Puttakkana Makkalu ; ರಾಜಿಗೆ ಗಡಿಪಾರು ಶಿಕ್ಷೆ ನೀಡಿದ ಬಂಗಾರಮ್ಮ !
ಸ್ನೇಹ ಹೆಸರಿಗೆ ಮಸಿ ಬಳಿದಾತನನ್ನು ಯಾವತ್ತೂ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಪುಟ್ಟಕ್ಕ ಪಟ್ಟು ಬಿಡದೆ ಹೋರಾಟ ಮಾಡುತ್ತಾಳೆ. ಆಕೆಯ ಜೊತೆಗೆ ಮಕ್ಕಳು ಹಾಗೆಯೇ ಅನೇಕರು ಹೋರಾಟ ಮಾಡುತ್ತಾರೆ. ದಕ್ಷ ಅಧಿಕಾರಿಗೆ ಅವರು ಸತ್ತ ಮೇಲೆ ಈ ರೀತಿ ಅವಮಾನವಾದರೆ ಆಕೆಗೆ ಬಹಳ ದೊಡ್ಡ ಕಳಂಕ ಎದುರಾಗುತ್ತದೆ ಎನ್ನುವುದು ಪುಟ್ಟಕ್ಕ ಗೆ ಗೊತ್ತಿದೆ. ಅದಕ್ಕೆ ಕಾರಣ ತನ್ನ ಮಗಳು ಸ್ನೇಹಾ.
ದಿಟ್ಟ ಅಧಿಕಾರಿ ಸ್ನೇಹಾ ಬಡವರಿಗೆ ಯಾವತ್ತೂ ಸಹಾಯವಾಗಿಯೆ ನಿಲ್ಲುತ್ತಾಳೆ ಹೊರತು ಯಾರ ಮೇಲು ಹಲ್ಲು ಮಸೆಯುವಂತಹ ಗುಣದವಳು ಅಲ್ಲ ಎಂದು ಬಹಳ ಬೇಸರದಿಂದ ಎಲ್ಲರ ಜೊತೆ ಹೇಳಿಕೊಳ್ಳುತ್ತಾಳೆ. ಆದರೆ ಯಾರು ಅದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಕೊನೆಗೆ ಪುಟ್ಟಕ್ಕನ ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಪ್ರತಿಭಟನೆಗೆಳಿಯುತ್ತಾರೆ. ಇದೀಗ ಬಂಗಾರಮ್ಮ ಯಾರೆಲ್ಲ ತಮ್ಮ ಸೊಸೆಯ ಹೆಸರನ್ನು ಕೆಡಿಸಲು ಕೈ ಜೋಡಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ. ಹಾಗೆಯೇ ಅವರೆಲ್ಲರನ್ನೂ ಮನೆಯಿಂದ ಹೊರ ಹಾಕಲು ಬಂಗಾರಮ್ಮ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ.

ಬಂಗಾರಮ್ಮ ಗೆ ಪುಟ್ಟಕ್ಕ ಎಂದರೆ ಬಹಳ ಪ್ರೀತಿ. ಆದರೆ ಪುಟ್ಟಕ್ಕನನ್ನು ಕಂಡರೆ ಕಿಡಿಕಾರುವವಳು ರಾಜಿ ಮಾತ್ರ. ರಾಜಿಗೆ ಹೇಗಾದರೂ ಮಾಡಿ ಪುಟ್ಟಕ್ಕನ ನೆಮ್ಮದಿಯನ್ನು ಕೆಡಿಸಿಬಿಡಬೇಕು ಎನ್ನುವ ಆಸೆ. ಅದೇ ಆಕೆಯ ಮಗಳು ಇಡೀ ಊರಿಗೆ ಮೋಸ ಮಾಡಿದ್ದಾಳೆ ಎಂದು ಹೇಗಾದರೂ ಸುಳ್ಳು ಸುದ್ದಿ ಹರಡಿಸಬೇಕು ಎನ್ನುವ ಆಲೋಚನೆಯನ್ನು ಮಾಡುತ್ತಿರುತ್ತಾಳೆ. ಆಕೆಗೆ ದಾಳವಾಗಿ ಸಿಕ್ಕಿದ್ದು ಮಾತ್ರ ಸ್ನೇಹಾ ಹೆಸರು. ಸ್ನೇಹ ಹೆಸರಿಗೆ ಮಸಿ ಬಳಿಯುತ್ತಾಳೆ ರಾಜಿ. ಪುಟ್ಟಕ್ಕ ಗೆ ತನ್ನ ಮಗಳು ಯಾವತ್ತೂ ಕೆಟ್ಟ ಕೆಲಸವನ್ನು ಮಾಡುವವಳು ಅಲ್ಲ. ಆಕೆ ಎಲ್ಲರಿಗೂ ಒಳಿತು ಮಾಡುವ ಮನಸಿರುವವಳು ಇಲ್ಲೂ ಏನೋ ಆಗಿದೆ ಎಂದುಕೊಂಡ ಪುಟ್ಟಕ್ಕ ಹೋರಾಟಕ್ಕೆ ಇಳಿಯುತ್ತಾಳೆ.
ಪುಟ್ಟಕ್ಕನ ಪ್ರತಿಭಟನೆಗೆ ಸಂದ ಜಯ
ಇದರ ಪ್ರತಿಫಲವಾಗಿ ಸ್ನೇಹಾ ಗೆ ನ್ಯಾಯ ಸಿಕ್ಕಿದೆ. ಸ್ನೇಹ ಗಂಡ ಕಂಠಿ ಸ್ನೇಹಾ ಹೆಸರಿಗೆ ಯಾರೆಲ್ಲ ಮಸಿ ಬಳಿಯುವ ಕೆಲಸ ಮಾಡಿದರೂ ಅವರೆಲ್ಲರನ್ನೂ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ದಾನೆ . ಈಗ ರಾಜಿ ಸರದಿ. ರಾಜಿ ನಂಜಮ್ಮನ ಜೊತೆ ಸೇರಿಕೊಂಡು ಸ್ನೇಹಾ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ಬಂಗಾರಮ್ಮಗೆ ಗೊತ್ತಾಗಿದ್ದೇ ತಡ. ಬಂಗಾರಮ್ಮ ಮಾತ್ರ ಬಹಳ ಕೋಪಗೊಳ್ಳುತ್ತಾರೆ. ರಾಜಿಯನ್ನು ಕರೆಯಿಸುತ್ತಾರೆ.
ಬಂಗಾರಮ್ಮ ನ ಕಾಲು ಹಿಡಿದು ಬೇಡಿದ ರಾಜಿ
ರಾಜಿ ಎದುರು ನಿಂತು ದರ್ಪದಿಂದ ಮಾತನಾಡಿದ ಬಂಗಾರಮ್ಮ ಏನು ರಾಜಿ ನಿನಗೆ ಈ ರೀತಿ ಮಾಡಲು ನಾಚಿಗೆ ಆಗಲಿಲ್ವಾ. ನೀನು ನಂಜಮ್ಮ ಈ ರೀತಿ ಮಾಡಿದ್ದು ನಿನಗೆ ಸರಿ ಅನ್ನಿಸುತ್ತದಾ. ಸ್ವಲ್ಪವಾದರೂ ಮಾನವೀಯತೆ ನಿಮಗೆ ಇದೆಯಾ. ನಿಮ್ಮ ಈ ಕಚಡ ಕೆಲಸದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಹೇಳು ಎಂದು ಬಹಳ ಕೋಪಗೊಳ್ಳುತ್ತಾಳೆ. ಇದಕ್ಕೆ
ರಾಜಿ ಪೆಚ್ಚು ಮುಖ ಹಾಕಿಕೊಂಡು ನಾನು ಮತ್ತು ನಂಜಮ್ಮ ಮಾತ್ರ ಇದರಲ್ಲಿ ಶಾಮಿಲಾಗಿರುವುದಲ್ಲ ಇದರಲ್ಲಿ ರಾಧ ಪಾತ್ರ ಕೂಡ ಇದೆ ಎಂದು ಹೇಳಿದಾಗ ಬಂಗಾರಮ್ಮ ಗೆ ಶಾಕ್ ಆಗುತ್ತದೆ. ರಾಧಾ ಗೆ ಅತ್ತೆಯ ಬಳಿ ಏನು ಹೇಳಬೇಕೆಂದೇ ದಿಕ್ಕೇ ತೋಚದಂತಾಗುತ್ತದೆ. ಹಾಗೆಯೇ ನಾಚಿಕೆಯಾಗುತ್ತದೆ.
ತಪ್ಪು ಮಾಡಿದವರನ್ನು ಬಂಗಾರಮ್ಮ ಕ್ಷಮಿಸುವ ಮಾತೆ ಇಲ್ಲ
ಇನ್ನು ಬಂಗಾರಮ್ಮ ಮಾತ್ರ ಈ ಬಾರಿ ತಪ್ಪು ಮಾಡಿದವರನ್ನು ಕ್ಷಮಿಸುವ ಮಾತೆ ಇಲ್ಲ, ರಾಜಿಯನ್ನು ಗಡಿಪಾರು ಮಾಡಲು ಗೌರಮ್ಮ ಸೂಚಿಸಿದ್ದಾರೆ. ಒಂದುವಾರದಲ್ಲಿ ಈ ಊರು ಬಿಟ್ಟು ಹೋಗುವಂತೆ ಖಡಕ್ ಆಗಿ ಬಂಗಾರಮ್ಮ ಹೇಳಿದ್ದಾಳೆ. ಇತ್ತ ಪುಟ್ಟಕ್ಕ ಗೆ ತನ್ನ ಮಗಳಿಗೆ ನ್ಯಾಯ ಸಿಕ್ಕಿತು ಎನ್ನುವ ಖುಷಿಯಲ್ಲಿರುತ್ತಾಳೆ. ತನ್ನ ಮಗಳು ಯಾವತ್ತಿದ್ದರೂ ದಕ್ಷ ಅಧಿಕಾರಿ ಆಕೆಯ ಹೆಸರಿಗೆ ಮಸಿ ಬಳಿಯಲು ನಾನು ಬಿಡುವುದಿಲ್ಲ ಎಂದು ಪುಟ್ಟಕ್ಕ ಎಲ್ಲರ ಮುಂದೆ ಹೇಳುತ್ತಾಳೆ.


Click it and Unblock the Notifications











