Punyavathi:ನಂದನ್ ಮನೆಯಲ್ಲಿ ಅಮ್ಮಾಜಿ ನಿರ್ಧಾರದ ಬಗ್ಗೆ ಅಸಮಾಧಾನ
ಪುಣ್ಯವತಿ ಧಾರವಾಹಿ ಅದ್ಭುತವಾಗಿ ಮೂಡಿ ಬಂದಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಪೂರ್ವಿ ಮದುವೆ ಮಾತುಕತೆ ಅಮ್ಮಜಿಯಿಂದ ಪುನಃ ನಿಂತು ಹೋಗಿದೆ. ಆ ವೇಳೆ ಪೂರ್ವಿ ಮನದಲ್ಲಿ.. ಹಬ್ಬಾ ಬಂದ ಗಂಡಾಂತರ ಎಲ್ಲಾ ಇದೀಗ ನೀರಿನ ಹಾಗೆ ಕರಗಿ ಹೋಗಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾರೆ..
ಆದರೆ ಪೂರ್ವಿಯನ್ನು ಇಷ್ಟೆಲ್ಲ ವಹಿಸಿಕೊಂಡು ಬರುತ್ತಿರುವ ಅಮಾಜಿ ಬಗ್ಗೆ ಮನೆ ಮಂದಿಯ ಕೋಪ ಮಾತ್ರ ಹೆಚ್ಚಾಗಿದೆ ಯಾಕೆ ಎಂದರೆ ಅಮ್ಮಾಜಿ ಪದ್ಮಿನಿ ಬಗ್ಗೆ ಅಷ್ಟಾಗಿ ಆಲೋಚನೆ ಮಾಡದೇ ಪೂರ್ವಿ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡು ಇರುವುದೇ ಇದಕ್ಕೆಲ್ಲ ಬಹು ದೊಡ್ಡ ಕಾರಣ ಎಂದರೆ ತಪ್ಪಾಗಲಾರದು.. ಇದೀಗ ಪದ್ಮಿನಿ ಅತ್ತೆಗೆ ಕೂಡ ಬಹಳ ಕೋಪ ಬರುತ್ತದೆ.. ಪೂರ್ವಿ ಮದುವೆ ಆಗಿ ಆಕೆಯ ಗಂಡನ ಮನೆಗೆ ಹೋಗುತ್ತಾ ಇದ್ದಳು..

ಆದರ ನಡುವೆ ಅಮ್ಮಾ ಜಿ ವರ್ತನೆ ಯಾಕೋ ಮಿತಿ ಮೀರಿದ ಹಾಗೆ ಕಾಣುತ್ತಿದೆ...ನನಗೆ ಇದ್ಯಾವುದೂ ಇಷ್ಟ ಆಗುತ್ತಿಲ್ಲ ಎಂದು ಹೇಳುತ್ತ ಇರುತ್ತಾಳೆ.. ತನ್ನ ಗಂಡನ ಬಳಿ.. ಆಗ ಆಕೆಯ ಗಂಡನಿಗೆ ಎನು ಹೇಳಬೇಕು ಎಂದು ತೋಚದ ಹಾಗೆ ಆಗುತ್ತದೆ.. ಎನು ಮಾಡುವುದು ಇದೀಗ ಎಂದು ಬೇಸರ ಹೊರಗೆ ಹಾಕುತ್ತ ಇರುತ್ತಾಳೆ.. ಇನ್ನೂ ಪೂರ್ವಿ ಬಗ್ಗೆ ಅತಿ ಕಾಳಜಿ ವಹಿಸುತ್ತಾ ಇರುವುದನ್ನು ನೋಡಿದ ನಂದನ್ ಮಾತ್ರ ಬಹಳ ಕೋಪಗೊಂಡು ಇರುತ್ತಾರೆ..
ಪೂರ್ವಿ ನಡವಳಿಕೆ ಬಗ್ಗೆ ನಂದನ್ ಗೆ ಅನುಮಾನ ಹುಟ್ಟಿದರು ಪದ್ಮಿನಿ ಮಾತ್ರ ನನ್ನ ತಂಗಿ ಬಹಳ ಒಳ್ಳೆಯವಳು ಎಂದು ಹೇಳುತ್ತ ಇರುತ್ತಾಳೆ.. ಇನ್ನೂ ಪೂರ್ವಿ ತಂದೆಗೆ ಬಹಳ ಟೆನ್ಶನ್ ಆಗುತ್ತದೆ.. ಪದ್ಮಿನಿಯನ್ನು ಈ ಮನೆಗೆ ಸೊಸೆಯಾಗಿ ಕಳುಹಿಸಿ ಕೊಟ್ಟಿದ್ದೇವೆ ಆದರೆ ಪೂರ್ವಿ ಜವಾಬ್ದಾರಿ ಯನ್ನು ಯಾಕೆ ಅವರಿಗೆ ವಹಿಸಬೇಕು.. ಅಮ್ಮಾಜಿ ಮನೆ ಕೊಟ್ಟಿದ್ದಾರೆ ಕೆಲಸ ಕೊಟ್ಟಿದ್ದಾರೆ.. ನಮಗೆ ಬದುಕಲು ಒಂದು ಆಧಾರ ಕಲ್ಪಿಸಿದ್ದಾರೆ ಇನ್ನೇನು ಬೇಕು..
ಇದೀಗ ಹುಡುಗನ ಕಡೆಯವರನ್ನು ಕರೆದುಕೊಂಡು ಬಂದೆ.. ನಿನಗೆ ಅವರು ಇಷ್ಟ ಇಲ್ಲ ಸರಿ ಅದಕ್ಕೆ ಯಾಕೆ ಇಷ್ಟೆಲ್ಲ ತಲೆ ಕೆಡಿಸಿಕೊಂಡೂ ಇದ್ದೀಯಾ ಎಂದೆಲ್ಲ ಹೇಳುತ್ತ ಪೂರ್ವಿ ಮನಸನ್ನು ಬದಲಾಯಿಸಲು ನೋಡುತ್ತಾರೆ ಆಕೆಯ ತಂದೆ.. ಬಾ ಪೂರ್ವಿ ನಮ್ಮ ಮನೆಗೆ ಹೋಗೋಣ ನನ್ನ ಮಾತು ಕೇಳು ಮಗಳೆ ಎಂದು ಬಹಳ ಬೇಸರದಿಂದ ಹೇಳುತ್ತಾರೆ.. ಆದರೆ ಪೂರ್ವಿ ಅಮ್ಮಾಜಿ ಪಾಶದಲ್ಲಿ ಸಿಲುಕಿಕೊಂಡು ಇದ್ದಾಳೆ.. ಅಮ್ಮಾಜಿ ತೋರಿರುವ ಪ್ರೀತಿ ಬಹಳ ಆಕೆಯನ್ನು ಕಾಡುತ್ತಾ ಇರುತ್ತದೆ..
ಇನ್ನು ತಂದೆಯ ಮಾತಿಗೆ ಎನು ಹೇಳಬೇಕು ಎಂದು ತಿಳಿಯದೇ ದಿಕ್ಕೇ ತೋಚದಂತಾಗಿದೆ ಪೂರ್ವಿಗೇ... ನಂದನ್ ಮಾತ್ರ ಪೂರ್ವಿಯನ್ನೂ ಆಕೆಯ ತಂದೆಯೊಂದಿಗೆ ಗೆ ಕಳುಹಿಸಲು ರೆಡಿ ಇರುತ್ತಾನೆ.. ಇನ್ನೂ ಪೂರ್ವಿ ಕುತ್ತಿಗೆಯಿಂದ ತಾಳಿ ತೆಗೆದು ಪದ್ಮಿನಿ ಕುತ್ತಿಗೆಗೆ ತಾಳಿ ಕಟ್ಟುವುದು ಒಂದೇ ಬಾಕಿ ಇದಕ್ಕೆ ಪೂರ್ವಿ ಒಪ್ಪುತ್ತಾಳ ಎನ್ನುವುದೇ ದೊಡ್ಡ ಪ್ರಶ್ನೆ ಆಗಿದೆ.


Click it and Unblock the Notifications











