Puttakkana Makkalu ; ಸ್ನೇಹಾ ಮೇಲೆ ಹಲ್ಲು ಮಸೆಯುತ್ತಿರುವ ಕಂಠಿ? ಕಾಳಿ ಕಂಠಿ ನಡುವೆ ಜಗಳ ನಡೆಯುತ್ತಾ?

By ಪೂರ್ವ

ಸ್ನೇಹಾ ಸತ್ತ ಬಳಿಕ ಕಂಠಿ ಬಹಳ ಬದಲಾಗಿದ್ದಾನೆ. ಕಂಠಿ ಸ್ಥಿತಿಯನ್ನು ನೋಡಲು ಆಗದೆ ಅನೇಕ ಜನ ಅಭಿಮಾನಿಗಳು ಮರುಕಪಡುತ್ತಿದ್ದಾರೆ. ಸ್ನೇಹಾ ಬದಲಿಗೆ ಮತ್ತೋರ್ವ ಪಾತ್ರಧಾರಿ ಎಂಟ್ರಿ ಆಗಿದೆ ಆದರೆ ಆಕೆಯನ್ನು ನೋಡಿದರೆ ಕಂಠಿ ಉರಿದು ಬೀಳುತ್ತಾನೆ. ಆತನಿಗೆ ಸ್ನೇಹಾ ಮೇಲೆ ಬಹಳಷ್ಟು ಸೇಡು. ಅದ್ಯಾಕೋ ಗೊತ್ತಿಲ್ಲ ಸ್ನೇಹಾ ಹೆಸರಿರುವ ಹುಡುಗಿಯ ಮೇಲೆ ಹಲ್ಲು ಮಸೆಯುತ್ತಿರುತ್ತಾನೆ. ಆದರೆ ಇದೆಲ್ಲವನ್ನೂ ನೋಡಿದ ಪುಟ್ಟಕ್ಕ ಗೆ ಕಂಠಿ ವರ್ತನೆ ಬಹಳ ಭಯವನ್ನು ಮೂಡಿಸುತ್ತಿದೆ. ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕೊಂಚ ಮಟ್ಟಿಗೆ ಎಲ್ಲರ ಗಮನ ಸೆಳೆಯುತ್ತಿರುವುದು ಸುಮಾ ಹಾಗೂ ಸಚಿನ್ ಲವ್ ಸ್ಟೋರಿ.

ಅನಾಥ ಎಂದು ನಂಬಿಸಿ ಸುಮಾಳನ್ನು ಪ್ರೀತಿಸುತ್ತಾನೆ. ಮೊದಲಿಗೆ ಸಚಿನ್ ಜೊತೆ ಸುಮಾ ಗೆಳೆತನ ಮಾಡುತ್ತಾಳೆ. ಆದರೆ ಅದಾದ ಬಳಿಕ ಅದು ಪ್ರೀತಿಗೆ ತಿರುಗುತ್ತದೆ. ಇದೀಗ ಇಬ್ಬರು ಒಬ್ಬರಿಗೊಬ್ಬರು ಬಹಳ ಪ್ರೀತಿ ಮಾಡುತ್ತಿದ್ದಾರೆ. ಆದರೆ ಸಚಿನ್ ಗೆ ತಂದೆ ತಾಯಿ ಇಬ್ಬರೂ ಇದ್ದಾರೆ. ಆದರೆ ತಂದೆ ತಾಯಿ ಇಲ್ಲದ ಹಾಗೆ ನಟನೆ ಮಾಡುತ್ತಾನೆ. ಪಾಪ ಸುಮಾ ಸಚಿನ್ ಮಾತನ್ನೇ ನಂಬಿ ಕುಳಿತಿದ್ದಾಳೆ. ಮುಂದೆ ಸಚಿನ್ ಗೆ ಆತನ ಕುಟುಂಬ ಇದೆ ಎನ್ನುವುದು ತಿಳಿದರೆ ಸುಮಾ ಗೆ ಆಘಾತ ಆಗುವುದು ಮಾತ್ರ ಖಚಿತ.

kannada-serial-puttakkana-makkalu-written-05th-december

ಇತ್ತ ಸ್ನೇಹಾ ಜೈಲು ಪಾಲಾದುದನ್ನು ಕೇಳಿದ ಬಂಗಾರಮ್ಮ ತಲೆ ತಿರುಗಿ ಬಿದ್ದಿದ್ದಾರೆ. ಆಕೆಗೆ ತನ್ನ ಸೊಸೆಯನ್ನು ನೋಡಬೇಕು ಆಕೆಯ ಜೊತೆ ಮಾತನಾಡಬೇಕು ಎಂದೆಲ್ಲ ಅಂದುಕೊಂಡು ಇರುತ್ತಾಳೆ ಆದರೆ ತನ್ನ ಸೊಸೆಯನ್ನು ಕಾಣದೆ ಬಂಗಾರಮ್ಮ ಕಂಗಾಲಾಗಿ ಹೋಗಿದ್ದಾರೆ. ಪುಟ್ಟಕ್ಕ ಸಡನ್ ಆಗಿ ಸ್ನೇಹಾ ಜೈಲಲ್ಲಿ ಇದ್ದಾಳೆ ಎಂದು ಹೇಳಿದಾಗ ಆ ವಿಚಾರವನ್ನು ಸೀರಿಯಸ್ ಆಗಿ ತೆಗೆದುಕೊಂಡ ಬಂಗಾರಮ್ಮ ಹಠಾತ್ ಆಗಿ ಮೂರ್ಚೆ ತಪ್ಪಿ ಬಿಡುತ್ತಾರೆ.

ಸ್ನೇಹಾ ವಿಚಾರ ಕೇಳಿ ಮೂರ್ಛೆ ತಪ್ಪಿ ಬಿದ್ದ ಬಂಗಾರಮ್ಮ

ಇತ್ತ ಪುಟ್ಟಕ್ಕ ಗೆ ಇದೆಲ್ಲ ನೋಡಿ ಗಾಬರಿ ಆಗುತ್ತಾರೆ. ಸ್ನೇಹಾ ನೆನಪಲ್ಲಿ ಕಂಠಿ ಕುಡಿತದ ದಾಸನಾಗಿ ಹೋಗಿದ್ದಾನೆ. ಆತನಿಗೆ ತಾನೇನು ಮಾಡುತ್ತಿದ್ದೇನೆ ಎನ್ನುವ ಅರಿವು ಇಲ್ಲ. ಸ್ನೇಹಾ ಇಲ್ಲದ ಜೀವನ ನಶ್ವರ ಎಂದು ಆತ ಅಂದುಕೊಂಡಿದ್ದಾನೇ. ಆದರೆ ಕಂಠಿಯನ್ನು ಆತನ ಅಭಿಮಾನಿಗಳು ಈ ಸ್ಥಿತಿಯಲ್ಲಿ ನೋಡಲು ಸ್ವಲ್ಪವೂ ಇಷ್ಟ ಪಡುವುದು ಇಲ್ಲ. ಕಂಠಿ ಮುಂಚಿನ ಹಾಗೆಯೇ ಇದ್ದರೆ ಚೆನ್ನ ಎಂದು ಅಭಿಮಾನಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಸ್ನೇಹಾ ಪಾತ್ರಧಾರಿಯನ್ನೇ ಕೊಂದು, ಸೀರಿಯಲ್ ಪ್ರೇಮಿಗಳಿಗೆ ಬಹಳಷ್ಟು ನೋವು ನೀಡಿದ್ದಾರೆ ಪುಟ್ಟಕ್ಕ ಧಾರವಾಹಿ ತಂಡ. ಪುಟ್ಟಕ್ಕನ ಮಕ್ಕಳು ಎಂದು ಧಾರಾವಾಹಿಯ ಹೆಸರೇ ಇದೆ .ಆದರೆ ಪುಟ್ಟಕ್ಕ ಇದೀಗ ಒಬ್ಬ ಮಗಳನ್ನು ಕಳೆದುಕೊಂಡು ಕಂಗಾಲಾಗಿ ಹೋಗಿದ್ದಾಳೆ.

ಕಂಠಿಗೇ ಸಮಾಧಾನ ಹೇಳಿದ ಕಾಳಿ

ಕಾಳಿ ಅದೆಷ್ಟೇ ಕಂಠಿ ಗೆ ಸಮಾಧಾನ ಮಾಡಲು ಹೊರಟರು ಕಾಳಿಯ ಮಾತನ್ನು ಕೇಳದ ಕಂಠಿ ಆತನಿಗೆ ಎದುರಾಗಿ ನಿಲ್ಲುತ್ತಾನೆ. ಮುಂಚೆಲ್ಲ ಕಾಳಿ ಬಹಳ ಕೆಟ್ಟವನಾಗಿಯಿದ್ದ ಆದರೆ ಇದೀಗ ಕಾಳಿ ಒಳ್ಳೆಯವನಾಗಿ ಆಗಿದ್ದಾನೆ ಅದು ಸಹನಗೋಸ್ಕರ. ಇದೀಗ ಮತ್ತೆ ಕಂಠಿ ಕಾಳಿ ಮಧ್ಯೆ ಜಗಳ ಆಗುತ್ತಾ, ಆದರೆ ಮತ್ತೆ ಕಾಳಿ ಹಾಗೂ ಕಂಠಿ ನಡುವೆ ವೈಷಮ್ಯ ಬೆಳೆಯುತ್ತದೆ. ಅವರಿಬ್ಬರೂ ಅನ್ಯೋನ್ಯ ಆಗಿರಬೇಕು ಎನ್ನುವುದು ಧಾರವಾಹಿ ಪ್ರೇಮಿಗಳ ಆಸೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X