Puttakkana Makkalu: 500 ಸಂಚಿಕೆ ಪೂರೈಸಿದ ಪುಟ್ಟಕ್ಕನ ಮಕ್ಕಳು, ಹೊಸ ಸವಾಲುಗಳನ್ನು ಎದುರಿಸಬೇಕಿದೆ ಪುಟ್ಟಕ್ಕ!
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯುತ್ತಮ ಧಾರಾವಾಹಿಗಳಲ್ಲಿ ಒಂದಾಗಿದೆ. ಜೊತೆ ಜೊತೆಯಲ್ಲಿ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದ ಆರೂರು ಜಗದೀಶ್ ಅವರೇ ಈ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 13, 2021 ರಂದು ಪ್ರಾರಂಭವಾದ ಈ ಧಾರಾವಾಹಿಯು 500 ಸಂಚಿಕೆಗಳನ್ನ ಪೂರ್ಣಗೊಳಿಸಿ ಮುನ್ನುಗುತ್ತಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡು ಟಿಆರ್‌ಪಿಯಲ್ಲೂ ಸಹ ಮುನ್ನುಗ್ಗುವಂತೆ ಮಾಡಿದ್ದಾರೆ.
ಹಿರಿಯ ನಟಿ ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್ ಇವರ ನಟನೆಗೆ ಎಲ್ಲರೂ ಸಹ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಸ್ನೇಹ ಪಾತ್ರದಲ್ಲಿ ಮಾಡಿರುವ ಸಂಜನಾ ಬುರ್ಲಿ, ಕಂಠಿ ಪಾತ್ರಧಾರಿ ಧನುಷ್ ಇವರಿಬ್ಬರ ಆಕ್ಟಿಂಗ್ ಅನ್ನು ಮೆಚ್ಚಿಕೊಂಡಿದ್ದಾರೆ. ಪುಟ್ಟಕ್ಕ ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಆಕೆಯ ಗಂಡ ಬೇರೆ ಮದುವೆಯನ್ನ ಆಗಿ ಪುಟ್ಟಕ್ಕನನ್ನು ದೂರ ಇಟ್ಟಿದ್ದನು. ಈಗ ಪುಟ್ಟಕ್ಕ ತನ್ನೆಲ್ಲಾ ಮಕ್ಕಳನ್ನ ಒಂದು ದಡ ಸೇರಿಸುವಲ್ಲಿ ಯಶಸ್ವಿಯಾಗಿ ನಡೆಯುತ್ತಾ ಇದ್ದಾಳೆ. ಇದರೆಲ್ಲದರ ನಡುವೆ ಹಲವಾರು ಕಷ್ಟಗಳು ಬಂದರೂ ಕೂಡ ಪುಟ್ಟಕ್ಕ ಧೈರ್ಯ ಕಳೆದುಕೊಳ್ಳದೆ ಎದುರಿಸುತ್ತಾ ಇದ್ದಾಳೆ ಇದೆಲ್ಲವೂ ಸಹ ಕಥೆಯ ಸಾರಾಂಶವಾಗಿದೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೀ ತೆಲುಗುನಲ್ಲಿ ಪ್ರಸಾರವಾಗುವ ರಾಧಮ್ಮ ಕುತುರು ರೀಮೇಕ್ ಆಗಿದೆ. ಕನ್ನಡದಲ್ಲಿ ಪುಟ್ಟಕ್ಕನ ಮಕ್ಕಳಾಗಿದೆ. ಆದರೆ ಎಲ್ಲೂ ಸಹ ರಿಮೇಕ್ ಮಾಡಿರುವಂತೆ ಕಾಣುವುದಿಲ್ಲ ಅಷ್ಟು ಚೆನ್ನಾಗಿ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ಸದ್ಯಕ್ಕೆ ಪುಟ್ಟಕ್ಕ ಎರಡು ಮಕ್ಕಳ ಮದುವೆಯನ್ನ ಮಾಡಿ ಮುಗಿಸಿ, ಕೊನೆ ಮಗಳನ್ನು ಓದಿಸುತ್ತಾ ಇದ್ದಾಳೆ. ಅವಳಿಗೂ ಕೂಡ ಒಳ್ಳೆಯ ಭವಿಷ್ಯವನ್ನು ರೂಪಿಸಬೇಕು ಎಂಬುವುದು ಪುಟ್ಟಕ್ಕನ ಮಹಾದಾಸೆಯಾಗಿದೆ. ಮೂವರು ಮಕ್ಕಳು ಕೂಡ ತುಂಬಾ ಚೆನ್ನಾಗಿರಬೇಕು ನಾನು ಪಟ್ಟ ಕಷ್ಟಕ್ಕೆ ಸಾರ್ಥಕತೆ ಸಿಗಬೇಕು ಎಂದು ಪುಟ್ಟಕ್ಕ ಅಂದುಕೊಂಡಿದ್ದಾಳೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ 500 ಸಂಚಿಕೆಯನ್ನು ಪೂರೈಸಿ ಮುನ್ನುಗ್ಗುತ್ತಿದೆ. ಒಂದು ಧಾರಾವಾಹಿ ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳಬೇಕು ಎಂದರೆ ಆ ಧಾರಾವಾಹಿಯ ಕಥೆ ಚೆನ್ನಾಗಿರಬೇಕು. ಇಲ್ಲದಿದ್ದರೆ ಪ್ರೇಕ್ಷಕರು ಯಾವುದನ್ನು ಸಹ ನೋಡುವುದಿಲ್ಲ ಇದೇ ರೀತಿ ಪುಟ್ಟಕ್ಕನ ಮಕ್ಕಳು ಪ್ರೇಕ್ಷಕರ ಮನಸೊರೆಗೊಳಿಸಿದೆ. ಕಂಠಿ ಈಗ ಪುಟ್ಟಕ್ಕನ ಎರಡನೇ ಮಗಳನ್ನು ಮದುವೆಯಾಗಿದ್ದಾನೆ. ಈ ಮೂಲಕ ಪುಟ್ಟಕ್ಕನ ಕಷ್ಟ ಸುಖಕ್ಕೆ ತಾನು ನೆರವಾಗಬೇಕಿದೆ ಎಂದು ಕೊಂಡಿದ್ದಾನೆ. ಇದಕ್ಕಾಗಿ ಎನು ಕೆಲಸಕೊಟ್ಟರು ಮಾಡಲು ಸಿದ್ದನಾಗಿದ್ದಾನೆ.
500 ಸಂಚಿಕೆಗಳನ್ನು ಧಾರಾವಾಹಿ ಪೂರೈಸಿರುವ ಹಿನ್ನೆಲೆಯಲ್ಲಿ ಧಾರಾವಾಹಿ ತಂಡ ತುಂಬಾ ಖುಷಿಯಲ್ಲಿದೆ. ನಂಬರ್ ಒನ್ ಧಾರವಾಹಿಯನ್ನು ಜನರು ಅಪ್ಪಿಕೊಂಡು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ರೀತಿ ಜನರ ಪ್ರೋತ್ಸಾಹ ಇರಲಿ ಎಂದು ಧಾರಾವಾಹಿ ತಂಡ ಜನರ ಬಳಿ ಬೇಡಿಕೊಂಡಿದೆ. ಉಮಾಶ್ರೀ ಅವರ ನಟನೆಯಂತೂ ಈ ಧಾರಾವಾಹಿಯಲ್ಲಿ ನೆಕ್ಸ್ಟ್ ಲೆವೆಲ್‌ಗೆ ಇದೆ ಎಂದು ಪ್ರೇಕ್ಷಕರು ಹೇಳುತ್ತಾ ಇದ್ದಾರೆ. ಕಂಠಿ ಹಾಗೂ ಸ್ನೇಹಾ ನಡುವೆ ಮತ್ತೆ ಪ್ರೀತಿ ಯಾವಾಗ ಚಿಗುರುತ್ತದೆ ಎಂದು ಕಾಯುತ್ತಾ ಇದ್ದಾರೆ.

ಎಂತಹ ತ್ಯಾಗಕ್ಕೂ ಸಿದ್ಧವಾದ ಕಂಠಿ, ಹಿರಿಮಗಳ ಸಂಸಾರವನ್ನು ಸರಿ ಮಾಡ್ತಾಳಾ ಪುಟ್ಟಕ್ಕ?
ಈಗಾಗಲೇ ಧಾರಾವಾಹಿ 500 ಸಂಚಿಕೆಗಳನ್ನ ಪೂರೈಸಿದ್ದು ಕಂಠಿ ಎಂತಹ ತ್ಯಾಗವನ್ನು ಮಾಡಲು ಸಹ ಸಿದ್ದನಾಗಿದ್ದಾನೆ. ಸ್ನೇಹ ಕಣ್ಣಿನಲ್ಲಿ ಒಳ್ಳೆಯವನು ಎಂದು ಅನಿಸಿಕೊಳ್ಳುವದಷ್ಟೇ ಕಂಠಿಯ ಉದ್ದೇಶವಾಗಿದೆ. ಇದಕ್ಕಾಗಿ ಸಾಧ್ಯವಾದಷ್ಟು ಪುಟ್ಟಕ್ಕನಿಗೆ ಸಹಾಯ ಮಾಡಲು ನಿಲ್ಲುತ್ತಾನೆ. ಪುಟ್ಟಕ್ಕ ಹೇಳಿದ್ದನ್ನ ಮಾಡುವುದಷ್ಟೇ ಕಂಠಿಯ ಕೆಲಸವಾಗಿದೆ.
ಇನ್ನು ಪುಟ್ಟಕ್ಕನ ಹಿರಿ ಮಗಳಿಗೆ ಸ್ವಲ್ಪ ಸಮಸ್ಯೆ ಶುರುವಾಗಿದೆ. ತನ್ನ ಅತ್ತೆಯ ಮನೆಯಲ್ಲಿ ಕಿರಿಕಿರಿ ಶುರುವಾಗಿದ್ದು ಪ್ರಾಣವನ್ನೇ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆ. ಪುಟ್ಟಕ್ಕನ ಮೆಸ್‌ಗೂ ಸಹ ಗಂಡಾಂತರ ಬಂದಿದೆ. ಇದೆಲ್ಲವನ್ನ ಪುಟ್ಟಕ್ಕ ಯಾವ ರೀತಿ ಸರಿ ಮಾಡುತ್ತಾಳೆ ಎಂಬುವುದು ಮುಂದಿರುವ ಕುತೂಹಲವಾಗಿದೆ.


Click it and Unblock the Notifications











