'ಪುಟ್ಟಕ್ಕನ ಮಕ್ಕಳು' ಧಾರವಾಹಿ ನಟ ಪವನ್ ಕುಮಾರ್ ಎಲ್ಲಿಯವರು ಗೊತ್ತಾ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸಹನಾ ಮನಸು ಕದ್ದ ರಾಜ ಮುರಳಿ ಮೇಷ್ಟ್ರು ಇವರ ನಿಜವಾದ ಹೆಸರು ಏನು ಇವರು ಎಲ್ಲಿಯವರು? ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮೇಷ್ಟ್ರು ಪಾತ್ರದಲ್ಲಿ ಸಖತ್ ಆಗಿ ಮಿಂಚುತ್ತಿರುವ ಪವನ್ ಕುಮಾರ್ ಮೂಲತಃ ಮಲೆನಾಡಿನವರು. ಕನ್ನಡದ ನಟ ಪವನ್ ಕುಮಾರ್ ಕಿರುತೆರೆಯಲ್ಲಿ ಮಿಂಚಿದ್ದರು ಬಳಿಕ ಸ್ವಲ್ಪ ಗ್ಯಾಪ್ ತೆಗೆದುಕೊಂಡ ಇವರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟನೆ ಮೂಲಕ ಮತ್ತೆ ನಟನೆಗೆ ವಾಪಸ್ಸಾಗಿದ್ದಾರೆ. ಮೇಷ್ಟ್ರು ಪಾತ್ರದಲ್ಲಿ ಕಾಣಿಸಿ ಕೊಂಡ ಇವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪವನ್ ಕುಮಾರ್‌ಗೆ ಮೊದಲಿನಿಂದೂ ನಟನಾಗಬೇಕು ಎಂಬ ಕನಸಿತ್ತು. ಪವನ್ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಬಣ್ಣದ ಲೋಕದತ್ತ ಮುಖ ಮಾಡಿದರು. ನಟನೆಯನ್ನು ಕರಗತ ಗೊಳಿಸಲು ಪವನ್ ಅಷ್ಟು ಇಷ್ಟು ಕಷ್ಟ ಪಟ್ಟಿಲ್ಲ. ನಟನೆಯನ್ನು ಸರಿಯಾಗಿ ಕಲಿಯಲು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾವನ್ನು ಸೇರಿಕೊಂಡು ತರಬೇತಿ ಪಡೆದುಕೊಂಡಿದ್ದಾರೆ.

ಟೆಂಟ್ ಸಿನಿಮಾ ಶಾಲೆಯ ಮೂಲಕ ಅಭಿನಯವನ್ನು ಕಲಿಯುತ್ತಿದ್ದರು. ಟೆಂಟ್ ಸಿನಿಮಾದಲ್ಲಿ ಸುಮಾರು ನಾಲಕ್ಕು ತಿಂಗಳ ಕಾಲ ಕೆಲಸಮಾಡಿ ಬಳಿಕ ಮಾದಕ ಎಂಬ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿ ಜನ ಮನ ಗೆದ್ದರು. ಬಳಿಕ ಕಿರುತೆರೆಯತ್ತ ತನ್ನ ಪಯಣವನ್ನು ಶುರುಮಾಡಿದರು. ಕಿರುತೆರೆಯಲ್ಲಿ ಮೊದ ಮೊದಲಿಗೆ ಅವಕಾಶಗಳ ಮಹಾಪೂರವೇ ಹರಿದು ಬಂದಿತ್ತು. 'ಪತ್ತೆ ದಾರಿ ಪ್ರತಿಭಾ', 'ನಾ ನಿನ್ನ ಬಿಡಲಾರೆ', 'ಮಹಾಕಾಳಿ' ಹೀಗೆ ಅನೇಕ ಪೌರಾಣಿಕ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ.

ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಪವನ್

ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಪವನ್

ಪವನ್ ಕುಮಾರ್ ಕಿರುತೆರೆಯಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಅನೇಕ ಬಾರಿ ಅವರನ್ನು ಒಂದು ಪಾತ್ರದಿಂದ ತೆಗೆದು ಇನ್ನೊಂದು ಪಾತ್ರ ನೀಡುತ್ತಿದ್ದರು. ಇದರಿಂದ ತೀವ್ರ ಮುಜುಗರ ಆಗುತ್ತಿತ್ತು. ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳದಿದ್ದರೆ ಇನ್ನೊಂದು ದಿನ ಕಂಟಕ ಆದೀತು ಎಂದು ಮನಸಿನಲ್ಲಿ ಅಂದುಕೊಂಡು ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ತಕ್ಕುದಾದ ಅಭಿನಯವನ್ನು ಮಾಡಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಬಳಿಕ ಇವರ ಜೀವನಕ್ಕೆ ತಿರುವನ್ನು ನೀಡಿದ ಧಾರವಾಹಿ ಕಿನ್ನರಿ.

ಅಭಿನಯದಿಂದ ಮೋಡಿ ಮಾಡಿ ಜನ ಮನ ಗೆದ್ದ ನಟ

ಅಭಿನಯದಿಂದ ಮೋಡಿ ಮಾಡಿ ಜನ ಮನ ಗೆದ್ದ ನಟ

ಈ ಧಾರಾವಾಹಿಯಲ್ಲಿ ನಕುಲ್ ಪಾತ್ರದಲ್ಲಿ ಮಿಂಚಿ ಧಾರಾವಾಹಿ ಪ್ರಿಯರಿಗೆ ಇನ್ನೂ ಹತ್ತಿರ ಆದರು. ಬಳಿಕ ಅವರಿಗೆ ಸಾಲು-ಸಾಲು ಧಾರಾವಾಹಿಗಳ ಅವಕಾಶ ಸಿಕ್ಕಿತು. ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಹಾರರ್ ಧಾರಾವಾಹಿಯಲ್ಲಿ ಪತ್ರಕರ್ತ ಬಾಲಾಜಿ ಪಾತ್ರದಲ್ಲಿ ನಟನೆ ಮಾಡಿದರು. ಆಕೃತಿ ಎಂಬ ಧಾರವಾಹಿ ಇದಾಗಿದ್ದು ವೀಕ್ಷಕರಿಗೆ ಇವರ ಅಭಿನಯ ಮನ ಮುಟ್ಟುವಂತಿತ್ತು. ಬಳಿಕ ಪವನ್ 'ಗಟ್ಟಿಮೇಳ' ಧಾರವಾಹಿಯಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಎಂಟ್ರಿ ಕೊಟ್ಟರು.

ಕೊರೊನಾ ಕಾಲದಲ್ಲಿ ತನ್ನವರನ್ನು ಕಳೆದುಕೊಂಡ ಪವನ್

ಕೊರೊನಾ ಕಾಲದಲ್ಲಿ ತನ್ನವರನ್ನು ಕಳೆದುಕೊಂಡ ಪವನ್

ಕೊರೊನಾ ವೈರಸ್​ ಎರಡನೇ ಅಲೆ ಕಾಟಕ್ಕೆ ಇಡೀ ದೇಶವೇ ತತ್ತರಿಸುವಂತಾಗಿತ್ತು. ಸೂಕ್ತ ಚಿಕಿತ್ಸೆ ಸಿಗದೇ ಅದೆಷ್ಟೋ ಜನರ ಸ್ಥಿತಿ ಚಿಂತಾಜನಕ ಆಗಿತ್ತು. ಅದೇಷ್ಟೋ ಜನ ತನ್ನವರನ್ನು ಕಳೆದುಕೊಂಡು ಪರದಾಡುತ್ತಿದ್ದರು. ಆಕ್ಸಿಜನ್​ ಕೊರತೆ ಮತ್ತು ಬೆಡ್​ಗಳ ಕೊರತೆಯಿಂದ ಪರಿಸ್ಥಿತಿ ಚಿಂತಾಜನಕ ಆಗಿತ್ತು. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಟ ಪವನ್​ ಕುಮಾರ್​ ಅವರು ಭಾವ ಮತ್ತು ಭಾವನ ತಂದೆಯನ್ನು ಕೊರೊನಾದಿಂದ ಕಳೆದುಕೊಂಡಿದ್ದರು. ಆ ನೋವಿನಲ್ಲೇ ಒಂದು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಕೂಡ. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೊರೋನಾ ಕಾಲದಲ್ಲಿ ಬಹಳ ಕಷ್ಟ ಪಟ್ಟ ಪವನ್ ಸರ್ಕಾರದ ವಿರುದ್ಧವೆ ಹರಿ ಹಾಯ್ದಿದ್ದರು. ಮನೆ ಮಂದಿಯನ್ನು ಕಳೆದುಕೊಂಡು ದುಃಖ ತಪ್ತರಾಗಿದ್ದರು.

'ಪುಟ್ಟಕ್ಕನ ಮಕ್ಕಳು' ಮೂಲಕ ಕಿರುತೆರೆಗೆ ಮತ್ತೆ ಎಂಟ್ರಿ

'ಪುಟ್ಟಕ್ಕನ ಮಕ್ಕಳು' ಮೂಲಕ ಕಿರುತೆರೆಗೆ ಮತ್ತೆ ಎಂಟ್ರಿ

ಇದರಿಂದ ಕೊಂಚ ಕಾಲ ಬಣ್ಣದ ಲೋಕದಿಂದ ದೂರ ಉಳಿದಿದ್ದ ಪವನ್ ಕುಮಾರ್ 'ಪುಟ್ಟಕ್ಕನ ಮಕ್ಕಳು' ಧಾರವಾಹಿ ಮೂಲಕ ರೀ ಎಂಟ್ರಿ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಹನಾ ಮೇಲೆ ಫುಲ್ ಲವ್ ನಲ್ಲಿ ಇರುವ ಮುರಳಿ ಮೇಷ್ಟ್ರು ಸ್ನೇಹಾ ಬಳಿ ಮದುವೆ ಮಾತುಕತೆ ಬಗ್ಗೆ ಯಾವಾಗ ಮಾತನಾಡುತ್ತಾರೆ ಎಂದೆಲ್ಲ ಯೋಚನೆ ಮಾಡುತ್ತಿದ್ದಾರೆ.

More from Filmibeat

English summary
Kannada serial Puttakkana Makkalu actor Pavan Kumar serial journey. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X