Punyavathi: ಪೂರ್ವಿ ಕರಾಳ ಮುಖ ಮನೆಯವರ ಮುಂದೆ ಬಯಲು, ಮನೆಯಿಂದ ಹೊರಹಾಕಲು ಮುಂದಾದ ಅಮ್ಮಾಜಿ!

By Poorva

ಪುಣ್ಯವತಿ ಧಾರಾವಾಹಿ ಇದೀಗ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರಿಗೆ ಬಹಳ ಖುಷಿ ನೀಡಿದೆ.ಯಾವತ್ತೂ ತಪ್ಪೇ ಮಾಡದ ಪದ್ಮಿನಿ ಸಿಕ್ಕಿ ಬೀಳುತ್ತಿದ್ದಳು. ಆದರೆ ಇದೀಗ ಗೊಂಬೆ ದೆಸೆಯಿಂದ ಪೂರ್ವಿ ಬಂಡವಾಳ ಹೊರ ಬಿದ್ದಿದೆ. ಅಮ್ಮಾಜಿ ಕೊನೆಗೂ ಪದ್ಮಿನಿಯನ್ನು ಈ ಮನೆಯ ಸೊಸೆ ಎಂದು ಒಪ್ಪಿಕೊಂಡಿದ್ದಾರೆ.

ಪೂರ್ವಿಗೆ ಅಕ್ಕನ ಜೀವನಕ್ಕಿಂತ ಹಣ ಆಸ್ತಿಯ ಮೇಲೆ ಮೋಹ ಬೆಳೆದು ಹೋಗಿತ್ತು. ನಂದನ್ ನನಗೆ ತಾಳಿ ಕಟ್ಟಿದ್ದಾರೆ. ಇನ್ನೂ ಮುಂದೆ ಯಾರಿಂದಲೂ ಎನು ಮಾಡಲು ಆಗುವುದು ಇಲ್ಲ ಎಂದು ಪೂರ್ವಿ ಮನಸ್ಥಿತಿ. ಆದರೆ ಅದೆಲ್ಲವೂ ಇದೀಗ ಅಮ್ಮಾಜಿಗೆ ತಿಳಿದು ಹೋಗಿದೆ. ಎನು ಮಾಡುವುದು ಎಂದು ತಿಳಿಯದೇ ಪೂರ್ವಿ ಕಂಗಾಲಾಗಿದ್ದಾಳೆ.

kannada-serial-punyavati

ಹೌದು ಪೂರ್ವಿ ಬಂಡವಾಳ ಮನೆಯವರ ಮುಂದೆಯೇ ಕಳಚಿ ಬಿದ್ದಿದೆ. ಆದರೆ ನಂದನ್‌ಗೆ ಇದನ್ನು ನಂಬಲು ಕೂಡ ಆಗುತ್ತಿಲ್ಲ. ಪೂರ್ವಿ ಈ ಕೆಲಸ ಮಾಡಲು ಸಾಧ್ಯನಾ ಎಂದು ಶಾಕ್ ಆಗಿದ್ದಾರೆ. ಪದ್ಮಿನೀ ಮಾತ್ರ ಬಹಳ ಶಾಕ್ ಆಗುತ್ತಾಳೆ. ಎನು ಮಾಡುವುದು ಎಂದು ತಿಳಿಯದೇ ಸುಮ್ಮನೆ ನಿಂತುಕೊಂಡಿದ್ದಾಳೆ.

ಪಾತ್ರ ಓದಿದ ಪದ್ಮಿನಿ ಶಾಕ್

ಅಮ್ಮಾಜಿ ಪದ್ಮಿನಿಗೆ ಒಂದು ಪತ್ರ ಕೊಟ್ಟು ಓದು ಇದರಲ್ಲೇ ನಿನಗೆ ನಿನ್ನ ತಂಗಿ ಎನು ತಪ್ಪು ಮಾಡಿದ್ದಾಳೆ ಎನ್ನುವ ಎಲ್ಲಾ ವಿವರ ಸಿಗುತ್ತದೆ ಎಂದೆಲ್ಲ ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಆಕೆ ಆ ಪತ್ರವನ್ನು ಓದುತ್ತಾರೆ. ಇನ್ನೂ ಪೂರ್ವಿ ಮಾತ್ರ ಜೋರಾಗಿ ನಾನು ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತೇನೆ. ನನಗೆ ಇಷ್ಟೆಲ್ಲ ಅನ್ಯಾಯ ಆಗುತ್ತಿದೆ ಮಾಡದೇ ತಪ್ಪಿಗೆ ಹೀಗೆಲ್ಲ ಅನ್ನಿಸಿಕೊಂಡ ಇರಬೇಕು ಎಂದೆಲ್ಲ ಹೇಳಿದಾಗ ಮನೆ ಮಂದಿಗೆ ಶಾಕ್ ಆಗುತ್ತದೆ.

kannada-serial-punyavati

ಪೂರ್ವಿ ಮಾತಿಗೆ ಅವಕ್ಕಾದ ಪದ್ಮಿನಿ

ಅದಾಗಲೇ ನೀನು ಈಗಾಗಲೇ ಕಂಪ್ಲೇಂಟ್ ಕೊಡುವ ಮಟ್ಟಕ್ಕೆ ಬೆಳೆದು ಬಿಟ್ಟೆಯಾ ಎಂದೆಲ್ಲ ಅಮ್ಮಾಜಿ ಹೇಳಿ, ಹಾಗಾದರೆ ಕೊಡು ಕಂಪ್ಲೇಂಟ್ ನಾನು ನೋಡಿಕೊಳ್ಳುತ್ತೇನೆ.. ಇನ್ನೂ ಮುಂದೆ ಈ ಮನೆಯ ಸೊಸೆ ಪದ್ಮಿನಿ.. ಪದ್ಮಿನೀ ಒಳ್ಳೆತನ ಗುರುತಿಸದೇ ಆಕೆಯನ್ನು ನಾನು ನೋಯಿಸಿ ಬಿಟ್ಟೆ.. ಎಂದೆಲ್ಲ ಹೇಳಿ ನೊಂದುಕೊಂಡಿದ್ದಾರೆ.

ಪೂರ್ವಿಯನ್ನು ಮನೆಯಿಂದ ಹೊರ ಹಾಕದಂತೆ ತಡೆದ ಪದ್ಮಿನಿ

ನನ್ನ ನಂತರ ಈ ಮನೆಯನ್ನು ಪದ್ಮಿನಿ ನೋಡಿಕೊಳ್ಳುತ್ತಾಳೆ. ಇನ್ನೂ ನನ್ನ ಮನೆಯ ಸೊಸೆ ಪದ್ಮಿನಿ ಎಂದು ಅಮ್ಮಾಜ್ಜಿ ಹೇಳುತ್ತಾರೆ.. ಇದನ್ನು ಕೇಳಿಸಿಕೊಂಡ ಪೂರ್ವಿಗೆ ಕೋಪದಿಂದ ಅಳು ಕೂಡ ಬರುತ್ತದೆ . ಹಾಗೆಯೇ ನಂದನ್ ಅಣ್ಣ ಪೂರ್ವಿಯನ್ನು ಮನೆಯಿಂದ ಹೊರಗಡೆ ಹಾಕಲು ನೋಡುತ್ತಾನೆ. ಅಮ್ಮಾ ಜಿ ಕೂಡ ಅದೇ ಆಜ್ಞೆ ಮಾಡುತ್ತಾರೆ ಇನ್ನೂ ಮೇಲೆ ಪೂರ್ವಿ ಮನೆಯಲ್ಲಿ ಇರುವುದು ಬೇಡ ಎಂದು ಹೇಳಿದಾಗ ಪದ್ಮಿನಿ ಪೂರ್ವಿಗೆ ಒಂದು ಚಾನ್ಸ್ ಕೊಡಿ ಎಂದು ಅಂಗಲಾಚಿ ಬೇಡುತ್ತಾಳೆ. ಆದರೆ ಅದ್ಯಾವುದಕ್ಕೂ ಕ್ಯಾರೆ ಎನ್ನದ ಅಮ್ಮಾಜಿ ಮಾತ್ರ ಪೂರ್ವಿಯನ್ನೂ ಮನೆಯಿಂದ ಹೊರಹಾಕಲು ನೋಡುತ್ತಾರೆ.

More from Filmibeat

English summary
Kannada serial punyavati written updated on 06th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X