Puttakkana Makkalu:ಪುಟ್ಟಕ್ಕನ ಹುಟ್ಟುಹಬ್ಬಕ್ಕೆ ಎರಡು ಸರ್ಪ್ರೈಸ್ ಕೊಡಲು ಹೊರಟ ಸ್ನೇಹಾ? ಏನದು?
ಪುಟ್ಟಕ್ಕನ ಹುಟ್ಟುಹಬ್ಬಕ್ಕೆ ಅಮ್ಮನಿಗೆ ಒಳ್ಳೆಯ ಉಡುಗೊರೆ ನೀಡಬೇಕು ಎಂದುಕೊಂಡಿದ್ದ ಸ್ನೇಹಾಗೆ ಸಹನಾ ನಾಪತ್ತೆ ಆಗಿರುವುದು ತಿಳಿದಿದೆ. ಇನ್ನು ಇತ್ತ ಪುಟ್ಟಕ್ಕಗೆ ಸ್ನೇಹಾಗೆ ಏನೋ ಪ್ರಾಬ್ಲಂ ಆಗಿದೆ. ಆದರೆ ಅದನ್ನು ನಮ್ಮ ಜೊತೆ ಹೇಳಿಕೊಳ್ಳುತ್ತಿಲ್ಲ ಅಂತ ಅನಿಸುತ್ತಿದೆ.
ಅಷ್ಟಕ್ಕೂ ಸ್ನೇಹಾಗೆ ಏನಾಗಿದೆ? ಆಕೆಗೆ ಹಾರ್ಟ್ ಪ್ರಾಬ್ಲಂ ಎಂದು ರಿಪೋರ್ಟ್ ಹೇಳುತ್ತಿದೆ. ಆದರೆ ಆ ವಿಚಾರವನ್ನು ಸ್ನೇಹಾ ನನ್ನ ಬಳಿ ಹೇಳೆ ಇಲ್ಲ. ಆಕೆಗೆ ಏನಾಗಿದೆಯೋ ಏನೋ ಎನ್ನುವ ಆತಂಕದಲ್ಲಿಯೇ ಪುಟ್ಟಕ್ಕ ಕಾಲ ಕಳೆಯುತ್ತಿದ್ದಾಳೆ.

ಹಾಗೆಯೇ ಸ್ನೇಹಾಗೆ ಕರೆ ಮಾಡಿ "ನಿನಗೆ ಏನಾಯಿತು? ನನಗೆ ಒಂದು ಮಾತು ನೀನು ಹೇಳಲಿಲ್ಲ ಅಲ್ವಾ? ಎಂದು ಅಳುತ್ತಾ ಹೇಳುತ್ತಾರೆ. ಆಗ ಸ್ನೇಹಾಗೆ ಏನು ಮಾತನಾಡಬೇಕು ಅನ್ನೋದೇ ಗೊತ್ತಾಗಲ್ಲ. ಹಾಗೆಯೇ ಅವ್ವ ಏನು ಮಾತನಾಡುತ್ತಿದ್ದಾರೆ ಎಂದು ಅರ್ಥ ಆಗದೆ. ಅವ್ವ ನಾನು ಮತ್ತೆ ಬರುತ್ತೇನೆ. ಆದರೆ, ಇಂದು ನಿನಗೆ ಎರಡೆರಡು ಸರ್ಪ್ರೈಸ್ ಕಾದಿದೆ ಎಂದು ಹೇಳಿ ಫೋನ್ ಇಡುತ್ತಾಳೆ. ಆದರೆ ಪುಟ್ಟಕ್ಕ ಬಹಳ ಆತಂಕದಲ್ಲಿ ಇರುತ್ತಾರೆ.
ಇನ್ನು ಸ್ನೇಹಾಗೆ ಏನು ಪ್ರಾಬ್ಲಂ ಆಗಿರುವುದಿಲ್ಲ. ಪುಟ್ಟಕ್ಕನ ಮನೆಗೆ ಬಂದ ಹುಡುಗಿ ಸ್ನೇಹಾಗೆ ಹಾರ್ಟ್ ಪ್ರಾಬ್ಲಂ ಇರುತ್ತದೆ. ಅದನ್ನೇ ನೋಡಿ ಪುಟ್ಟಕ್ಕ ತಪ್ಪು ತಿಳಿದುಕೊಂಡಿರುತ್ತಾರೆ. ಸ್ನೇಹಾ ತನ್ನ ಅಕ್ಕನನ್ನು ಕರೆದುಕೊಂಡು ಬರಲು ಎಂದು ಹೋಗುತ್ತಾಳೆ. ಆದರೆ ಫುಡ್ ಟ್ರಕ್ ಬಳಿ ಸ್ನೇಹಾ ಇರುವುದಿಲ್ಲ. ಸ್ನೇಹಾ ಎಲ್ಲರ ಬಳಿ ವಿಚಾರಣೆ ಮಾಡಿದ್ದಾಗ ಸಹನಾ ಪತ್ತೆ ಇರದೆ ಇರುವುದನ್ನು ನೋಡಿದ ಕೊಂಚ ಆತಂಕ ಆಗುತ್ತೆ.

ಸಿಂಗಾರಮ್ಮನ ಕೈಯಲ್ಲಿ ಸಹನಾ
ಸಹನಾಗೆ ಸಿಂಗಾರಮ್ಮ ತೊಂದರೆ ಮಾಡಬಹುದು ಎನ್ನುವುದು ಸ್ನೇಹಾ ಗಮನಕ್ಕೆ ಬಂದಿರುತ್ತದೆ. ಇನ್ನು ಸಹನಾ ಸಿಂಗಾರಮ್ಮನ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿರುತ್ತಾಳೆ. ಸಿಂಗಾರಮ್ಮ ಸಹನಾಗೆ ಸರಿಯಾಗಿ ಹೊಡೆದು "ನೀನು ನಿನ್ನ ತಂಗಿಗೆ ಇಷ್ಟು ಬೇಗ ಸಿಕ್ಕಿ ಬಿಡುತ್ತೀಯಾ ಎಂದು ನಾನು ಅಂದುಕೊಂಡಿರಲಿಲ್ಲ. ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ" ಎಂದು ಸರಿಯಾಗಿ ಹೊಡೆಯುತ್ತಾಳೆ. ಇನ್ನು ಸಹನಾ ಜೊತೆ ಕಾಳಿ ಕೂಡ ಸಿಂಗಾರಮ್ಮನ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದ್ದಾನೆ.
ಸಹನಾ ಜೊತೆ ಕಾಳಿಗೂ ಹೊಡೆದ ಸಿಂಗಾರಿ
ಕಾಳಿಗೆ ಕೂಡ ಸರಿಯಾಗಿ ಸಿಂಗಾರಮ್ಮನ ಕಡೆಯವರು ಹೊಡೆಯುತ್ತಾರೆ. ಆತನಿಗೆ ಏನು ಮಾಡಬೇಕೆಂದು ತಿಳಿಯದೆ ದಿಕ್ಕು ತೋಚದಾಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಪೊಲೀಸರನ್ನು ಕರೆದುಕೊಂಡು ಬಂದ ಸ್ನೇಹಾ, ಸಹನಾಳನ್ನು ಸಿಂಗಾರಮ್ಮನ ಕೈಯಿಂದ ರಕ್ಷಣೆ ಮಾಡುತ್ತಾಳೆ. ಹಾಗೆಯೇ ಸಿಂಗಾರಮ್ಮನ ಕೈಯಲ್ಲಿ ಸಿಕ್ಕಿ ಕೊಂಡಿರುವಂತಹ ಬಂಗಾರಮ್ಮ ಕೂಡ ಎಲ್ಲಿದ್ದಾರೆ ಎಂದು ಹುಡುಕುತ್ತಿರುತ್ತಾರೆ. ಇನ್ನು ಪುಟ್ಟಕ್ಕನ ಹುಟ್ಟುಹಬ್ಬದ ಪ್ರಯುಕ್ತ ಸ್ನೇಹಾ "ನನ್ನ ಅವ್ವನಿಗೆ ಸಹನಾ ಹಾಗೂ ನಿಜವಾದ ಬಂಗಾರಮ್ಮನವರನ್ನು ಕರೆದುಕೊಂಡು ಬಂದು ನಿಲ್ಲಿಸುವುದೇ ಆಕೆಯ ಗುರಿ ಆಗಿರುತ್ತದೆ.
ಅವ್ವನನ್ನು ನೋಡಲು ತುದಿಗಾಲಿನಲ್ಲಿ ನಿಂತ ಸಹನಾ
ಸಹನಾ ಮೊದಲು ಅವ್ವನನ್ನು ನೋಡಲು ಹಿಂಜರಿದರೂ ಅದಾದ ಬಳಿಕ ತನ್ನ ತಂಗಿಯ ಮಾತಿಗೆ ಮನ್ನಣೆಯನ್ನು ನೀಡಿ, "ಸರಿ ನಾನು ಅವ್ವನನ್ನು ನೋಡಲು ಬರುತ್ತೇನೆ" ಎಂದು ಹೇಳುತ್ತಾಳೆ. ಇದರಿಂದ ಸ್ನೇಹಾಗೆ ಬಹಳ ಖುಷಿ ಆಗುತ್ತದೆ.


Click it and Unblock the Notifications











