ಕಂಠಿ-ಸ್ನೇಹಾ ಪೋಸ್ಟರ್ ವಿಚಾರ ಬಂಗಾರಮ್ಮಗೆ ತಿಳಿದು ಹೋಯಿತು!
ಪುಟ್ಟಕ್ಕ ಹಾಗೂ ಕಂಠಿ ಮಾತನಾಡುತ್ತಾ ಇರುವ ವೇಳೆ ಕಂಠಿ ಪುಟ್ಟಕ್ಕನ ಬಳಿ ಅವ್ವ ನಿಮಗೆ ನನ್ನ ಮೇಲೆ ಏನಾದರು ಸಂಶಯ ಇದೆಯಾ? ಎಂದು ಕೇಳುತ್ತಾನೆ. ಪುಟ್ಟಕ್ಕ ಸ್ವಲ್ಪ ಯೋಚಿಸಿ ಬಳಿಕ, 'ನಿನ್ನ ಮೇಲೆ ನನಗೆ ಸಂಶಯ ಇಲ್ಲ. ಬಾಯಿ ತುಂಬಾ ಅವ್ವ ಎಂದು ಕರೆಯುತ್ತಿದ್ದಿಯಾ ಅದು ಅಲ್ಲದೆ ನನ್ನ ಮೇಲೆ ಪ್ರಮಾಣ ಮಾಡಿದ್ದೀಯಾ. ನೀನು ಇಷ್ಟು ಧೈರ್ಯದಲ್ಲಿ ನನ್ನ ಮುಂದೆ ಮಾತನಾಡಲು ಬರುತ್ತಿರಲಿಲ್ಲ. ಆದರೆ ಸ್ನೇಹಾಗೆ ಇದರಿಂದ ಬಹಳ ಬೇಸರ ಆಗಿದೆ ಅವಳು ಹೇಗೆ ಏನು ಎಂಬುವುದು ನಿನಗೆ ಗೊತ್ತಿದೆ ಅಲ್ವಾ ಎಂದು ಹೇಳುತ್ತಾಳೆ.
ಆಗ ಕಂಠಿ, ಆಕೆ ಬೇಸರದಿಂದ ನನ್ನ ಬಳಿ ಮಾತು ಬಿಡುತ್ತಾಳೆ ಎನ್ನುವ ಆತಂಕ ನನ್ನಲ್ಲಿ ಇದೆ ಎಂದಾಗ ಪುಟ್ಟಕ್ಕ ಆತನ ಆತಂಕವನ್ನು ದೂರ ಮಾಡುತ್ತಾಳೆ. ಬಳಿಕ ಹೇಳುತ್ತಾಳೆ ಈ ಕೆಲಸ ಯಾರು ಮಾಡಿದ್ದಾರೆ ಎಂಬುವುದನ್ನು ಮೊದಲು ಪತ್ತೆ ಹಚ್ಚಬೇಕು ಆಗ ಮಾತ್ರ ಸ್ನೇಹಾ ಸರಿಯಾಗಲು ಸಾಧ್ಯ ಎಂದು ಹೇಳುತ್ತಾಳೆ. ಪುಟ್ಟಕ್ಕ ಬಳಿಕ ಅಲ್ಲಿಂದ ತೆರಳುತ್ತಾಳೆ. ಬಳಿಕ ಕಂಠಿ ಮನದಲ್ಲೇ ಯೋಚನೆ ಮಾಡುತ್ತಾನೆ. ಈ ಊರಿನಲ್ಲಿ ನನಗೆ ಆಗದವರು ಯಾರು ಇದ್ದಾರೆ? ಅವರನ್ನು ಮಾತ್ರ ನಾನು ಖಂಡಿತ ಬಿಡುವುದಿಲ್ಲ. ಯಾಕೆ ಈ ರೀತಿ ಮಾಡಿದ್ದಾರೆ ಇದಕ್ಕೆ ಕಾರಣ ಆದರೂ ಎನು ಎಂಬುವುದನ್ನು ಯೋಚನೆ ಮಾಡುತ್ತಾ ಇರುತ್ತಾನೆ.

ಮೇಷ್ಟ್ರಿಗೆ ಸರಿಯಾದ ಪಾಠ ಕಲಿಸುತ್ತಾಳ ಸ್ನೇಹಾ
ಇತ್ತ ಸುಮಾ ಹಾಗೂ ಪಿಟಿ ಮೇಷ್ಟ್ರಗೆ ವಾಗ್ವಾದ ನಡೆಯುತ್ತಾ ಇರುತ್ತದೆ. ಪೀಟಿ ಮೇಷ್ಟ್ರು ಸುಮಾ ಗಲಾಟೆ ಮಾಡುತ್ತಾ ಇರುತ್ತಾರೆ. ಸುಮಾ ಖೋ-ಖೋ ಆಡಲು ಪ್ರಾಕ್ಟೀಸ್ ಮಾಡಲು ಅವಕಾಶ ಕೊಡದ ಕಾರಣ ಜಗಳ ಮಾಡುತ್ತಾರೆ. ಈ ವೇಳೆ ಸುಮಾ, ನಾವು ಗ್ರೌಂಡ್‌ಗೆ ಹೊಗೆ ಹೋಗುತ್ತೇವೆ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ಸುಮಾ ಹಾಗೂ ಆಕೆಯ ಗೆಳತಿಯರು ಗ್ರೌಂಡ್ ಕಡೆ ಹೋಗುತ್ತಾರೆ. ಇದನ್ನು ನೋಡಿದ ಪೀಟಿ ಮಾಸ್ಟರ್ ಹಿಂದೆಯಿಂದ ಬರುತ್ತಾನೆ ಬಳಿಕ ಸುಮಾಳ ಕೈ ಹಿಡಿದುಕೊಳ್ಳುತ್ತಾನೆ. ಸುಮಾ ಎಷ್ಟೇ ಕೈ ಬಿಡಿ ಎಂದು ಹೇಳಿದರು ಮೇಷ್ಟ್ರು ಮಾತ್ರ ಕೈ ಬಿಡದೆ ಇದ್ದಿದ್ದನ್ನು ಕಂಡು ಆತಂಕ ವ್ಯಕ್ತ ಪಡಿಸುತ್ತಾಳೆ.

ಪುಟ್ಟಕ್ಕನ ಮನೆಗೆ ಬರುವ ರಾಜೇಶ್ವರಿ
ಆ ವೇಳೆ ಅಲ್ಲಿಗೆ ಸ್ನೇಹಾ ಬಂದು ಮೇಷ್ಟ್ರು ಕೈ ಹಿಡಿಯುತ್ತಾಳೆ. ಇತ್ತ ಮಂಜಮ್ಮ ಯಾರು ಇಲ್ಲದನ್ನು ನೋಡಿ ರಾಜೇಶ್ವರಿಗೆ ಕರೆ ಮಾಡುತ್ತಾಳೆ. ಬಳಿಕ ಸ್ನೇಹಾಳ ಪೋಸ್ಟರ್ ಹಾಕಿದ್ದನ್ನು ಹೇಳುತ್ತಾಳೆ ಇದನ್ನು ಕೇಳಿ ರಾಜೇಶ್ವರಿ ಖುಷಿ ಆಗುತ್ತದೆ ಬಳಿಕ ಫೋನ್ ಇಡುತ್ತಾಳೆ. ಪುಟ್ಟಕ್ಕಗೆ ಕರೆ ಮಾಡಬೇಕಾದರೆ ಆಕೆ ಬ್ಲಾಕ್ ಮಾಡಿರುವುದು ಗೊತ್ತಾಗಿ ಇನ್ನೂ ಕೋಪ ಹೆಚ್ಚಾಗುತ್ತದೆ. ಬಳಿಕ ಗಂಡನ ಬಳಿ ಮೊಬೈಲ್ ಕೇಳುತ್ತಾಳೆ ಆದರೆ ಆತನು ಕೊಡುವುದಿಲ್ಲ. ಇದರಿಂದ ಸಿಟ್ಟಿಗೆದ್ದ ರಾಜೇಶ್ವರಿ ಪುಟ್ಟಕ್ಕನ ಮನೆಗೆ ಬರುತ್ತಾಳೆ.

ಪುಟ್ಟಕ್ಕನ ಮನೆಗೆ ಆಗಮಿಸಿದ ರಾಜವ್ವ
ಜೋರಾಗಿ ಪುಟ್ಟಕ್ಕನನ್ನು ಕರೆದು ಸುಮ್ಮ ಸುಮ್ಮನೆ ಜಗಳ ತೆಗೆಯುತ್ತಾಳೆ. ಇದನ್ನು ನೋಡಿದ ಊರಿನ ಮಂದಿ ಯಾಕೆ ರಾಜೇಶ್ವರಿ ಸುಮ್ಮನೆ ಜಗಳ ತೆಗೆಯುತ್ತಿಯ ಎಂದಾಗ ಹಮ್ ಹೌದು ಇವಳಿಗೆ ತನ್ನ ಮಗಳನ್ನೇ ಹದ ಬಸ್ ನಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ ಎಂದೆಲ್ಲ ಅಣಕವಾಡುತ್ತಾಳೆ. ಇದನ್ನೆಲ್ಲ ಕೇಳಿದರು ಕೇಳಿಸಿಕೊಳ್ಳದ ಹಾಗೆ ಇರುತ್ತಾರೆ. ಬಳಿಕ ಗಂಡನನ್ನು ಹದಬಸ್ತಲ್ಲಿ ಇಟ್ಟುಕೊಳ್ಳಲು ಆಗಲಿಲ್ಲ ಎಂದೆಲ್ಲ ಹೇಳಿದರು ಪುಟ್ಟಕ್ಕ ಮಾತ್ರ ಸುಮ್ಮನೆ ಇರುತ್ತಾರೆ.

ಪೋಸ್ಟರ್ ನೋಡಿ ಕೆಂಡಾಮಂಡಲಗೊಂಡ ಪೂರ್ವಿ
ಇತ್ತ ಪೂರ್ವಿ ಆಕೆಯ ತಂದೆ ತಾಯಿ ಜೊತೆ ಬಟ್ಟೆ ತೆಗೆದುಕೊಳ್ಳಲು ಹೋಗುತ್ತಿರುತ್ತಾರೆ. ಈ ವೇಳೆ ಕಂಠಿ ಸ್ನೇಹಾಳ ಪೋಸ್ಟರ್ ನೋಡಿ ಹೊಟ್ಟೆ ಉರಿದುಕೊಳ್ಳುತ್ತಾ ಇರುತ್ತಾಳೆ ಇದನ್ನು ನೋಡಿದ ಪೂರ್ವಿ ತಾಯಿ ಹೇಳುತ್ತಾರೆ. ಕಂಠಿಗೆ ಈ ಮದುವೆ ಇಷ್ಟ ಇಲ್ಲ, ಹಾಗಿದ್ದರೂ ಬೇಕಾ ಈ ಮದುವೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪೂರ್ವಿ ಸುಮ್ಮನೆ ಆಗುತ್ತಾಳೆ. ಬಳಿಕ ಬಂಗಾರಮ್ಮನ ಬಳಿಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಾಳೆ. ಮುಂದೆ ಎನು ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











