Puttakkana Makkalu: ಮುಗಿಲು ಮುಟ್ಟಿದೆ ಪುಟ್ಟಕ್ಕ ಆಕ್ರಂದನ; ಸಹನಾ ಬದುಕಿರುವ ವಿಚಾರ ತಾಯಿಗೆ ಗೊತ್ತಾಗುತ್ತಾ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಇದೀಗ ತನ್ನ ಸ್ವಾರಸ್ಯವನ್ನು ಕಳೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗದು. 'ಪುಟ್ಟಕ್ಕನ ಮಕ್ಕಳು' ಎಂಬ ಟೈಟಲ್ ಇಟ್ಟುಕೊಂಡಿದ್ದು ಕೂಡ ಸರಿಯಲ್ಲ. ಯಾಕಂದರೆ ಪುಟ್ಟಕ್ಕನ ಮಕ್ಕಳು ಎಂದರೆ ಪುಟ್ಟಕ್ಕ ಹಾಗೂ ಆಕೆಯ ಮಕ್ಕಳ ಬಗ್ಗೆ ಇರುವ ಸ್ಟೋರಿ. ಆದರೆ, ಇದೀಗ ಪುಟ್ಟಕ್ಕನ ಎರಡನೇ ಮಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಪುಟ್ಟಕ್ಕ ಬಹಳ ಕಷ್ಟಪಟ್ಟು ತನ್ನ ಮಕ್ಕಳನ್ನು ಓದಿಸಿ ಬೆಳೆಸಿರುತ್ತಾಳೆ. ಆದರೆ, ಸಹನಾ ಮಾತ್ರ ಅಮ್ಮನ ಕಷ್ಟಕ್ಕೆ ಮಿಡಿದು ತಾನು ಓದದೇ ಅಮ್ಮನ ಜೊತೆ ಮೆಸ್ ನಡೆಸಲು ಸಹಾಯ ಮಾಡುತ್ತಾಳೆ. ಆದರೆ, ಸ್ನೇಹಾ ಹಾಗೂ ಸುಮಾ ಬಹಳ ಟ್ಯಾಲೆಂಟೆಡ್ ಓದುವುದರಲ್ಲಿ ಅವರಿಬ್ಬರನ್ನು ಮೀರಿಸುವವರು ಯಾರೂ ಇಲ್ಲ.

ಸ್ನೇಹಾಗೆ ಐಎಸ್ಎಸ್ ಮಾಡಬೇಕು ಎನ್ನುವ ಆಸೆ. ಅದಕ್ಕಾಗಿ ಆಕೆ ಕಷ್ಟ ಪಟ್ಟಿರುವುದು ಅಷ್ಟಿಷ್ಟಲ್ಲ. ಆದರೂ ಇದೀಗ ಸ್ನೇಹಾ ಎಂಬ ಕೊಂಡಿಯೇ ಕಳಚಿ ಬಿದ್ದಿದೆ. ಇದರಿಂದ ಪುಟ್ಟಕ್ಕನ ಮನೆಯಲ್ಲಿ ಅನಾಥ ಭಾವನೆ ಬರುತ್ತಿದೆ. ಪುಟ್ಟಕ್ಕನ ಗೋಳು ನೋಡಲಾಗುತ್ತಿಲ್ಲ. ಆಕೆಯ ಪ್ರಕಾರ ತನ್ನ ಇಬ್ಬರು ಮಕ್ಕಳು ನನ್ನ ಬಿಟ್ಟು ಹೋಗಿಬಿಟ್ಟರು ಎನ್ನುವ ಭಾವನೆ. ಸ್ನೇಹಾ ತನ್ನ ಎಲ್ಲಾ ಕಷ್ಟಗಳಿಗೆ ಹೆಗಲಾಗುತ್ತಿದ್ದಳು. ಆದರೆ ಇದೀಗ ಸ್ನೇಹಾ ನನ್ನ ಬಿಟ್ಟು ಹೋಗಿಬಿಟ್ಟಳು ಎನ್ನುವ ಕೊರಗು ಆಕೆಗೆ ಮೂಡಿದೆ.
"ಸ್ನೇಹಾ ಯಾರೆ ಇರಲಿ ತಪ್ಪು ಎನ್ನುವುದನ್ನು ಎಲ್ಲರ ಮುಂದೆ ಡೈರೆಕ್ಟ್ ಆಗಿಯೇ ಹೇಳುತ್ತಿದ್ದಳು. ಇದೆಲ್ಲವನ್ನೂ ನೋಡಿದ ದೇವರಿಗೆ ಕೂಡ ಹೊಟ್ಟೆ ಕಿಚ್ಚು ಆಗಿ ಬಿಟ್ಟಿತು ಎಂದು ಅನ್ನಿಸಿದೆ. ಇಲ್ಲವಾದರೆ ಖಂಡಿತವಾಗಿಯೂ ನನ್ನ ಮಗಳು ಬದುಕಿ ಉಳಿಯುತ್ತಿದ್ದಳು" ಎಂದು ಪುಟ್ಟಕ್ಕ ಗೋಳಾಡುತ್ತಿದ್ದಾಳೆ. ಆದರೆ ಏನು ಮಾಡುವ ಸ್ಥಿತಿಯಲ್ಲಿ ಯಾರು ಇರುವುದಿಲ್ಲ. "ತಾಯಿಯ ಹುಟ್ಟು ಹಬ್ಬದ ದಿನವೇ ಆಕೆಗೆ ಮಗಳ ಸಾವಿನ ವಿಚಾರ ಮುಟ್ಟಿದೆ. ತನ್ನ ಮಗಳು ಎರಡು ಸರ್ಪ್ರೈಸ್ ನಿನಗಾಗಿ ನಾನು ಹೊತ್ತು ತರುತ್ತೇನೆ ಎಂದು ಹೇಳಿದ್ದಳು' ಆದರೆ ಇದೀಗ ಅವಳೇ ಇಲ್ಲ" ಎಂದು ಕಣ್ಣೀರು ಹಾಕುತ್ತಿದ್ದಾರೆ.
ಪುಟ್ಟಕ್ಕನ ಗೋಳು ಕೇಳುವವರಿಲ್ಲ?
"ನಾನೇನು ತಪ್ಪು ಮಾಡಿದೆ ದೇವರೆ.. ನನಗೆ ಯಾಕೆ ಈ ಶಿಕ್ಷೆ ನೀಡುತ್ತಿದ್ದಿಯಾ?" ಎಂದು ದೇವರ ಬಳಿ ಪುಟ್ಟಕ್ಕ ಕೇಳುತ್ತಿರುತ್ತಾಳೆ. ದೊಡ್ಡ ಮಗಳು ಸತ್ತ ಸುದ್ದಿ ಕೇಳಿಯೇ ಪುಟ್ಟಕ್ಕ ಅರ್ಧ ಮಂಕಾಗಿ ಹೋಗಿದ್ದಳು. ಆದರೆ ಇದೀಗ ಎರಡನೇ ಮಗಳು ಇಲ್ಲ ಎಂದು ತಿಳಿದರೆ ಪುಟ್ಟಕ್ಕಗೆ ಆಗುವ ಸಂಕಟ ಅಷ್ಟಿಷ್ಟಲ್ಲ. ಅಷ್ಟು ನೋವು ಆಕೆಗೆ. ಸ್ನೇಹಾ ಕ್ಯಾರೆಕ್ಟರ್ ಮಾಡುತ್ತಿದ್ದ ಸಂಜನಾ ಬರ್ಲಿ ಎಲ್ಲರ ಮನಸ್ಸನ್ನೂ ಗೆದ್ದಿದ್ದರು. ಆದರೆ ಇದೀಗ ಅವರು ಅನಿವಾರ್ಯವಾಗಿ ಧಾರಾವಾಹಿಯಿಂದ ದೂರ ಸರಿದಿದ್ದಾರೆ.
ಸ್ನೇಹ ಪಾತ್ರಕ್ಕೆ ವಿದಾಯ ಹೇಳಿದ ಸಂಜನಾ
ಸ್ನೇಹಾ ಪಾತ್ರಕ್ಕೂ ಮುಕ್ತಾಯವನ್ನು ಹಾಡಲಾಗಿದೆ. ಆದರೆ ನಡೆಗೆ ಅಭಿಮಾನಿಗಳು ಮಾತ್ರ ಬಹಳ ಬೇಸರಗೊಂಡಿದ್ದಾರೆ. ದಿನದಿಂದ ದಿನಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡುಗರಿಗೆ ಬಹಳ ಬೇಸರ ತರಿಸುತ್ತಿದೆ. ಈ ಧಾರಾವಾಹಿ ನೋಡುಗರಿಗೆ ಮಾತ್ರ ಇನ್ನಷ್ಟು ಬೇಸರ ತರುತ್ತಿದೆ ಹೊರತು ಮುಂಚಿನ ರೀತಿಯಲ್ಲಿ ಧಾರಾವಾಹಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವವರು ಇಲ್ಲವಾಗಿದೆ. ಇನ್ನು ಸಹನಾ ಈ ವಿಚಾರ ಕೇಳಿಯಾದರು ತನ್ನ ತಾಯಿ ಬಳಿಗೆ ಬರುತ್ತಾಳಾ? ಎಂಬುವುದನ್ನು ನೋಡಬೇಕಾಗಿದೆ. ಸಹನಾ ಸತ್ತು ಹೋಗಿದ್ದಾಳೆ ಎಂದು ತಪ್ಪು ತಿಳಿದುಕೊಂಡು ಪುಟ್ಟಕ್ಕ ಬಹಳಷ್ಟು ಕೊರಗಿದ್ದಳು.
ಮಗಳ ನೆನಪಲ್ಲೇ ಇರುವ ಪುಟ್ಟಕ್ಕ
ಸಹನಾ ಇಲ್ಲ ಅನ್ನೋ ನೋವಿನಿಂದ ಈಗಷ್ಟೇ ಹೊರಗೆ ಬರುತ್ತಿದ್ದಳು. ಈಗ ಮತ್ತೆ ಇನ್ನೊಬ್ಬ ಮಗಳು ಹೋದಳು. ಹೀಗಾಗಿ ಪುಟ್ಟಕ್ಕ ಕುಗ್ಗಿ ಹೋಗಿದ್ದಾಳೆ. ಇತ್ತ ಕಂಠಿ ಮಾತ್ರ ತನ್ನ ಹೆಂಡತಿಯ ಮುಖ ನೋಡುತ್ತಾ ಮಂಕಾಗಿ ನಿಂತು ಬಿಟ್ಟಿದ್ದಾನೆ. ಆತನಿಗೆ ಸ್ನೇಹಾ ಎಂದರೆ ಪಂಚ ಪ್ರಾಣ. ತನ್ನ ತಾಯಿ ಹಾಗೂ ಹೆಂಡತಿ ಪ್ರಾಣಾಪಾಯದಿಂದ ಪಾರಾದರು ಎಂದುಕೊಂಡರೆ, ಹೆಂಡತಿ ಬಾರಾದ ಲೋಕಕ್ಕೆ ಹೋಗಿದ್ದಾಳೆ ಎಂದು ತಿಳಿದ ಬಳಿಕ ಕಂಠಿ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾರ ಜೊತೆಯೂ ಒಂದು ಮಾತನಾಡದೆ ಸುಮ್ಮನೆ ಇರುತ್ತಾನೆ. ಸ್ನೇಹಾ ಜೊತೆ ಬಾಳಿ ಬದುಕಬೇಕು ಎಂದು ಕನಸು ಕಾಣುತ್ತಿದ್ದ. ಆದ್ರೀಗ ಸ್ನೇಹಾ ಇಲ್ಲದೆ ಕುಗ್ಗಿ ಹೋಗಿದ್ದಾನೆ.


Click it and Unblock the Notifications











