಿ ಅಯ್ಯೋ ಇವರ ಸ್ಥಿತಿ ಹೀಗಾಗಬಾರದು ಇತ್ತು ಎಂದುಕೊಳ್ಳುತ್ತಿದ್ದಾರೆ. ಅಖಿಲಾಂಡೇಶ್ವರಿ ಎಲ್ಲರನ್ನೂ ಹಾಲ್ ಗೆ ಕರೆದು ಇವತ್ತು ಒಂದು ಮೀಟಿಂಗ್ ಇದೆ. ಇದಕ್ಕೆ ಮೋಹನ್, ಆದಿ, ಪ್ರೀತಮ್ ಬರಲೇಬೇಕು ಎಂದು ಹೇಳುತ್ತಾರೆ. ಇವತ್ತು ನಡೆಯಲಿರುವ ಮೀಟಿಂಗ್ ಬಹಳ ಮಹತ್ವ ಪೂರ್ಣವಾದುದು. ಇದಕ್ಕೆ ಯಾರು ತಪ್ಪೀಸಬೇಡಿ, ದೇವಸ್ಥಾನಕ್ಕೆ ಹೋಗಿ ಮೊಬೈಲ್ ಆಪ್ ಮಾಡಿ ಕುಳಿತುಕೊಳ್ಳುವುದಾಗಲಿ ಹೀಗೆಲ್ಲ ಮಾಡದೇ ಆಫೀಸಿಗೆ ಬನ್ನಿ ಎಂದು ಆದಿಗೆ ಇಂಡೈರೆಕ್ಟ್ ಆಗಿ ಹೇಳುತ್ತಾರೆ.
ಬಳಿಕ, ನಾನು ಆಫೀಸಿಗೆ ಹೋಗುತ್ತೇನೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಆಫೀಸಿಗೆ ಹೋಗುತ್ತಾರೆ. ಆದಿ ಮತ್ತು ಪ್ರೀತಮ್ ಏನು ಕಾರ್ಯಕ್ರಮ ಇರಬಹುದು ಯಾವ ಮೀಟಿಂಗ್ ಇರಬಹುದು ಎಂದು ಹೊರಡಲು ಅನುವಾಗುತ್ತಾರೆ. ಪ್ರೀತಮ್ ಅಣ್ಣನ ಬಳಿ, ಇವತ್ತು ನಾವಿಬ್ಬರು ಬೈಕ್ ನಲ್ಲಿ ಹೋಗೋಣ ಎಂದು ಹೇಳುತ್ತಾನೆ. ಬಳಿಕ ಇಬ್ಬರೂ ಬೈಕ್ ನಲ್ಲಿ ತೆರಳುತ್ತಾರೆ. ಬೈಕ್ ಪಯಣವನ್ನು ಎಂಜಾಯ್ ಮಾಡಿಕೊಂಡು ಇಬ್ಬರೂ ಹೋಗುತ್ತಾರೆ.

ಆದಿಗೆ ಹಳೆಯ ನೆನಪು
ಇತ್ತ ಪ್ರೀತಮ್ ಕೂಡ ಖುಷಿಯಾಗಿ ಇರುತ್ತಾರೆ. ಆಫೀಸ್ ಗೆ ತೆರಳಿದ ಬಳಿಕ ಆದಿ ಮೊಬೈಲ್ ಆನ್ ಮಾಡಿ ನೋಡುತ್ತಾನೆ ಅವನಿಗೆ ಹಿಂದಿನದ್ದೆಲ್ಲಾ ನೆನಪು ಮರುಕಳಿಸುತ್ತದೆ ಬಳಿಕ ಆದಿ, ಪಾರೂಗೆ ಕರೆ ಮಾಡಿ ಎಲ್ಲಿದಿಯಾ ಎಂದು ಕೇಳಿದಾಗ ನೀವು ಆಗ ಹೋಗುವಾಗ ಎಲ್ಲಿದ್ದೇನೋ ಅಲ್ಲಿಯೇ ಇದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿ ಆದಿಗೆ ರಿಲಿಪ್ ಆಗುತ್ತದೆ. ಇನ್ನೂ ಪಾರು ಅಡುಗೆ ಕೋಣೆಯಲ್ಲಿ ತಿಂಡಿ ರೆಡಿ ಮಾಡುತ್ತಿರುತ್ತಾಳೆ.

ಪತಿಗೆ ಊಟ ಕೊಂಡೊಯ್ದ ಪಾರು
ಆಗ ಸುಮಿತ್ರಮ್ಮ ಬಂದು ಕೇಳುತ್ತಾರೆ ಏನು ಪಾರು ಕೆಲಸ ಮುಗಿತಾ ತಿಂಡಿ ತಿಂದ್ಯಾ ಎಂದು ಅದಕ್ಕೆ ಪಾರು ಹೇಳುತ್ತಾಳೆ ಯಜಮಾನ್ರು ಆಫೀಸ್ ಗೆ ತಿಂಡಿ ತಿನ್ನದೆ ಹೋಗಿದ್ದಾರೆ ಅವರನ್ನು ಬಿಟ್ಟು ನಾನು ಹೇಗೆ ತಿನ್ನಲಿ ಎನ್ನುತ್ತಾಳೆ. ಬಳಿಕ ಅವರಿಗೆ ಕ್ಯಾರಿಯರ್ ಅನ್ನು ತೆಗೆದುಕೊಂಡು ಹೋಗುತ್ತಾಳೆ. ಇದನ್ನೆಲ್ಲ ಯಾಮಿನಿ ಗಮನಿಸುತ್ತಾ ಇರುತ್ತಾಳೆ. ಯಾಮಿನಿ ಕುತ್ತಿಗೆಯಲ್ಲಿ ಇರುವ ಸಿಸಿ ಕ್ಯಾಮರಾದಿಂದ ಅದನ್ನೆಲ್ಲವನ್ನು ರಾಣಾ ಅರುಂಧತಿ ಗಮನಿಸುತ್ತಿರುತ್ತಾರೆ.

ಜನನಿ ಬಳಿ ಚಾಡಿ ಹೇಳುವ ಯಾಮಿನಿ
ಇತ್ತ ಯಾಮಿನಿ ಜನನಿಯಲ್ಲಿಗೆ ಬಂದು. ಜನನಿ, ಪಾರು ಆಫೀಸ್ ಗೆ ತಿಂಡಿ ತೆಗೆದುಕೊಂಡು ಹೋಗುತ್ತಿದ್ದಾಳೆ. ಅವಳ ಗಂಡನಿಗೆ ನಿನ್ನ ಗಂಡನಿಗಲ್ಲಾ, ನಿನ್ನ ಗಂಡ ಆದಿ ತಿನ್ನುವುದರಲ್ಲಿ ಆಯ್ದುಕೊಂಡು ಅವನು ತಿನ್ನುತ್ತಾನೆ ಎಂದು ಹೇಳುವಾಗ ಜನನಿ ಹೊಟ್ಟೆ ಉರಿದು ಹೋಗುತ್ತದೆ. ಹಾಗಾಗಬಾರದು ಎಂದು ಆದರೆ ನೀನು ಆಫೀಸ್ ಗೆ ಊಟ ತೆಗೆದುಕೊಂಡು ಹೋಗು ಎಂದು ಹೇಳುತ್ತಾಳೆ. ಆಫೀಸ್ ನಲ್ಲಿ ಕಂಪನಿಯ ಮುತುವರ್ಜಿ ತಗೊಂಡು ಏಳು ಬೀಳುಗಳನ್ನು ಕಂಡಿದ್ದ ಆದಿ ಅದನ್ನೆಲ್ಲ ಪ್ರೀತಮ್ ಗೆ ಹೇಳುತ್ತಿರುತ್ತಾನೆ. ನಾನು ಕಂಪನಿಯ ಸಿಇಒ ಪಟ್ಟ ಅಲಂಕರಿಸಿದ ಬಳಿಕ ಏಷ್ಟು ಕಷ್ಟಪಟ್ಟಿದ್ದೇನೆ ಪ್ರೀತಮ್ ಆದರೂ ಏನೋ ಒಂದು ರೀತಿಯ ಅಳುಕು. ಆದರೆ ಈ ಸೀಟಿನ ಮೇಲೆ ಕುಳಿತರೆ ನನ್ನೆಲ್ಲ ಕಷ್ಟ ಮಾಯಾವಾಗುತ್ತಿತ್ತು. ಎಂದೆಲ್ಲ ಹೇಳಿದಾಗ ಪ್ರೀತಮ್ ಗೆ ಖುಷಿಯಾಗುತ್ತದೆ.

ಪ್ರೀತಮ್‌ನನ್ನು ಸಿಇಓ ಮಾಡಿದ ಅಖಿಲಾಂಡೇಶ್ವರಿ
ಪಾರು ಟಿಫನ್ ಕ್ಯಾರಿಯರ್ ಹಿಡಿದು ಬರುತ್ತಾಳೆ. ಇದನ್ನು ನೋಡಿದ ಆದಿ ಪ್ರೀತಮ್ ಗೆ ಶಾಕ್ ಆಗುತ್ತದೆ ಏನು ಪಾರು ಎಂದು ಕೇಳಿದಾಗ ಪಾರು ಹೇಳುತ್ತಾಳೆ. ನೀವಿಬ್ಬರೂ ಟಿಫನ್ ಮಾಡದೇ ಇರುವುದಕ್ಕೆ ಒಟ್ಟಿಗೆ ತಿಂಡಿ ಮಾಡೋಣ ಅಂತ ಬಂದೆ ಎಂದು ಹೇಳುವಾಗ ಜನನಿಯು ಟಿಫನ್ ಹಿಡಿದುಕೊಂಡು ಬರುತ್ತಾಳೆ. ಇದನ್ನು ನೋಡಿ ಪ್ರೀತಮ್ ಗೆ ಆದಿಗೆ ಶಾಕ್ ಆಗುತ್ತದೆ. ಇನ್ನೂ ಇತ್ತ ಅಖಿಲಾಂಡೇಶ್ವರಿ ಎಲ್ಲರನ್ನೂ ಕರೆಯುತ್ತಾಳೆ. ನಾನು ಹೊಸ ಸಿಇಓವನ್ನೂ ಆರಿಸಲು ತಯಾರಾಗಿದ್ದೇನೆ ಅವರಿಗೂ ನಿಮ್ಮ ಸಹಕಾರ ಬಹಳ ಅವಶ್ಯಕ ಎಂದು ಹೇಳಿ ಏನು ಪ್ರೀತು ಎಂದು ಹೇಳುತ್ತಾಳೆ. ಇದನ್ನು ಕೇಳಿ ಆದಿಗೆ ಶಾಕ್ ಆಗುತ್ತದೆ.


Click it and Unblock the Notifications