Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Paaru Serial: ದೇವರ ಸನ್ನಿಧಿಯಲ್ಲಿ ಆಸ್ತಿಯಲ್ಲಿ ಭಾಗ ಕೇಳುತ್ತಾನಾ ಆದಿ?
ದೇವರ ಸನ್ನಿಧಿಗೆ ಅಖಿಲಾಂಡೇಶ್ವರಿ ಕುಟುಂಬ ಸಮೇತ ಆಗಮಿಸುತ್ತಾರೆ. ಈ ವೇಳೆ ಅಖಿಲಾಂಡೇಶ್ವರಿಗೆ ಬಹಳ ಅದ್ಧೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ಇದನ್ನು ನೋಡಿದ ಅಖಿಲಗೆ ಬಹಳ ಖುಷಿ ಆಗುತ್ತದೆ. ಬಳಿಕ ರಘು ಹಾಗೂ ಅಖಿಲ ಇಬ್ಬರಿಗೂ ಹೂವಿನ ಹಾರವನ್ನು ಹಾಕಲಾಗುತ್ತದೆ. ಇದನ್ನು ನೋಡಿದ ಆದಿ ಪಾರುವಿಗೇ ಬಹಳ ಖುಷಿ ಆಗುತ್ತದೆ. ಇನ್ನು ದಾಮಿನಿ ಏನು ಕನ್ನೇಗೌಡರೇ ದೇವಾಲಯದ ಖಜಾನೆಯಲ್ಲಿ ದುಡ್ಡು ಇಲ್ವಾ ಎನ್ನುತ್ತಾಳೆ. ಇದಕ್ಕೆ ಕನ್ನೇಗೌಡ ನಗುತ್ತಾ ದುಡ್ಡು ಇದೆ ಮೇಡಂ ಎಂದು ಹೇಳುತ್ತಾನೆ. ಧಾಮಿನಿ ಮತ್ತೆ ಅಕ್ಕ ಬಾವನಿಗೆ ಒಂದೇ ಹಾರ ಹಾಕಿದ್ದೀರ ಬೇರೆ ಬೇರೆ ಹಾರ ಹಾಕಬಹುದು ಇತ್ತಲ್ವ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಆ ಊರಿನ ಗೌಡರು ಇಬ್ಬರಿಗೂ ಒಂದೇ ಹಾರ ಹಾಕಿದ್ದು ಯಾಕೆ ಎಂದರೆ ಇಬ್ಬರೂ ಖುಷಿ ಖುಷಿ ಆಗಿ ಇರಲಿ ಅಂತ ಎಂದು ಹೇಳುತ್ತಾರೆ. ಈ ಉತ್ತರದಿಂದ ಅಖಿಲ ರಘುಗೆ ಬಹಳ ಖುಷಿ ಆಗುತ್ತದೆ. ಧಾಮಿನಿ ಮಾತಿಗೆ ಮೋಹನ್ ಮಾತ್ರ ಬೇಸರಿಸಿಕೊಳ್ಳುತ್ತ ಇರುತ್ತಾನೆ. ಈ ವೇಳೆ ದೇವಸ್ಥಾನದ ಒಳಗೆ ಎಲ್ಲರೂ ಹೋಗುತ್ತಾರೆ. ಆದರೆ ಪಾರು ಅಲ್ಲಿಯೇ ನಿಂತುಕೊಳ್ಳುತ್ತಾಳೆ.
ಇದನ್ನು ಕಂಡ ಆದಿ ಪಾರು ಭುಜದ ಮೇಲೆ ಕೈ ಇಟ್ಟು ಪಾರು ಯಾಕೆ ನಿಂತು ಬಿಟ್ಟೆ, ಹೋಗೋಣ ಬಾ ಎಂದು ಕರೆಯುತ್ತಾನೆ. ಆಗ ಪಾರು ಅತ್ತೆ ಖುಷಿ ಆಗಿ ಇರುವುದು ಇವತ್ತು ಒಂದೇ ದಿನ ಅಲ್ವಾ ಯಜಮಾನರೆ, ಆಗುವ ಅನಾಹುತ ನಮಗೆ ಮೊದಲೇ ಗೊತ್ತಿದ್ದರೆ ಅದನ್ನು ತಪ್ಪಿಸಬಹುದು ಎಂದು ಹೇಳಬಹುದು ಆದರೆ ನಮಗೆ ಮುಂದೆ ಎನು ಆಗುತ್ತೆ ಎಂದು ಗೊತ್ತು ಇದ್ದರೂ ಅದನ್ನು ತಪ್ಪಿಸಲು ಆಗದ ಪರಿಸ್ಥಿತಿ ಇದೆ ಎಂದು ಪಾರ್ವತಿ ಬಹಳ ಬೇಸರಗೊಳ್ಳುತ್ತಾಳೆ. ಆದರೆ ಆದಿ ಏನು ಆಗುವುದಿಲ್ಲ ನನ್ನ ತಮ್ಮ ಕೆಟ್ಟವನು ಆಗಬಾರದು ಹಾಗಾಗಿ ನಾವು ಈ ತರ ಮಾಡಲೇಬೇಕಾಗಿದೆ ಎಂದು ಹೇಳುತ್ತಾನೆ. ಬಳಿಕ ದೇವರ ದರ್ಶನ ಮಾಡುತ್ತಾರೆ.

ದೇವರ ದರ್ಶನ ಮಾಡಿದ ಅಖಿಲ
ಆ ವೇಳೆ ಪ್ರೀತಮ್ ಜನನಿ ಕಾಣಿಸದ್ದನ್ನು ಕಂಡು ಆದಿ ಪ್ರೀತಮ್ ಜನನಿ ಎಲ್ಲಿದ್ದಾರೆ ಎಂದು ಅಖಿಲ ಕೇಳುತ್ತಾಳೆ. ಬರುತ್ತಾ ಇದ್ದಾರೆ ಎಂದು ಆದಿ ಹೇಳಿದಾಗ ಅಖಿಲ ಕೊಂಚ ಸಮಾಧಾನಗೊಳ್ಳುತ್ತಾಳೆ. ಇನ್ನು ದಾರಿಯಲ್ಲಿ ಪ್ರೀತಮ್ ಹಾಗೂ ಜನನಿಯನ್ನು ಅಡ್ಡ ಹಾಕಿದ ಮೋನಿಕಾ ಗಂಡ ನೀನು ನನ್ನ ಹುಡುಗಿಯನ್ನು ಅಡ್ಡ ಹಾಕಿದೆ ಅಲ್ವಾ ಅದಕ್ಕೆ ಏನು ಹೇಳಬೇಕು ಹೇಳೋ ಎಂದು ಜೋರಾಗಿ ಹೇಳುತ್ತಾನೆ. ಇದನ್ನು ಕೇಳಿದ ಪ್ರೀತಮ್ ನಿನ್ನ ಹೆಂಡತಿಯನ್ನು ನಾನು ಯಾಕೆ ಮಾತನಾಡಿಸಲಿ ಎಂದು ಅರ್ಥ ಆಗದೆ ಕೇಳುತ್ತಾನೆ.

ಸತ್ಯ ಬಿಚ್ಚಿಟ್ಟ ಪ್ರೀತಮ್
ಮೋನಿಕಾ ನಿಮ್ಮ ಮನೆಯಲ್ಲಿ ಇದ್ದಾಳೆ ತಾನೇ ಆಕೆಯ ಗಂಡ ನಾನು ಎಂದು ಪ್ರೀತಮ್ ಜೋರಾಗಿ ಹೇಳುತ್ತಾನೆ. ಬಳಿಕ ಜನನಿ ಹಾಗೂ ಆತನ ಬಳಿ ನಡೆದ ವಿಚಾರವನ್ನು ಹೇಳುತ್ತಾನೆ. ಇದನ್ನು ಕೇಳಿದ ಜನನಿಯ ದುಃಖದ ಕಟ್ಟೆ ಒಡೆಯುತ್ತದೆ. ಯಾಕೆ ಪ್ರೀತಮ್ ಈ ತರ ಮೋಸ ಮಾಡಿದೆ ನೀನು, ನಾನು ನಿನ್ನ ಎಷ್ಟು ನಂಬಿದ್ದೆ ಆದರೆ ನೀನು ನನ್ನ ಭಾವನೆಗೆ ಬೆಲೆ ಕೂಡ ಕೊಡದೇ ಈ ರೀತಿ ನಡೆದುಕೊಂಡೆ ಇದು ಸರಿಯಾ ಎಂದು ಅಳುತ್ತಾಳೆ.

ಜನನಿಗೆ ಸಮಾಧಾನ ಮಾಡಿದ ಪ್ರೀತಮ್
ಇಲ್ಲಿ ಎನು ನಡೆದಿಲ್ಲ, ಮೋನಿಕಾ ಏನೋ ಕಿತಾಪತಿ ಮಾಡಿದ್ದಾಳೆ, ರಾಣಾ ಹಾಗೂ ಅರುಂಧತಿ ಫೇಕ್ ವಿಡಿಯೋ ಇಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದು ಮನದಲ್ಲಿ ಯೋಚನೆ ಮಾಡುತ್ತಾನೆ. ಬಳಿಕ ಆಕೆಯ ಗಂಡನೂ ನಿಮ್ಮ ಗಂಡನ ಜೀವನದಲ್ಲಿ ನಡೆದ ಹಾಗೆ ನನ್ನ ಜೀವನದಲ್ಲಿ ನಡೆದಿದೆ ಸೇಮ್ ಹುಡುಗಿ ಸೇಮ್ ಮೆಥಡ್ ಎಂದು ಹೇಳುತ್ತಾನೆ. ನನ್ನ ಬಳಿ ಕೂಡ ದುಡ್ಡು ಪೀಕಿಸಿದಳು. ಮದುವೆ ಆದ ಬಳಿಕ ತಿಳಿಯಿತು ಅವಳು ಮಾಡಿದ್ದು ಬರಿ ಫೇಕ್ ಅಂತ ಆದೇ ತರ ನಿಮ್ಮ ಗಂಡನದು ಫೇಕ್ ವಿಡಿಯೋ ಆಗಿರಬಹುದು ಎಂದಾಗ ಪ್ರೀತಮ್ ಗೆ ತಾನು ಅಂದುಕೊಂಡು ಇರುವುದೇ ಸತ್ಯ ಎಂದು ಆ ವೇಳೆ ತಿಳಿಯುತ್ತದೆ. ಮೋನಿಕಾಳ ಬಗೆಗಿನ ಸತ್ಯ ಅರಿತುಕೊಂಡ್ರು ಜನನಿ-ಪ್ರೀತು. ಬಳಿಕ ಜನನಿಗೆ ಸಮಾಧಾನ ಹೇಳುತ್ತಾನೆ. ಅರುಂಧತಿ ಮಾತ್ರ ಮೋನಿಕಾಗೆ ಕರೆ ಮಾಡಿ ಆಸ್ತಿ ಪಾಲು ಕೇಳುವ ವೇಳೆ ವಿಡಿಯೋ ಮಾಡಿ ಕಳುಹಿಸು ಎಂದು ಹೇಳುತ್ತಾಳೆ. ಇನ್ನು ಮುಂದೆ ಕಾದು ನೋಡಬೇಕಿದೆ.