Puttakkana Makkalu ; ಸ್ನೇಹ ಸಾವು ಆಕಸ್ಮಿಕ ಅಲ್ಲ ಅಂದ ಪೊಲೀಸರು? ಸಿಂಗಾರಮ್ಮನ ಮುಖವಾಡ ಕಳಚುತ್ತಾ?

By ಪೂರ್ವ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಾರ್ಮೋಡ ಕವಿದಿದೆ. ಪುಟ್ಟಕ್ಕಗೆ ತನ್ನ ಮಕ್ಕಳೆಂದರೆ ಜೀವ ಅವರಿಗಾಗಿ ಏನು ಮಾಡಲು ಬೇಕಾದರೂ ಮುಂದಾಗುತ್ತಾಳೆ. ಅಷ್ಟಕ್ಕೂ ತನ್ನ ಗಂಡನಿಂದ ದೂರವಾಗಿದ್ದಾಗ ಆಕೆಗೆ ಆಸರೆ ಆಗಿದ್ದೆ ಪುಟ್ಟಕ್ಕ ಎಂದು ಹೇಳಿದರೆ ತಪ್ಪಾಗದು. ಪುಟ್ಟಕ್ಕ ತನ್ನ ಮಕ್ಕಳಿಗಾಗಿ ಮೆಸ್ ಎಲ್ಲಾ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಪುಟ್ಟಕ್ಕಗೆ ಬಹಳ ದೊಡ್ಡ ಆಧಾರವಾಗಿ ಇದ್ದದ್ದೆ ಸ್ನೇಹಾ.

ಸಹನಾ ಸತ್ತು ಹೋಗಿದ್ದಾಳೆ ಎಂದು ಮನೆಮಂದಿ ಎಲ್ಲರೂ ಅಂದುಕೊಂಡು ಇರುತ್ತಾರೆ. ಆದರೆ ಸಹನಾ ಬದುಕಿ ಇರುವಾಗಲೇ ಸ್ನೇಹಾ ಸತ್ತು ಹೋಗಿದ್ದಾಳೆ. ಸ್ನೇಹಗಾಗಿ ಸಹನಾ ಕಾಯುತ್ತಿರುತ್ತಾಳೆ. ಯಾಕೆಂದರೆ ಇವತ್ತು ತನ್ನ ತಾಯಿಯ ಹುಟ್ಟು ಹಬ್ಬ ಅದಕ್ಕಾಗಿ ಆಕೆಗೆ ಸರ್ಪ್ರೈಸ್ ನೀಡಬೇಕು ಎಂದುಕೊಂಡು ಇರುತ್ತಾಳೆ ಆದರೆ ಸ್ನೇಹಾ ಇನ್ನೂ ಯಾವತ್ತೂ ನಮ್ಮ ಜೊತೆ ಬರುವುದಿಲ್ಲ. ಆಕೆ ಯಾವತ್ತೂ ನನ್ನ ಭೇಟಿ ಆಗುವುದು ಇಲ್ಲ ಎಂದು ಆಕೆಗೆ ಗೊತ್ತಿರುವುದಿಲ್ಲ.

kannada serial puttakkana makkalu written 02th November

ಸಹನಾ ತನ್ನ ತಂಗಿಯನ್ನು ಹುಡುಕಿಕೊಂಡು ಪುಟ್ಟಕ್ಕನ ಮನೆಗೆ ಬರುತ್ತಾಳೆ. ಆಗ ಸ್ನೇಹಾ ಗೋರಿಯ ಮೇಲೆ ಪುಟ್ಟಕ್ಕ ಅಳುತ್ತಾ ಇರುವುದನ್ನು ನೋಡಿ ಸಹನಾಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಸ್ನೇಹಾಗೆ ಏನಾಯಿತು ಎನ್ನುವ ಆತಂಕದಲ್ಲಿ ಇರುತ್ತಾಳೆ. ಸ್ನೇಹ ಫೋಟೋಗೆ ಹಾರ ಹಾಕಿರುವುದನ್ನು ನೋಡಿ ಬಹಳಷ್ಟು ದುಃಖ ಪಡುತ್ತಾಳೆ. ತನ್ನ ತಾಯಿಯ ಬಳಿಗೆ ಓಡೋಡಿ ಬರುತ್ತಾಳೆ. ಆಗ ಸಹನಾಳನ್ನು ನೋಡಿದ ಪುಟ್ಟಕ್ಕ ಸಹನಾ ಎಂದು ಕೂಗುತ್ತಾಳೆ. ಸಹನಾ ಸತ್ತಿಲ್ಲ ಎಂದು ಪುಟ್ಟಕ್ಕ ಅಂದುಕೊಂಡು ಇದ್ದರೂ ಆದರೆ ಸಹನಾ ಸಡನ್ ಆಗಿ ಕಾಣಿಸಿಕೊಂಡ ಕಾರಣ ಆಕೆಗೆ ಇನ್ನಷ್ಟು ದುಃಖ ಆಗುತ್ತೆ

ಪುಟ್ಟಕ್ಕನ ಬಾಳಲ್ಲಿ ಕವಿದ ಕಾರ್ಮೋಡ

ಸಹನಾ ನೀನು ಬದುಕಿಲ್ಲ ಅಂದುಕೊಂಡಿದ್ದೆ . ಸಹನಾ ನೀನು ಮಾಡಿದ್ದು ಎಷ್ಟು ಸರಿ. ನನ್ನ ಜೊತೆ ನಿನಗೆ ನಿಜ ವಿಚಾರ ಹೇಳಬೇಕು ಎಂದು ಅನ್ನಿಸ್ಲಿಲ್ವಾ . ಯಾಕೆ ನೀನು ಹೀಗೆ ಮಾಡಿದೆ ನೀನು ಈ ರೀತಿ ಮಾಡುವುದಕ್ಕಿಂತ ನೀನು ಸಾಯಬೇಕಿತ್ತು. ಎಂದು ಹೇಳಿ ಸಹನಾ ಕೆನ್ನೆಗೆ ಸರಿಯಾಗಿಯೇ ಬಾರಿಸಿ ಅಳುತ್ತಾಳೆ. ಆಕೆಗೆ ಬಹಳ ಕೋಪ ಕೂಡ ಬರುತ್ತದೆ. ನೀನು ನನಗೆ ಅದೆಷ್ಟು ನೀವು ಕೊಟ್ಟೆ ಈಗ ಸಡನ್ ಆಗಿ ಬಂದಿದ್ದೀಯಾ. ಅದೇ ಎಂದು ನೀನು ಬದುಕಿದ್ದಿಯ ಎನ್ನುವ ಸುಳಿವು ನನಗೆ ಸಿಕ್ಕಿದ್ದರೆ ನಾವು ಎಷ್ಟು ಚೆನ್ನಾಗಿ ಇರುತ್ತಿದ್ದೆವು. ನೀನು ಮಾಡಿದ್ದು ನಿನಗೆ ಸರಿ ಎಂದು ಅನ್ನಿತ್ತಿದೆಯಾ ಎಂದು ಹೇಳುತ್ತಾಳೆ.

ತಾಯಿಗೆ ಧೈರ್ಯ ಹೇಳಿದ ಸಹನಾ

ಇನ್ನು ಸಹನಾಗೆ ತನ್ನ ತಾಯಿಯ ಬಳಿ ಮಾತನಾಡಲು ಧೈರ್ಯ ಬರುವುದಿಲ್ಲ. ಮರುದಿನ ಪುಟ್ಟಕ್ಕನ ಮನೆಗೆ ಬಂದ ಪೊಲೀಸರು ಮೇಡಂ ಅವರ ಸಾವು ಆಕ್ಸಿಡೆಂಟ್ ನಿಂದ ಆಗಿದ್ದಲ್ಲ. ಅವರನ್ನು ಬೇಕುಬೇಕೆಂದೇ ಯಾರೋ ಟಾರ್ಗೆಟ್ ಮಾಡಿದ್ದಾರೆ. ಆದ ಕಾರಣ ಆರೋಪಿಗಳನ್ನು ಹುಡುಕುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಹೇಳಿದಾಗ ಪುಟ್ಟಕ್ಕಗೆ ನೆಲ ಕುಸಿದಂತೆ ಆಗುತ್ತೆ. ಇರುತ್ತಾಳೆ. ಆಕೆಗೆ ಮಾತ್ರ ತನ್ನ ಮಗಳ ಮೇಲೆ ಇಷ್ಟೆಲ್ಲ ದ್ವೇಷ ಮಾಡುತ್ತಿರುವವರು ಯಾರು ಎನ್ನುವ ಆಲೋಚನೆ ಬರುತ್ತೆ.

ಸ್ನೇಹಾ ಸಾವಿಗೆ ಕಂಬನಿ ಮಿಡಿದ ಪುಟ್ಟಕ್ಕ

ಪುಟ್ಟಕ್ಕ ಗೆ ಸ್ನೇಹಾ ಎಂದರೆ ಬಹಳ ಇಷ್ಟ. ಆಕೆ ಏನೇ ಮಾಡಿದರು ಕೂಡ ಸರಿಯಾಗಿಯೇ ಮಾಡುತ್ತಾಳೆ ಎನ್ನುವ ಭರವಸೆ. ಎಲ್ಲಾ ಮಕ್ಕಳಿಗಿಂತ ಸ್ನೇಹಾನೆ ಪುಟ್ಟಕ್ಕ ಗೆ ಅಚ್ಚುಮೆಚ್ಚು. ಬಹಳ ಒಳ್ಳೆಯ ಗುಣವಿರುವ ಮಗಳಿಗೆ ಇಂಥ ಸಾವು ಬಂದಿದೆಯಲ್ವ ಎಂದು ಹೇಳಿ ಪುಟ್ಟಕ್ಕ ಬೇಸರ ಪಟ್ಟುಕೊಂಡು ಇರುತ್ತಾಳೆ. ನನ್ನ ಮಗಳನ್ನು ಸಾಯಿಸುವಷ್ಟು ಕೋಪ ಯಾಕಾದರೂ ಅವರಿಗೆ ಬಂದಿತೋ ಅದು ಆಕೆಯನ್ನು ಸಾಯಿಸುವ ಮಟ್ಟಿಗೆ ತೆಗೆದುಕೊಂಡು ಹೋಗಿದೆ ಎಂದು ಹೇಳಿ ಜೋರಾಗಿ ಅಳುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X