Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೆ ಒಂದಾದ ಪೂರ್ವ-ಜನನಿ, ಅಖಿಲಾ ಬಲೆಗೆ ಬಿದ್ದಳಾ ಮೋನಿಕಾ?
ಪ್ರೀತಮ್ ಬಹು ದೊಡ್ಡ ಗಂಡಾಂತರಕ್ಕೆ ಸಿಲುಕಿದ್ದಾನೆ ಎಂದು ತಿಳಿದು ಗಂಡನನ್ನು ಹೇಗಾದರೂ ರಕ್ಷಣೆ ಮಾಡಬೇಕು ಎಂದು ಪಣ ತೊಡುತ್ತಾಳೆ ಜನನಿ. ಇನ್ನು ಪಾರು ಬಳಿ ಜನನಿ ಮಾತನಾಡುತ್ತಾ ಇರುತ್ತಾಳೆ ತಾಳಿ ತೆಗೆದಿಟ್ಟ ಘಟನೆ ಅತ್ತೆ ಗಮನಕ್ಕೆ ಬಂದಿಲ್ಲ. ಎಲ್ಲಾದರೂ ತಾಳಿ ಕಟ್ಟುವ ವೇಳೆ ಹೇಳುತ್ತಿದ್ದರೆ ನಾನೇನು ಮಾಡಬೇಕು. ಪಾರ್ವತಿ ಅವರೇ ನೀವು ಇದ್ದ ಕಾರಣ ನಾನು ಇದನ್ನೆಲ್ಲ ಸಂಭಾಳಿಸಲು ಸಾಧ್ಯ ಆಯಿತು. ಇಲ್ಲವಾದರೆ ಬಹಳ ಕಷ್ಟ ಆಗುತ್ತಿತ್ತು ಎಂದು ಹೇಳುತ್ತಾಳೆ. ಅತ್ತೆ ನೇರವಾಗಿ ಬಂದು ನನ್ನ ಬಳಿ ಕೇಳುತ್ತಿದ್ದರೆ ಏನೆಲ್ಲ ಆಗುತ್ತಿತ್ತು. ಅತ್ತೆಗೆ ನಿಜ ಗೊತ್ತಾದರೆ ಹೇಗೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು ಎನ್ನುತ್ತಾಳೆ.
ನಿಮ್ಮ ಅಪ್ಪನ ವಿರುದ್ದವಾಗಿ ಕಟ್ಟಿದ ತಾಳಿ ಅದು ಆ ತಾಳಿಯನ್ನು ತೆಗೆಯಲು ನಿಮಗೆ ಏನು ರೈಟ್ ಇದೆ ಎಂದು ಅತ್ತೆ ಕೇಳಿದ್ದಿದ್ದರೆ ಎಂದೆಲ್ಲ ಜನನಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಪಾರು ಬಳಿ ಕೇಳುತ್ತಾಳೆ. ಇದನ್ನೆಲ್ಲ ಕೇಳಿದ ಪಾರು ನಡೆದದ್ದನ್ನು ನೆನೆದು ಏಕೆ ಬೇಸರ ಪಟ್ಟುಕೊಳ್ಳುತ್ತಾ ಇದ್ದೀರಾ ಹಾಗೇನೂ ಆಗಲಿಲ್ಲ ಅಲ್ವಾ ಧೈರ್ಯವಾಗಿ ಇರಿ. ಹಾಗೇನೂ ಆಗೋದಿಲ್ಲ. ಕೋಪ ಮನುಷ್ಯನನ್ನು ಮಂಗನನ್ನಾಗಿ ಮಾಡುತ್ತೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಜನನಿ ನಿಜ ಕೋಪದ ಕೈಗೆ ಬುದ್ದಿ ಕೊಟ್ಟು ನಾನು ಬಹು ದೊಡ್ಡ ತಪ್ಪು ಮಾಡಿದೆ. ಇನ್ನು ಮೇಲೆ ನನ್ನ ಬುದ್ದಿ ಯಾವತ್ತಾದರೂ ಕೆಟ್ಟರೆ ನೀವೇ ಅದನ್ನು ಸರಿಮಾಡಬೇಕು ಯಾಕೆ ಎಂದರೆ ನೀವು ನಮಗೆ ಅಕ್ಕನ ಸಮ ಎಂದು ಹೇಳುತ್ತಾಳೆ ಇದನ್ನು ಕೇಳಿದ ಪಾರ್ವತಿಗೂ ಖುಷಿ ಆಗುತ್ತದೆ.
ಮಾತು ಮುಂದುವರಿಸಿದ ಜನನಿ, ನೀವು ಇನ್ನೂ ಮೇಲೆ ನನ್ನನ್ನು ಜನನಿ ಅಂತ ಕರೆಯಿರಿ. ನಾನು ನಿಮ್ಮನ್ನು ಅಕ್ಕ ಎಂದೇ ಕರೆಯುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪಾರು ಬಹಳ ಖುಷಿ ಪಡುತ್ತಾಳೆ. ಇನ್ನು ರೂಮಿಗೆ ಹೋದ ಜನನಿಯನ್ನು ಪಾರು ಜನನಿಯವರೆ ಎಂದು ಕರೆಯುತ್ತಾಳೆ. ಜನನಿ ಎಷ್ಟು ಬಾರಿ ನನ್ನನ್ನು ಜನನಿ ಎಂದು ಕರೆಯಿರಿ ನಿಮ್ಮ ತಂಗಿ ಎಂದು ಭಾವಿಸಿ ಮಾತನಾಡಿಸಿ ಎಂದು ಹೇಳಿದರು ಪಾರ್ವತಿ ಮಾತ್ರ ಜನನಿ ಕೈಯಿಂದ ಬೈಗುಳ ತಿನ್ನುವುದೇ ಆಯಿತು.

ಮೋನಿಕಾ ವಿಚಾರವಾಗಿ ಜನನಿ ಬಳಿ ಕ್ಷಮೆ ಕೇಳಿದ ಪಾರು
ಇನ್ನು ಮೋನಿಕಾ ವಿಚಾರವಾಗಿ ಜನನಿ ಬಳಿ ಬಂದು ಮಾತನಾಡಿದ ಪಾರು ಜನನಿ ನನ್ನ ಮೇಲೆ ನಿನಗೆ ಅನುಮಾನ ಬರಲೇ ಇಲ್ವಾ ಎಂದೆಲ್ಲ ಕೇಳುತ್ತಾಳೆ. ಮೋನಿಕಾ ನಿಮ್ಮ ರೂಮಿನಲ್ಲಿ ಲಗೇಜ್ ಇಟ್ಟಿರುವುದನ್ನು ಕಂಡು ನಿಮಗೆ ಏನೂ ಅನ್ನಿಸಲೇ ಇಲ್ವಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಜನನಿ ಮಾತ್ರ ಅನುಮಾನ ಪಡುವ ಮನುಷ್ಯರು ನಮ್ಮ ಮನೆಯಲ್ಲಿ ಇಲ್ಲದ ಕಾರಣ ನಾನು ಅನುಮಾನ ಪಡಲಿಲ್ಲ. ಅದರ ಬಗ್ಗೆ ಹೆಚ್ಚಾಗಿ ಯೋಚನೆ ಮಾಡಲಿಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ಪಾರುಗೆ ಜನನಿ ಮೇಲೆ ಅಭಿಮಾನ ಇನ್ನೂ ಹೆಚ್ಚಾಗುತ್ತದೆ.

ಪ್ರೀತಮ್ ವಿಚಾರ ತಿಳಿಸುವಂತೆ ಬೇಡಿದ ಜನನಿ
ಬಳಿಕ ಜನನಿ, ಪ್ರೀತಮ್ ವಿಚಾರ ಏನಾದರು ತಿಳಿದರೆ ನನಗೆ ತಿಳಿಸಿ ನನ್ನ ಕೈಯಿಂದ ಆದ ಮಟ್ಟಿಗೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳುತ್ತಾಳೆ. ಇನ್ನು ಧಾಮಿನಿಗೆ ಮೋನಿಕಾ ಕಂಡರೆ ಏನೋ ಅನುಮಾನ ಪಾರು ಹಾಗೂ ಮೋನಿಕಾ ಸೇರಿಕೊಂಡು ಏನಾದರು ಮಸಲತ್ತು ನಡೆಸುತ್ತಿದ್ದಾರೆ ಅನ್ನುವ ಅನುಮಾನ ಹೆಚ್ಚಾಗಿ ಕಾಡುತ್ತಿದೆ. ಈ ವೇಳೆ ದಾಮಿನಿ ಬಳಿ ಬಂದ ಮೋನಿಕಾ ಮೊಬೈಲ್ ಫೋನ್ ಕೇಳುತ್ತಾಳೆ. ತಾಯಿಗೆ ಕರೆ ಮಾಡಬೇಕಿದೆ ಎಂದೆಲ್ಲ ಕೇಳಿದಾಗ ಮೊಬೈಲ್ ಕೊಡುತ್ತಾಳೆ ಆದರೆ ಆಕೆ ಕಾಲ್ ಮಾಡುವವರೆಗೆ ಕಾದು ಕುಳಿತು ಫೋನ್ ತೆಗೆದುಕೊಳ್ಳುತ್ತಾಳೆ.

ಧಾಮಿನಿ ಕೈಗೆ ಸಿಕ್ಕಿ ಬಿದ್ದ ಮೋನಿಕಾ
ಇನ್ನು ಧಾಮಿನಿ ಕರೆ ಬಂತೆಂದು ಸ್ವೀಕರಿಸಲು ಕರೆ ಕಟ್ ಆಗುತ್ತದೆ. ಕರೆ ಕಟ್ ಆಗಿ ಹೋಯಿತಲ್ಲ ಎಂದು ಪುನಃ ಕರೆ ಮಾಡಿದಾಗ ಅರುಂಧತಿ ತಡೆಯುತ್ತಾರೆ. ಮೋನಿಕಾ ಕರೆ ಮಾಡಿ ಇದ್ದರೆ ವಾಪಸ್ ಆಕೆ ಮಾಡಿಯೇ ಮಾಡುತ್ತಾಳೆ ಎಂದು ಹೇಳುತ್ತಾಳೆ. ಇನ್ನು ದಾಮಿನಿ ಮಾತ್ರ ಈ ನಂಬರ್‌ಗೆ ಕರೆ ಮಾಡಿದ್ದನ್ನು ಅಕ್ಕನ ಬಳಿ ಹೇಳುತ್ತೇನೆ ಎಂದು ಓಡಿ ಹೋಗುತ್ತಾಳೆ. ದಾಮಿನಿಯನ್ನೂ ಹಿಂಬಾಲಿಸಿದ ಮೋನಿಕಾಗೆ ಪ್ರೀತಮ್ ಸಿಗುತ್ತಾನೆ. ಆಕೆ ಆತನ ಬಳಿ.ಎಲ್ಲಾ ವಿಚಾರ ಹೇಳುತ್ತಾಳೆ ಇದನ್ನು ಕೇಳಿ ಪ್ರೀತಮ್‌ಗೆ ಶಾಕ್ ಆಗುತ್ತದೆ. ಇನ್ನು ಎಲ್ಲರ ಮುಂದೆ ಅಖಿಲಾ, ಮೋನಿಕಾ ಯಾರು ಎಂಬ ಪ್ರಶ್ನೆಯನ್ನು ಪಾರು ಮುಂದೆ ಇಟ್ಟಿದ್ದಾಳೆ. ಮುಂದೇನು ಕಾದು ನೋಡಬೇಕಿದೆ.