Punyavathi: ಪದ್ಮಿನಿ ಬರೆದ ಪತ್ರ ಓದಿದ ನಂದನ್: ಸತ್ಯ ತಿಳಿದ ಆತ ಮುಂದೇನು ಮಾಡುತ್ತಾನೆ?
'ಪುಣ್ಯವತಿ' ಧಾರವಾಹಿ ವೀಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ನಂದನ್, ಪದ್ಮಿನಿ ಮೇಲೆ ಬಹಳ ಕೋಪ ಮಾಡಿಕೊಂಡು ಇರುತ್ತಾನೆ. ಆಕೆಯನ್ನು ಮನೆ ಬಿಟ್ಟು ಹೋಗು ಎನ್ನುವವರೆಗೆ ನಂದನ್, ಪದ್ಮಿನಿ ಬಳಿ ರೇಗಾಡುತ್ತಿದ್ದಾನೆ. ಇದನ್ನು ನೋಡಿದ ಪದ್ಮಿನಿ ಮನೆಯಿಂದ ಹೊರಗೆ ಬರುತ್ತಾಳೆ. ಆಕೆ ರಸ್ತೆಯಲ್ಲಿ ನಡೆದುಕೊಂಡು ಸಾಗುತ್ತಾ ಇರುವಾಗ ಅವಳಷ್ಟಕ್ಕೆ ಅವಳು ಮನಸ್ಸಿನಲ್ಲಿ ಮಾತನಾಡುತ್ತಿರುತ್ತಾಳೆ.
ನಂದನ್ ಅವರೇ ನನ್ನಿಂದ ಆಗಿ ಜೀವನ ಹಾಳಾಗಿ ಹೋದ ಜೀವನವನ್ನು ನಾನೇ ಸರಿ ಮಾಡುತ್ತೇನೆ. ನಂದನ್ ಅವರು ನನ್ನ ಮನೆಯಿಂದ ಹೊರ ಹೋಗಲಿ ಎಂದು ಹೇಳಲಿ, ಆದರೆ ನಾನು ಅವರ ಜೀವನ ಸರಿ ಮಾಡದೇ ಮನೆ ಬಿಟ್ಟು ಹೋಗುವ ಮಾತೇ ಇಲ್ಲ ಎಂದು ಸಂಕಲ್ಪ ಮಾಡಿದ್ದಾಳೆ.

ಪೂರ್ವಿ ಹಾಗೂ ನಂದನ್‌ನನ್ನು ಒಂದು ಮಾಡಿ ಅವರಿಬ್ಬರ ಜೀವನವನ್ನು ಸರಿ ಮಾಡಿದ ಬಳಿಕ ನಾನು ಮನೆಯಿಂದ ಹೊರ ಹೋಗುತ್ತೇನೆ ಎಂದು ಮನದಲ್ಲಿ ಅಂದುಕೊಂಡು ರಸ್ತೆಯುದ್ದಕ್ಕೂ ನಡೆಯುತ್ತಾ ಹೋಗುತ್ತಾ ಇರುತ್ತಾಳೆ. ಇನ್ನು ಪೂರ್ವಿ ಮಾತ್ರ ಅಕ್ಕ ಹಾಗೂ ನಂದನ್‌ನ ಒಂದು ಮಾಡಲೇಬೇಕು ಎಂದು ಪಣತೊಟ್ಟರು ಇ,ತ್ತ ಅಕ್ಕ ಕೂಡ ಅದೇ ಯೋಚನೆ ಮಾಡುತ್ತಾ ಇರುತ್ತಾಳೆ.
ನಂದನ್ ಕೈಸೇರಿದ ಪತ್ರ
ನಂದನ್‌ಗೆ ಪದ್ಮಿನಿ ಇಷ್ಟರವರೆಗೆ ಹೇಳಲು ಹೊರಟ ಸತ್ಯ ಮಾತ್ರ ಇದೀಗ ತಿಳಿದು ಹೋಗಿದೆ. ಹೌದು ಪದ್ಮಿನಿ ಮದುವೆಗೂ ಮುಂಚೆ ನಂದನ್ ಬಳಿ ಡಾನ್ಸ್ ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ, ಎನ್ನುವ ಪತ್ರ ಮಾತ್ರ ನಂದನ್ ಕೈ ಸೇರಿದೆ. ಇದೀಗ ನಂದನ್ ಈ ಪತ್ರವೊಂದನ್ನು ಎತ್ತಿಕೊಂಡು ಓದುತ್ತಾನೆ. ಆ ಪತ್ರದಲ್ಲಿ ಪದ್ಮಿನಿ ತಾನು ಡಾನ್ಸ್ ಕಾರ್ಯಕ್ರಮಕ್ಕೆ ಹೋಗುವುದನ್ನು ಆ ಪತ್ರದಲ್ಲಿ ತಿಳಿಸುತ್ತಾಳೆ ಕೂಡ.

ಹಳೆಯದನ್ನು ನೆನೆದ ನಂದನ್ಸ
ಪತ್ರ ಓದಿದ ನಂದನ್ ಮನದಲ್ಲಿ ಅಂದುಕೊಳ್ಳುತ್ತಾನೆ. ಪದ್ಮಿನಿ ಈ ವಿಚಾರವನ್ನು ನನ್ನ ಬಳಿ ಹೇಳಲು ಹೊರಟಿದ್ದದಾ? ಹಾಗಾದರೆ ನಾನೇ ಆಕೆಯನ್ನು ಅರ್ಥ ಮಾಡಿಕೊಳ್ಳದೇ ಹೊಡೆದೆನಾ ಎಂದು ಮದುವೆಯ ದಿನದಲ್ಲಿ ಆದ ಘಟನೆಯನ್ನು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಪದ್ಮಿನಿ ಮಾತ್ರ ನಂದನ್ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾಳೆ.
ನಂದನ್‌ಗೆ ಬಿಸಿ ತುಪ್ಪವಾದ ಪೂರ್ವಿ
ಇನ್ನು ನಂದನ್ ಗೆ ಮಾತ್ರ ಪೂರ್ವಿ ಬಿಸಿ ತುಪ್ಪದ ಹಾಗೆ ಆಗಿದ್ದಾಳೆ ಇತ್ತ ನುಂಗಲು ಆಗದೆ ಉಗುಳಲು ಆಗದೆ ಬಹಳ ನೋವು ಅನುಭವಿಸುತ್ತಾ ಇದ್ದಾನೆ. ನಂದನ್ ಗೆ ಪದ್ಮಿನಿ ಮೇಲೆ ಬಹಳ ಪ್ರೀತಿ ಆಕೆಯನ್ನು ಬಿಟ್ಟು ಒಂದು ಕ್ಷಣ ಇಲ್ಲದವನು ಇದೀಗ ಆಕೆಯ ಮೇಲೆ ಮುನಿಸಿಕೊಂಡು ಇದ್ದಾನೆ. ಆದರೆ ಪದ್ಮಿನಿ ಮೇಲೆ ಎಷ್ಟೇ ಪ್ರೀತಿ ಇದ್ದರೂ ಆಕೆ ಮಾಡಿದ ಕೆಲಸಕ್ಕೆ ಆತನಿಗೆ ಬಹಳ ನೋವು ಇದೆ.

ನಂದನ್‌ಗಾಗಿ ಪೂರ್ವಿ ವ್ರತ
ಯಾಕೆಂದರೆ ಆಕೆ ನನ್ನ ಮಡದಿ ಅಲ್ಲ, ಹಾಗೆಯೇ ಆಕೆ ನನ್ನ ಸ್ನೇಹಿತೆಯ ಅಲ್ಲ. ಇಷ್ಟಕ್ಕೂ ಪದ್ಮಿನಿ ನನಗೆ ಏನು ಎಂದು ಆತನಿಗೆ ಆತನೇ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾ ಇರುತ್ತಾನೆ. ಇನ್ನು ಪೂರ್ವಿ, ನಂದನ್‌ಗಾಗಿ ವೃತ ಆಚರಣೆ ಮಾಡಲು ಹೋಗುತ್ತಾಳೆ . ಆದರೆ ನಂದನ್ ಮಾತ್ರ ಪೂರ್ವಿಯನ್ನು ತಲೆ ಎತ್ತಿ ನೋಡುತ್ತಿಲ್ಲ.
ಯಾಕೆಂದರೆ ಪೂರ್ವಿ ಆತನ ಮನದಲ್ಲಿ ಇಲ್ಲದ ಕಾರಣ ಆಕೆಗೆ ತಾಳಿ ಕಟ್ಟಿದ ವಿಚಾರ ಗೊತ್ತಾದರೂ ಆತ ಮಾತ್ರ ಪೂರ್ವಿಯನ್ನು ಹೆಂಡತಿ ಎಂದು ಒಪ್ಪಿಕೊಳ್ಳಲು ತಯಾರಿಲ್ಲ ಕೂಡ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications