ಪ್ರೀತಮ್ ಹಿಂದಿರುವವರ ಮುಖವಾಡ ಕಳಚುತ್ತಾಳ ಅಖಿಲಾಂಡೇಶ್ವರಿ?
'ಪಾರು' ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಣಾ ಹಾಗೂ ಅರುಂಧತಿ ಪ್ರೀತಮ್‌ನನ್ನು ಆಟ ಆಡಿಸುವ ಪರಿ ನೋಡಲು ಆಗುತ್ತಿಲ್ಲ. ಅದೆಷ್ಟೇ ಕಷ್ಟ ಇದ್ದರೂ ಪ್ರೀತಮ್ ಎಲ್ಲವನ್ನೂ ಮನದಲ್ಲಿ ನುಂಗಿಕೊಂಡು ಮನೆಯವರ ಎದುರಿಗೆ ಚೆನ್ನಾಗಿ ಇರುತ್ತಾನೆ. ಮನೆಯಲ್ಲೂ ಆದಿ ಹಾಗೂ ಪಾರು ಪ್ರಸ್ತ ಶಾಸ್ತ್ರಕ್ಕೆ ಎಲ್ಲಾ ತಯಾರಿ ಆಗುತ್ತಿದೆ. ಹೆಂಡತಿಯನ್ನು ಬಿಟ್ಟಿರದೆ ಆದಿ ಮಾತ್ರ ಚಡಪಡಿಸುತ್ತಾ ಇದ್ದಾನೆ. ಆಫೀಸ್‌ಗೆ ತೆರಳಿದರು ಪಾರು ಧ್ಯಾನ ಮಾಡುತ್ತಾ ಇರುತ್ತಾನೆ. ಅಖಿಲಾಂಡೇಶ್ವರಿ ಪಾರು ಮತ್ತು ಆದಿ ಮಾತುಗಳು ಅಖಿಲಾಗೆ ಬಹಳ ಬೇಸರ ಉಂಟು ಮಾಡುತ್ತದೆ ನನಗಾಗಿ ಮಕ್ಕಳು ಯಾಕೆ ಅವರ ಸುಖ ಸಂತೋಷವನ್ನು ತ್ಯಾಗ ಮಾಡಬೇಕು ಎಂದೆಲ್ಲ ಹೇಳುತ್ತ ಇರುತ್ತಾಳೆ.
ಈ ವಿಚಾರವನ್ನು ರಘು ಬಳಿ ಹೇಳಿದಾಗ ಆತನಿಗೆ ಕೂಡ ಬೇಸರ ಆಗುತ್ತದೆ. ಇಬ್ಬರಿಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕೆ ಅಖಿಲಾನೆ ಖುದ್ದಾಗಿ ಹೋಗಿ ಅಡುಗೆ ಮಾಡುತ್ತಾ ಇರುತ್ತಾಳೆ. ನಾನು ಮಾಡಿದರೆ ಇನ್ನೂ ನನ್ನ ಮಕ್ಕಳಿಗೆ ಊಟ ಮಾಡಲು ಖುಷಿ ಆಗುತ್ತದೆ ಎಂದು ಕೊಂಡು ಅಡುಗೆ ಮಾಡುತ್ತಾ ಇರುವಾಗ ಪಾರು ಬರುತ್ತಾಳೆ ಇದೇನು ಅತ್ತೆಯಮ್ಮ ನೀವು ಬಂದಿದ್ದೀರಾ, ನೀವು ಬರುವ ಅಗತ್ಯ ಇರಲಿಲ್ಲ. ಹೇಳಿದರೆ ನಾನೇ ಮಾಡುತ್ತಿದ್ದೆ ಎನ್ನುತ್ತಾಳೆ.
ಇವತ್ತು ನಮ್ಮ ಮನೆಗೆ ಇಬ್ಬರು ಗೆಸ್ಟ್ ಬರುತ್ತಿದ್ದಾರೆ ಅವರಿಗೆ ನಾನು ಅಡುಗೆ ಮಾಡಿದರೆ ಖುಷಿ ಆಗುತ್ತದೆ ಎಂದು ಹೇಳುತ್ತಾಳೆ. ಆ ಬಳಿಕ ಆದಿ ಕರೆ ಪಾರುಗೆ ಬರುತ್ತದೆ. ಆದಿ ಬಳಿ ಮಾತನಾಡಲು ಪಾರು ಹೊರಗಡೆ ಬಂದಾಗ ಅಖಿಲಾ ಬಳಿ ರಘು ಬರುತ್ತಾರೆ. ಹೆಂಡತಿ ಅಡುಗೆ ರೂಮ್‌ನಲ್ಲಿ ಕಂಡು ಖುಷಿಯಲ್ಲಿ ರೊಮ್ಯಾಂಟಿಕ್ ಮೂಡ್‌ನಲ್ಲಿ ಹಾಡು ಹೇಳುತ್ತಾ ಆತನ ಕೆಲಸ ಮಾಡುತ್ತಾ ಇರುತ್ತಾನೆ. ಇದನ್ನು ಕಂಡ ಅಖಿಲಾ ನಾಚಿ ನೀರಾಗಿ ಹೋಗುತ್ತಾಳೆ.

ಪ್ರೀತಮ್‌ನನ್ನು ಕರೆದ ಅಖಿಲಾ
ಬಳಿಕ ಪ್ರೀತಮ್ ಕೆಲಸದವರ ಬಳಿ ಎಲ್ಲಾ ಕೆಲಸ ಅಚ್ಚುಕಟ್ಟಾಗಿ ಆಗಬೇಕು ಎಂದೆಲ್ಲ ಹೇಳುತ್ತ ಇರಬೇಕಾದರೆ ಅಖಿಲಾನ ಕರೆ ಪ್ರೀತಮ್ ಗೆ ಬರುತ್ತದೆ. ಪ್ರೀತಮ್ ಒಮ್ಮೆ ಅಡುಗೆ ಮನೆ ಹತ್ತಿರ ಬರುತ್ತೀಯ ಸ್ವಲ್ಪ ಕೆಲಸ ಇದೆ ಎಂದು ಹೇಳುತ್ತಾರೆ. ಆಗ ಅಮ್ಮನ ಬಳಿ ಹೋಗಬೇಕು ಎನ್ನುವಷ್ಟರಲ್ಲಿ ರಾಣಾನ ಬಳಿ ಹೇಳಬೇಕು ನಾನು ಬರಬೇಕಾದರೆ ಕೊಂಚ ಹೊತ್ತಾಗುತ್ತದೆ ಎಂದುಕೊಂಡು ಅಮ್ಮನ ಬಳಿ ಬರುತ್ತಾನೆ ಈ ವೇಳೆ ಆದಿ ಪಾರು ಇಬ್ಬರು ಬಹಳ ಖುಷಿಯಿಂದ ಮಾತನಾಡುತ್ತಾ ಇರುತ್ತಾರೆ. ಅತ್ತ ಕಡೆಯಿಂದ ಆದಿ ಪಾರು ಗೆ ಒಂದೊಂದೇ ಮುತ್ತುಕೊಡುತ್ತಾ ಇರುತ್ತಾನೆ. ಆ ವೇಳೆ ಅತ್ತ ಕಡೆಯಿಂದ ಬಂದ ಪ್ರೀತಮ್ ನನ್ನು ಕಂಡು ಪಾರು ಮೊಬೈಲ್ ನ್ನೂ ಕೆಳಗೆ ಇಡುತ್ತಾಳೆ.

ಆದಿ-ಪಾರು ರೊಮಾನ್ಸ್
ಆದರೆ ಕರೆ ಕಟ್ ಆಗದೆ ಇರುವ ಕಾರಣ ಮುತ್ತು ಕೊಡುವುದು ಜೋರಾಗಿ ಕೇಳಿಸುತ್ತಾ ಇತ್ತು ಇದನ್ನು ಕೇಳಿಸಿಕೊಂಡ ಪ್ರೀತಮ್ ನಗುತ್ತಾ ಅಲ್ಲಿಂದ ಅಮ್ಮನ ಬಳಿ ಹೋಗುತ್ತಾನೆ. ಪಾರು ಆದಿ ಬಳಿ ಏನಿದು ಹುಚ್ಚಾಟ ಸಾಕು ಎಂದು ಹೇಳಿದರು ಆದಿ ಮಾತ್ರ ಕೇಳದೆ ಒಂದೊಂದೇ ಮುತ್ತು ನೀಡುತ್ತಾ ಇರುತ್ತಾನೆ. ಪ್ರೀತಮ್ ಅಮ್ಮನ ಬಳಿ ಕರೆದ ಕಾರಣ ಕೇಳುತ್ತಾನೆ. ಆಗ ಅಖಿಲ ಸಾಂಬಾರ್ ಟೇಸ್ಟ್ ನೋಡಲು ಹೇಳುತ್ತಾಳೆ.

ರಾಣಾ ಹೆಣೆದ ಬಲೆಯಲ್ಲಿ ಸಿಲುಕಿರುವ ಪ್ರೀತೂ
ಪ್ರೀತಮ್ ಇನ್ನೇನು ಸಾಂಬಾರ್‌ಗೆ ಟೇಸ್ಟ್ ನೋಡಬೇಕು ಎನ್ನುವಷ್ಟರಲ್ಲಿ ರಾಣಾ ಕರೆ ಮಾಡುತ್ತಾನೆ. ರಾಣಾ ಕರೆ ಮಾಡಿದ್ದನ್ನು ಕಂಡು ಬೆದರಿದ ಪ್ರೀತಮ್ ಕೈಯಲ್ಲಿದ್ದ ಸ್ಪೂನ್ ಕೂಡ ಕೆಳಗೆ ಬೀಳುತ್ತದೆ. ಇದನ್ನು ಕಂಡು ಅಖಿಲಾಗೆ ಶಾಕ್ ಆಗುತ್ತದೆ. ಇನ್ನು ಮನೆಗೆ ಬಂದ ಆದಿಗೆ ಹಾಗೂ ಪಾರುಗೆ ಉತ್ತಮ ಉಡುಗೆಗಳನ್ನು ಕೊಟ್ಟು ಅದನ್ನು ತೊಟ್ಟುಕೊಂಡು ಬರಲು ಹೇಳುತ್ತಾರೆ. ಹೊಸ ಉಡುಗೆ ತೊಟ್ಟುಕೊಂಡು ಬಂದ ಬಳಿಕ ಅಖಿಲ ಹೇಳುತ್ತಾರೆ ಇವತ್ತಿನ ಇಬ್ಬರು ಅತಿಥಿಗಳು ನೀವೇ ನಿಮಗಾಗಿ ಡಿನ್ನರ್ ವ್ಯವಸ್ಥೆ ಮಾಡಿದ್ದು ಎಂದು ಹೇಳುತ್ತಾರೆ. ಇನ್ನೂ ಇದನ್ನೆಲ್ಲ ಕೇಳಿ ಆದಿ ಪಾರೂಗೇ ಖುಷಿ ಆಗುತ್ತದೆ.


Click it and Unblock the Notifications











