Punyavati: ನಂದನ್ - ಪದ್ಮಿನಿ ದಾಂಪತ್ಯದ ಮೇಲೆ ಅಮ್ಮಾಜಿ ಕಣ್ಣು; ನಂದನ್ ಮಾತಿಗೆ ಕಳವಳಗೊಂಡ ಪೂರ್ವಿ

By Poorva

ಪುಣ್ಯವತಿ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಪೂರ್ವಿ ಮನಸ್ಸನ್ನು ಬದಲಾಯಿಸಿಕೊಂಡಿದ್ದಾರೆ. ಅದಕ್ಕೆ ಅಮ್ಮಜಿ ಸಪೋರ್ಟ್ ಬೇರೆ. ಪೂರ್ವಿ ಗೆ ಇದೀಗ ನಂದನ್ ಮೇಲೆ ಪೂರ್ವಿಗೆ ಮನಸ್ಸಾಗಿದೆ.. ಆದರೆ ಪದ್ಮಿನಿ ಕೂಡ ನಂದನ್ ಮೇಲೆ ಪ್ರಾಣ ನಾ ಇಟ್ಟುಕೊಂಡು ಇದ್ದಾಳೆ. ಇಬ್ಬರು ಬಹಳ ಅನ್ಯೋನ್ಯವಾಗಿ ಇದ್ದಾರೆ ಕೂಡ .

ಆದರೆ ಪೂರ್ವಿ ಮಾತ್ರ ಒದ್ದಾಡುತ್ತಾ ಇದ್ದಾಳೆ. ನಂದನ್ ಯಾವತ್ತಿದ್ದರೂ ನನ್ನವನೆ ಆತನನ್ನು ಯಾರಿಗೆ ಕೂಡ ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತ ಇರುತ್ತಾಳೆ. ಆದರೆ ನನಗೆ ಆತ ತಾಳಿ ಕಟ್ಟಿರುವುದು.. ಮೊದಲೆಲ್ಲ ಪದ್ಮಿನಿ ಪೂರ್ವಿ ನೀನೇ ಅವರ ಜೊತೆ ಸಂಸಾರ ನಡೆಸಬೇಕು.. ನನ್ನ ಕೈಯಿಂದ ಮಾತ್ರ ಅದೆಲ್ಲ ಸಾಧ್ಯ ಇಲ್ಲ ಎಂದ ಪದ್ಮಿನಿ ಇದೀಗ ನಂದನ್ ಪ್ರೀತಿಯಲ್ಲಿ ಸಿಕ್ಕಿ ಹಾಕಿಕೊಂಡು ಇದ್ದಾಳೆ..

kannada-serial-punyavati

ಆದರೆ ಪೂರ್ವಿ ಗೆ ಮಾತ್ರ ಇದು ಬಹಳ ಕೋಪ ತರಿಸಿದೆ. ನಂದನ್ ಪದ್ಮಿನಿಯನ್ನು ಬಹಳ ಪ್ರೀತಿ ಮಾಡುತ್ತಾನೆ.. ಆದರೆ ಇದನ್ನು ಅಮ್ಮಾಜಿ ಗೆ ಆಗಲಿ ಪೂರ್ವಿ ಗೆ ಆಗಲಿ ತಡೆದುಕೊಳ್ಳಲು ಆಗುತ್ತಿಲ್ಲ...ಇನ್ನೂ ಪೂರ್ವಿ ಬಳಿ ಮಾತನಾಡಲು ಪದ್ಮಿನಿ ಬಂದಾಗ ಪದ್ಮಿನಿ ಗೆ ಜೋರಾಗಿ ಗದರಿದ ಆಮ್ಮಾಜಿ ನಡೆ ನೋಡಿ ಪದ್ಮಿನಿ ಗೆ ದಿಕ್ಕೇ ತೋಚದೇ ಹಾಗೆ ಆಗಿದೆ.

ತನ್ನ ತಂಗಿಯ ಜೊತೆ ಮಾತನಾಡಳು ಇಷ್ಟೆಲ್ಲ ಸಮಯ ತೆಗೆದುಕೊಳ್ಳಬೇಕಾ .. ಹಾಗೆಯೇ ಬೇರೆಯವರ ಜೊತೆ ಪರ್ಮಿಷನ್ ತೆಗೆದುಕೊಳ್ಳಬೇಕಾ ಎಂಬುವುದು ಆಕೆಯ ಮನದಲ್ಲಿ ಮೂಡಿರುವ ಪ್ರಶ್ನೆ ಆಗಿದೆ.. ಇನ್ನೂ ನಂದನ್ ಮಳೆಯಲ್ಲಿ ನೆನೆದುಕೊಂಡು ಮನೆಗೆ ಬರುತ್ತಾನೆ.. ಅದನ್ನು ನೋಡಿದ ಪದ್ಮಿನಿ ಮಾತ್ರ ಬಹಳ ಕೋಪ ಮಾಡಿಕೊಂಡು ಇರುತ್ತಾಳೆ.. ಮಳೆಯಲ್ಲಿ ನೀವು ನೆನೆದುಕೊಂಡು ಬಂದು ನಿಮಗೆ ಏನಾದರು ಆದರೆ ನಾನೇನು ಮಾಡುವುದು ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ..

ಇದನ್ನು ನೋಡಿದ ನಂದನ್ ಗೆ ಬಹಳ ಖುಷಿ ಆಗುತ್ತಿತ್ತು.. ಸದ್ಯ ನನ್ನ ಹೆಂಡತಿಗೆ ಈಗಲಾದರೂ ನನ್ನ ಮೇಲೆ ಕೊಂಚ ಪ್ರೀತಿ ಬಂತಲ್ಲ.. ಮುಂಚೆ ಎಲ್ಲಾ ನನ್ನ ಕಂಡರೆ ಉರಿದು ಬಿಲುತ್ತಿದ್ದರು . ಆದರೆ ಇದೀಗ ನನ್ನ ಕಂಡರೆ ಅದೆಷ್ಟು ಪ್ರೀತಿ.. ಆದಷ್ಟು ಬೇಗ ಪೂರ್ವಿ ಕತ್ತಲ್ಲಿ ಇರುವ ತಾಳಿಯನ್ನು ಪದ್ಮಿನಿ ಕೊರಳಿಗೆ ಕಟ್ಟಿ ಬಿಡಬೇಕು..

ನಮ್ಮ ಸುಮಧುರವಾದ ದಾಂಪತ್ಯವನ್ನೂ ಶುರು ಮಾಡಬೇಕು ಎಂದೆಲ್ಲ ಮನದಲ್ಲಿ ಹೇಳುತ್ತ ಇರುತ್ತಾನೆ.. ಇನ್ನೂ ಪದ್ಮಿನಿ ಗೆ ಕೂಡ ಆದೆ ಆಸೆ.. ಆದರೆ ಪೂರ್ವಿ ಗೆ ಮಾತ್ರ ತನ್ನ ಅಕ್ಕ ಬದಲಾಗಿದ್ದಾಳ ಎಂಬುವುದೇ ಬಹು ದೊಡ್ಡ ಸಂಶಯ..

ಕಾಲೇಜಿನಿಂದ ಬಂದ ಕೂಡಲೇ ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡು ಯೋಚನೆ ಮಾಡುತ್ತಾ ಇರುತ್ತಾಳೆ.. ಇದನ್ನೆಲ್ಲ ಕಂಡ ಅಮ್ಮಜೀ ಯಾಕೆ ಪೂರ್ವಿ ಹೀಗೆಲ್ಲ ನಡೆದುಕೊಂಡು ಇದ್ದಾಳೆ ಏನಾಯಿತು ಎಂದು ಯೋಚನೆ ಮಾಡುತ್ತಾ ಇದ್ದಾರೆ ಪೂರ್ವಿ ಮಾತ್ರ ಅಕ್ಕನ ಬಳಿ ಈ ಬಗ್ಗೆ ಮಾತನಾಡಲೇ ಬೇಕು ಎಂದು ಆಲೋಚನೆಯಲ್ಲಿ ತೊಡಗಿ ಇರುತ್ತಾಳೆ

More from Filmibeat

English summary
Kannada serial Punyavati written update on 22nd August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X