Puttakkana Makkalu ; ಪುಟ್ಟಕ್ಕನ ಜೀವಕ್ಕೆ ಅಪಾಯ, ಗೋಪಾಲನ ಮಾತಿಗೆ ಕಂಠಿ ಶಾಕ್?

By ಪೂರ್ವ

ಪುಟ್ಟಕ್ಕಗೆ ಸಿಂಗಾರಮ್ಮನಿಂದ ಜೀವಪಾಯವೇ ಎದುರಾಗಿದೆ. ಪುಟ್ಟಕ್ಕಗೆ ಬಂಗಾರಮ್ಮನ ಮನೆಯಲ್ಲಿರುವವರು ಸಿಂಗಾರಮ್ಮ ಎನ್ನುವುದು ತಿಳಿದಿರುವುದಿಲ್ಲ. ಸಿಂಗಾರಮ್ಮ ಬಂಗಾರಮ್ಮ ಮನೆಯಿಂದ ಹೊರ ನಡೆಯುವುದನ್ನೇ ಕಾಯುತ್ತಿರುತ್ತಾಳೆ. ಆಕೆಗೆ ಬೇಕಾಗಿರುವುದು ಬಂಗಾರಮ್ಮನ ಮನೆಯ ಪತ್ರ. ಸಿಂಗಾರಮ್ಮಗೆ ಬಂಗಾರಮ್ಮನ ಆಸ್ತಿಯ ಮೇಲೆಯೆ ಕಣ್ಣು. ಅದಕ್ಕೋಸ್ಕರ ಸಿಂಗಾರಮ್ಮ ಏನು ಬೇಕಾದರೂ ಮಾಡುತ್ತಾಳೆ.

ಸಿಂಗಾರಮ್ಮ ಮನೆಯೊಳಗೆ ಬಂದಿರುವುದು ರಾಧಾಗೆ ತಿಳಿದಿರುತ್ತದೆ. ಮೊದಲಿಗೆ ಸಿಂಗಾರಮ್ಮನನ್ನು ರಾಧ ತನ್ನ ಅತ್ತೆ ಎಂದು ತಿಳಿದುಕೊಂಡು ತನಗೆ ಮದುವೆ ಇಷ್ಟ ಇಲ್ಲ ತಾನು ಕಂಠಿಯನ್ನು ಪ್ರೀತಿಸುವುದಾಗಿ ಹೇಳುತ್ತಿರುತ್ತಾಳೆ. ಇದೆಲ್ಲವನ್ನು ಕೇಳಿದ ಸಿಂಗಾರಮ್ಮ ನನಗೂ ಎಲ್ಲವೂ ಕೂಡ ತಿಳಿದಿದೆ ಎಂದಾಗ ಆಶ್ಚರ್ಯವಾಗುತ್ತದೆ. ಆ ಬಳಿಕ ಮನೆಯಲ್ಲಿರುವುದು ಸಿಂಗಾರಮ್ಮ ಬಂಗಾರಮ್ಮ ಅಲ್ಲ ಎನ್ನುವ ವಿಚಾರ ಗೊತ್ತಾಗುತ್ತೆ.

kannada serial puttakkana makkalu written 07th February

ಕಂಠಿ ಗೆ ಮನೆಯಲ್ಲಿರುವುದು ಬಂಗಾರಮ್ಮ ಅಲ್ಲ ಎನ್ನುವ ವಿಚಾರ ತಿಳಿಯುತ್ತದೆ. ಆತ ಮನೆಯವರಿಗೆ ಕರೆ ಮಾಡಿ ಮನೆಯಲ್ಲಿರುವುದು ಅಮ್ಮ ಅಲ್ಲ ಸಿಂಗಾರಮ್ಮ ಎನ್ನುವ ವಿಚಾರವನ್ನು ತಿಳಿಸುತ್ತಾನೆ. ಮನೆಯವರಿಗೆಲ್ಲಾ ಬಹಳ ಆಘಾತವಾಗುತ್ತದೆ ಸಿಂಗಾರಮ್ಮ ಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ ತಾನು ಮನೆ ಮಂದಿ ಜೊತೆಗೆ ಸಿಕ್ಕಿಬಿದ್ದೆ ಎಂದುಕೊಂಡು ವಸು ಮಗುವನ್ನು ಎತ್ತಿಕೊಂಡು ಬ್ಲಾಕ್ ಮೇಲ್ ಮಾಡುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ಗೆ ಬಹಳ ಆತಂಕವಾಗುತ್ತದೆ.

ಆತಂಕದಲ್ಲಿರುವ ಮನೆಮಂದಿ

ಪುಟ್ಟಕ್ಕ ಸಿಂಗಾರಮ್ಮನ ಕೈಯಿಂದ ಮಗುವನ್ನು ಬಚಾವ್ ಮಾಡುತ್ತಾಳೆ. ಆದರೆ ಸಿಂಗಾರಮ್ಮ ಮಾತ್ರ ಬಹಳ ಕೋಪದಿಂದ ಪುಟ್ಟಕ್ಕನ ಹೊಟ್ಟೆಗೆ ಚೂರಿಯಿಂದ ಚುಚ್ಚುತ್ತಾಳೆ. ಇದರಿಂದ ತೀವ್ರ ಅಸ್ವಸ್ಥಳಾದ ಪುಟ್ಟಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಇದೀಗ ಪುಟ್ಟಕ್ಕ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ. ಪುಟ್ಟಕ್ಕಾಗೆ ಹಲವು ಆರೋಗ್ಯದ ಸಮಸ್ಯೆಗಳು ಭಾದಿಸುತ್ತಿತ್ತು. ಅದರಲ್ಲಿ ಇದೀಗ ಸಿಂಗಾರಮ್ಮ ಹೊಟ್ಟೆಗೆ ಚೂರಿ ಇರಿದ ಕಾರಣ ಅನಾರೋಗ್ಯ ಬಹಳಷ್ಟು ಉಲ್ಬಣಗೊಳ್ಳುತ್ತದೆ. ಪುಟ್ಟಕ್ಕ ಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತ ಹೋಗಿರುವುದರಿಂದ ಆಕೆಗೆ ರಕ್ತ ಬೇಕು ಎಂದು ಡಾಕ್ಟರ್ ಕೇಳುತ್ತಾರೆ. ಅಲ್ಲೇ ಇದ್ದ ಬಂಗಾರಮ್ಮ ಡಾಕ್ಟರ್ ಬಳಿ ಬಹಳಷ್ಟು ರಿಕ್ವೆಸ್ಟ್ ಮಾಡಿಕೊಳ್ಳುತ್ತಾರೆ.

ಅಮ್ಮನ ಸ್ಥಿತಿ ನೋಡಲಾಗದೆ ಮರುಕಪಟ್ಟ ಕಂಠಿ

ನನ್ನ ಜೀವದ ಗೆಳತಿಯನ್ನು ರಕ್ಷಣೆ ಮಾಡಿ ನನ್ನಿಂದಲೇ ಬೇಕಾದರೆ ರಕ್ತವನ್ನು ತೆಗೆದುಕೊಳ್ಳಿ ನನಗೆ ನನ್ನ ಗೆಳತಿ ಬೇಕು ಆಕೆಯ ಜೀವ ಉಳಿಸಿ ಡಾಕ್ಟರ್ ಎಂದು ಬೇಡಿಕೊಳ್ಳುತ್ತಾರೆ . ಇದನ್ನು ಕೇಳಿದ ಡಾಕ್ಟರ್ ಪುಟ್ಟಕ್ಕಾಗೆ ಬಹಳಷ್ಟು ಇಂಜುರಿಯಾಗಿದೆ. ಆದಕಾರಣ ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದಾಗ ಸಹನಾ ಬಹಳ ಧೈರ್ಯ ಮಾಡಿ ನನ್ನ ರಕ್ತ ಹಾಗೂ ಅಮ್ಮನ ರಕ್ತವೊಂದೇ ಅದರಿಂದ ಅವರಿಗೆ ನಾನೇ ರಕ್ತವನ್ನು ನೀಡುತ್ತೇನೆ ಎಂದು ಸಹನ ಹೇಳುತ್ತಾಳೆ. ಸಹನಾ ಮಾತಿಗೆ ಡಾಕ್ಟರ್ ಆಯ್ತು ಎನ್ನುತ್ತಾರೆ.

ಕಂಠಿ ಮುಂದೆ ಕಲಿ ವಿಚಾರ ಬಾಯ್ಬಿಟ್ಟ ಗೋಪಾಲ

ಇತ್ತ ಪುಟ್ಟಕ್ಕ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಇತ್ತ ಗೋಪಾಲ ಕಲಿಯನ್ನು ನಾವು ಪೊಲೀಸರಿಗೆ ಒಪ್ಪಿಸಿದ್ದೆವು ಆದರೆ ಇದೀಗ ಕಲಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದಾಗ ಕೋಪಗೊಂಡ ಕಂಠಿ ಕಲಿ ಪೊಲೀಸ್ ಸ್ಟೇಶನ್ ನಲ್ಲಿ ಇದ್ನಾ ಎಂದು ಕೇಳುತ್ತಾನೆ. ಗೋಪಾಲ ನ ಮುಖ ನೋಡುತ್ತಲೇ ಕಂಠಿ ಬಹಳಷ್ಟು ಕೋಪ ವ್ಯಕ್ತಪಡಿಸುತ್ತಾನೆ. ಇತ್ತ ಸಚಿನ್ ಸುಮಾಳನ್ನು ಬಹಳ ಪ್ರೀತಿ ಮಾಡುತ್ತಾನೆ.ಆದರೆ ಆತ ಹೇಳಿದ ಸುಳ್ಳು ಮಾಂತಿನಿಂದಾಗಿ ಸುಮಾ ಮನಸ್ಸಿಗೆ ಘಾಸಿಯಾಗಿದೆ. ಸುಮಾ ಜೊತೆಗಿನ ಸಚಿನ್ ಪ್ರೀತಿ ಕಂಠಿ ಗೆ ತಿಳಿದು ಹೋಗಿದೆ. ಕಂಠಿ ಅವರಿಬ್ಬರನ್ನು ಒಂದು ಮಾಡುತ್ತಾನ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X