ಆದಿ ಮಾತಿಗೆ ಅಖಿಲಾಂಡೇಶ್ವರಿ ಶಾಕ್! ಗಳ-ಗಳನೆ ಅತ್ತ ಪಾರು

By ಪೂರ್ವ

ಪಾರು ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಪಾರುವನ್ನು ಕಳೆದುಕೊಳ್ಳುತ್ತೇನೆ ಎಂಬ ಭಯ ಅಖಿಲಾಳನ್ನು ಕಾಡುತ್ತಿದೆ. ಏನಾದರು ಮಾಡಿ ಪಾರುವನ್ನು ಇಳಿಸಿಕೊಳ್ಳಲೆ ಬೇಕು ಎಂದು ಪಣ ತೊಟ್ಟಿದ್ದಾಳೆ ಅಖಿಲಾಂಡೇಶ್ವರಿ. ತನ್ನ ಮನದ ನೋವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತಾ, ತನ್ನ ಮುತ್ತಿನಂತಹ ಸೊಸೆಯನ್ನು ಎಂದಿಗೂ ಕಳೆದುಕೊಳ್ಳಲಾರೆ ಎಂದು ಅಳುತ್ತಾಳೆ. ಯಾರಿಗೆ ಹೇಳುವುದು ಇದನ್ನೆಲ್ಲ ಎಂದುಕೊಂಡು, ಇದಕ್ಕೆ ಆದಿ ಸೂಕ್ತ ವ್ಯಕ್ತಿ, ಆತನ ಬಳಿ ಹೇಳುವುದೇ ಉತ್ತಮ ಎಂದುಕೊಂಡು ಆತನ ಬಳಿ ಬಂದಾಗ ಪಾರುವಿನ ಮೇಲೆ ಆದಿ ಕೋಪದಿಂದ ಕಿರುಚಾಡುತ್ತಿರುವುದನ್ನು ನೋಡಿದ ಅಖಿಲ ಅಲ್ಲಿಂದ ತೆರಳುತ್ತಾಳೆ.

ಆದಿ ಕೋಪದಲ್ಲಿ ಇದ್ದಾನೆ ಇನ್ನೂ ಈ ವಿಚಾರವನ್ನು ಯಾರ ಬಳಿ ಹೇಳುವುದು ಎಂದುಕೊಂಡು ಯೋಚಿಸುತ್ತಿರುವ ವೇಳೆ ಅಖಿಲ ಗೆ ನೆನಪಾಗಿದ್ದು ಪ್ರೀತು. ಪ್ರೀತು ಬಳಿ ಈ ವಿಚಾರ ಹೇಳಿಕೊಂಡರೆ ಮನಸು ಹಗುರಾಗುತ್ತದೆ ಎಂದುಕೊಂಡು ಪ್ರೀತು ರೂಮ್‌ಗೆ ಹೋಗುತ್ತಾಳೆ. ಅಲ್ಲಿ ಜನನಿ ಜೊತೆ ಮಾತನಾಡುತ್ತಿರುವುದನ್ನು ಕಂಡು ಈತ ಕೂಡ ಕಿರಿ ಕಿರಿಯಲ್ಲಿ ಇದ್ದಾನೆ. ಇನ್ನೂ ಯಾರ ಬಳಿ ಹೇಳುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಬಳಿಕ ಪಾರು ಮೇಲೆ ಆದಿ ಕೋಪ ಮಾಡಿಕೊಂಡು ಇರುವುದನ್ನು ನೋಡಿದ ಅಖಿಲಾಂಡೇಶ್ವರಿ. ಇದೇನು ಪಾರು ಮೇಲೆ ಆದಿ ಕೋಪ ಮಾಡಿಕೊಳ್ಳುತ್ತಿದ್ದಾನೆ. ಇವರಿಬ್ಬರೂ ಎಲ್ಲರೆದುರು ಖುಷಿಯಲ್ಲಿ ಇದ್ದಾರೆ ಆದರೆ ಒಳಗೊಳಗೇ ಏನೋ ಸರಿ ಇಲ್ಲ ಎಂದು ಅನ್ನಿಸುತ್ತಿದೆ ಎಂದು ಮನದಲ್ಲಿ ಯೋಚಿಸುತ್ತಾಳೆ. ಬಳಿಕ ನಿದ್ದೆಗೆ ಜಾರುತ್ತಾಳೆ. ಕನಸಿನಲ್ಲಿ ಕೂಡ ಆದಿ ಪಾರು ಜಗಳ ಆಡುತ್ತಿರುವುದು ನೆನಪಾಗಿ ಆದಿ-ಪಾರು ಬೇಡ ಬೇಡ ಎಂದು ಕಿರುಚುತ್ತಾ ಇರುತ್ತಾಳೆ. ಆ ಬಳಿಕ ವಾಸ್ತವಕ್ಕೆ ಬಂದ ಅಖಿಲ ನೊಂದುಕೊಳ್ಳುತ್ತಾರೆ. ಇನ್ನೂ ಪಾರು ಆದಿ ಮಾತನಾಡಿಕೊಂಡು ಇರುತ್ತಾರೆ. ಆ ವೇಳೆ ಆದಿ ಪಾರು ನಾನು ನೀನು ಬೇರೆ ಆಗೋ ಮಾತೇ ಇಲ್ಲ ಎಂದೆಲ್ಲ ಉದ್ವೇಗದಿಂದ ಹೇಳುತ್ತಾನೆ.

ಪಾರು ತಂದೆಯನ್ನು ಕಲ್ಲು ಬಂಡೆಗೆ ಹೋಲಿಸಿದ ಆದಿ

ಪಾರು ತಂದೆಯನ್ನು ಕಲ್ಲು ಬಂಡೆಗೆ ಹೋಲಿಸಿದ ಆದಿ

ಅದನ್ನು ಕೇಳಿದ ಪಾರು ಏನ್ರೀ ಏನೋ ಹೇಳಲು ಹೋಗಿ ಏನೋ ಹೇಳಿದ್ರಿ ಅಲ್ವಾ. ನನ್ನನ್ನು ನಿಮ್ಮಿಂದ ಬೇರೆ ಮಾಡಲು ಯಾರಿಂದಲೂ ಸಾಧ್ಯ ಇಲ್ಲ ಎಂದೆಲ್ಲ ಹೇಳುತ್ತಾಳೆ, ಬಳಿಕ ಜೋರಾಗಿ ಅಳುತ್ತಾಳೆ. ಇದನ್ನು ನೋಡಿದ ಆಕೆಯ ತಂದೆ ಸುಮ್ಮನಾಗುತ್ತಾರೆ. ಆದರೆ ಆದಿ ಪಾರುವನ್ನು ಸಮಾಧಾನ ಪಡಿಸುತ್ತಾನೆ. ಪಾರು ತಂದೆಯನ್ನು ನೋಡಿದ ಆದಿ ಹೇಳುತ್ತಾನೆ. ಸಾರಥಿ ನೋಡು ನಿನ್ನ ಮಗಳು ಅಳುತ್ತಿದ್ದಾರೆ. ಸಮಾಧಾನ ಪಡಿಸುವುದಿಲ್ಲವೆ ಎಂದು ಹೇಳುತ್ತಾನೆ. ಆದರೆ ಸಾರಥಿ ಮಾತನಾಡದೆ ಇರುವುದನ್ನು ಕಂಡು ಆದಷ್ಟು ಒಳ್ಳೆಯ ಕಾಲ ಬರಲಿ ಪಾರುವನ್ನು ಮಗಳಾಗಿ ಸ್ವೀಕರಿಸುವ ಸಮಯ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾನೆ.

ಪಾರುಗೆ ಬೇಸರ

ಪಾರುಗೆ ಬೇಸರ

ಇನ್ನೂ ಆದಿ ಪಾರು ರೂಮಿನಲ್ಲಿ ಮಾತನಾಡುತ್ತಾ ಇರುವ ವೇಳೆ ಆದಿ ಏನೋ ಯೋಚನೆ ಮಾಡುತ್ತಾ ಇರುತ್ತಾನೆ. ಏನು ಯಜಮಾನರೆ ಯೋಚನೆ ಮಾಡುತ್ತಾ ಇರುತ್ತೀರಿ ಎಂದು ಹೇಳಿದಾಗ ಆದಿ ಜೋರಾಗಿ ಪಾರು ಮೇಲೆ ರೇಗುತ್ತಾನೆ. ಇದನ್ನು ಕಂಡ ಪಾರುಗೆ ಶಾಕ್ ಆಗುತ್ತದೆ. ಇದನ್ನು ನೋಡಿದ ಆದಿ ಜೋರಾಗಿ ನಗುತ್ತಾನೆ. ನೀನು ಶಾಕ್ ಆದ್ಯ ನಾನು ಸುಮ್ಮನೆ ಆ ರೀತಿ ನಡೆದುಕೊಂಡೇ ಎಂದು ಹೇಳಿದಾಗ ಪಾರು ಗೆ ಕೊಂಚ ನಿರಾಳ ಆಗುತ್ತದೆ .ಬಳಿಕ ಆದಿ ಮನದ ಮಾತನ್ನು ಹೇಳುತ್ತಾನೆ.

ಪಾರುವನ್ನು ಸಮಾಧಾನಿಸಿದ ಆದಿ

ಪಾರುವನ್ನು ಸಮಾಧಾನಿಸಿದ ಆದಿ

ಅಮ್ಮ ಏನು ಕೆಲಸ ಮಾಡಬೇಡಿ ಎಂದು ಹೇಳಿದರು ಅದಕ್ಕೆ ಕೊಂಚ ಬೇಸರ. ಎಲ್ಲಾ ಕೆಲಸ ಜನನಿ ಮಾಡುತ್ತಾಳೆ ನೀನು ಸುಮ್ಮನೆ ಕೂರು. ಮೊದಲು ನೀನು ಹುಷಾರಾಗು ಎಂದು ಹೇಳಿದರು. ಇದನ್ನು ಕೇಳಿದ ಆದಿ ಹಾಗೆ ಹೇಳಿದರ ಹಾಗಾದರೆ ರೆಸ್ಟ್ ಮಾಡು ಎಂದು ಹೇಳುತ್ತಾನೆ. ಇನ್ನೂ ಆದಿ ಬಳಿ ಪಾರು ಏನು ನೀವು ಯೋಚನೆ ಮಾಡುತ್ತಿದ್ದೀರಿ ಏನು ವಿಚಾರ ಎಂದು ಕೇಳುತ್ತಾನೆ ಇದಕ್ಕೆ ಆದಿ ಏನಿಲ್ಲ ಎಂದು ಹೇಳುತ್ತಾನೆ. ಈ ವಿಚಾರವನ್ನು ಪಾರು ಬಳಿ ಹೇಳಿದರೆ ಪಾರು ಇನ್ನಷ್ಟು ಕುಗ್ಗಿ ಹೋಗುತ್ತಾರೆ ಎಂಬುವುದು ಆದಿ ಭಾವನೆ.

ಹೆಂಡತಿಯನ್ನು ನೋಯಿಸಿ ಹೊರ ನಡೆದ ಪ್ರೀತು

ಹೆಂಡತಿಯನ್ನು ನೋಯಿಸಿ ಹೊರ ನಡೆದ ಪ್ರೀತು

ಇನ್ನು ಪ್ರೀತು ಹಾಗೂ ಜನನಿ ಮಾತನಾಡುತ್ತಾ ಇರುತ್ತಾರೆ. ಪ್ರೀತುವಿನ ಬಳಿ ಬಂದ ಜನನಿ ಏನಾಯ್ತು ಯಾಕೆ ಹೀಗೆ ಇದ್ದೀರಿ ಏನು ವಿಚಾರ? ಏನೇ ವಿಚಾರ ಇದ್ದರೂ ನನ್ನ ಬಳಿ ಹೇಳಿ ಕೊಳ್ಳಬಹುದಲ್ವಾ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪ್ರೀತುಗೆ ಕಿರಿ-ಕಿರಿ ಆಗುತ್ತದೆ. ಆದರೂ ಅದನ್ನೆಲ್ಲ ತಡೆದುಕೊಂಡು ಅಲ್ಲಿಂದ ಹೊರ ನಡೆಯುತ್ತಾನೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Paaru written updated on 8th September. Know more about the episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X