Puttakkana Makkalu: ಸ್ನೇಹಾ ಮಾತಿಗೆ ಬಗ್ಗದ ಕಂಠಿ: ಕೊಟ್ಟ ಮಾತಿಗೆ ಬೆಲೆ ಕೊಡದ ಕಂಠಿಗೆ ಉಸ್ತಾದ್ ಶಿಕ್ಷೆ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಚಂದ್ರು ಮಹಾ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಆತನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ಚಂದ್ರುವಿನ ಕೈಯಲ್ಲಿ ಆಗುತ್ತಿಲ್ಲ. ಚಂದ್ರು ಇದೀಗ ವಸು ಬೇಕೆಂದರೆ ಅಮ್ಮನ ಬಳಿಯಿಂದ ದೂರ ಹೋಗಲೇಬೇಕು ಇಲ್ಲವಾದರೆ ವಸು, ಚಂದ್ರು ಒಂದಾಗಲು ಸಾಧ್ಯವೇ ಇಲ್ಲ ಇದಕ್ಕೆ ಬಂಗಾರಮ್ಮ ಬಿಡುವುದು ಕೂಡ ಇಲ್ಲ.
ಚಂದ್ರುಗೆ ವಸು ಫೋನ್ ಮಾಡಿ ಲೌಡ್ ಸ್ಪೀಕರ್‌ನಲ್ಲಿನಿಟ್ಟು ಮಾತನಾಡುತ್ತಾಳೆ. ಆಗ ಅಲ್ಲಿ ಬಂಗಾರಮ್ಮ ಕೂಡ ಇರುತ್ತಾರೆ. ಯಾವಾಗ ನನ್ನ ಕರೆದುಕೊಂಡು ಹೋಗಲು ಬರುತ್ತೀಯಾ ಎಂದು ವಸು, ಚಂದ್ರು ಬಳಿ ಕೇಳಿದಾಗ ಚಂದ್ರು ಹೇಳುತ್ತಾನೆ. ಅಮ್ಮ ಇದೀಗ ಬದಲಾದ ಹಾಗೆ ಕಾಣುತ್ತಿದೆ, ಅಮ್ಮ ಯಾವತ್ತೂ ಯಾರಿಗೂ ಕೆಟ್ಟದನ್ನು ಬಯಸಿಲ್ಲ. ಆದರೆ ನಮ್ಮ ವಿಷಯದಲ್ಲಿ ಅಮ್ಮ ಬಳ ಕೆಟ್ಟದಾಗಿ ನಡೆಸಿಕೊಂಡರು.

ಅಮ್ಮನನ್ನು ದೂರ ತಳ್ಳಲು ಆಗುವುದಿಲ್ಲ. ಅಮ್ಮ ಇದೀಗ ಬದಲಾದಂತೆ ಕಾಣುತ್ತಿದೆ. ಹಾಗಾಗಿ ಅಮ್ಮನೇ ಹೇಳುತ್ತಿದ್ದಾರೆ, ನೀನು ನನ್ನ ಮನೆಗೆ ಬರಬೇಕೆಂದು ಆ ಮಾತು ಹೇಳುತ್ತಿದ್ದ ಹಾಗೆ ಬಂಗಾರಮ್ಮನ ಮೊಗದಲ್ಲಿ ನಗು ಬರುತ್ತದೆ . ವಸುಗೆ ಬಹಳ ಭಯವು ಆಗುತ್ತದೆ. ಏನು ಮಾಡುವುದು ದಿಕ್ಕು ತೋಚದಂತಾಗುತ್ತದೆ. ಚಂದ್ರು ಹೇಳಿದ ಮಾತನ್ನು ವಸು ನೆನಪಿಸುತ್ತಾಳೆ. ನೀನು ಹೇಳಿದ್ದೆ ಅಲ್ಲ ನಿನ್ನ ಅಮ್ಮನನ್ನು ಬಿಟ್ಟು ನನ್ನ ಬಳಿ ಬರುತ್ತೇನೆ ಎಂದು. ಆದರೆ ಇದೀಗ ಯಾಕೆ ಹೀಗೆ ಮಾಡುತ್ತಿದ್ದೀಯ ಎಂದು ಕೇಳಿದಾಗ ಚಂದ್ರು ಶಾಕ್ ಆಗುತ್ತಾನೆ.
ವಸು ನಿಲುವನ್ನು ಪ್ರಶ್ನೆ ಮಾಡಿದ ಚಂದ್ರು
ವಸು ಬಳಿ ಪ್ರಶ್ನೆ ಮಾಡುತ್ತಾನೆ. ನೀನು ನನ್ನ ಅಮ್ಮನಿಂದ ದೂರ ಆಗು ಎಂದು ಹೇಳುತ್ತಿದ್ದೀಯಾ? ಎಂದು ಕೇಳಿದಾಗ ವಸುಗೆ ಮಾತೇ ಹೊರಡದ ಹಾಗೆ ಆಗುತ್ತದೆ. ಇನ್ನು ಕಂಠಿ ಕುಸ್ತಿ ಆಡುವುದು ಸ್ನೇಹಗೆ ಗೊತ್ತಿಲ್ಲ. ಆದರೆ ಉಸ್ತಾದ್ ಕಂಠಿಗೆ ಪದೇ ಪದೇ ಎಚ್ಚರ ನೀಡುತ್ತಿದ್ದಾರೆ. ನೀನು ಕುಸ್ತಿ ಆಡಬೇಕೆಂದರೆ ನಿನ್ನ ಹೆಂಡತಿಯಿಂದ ನೀನು ದೂರ ಇರಲೇಬೇಕು ಇಲ್ಲವಾದರೆ ನಿನ್ನಿಂದ ಕುಸ್ತಿ ಆಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಸ್ನೇಹಾ ಕೈಯಲ್ಲಿ ಸಿಲುಕಿಕೊಂಡ ಕಂಠಿ
ಕಂಠಿ ಉಸ್ತಾದ್ ಮಾತು ಪಾಲಿಸಿದರೂ, ಸ್ನೇಹ ಮಾತ್ರ ಕಂಠಿಯನ್ನು ಬಿಡುವ ಮಾತೇ ಇಲ್ಲ ಎನ್ನುವ ಹಾಗೆ ಆತನ ಹಿಂದೆ ಸುತ್ತುತ್ತಾ ಇರುತ್ತಾಳೆ. ಕಂಠಿ ಅರಳಿ ಕಟ್ಟೆಯ ಸುತ್ತ ಉಸ್ತಾದ್ ಹೇಳಿದ ವ್ಯಾಯಾಮವನ್ನು ಮಾಡುತ್ತಿರುತ್ತಾನೆ. ಆದರೆ ಸ್ನೇಹ ಅಲ್ಲಿಗೆ ಬಂದು ಇದೇನು ಕಂಠಿ ಏನು ಮಾಡುತ್ತಿದ್ದೀಯಾ.? ಇಲ್ಲಿ ನಿನಗೆ ಏನು ಕೆಲಸ ಯಾವ ವ್ಯಾಯಾಮ ಮಾಡುತ್ತಿದ್ದೀಯಾ? ಎಂದೆಲ್ಲ ಕೇಳಿದಾಗ ಕಂಠಿಗೆ ಏನು ಹೇಳಬೇಕೆಂದು ತಿಳಿಯದೇ ಸುಮ್ಮನೆ ಆಗುತ್ತಾನೆ.

ನಿಜ ಹೇಳಲು ಸಾಧ್ಯವಾಗದೇ ಕಂಠಿ ಒದ್ದಾಟ
ಇನ್ನು ಮಾತು ಮರೆಸಲು ಹೋಗಿ ಸ್ನೇಹ ಬಳಿ ಏನೇನು ಸುಳ್ಳುಗಳನ್ನ ಹೇಳಿ ಇದೀಗ ಮತ್ತೆ ಸ್ನೇಹ ಬಳಿ ಸಿಕ್ಕಿ ಹಾಕಿಕೊಂಡು ಕಂಠಿ ಮಾತ್ರ ಬೈಗುಳ ಕೇಳುವ ಎಲ್ಲಾ ಪ್ರಮೇಯ ಎದ್ದು ಕಾಣುತ್ತಿದೆ. ಕಂಠಿ ಬಳಿಗೆ ಸ್ನೇಹ ಬರುವುದನ್ನು ನೋಡಿದ ಉಸ್ತಾದ್ ಮಾತ್ರ ಮನದಲ್ಲಿ ನೆನೆದುಕೊಂಡು ಹೇಳುತ್ತಾನೆ. ಈತನ ಬಳಿ ನಾನು ಹೆಂಡತಿಯಿಂದ ಇಷ್ಟು ದೂರ ಎಂದು ಹೇಳಿದರು, ನನ್ನ ಮಾತನ್ನು ಕೇಳುವುದೇ ಇಲ್ಲ ಎಂದು ಎನ್ನುತ್ತಾನೆ. ಕಂಠಿಯ ಬಳಿಯಿಂದ ಸ್ನೇಹ ಹೋದ ಬಳಿಕ ಕಂಠಿ ಬಳಿಗೆ ಬಂದ ಉಸ್ತಾದ್ ಬುದ್ದಿ ಮಾತು ಹೇಳುತ್ತಾನೆ. ಹಾಗೆಯೇ ಮಾಡಿದ ತಪ್ಪಿಗೆ ಶಿಕ್ಷೆಯನ್ನು ಕೊಡುತ್ತಾನೆ.


Click it and Unblock the Notifications











