Punyavathi: ಪದ್ಮಿನಿಯನ್ನು ಮನೆ ತುಂಬಿಸಿಕೊಂಡ ಮನೆಮಂದಿ, ಅಕ್ಕನ ಜೊತೆಯೇ ಪೂರ್ವಿ ಡಬಲ್ ಗೇಮ್!

By Poorva

ಪುಣ್ಯವತಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರಿಗೆ ಬಹಳ ಖುಷಿ ನೀಡಿದೆ. ಇದೀಗ ಪೂರ್ವಿ ತನ್ನ ಅಕ್ಕ ಪದ್ಮಿನಿ ಜೊತೆಯೇ ನಾಟಕ ಆಡುತ್ತಾ ಇದ್ದಾಳೆ. ಆದರೆ ಇದ್ಯಾವುದೂ ತಿಳಿಯದ ಪದ್ಮಿನಿ ಮಾತ್ರ ತನ್ನ ತಂಗಿ ನನಗಾಗಿ ಎಷ್ಟೆಲ್ಲ ಮಾಡಿದ್ದಾಳೆ ಎಂದು ಬಹಳ ಬೇಸರ ಮಾಡಿಕೊಂಡಿದ್ದಾಳೆ.

ಇನ್ನೂ ಇದಕ್ಕಿಂತ ಮುಂಚಿತವಾಗಿ ಪದ್ಮಿನಿ ಮನೆಗೆ ಬರೋದೇ ಬೇಡ . ನಂದನ್ ಪೂರ್ವಿ ಜೊತೆ ಬದುಕುವುದೇ ಸರಿ. ಪದ್ಮಿನಿ ಜೊತೆ ಬದುಕಿದರೆ ಅದು ಪೂರ್ವಿಗೆ ಮೋಸ ಮಾಡಿದ ಹಾಗೆ ಎಂದೆಲ್ಲ ಅಮ್ಮಾಜಿ ಹೇಳುವಾಗ ನಂದನ್ ಗೆ ಏನು ಹೇಳಬೇಕು ತಿಳಿಯದೇ ಅಮ್ಮಾಜಿ ಕಾಲಿಗೆ ಬೀಳುತ್ತಾಳೆ.

ಇದನ್ನು ನೋಡಿದ ಅಮ್ಮಾಜಿ ಮಾತ್ರ ಎನು ಹೇಳದೆ ಸುಮ್ಮನೆ ಇರುತ್ತಾರೆ. ಆದರೆ ಪದ್ಮಿನಿಗೆ ನೋವು ಆಗುತ್ತಾ ಇರುವುದನ್ನು ನೋಡಿ ಪೂರ್ವಿ ಎಂಜಾಯ್ ಮಾಡುತ್ತಾಳೆ. ಅಕ್ಕನ ನೆಮ್ಮದಿ ಹೇಗಾದರೂ ಮಾಡಿ ಕೆಡಿಸಲೇಬೇಕು. ನಂದನ್ ನನ್ನವನು ಆಗಲೇ ಬೇಕು ಎಂಬುವುದು ಪೂರ್ವಿಯ ಬಹು ದೊಡ್ಡ ಆಸೆ.

kannada-serial-punyavati

ಅಮ್ಮಾಜಿ ಕಾಲಿಗೆ ಬಿದ್ದ ನಂದನ್

ಆಕೆಗೆ ತನ್ನ ಅಕ್ಕನ ಬದುಕು ಸರಿ ಮಾಡುವುದಕ್ಕಿಂತ ಅದನ್ನು ಮುರಿದು ಹಾಕುವುದರಲ್ಲಿ ಬಹಳ ಸಂತೋಷ ಇದೆ ಎಂದು ಎಲ್ಲರಿಗೆ ಕೂಡ ತಿಳಿಯುವಂತೆ ಇತ್ತು.. ಆದರೂ ಮೇಲಿನ ನೋಟಕ್ಕೆ ಅಕ್ಕನನ್ನು ಮನೆಯ ಒಳಗೆ ಸೇರಿಸಿಕೊಳ್ಳಿ ಎಂದು ಬೇಡಿಕೊಳ್ಳುತ್ತಾರೆ. ಆದರೂ ಆಕೆಯ ಮನಸ್ಸು ಕರಗದೆ ಇರುವುದನ್ನು ನೋಡಿದ ನಂದನ್ ಅಮ್ಮಾಜಿ ಕಾಲಿಗೆ ಬಿದ್ದು ಪದ್ಮಿನಿ ಈಗಾಗಲೇ ಸಾಕಷ್ಟು ನೋವು ಅನುಭವಿಸಿದ್ದಾರೆ ಎಂದಿದ್ದಾನೆ.

ಪದ್ಮಿನಿ ಪರವಾಗಿ ಮಾತನಾಡಿದ ನಂದನ್

ಪದ್ಮಿನಿಗೆ ಇನ್ನೂ ನೋವು ಕೊಡಬೇಡಿ ಎಂದಾಗ ಮನೆಯವರೆಲ್ಲರೂ ಪದ್ಮಿನಿ ಪರವಾಗಿ ಮಾತನಾಡುತ್ತಾರೆ. ಪೂರ್ವಿ ಅಮ್ಮಾಜಿ ಬಳಿ ಬಹಳ ರಿಕ್ವೆಸ್ಟ್ ಮಾಡುತ್ತಾಳೆ. ಆ ಬಳಿಕ ಒಪ್ಪಿಕೊಂಡ ಅಮ್ಮಾಜಿ ಪದ್ಮಿನಿಯನ್ನು ಮನೆ ತುಂಬಿಸಿಕೊಳ್ಳಲು ಒಪ್ಪಿಕೊಂಡು ಬಿಡುತ್ತಾಳೆ.

kannada-serial-punyavati

ಪದ್ಮಿನಿ ಸುಖಕ್ಕೆ ಅಡ್ಡಿ ಆಗುತ್ತಿರುವ ಪೂರ್ವಿ, ಮನೆಯ ಒಳಗೆ ಬರುತ್ತಾ ಇದ್ದ ಹಾಗೆಯೇ ಪೂರ್ವಿಯನ್ನು ಬಾಚಿ ತಬ್ಬಿಕೊಂಡು ಬಿಡುತ್ತಾಳೆ ಪದ್ಮಿನಿ. ಆದರೆ ಪೂರ್ವಿ ನಾಟಕ ಪದ್ಮಿನಿಗೆ ಇನ್ನೂ ತಿಳಿದಿಲ್ಲ.. ತನ್ನ ತಂಗಿ ತನಗಾಗಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡು ಇದ್ದಾಳಲ್ಲ ಎಂದು ಬಹಳ ಬೇಸರ ವ್ಯಕ್ತ ಪಡಿಸುತ್ತಾ ಇದ್ದಾಳೆ.

ತಂಗಿ ಜೀವನದ ಬಗ್ಗೆ ಚಿಂತೆಯಲ್ಲಿ ಪದ್ಮಿನಿ

ಪದ್ಮಿನಿ ಮಾತ್ರ ಪೂರ್ವಿ ಗುಣಗಾನ ಮಾಡಿದ್ದೆ ಮಾಡಿದ್ದು .ಆದರೆ ಪೂರ್ವಿ ಆಡುತ್ತಿರುವ ಡಬಲ್ ಗೇಮ್ ಮಾತ್ರ ಯಾರ ಅರಿವಿಗೂ ಬರುತ್ತಿಲ್ಲ. ಅಮ್ಮಾಜಿಗೆ ಪೂರ್ವಿ ಬಹಳ ಒಳ್ಳೆಯವಳು ಎಂದು ಅನ್ನಿಸಿತ್ತು. ಆದರೆ ಪೂರ್ವಿ ಬಹಳ ಕೆಟ್ಟವಳು ಎನ್ನುವುದು ಯಾರಿಗೂ ತಿಳಿದಿಲ್ಲ. ಇದನ್ನು ನೋಡಿದ ಮನೆ ಮಂದಿ ನೀವು ಹೀಗೆಯೇ ಇಬ್ಬರು ಹೀಗೆಯೇ ಇರಿ ಎಂದು ಎಲ್ಲರೂ ಆಶಿಸುತ್ತಾರೆ. ಆದರೆ ಪೂರ್ವಿಗೆ ಮಾತ್ರ ನಂದನ್ ಮೇಲೆಯೇ ಕಣ್ಣು.

ಇನ್ನೂ ಎಲ್ಲರೂ ಮನೆಯ ಒಳಗೆ ಹೋದ ಬಳಿಕ ಪದ್ಮಿನಿ ಒದ್ದ ಸೇರಿಗೆ ವಾಪಸ್ ಅಕ್ಕಿ ಸೇರಿಸಿ ಸೇರು ಒದ್ದು ಪುನಃ ಮನೆಯ ಒಳಗೆ ಬರುತ್ತಾಳೆ ಪೂರ್ವಿ. ಇನ್ನೂ ಪೂರ್ವಿ ಮನದಲ್ಲಿ ಅಂದುಕೊಳ್ಳುತ್ತಾರೆ.. ನೀವು ಯಾರೇ ನನ್ನ ಮನೆ ತುಂಬಿಸಿಕೊಳ್ಳದೆ ಹೋದರು ನಾನೇ ಮನೆ ತುಂಬಿಸಿ ಕೊಳ್ಳುವ ಶಾಸ್ತ್ರ ಮಾಡುತ್ತೇನೆ. ನಾನು ಯಾವತ್ತಿದ್ದರೂ ಈ ಮನೆ ಸೊಸೆ ಎಂದು ಹೇಳುತ್ತಾಳೆ. ಇನ್ನೂ ಪದ್ಮಿನಿ ಪೂರ್ವಿ ಬಳಿ ಬಂದು ಸಮಾಧಾನ ಮಾಡುತ್ತಾಳೆ. ಆದರೆ ಪೂರ್ವಿ ಮಾತ್ರ ಅಕ್ಕನ ವಿರುದ್ದ ಸಂಚು ಮಾಡುತ್ತಿದ್ದಾಳೆ.

More from Filmibeat

English summary
Kannada serial punyavati written updated on 30th September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X