Puttakkana Makkalu ; ಮುರಳಿ ಜೊತೆ ಜೀವನ ನಡೆಸಲು ಇಷ್ಟ ಇಲ್ಲ ಎಂದ ಸಹನಾ, ಶಾಕ್ ಆಗಿದ್ದೇಕೆ ಪುಟ್ಟಕ್ಕ..?

By ಪೂರ್ವ

ಸ್ನೇಹ ಸಾವಿನ ನಂತರ ಪುಟ್ಟಕ್ಕ ಬಹಳ ನೊಂದಿರುತ್ತಾಳೆ. ಸ್ನೇಹ ಎಂದರೆ ಪುಟ್ಟಕ್ಕ ಗೆ ನೂರಾನೆ ಬಲ ಇದ್ದ ಹಾಗೆಯೇ. ಪುಟ್ಟಕ್ಕ ತನ್ನ ಮಕ್ಕಳ ಬಗ್ಗೆ ಸಾವಿರಾರು ಆಲೋಚನೆಗಳನ್ನು ಇಟ್ಟುಕೊಂಡಿರುತ್ತಾಳೆ. ಆಕೆಗೆ ತನ್ನ ಮಕ್ಕಳು ಬಹಳ ಉತ್ತಮವಾಗಿ ಜೀವನ ಸಾಗಿಸಬೇಕು ಹಾಗೆ ವಿದ್ಯಾವಂತರಾಗಬೇಕು ಎನ್ನುವ ಆಲೋಚನೆ ಇರುತ್ತದೆ. ಆದರೆ ತನ್ನ ದೊಡ್ಡ ಮಗಳನ್ನು ಆಕೆಗೆ ಓದಿಸಲು ಸಾಧ್ಯವಾಗುವುದಿಲ್ಲ ಆದರೆ ಪುಟ್ಟಕ್ಕ ತನ್ನ ಎರಡು ಮಕ್ಕಳನ್ನು ಬಹಳ ಚೆನ್ನಾಗಿಯೇ ಓದಿಸುತ್ತಾಳೆ .

ಸುಮಾ ಎಂಜಿನಿಯರಿಂಗ್ ಓದುತ್ತಿದ್ದರೆ ಸ್ನೇಹಾ ಡಿಸಿ ಆಗಿ ಬಿಡುತ್ತಾಳೆ. ಅದರ ಜೊತೆ ಸಹನಾ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾಳೆ ಎಂದು ಪುಟ್ಟಕ್ಕ ಅಂದುಕೊಂಡು ಇರುತ್ತಾಳೆ. ಆದರೆ ಅಲ್ಲಿ ಆಗಿದ್ದೆ ಒಂದು. ಪುಟ್ಟಕ್ಕ ತನ್ನ ಮಗಳು ಸ್ನೇಹಾ ನ ಕಳೆದುಕೊಳ್ಳುತ್ತಾಳೆ. ಯಾರು ಸತ್ತು ಹೋಗಿದ್ದಾಳೆ ಎಂದುಕೊಂಡಿದ್ದರು ಆಕೆ ಬದುಕಿದ್ದಾಳೆ. ಸಹನಾ ಸ್ನೇಹಾ ಜೊತೆ ಆಕೆಯ ಮನೆಗೆ ಬರುವುದು ಎಂದು ಇತ್ತು ಆದರೆ ಸ್ನೇಹಾ ಸಾವಿನ ಸುದ್ದಿ ಕಾಳಿಯ ಕಿವಿಗೆ ಬರ ಸಿಡಿಲು ಬಡಿದ ಹಾಗೆ ಬಂದು ಬೀಳುತ್ತದೆ. ಇದನ್ನು ಸಹನಾ ಬಳಿ ಹೇಳದೆ ಆಕೆಯ ಮನೆಗೆ ಕರೆದುಕೊಂಡು ಬರುತ್ತಾನೆ ಕಾಳಿ . ಸ್ನೇಹ ಸತ್ತ ವಿಚಾರ ಕೇಳಿ ಸಹನಾ ಗೆ ಶಾಕ್ ಆಗುತ್ತದೆ.

kannada serial puttakkana makkalu written 07th November

ಹಾಗೆಯೇ ಪುಟ್ಟಕ್ಕಾಗೆ ತನ್ನ ಮಗಳನ್ನು ನೋಡಿ ಇನ್ನೂ ಕೂಡ ಶಾಕ್ ಆಗುತ್ತದೆ.ತನ್ನ ಮಗಳು ನನ್ನ ಬಳಿ ಸುಳ್ಳು ಹೇಳಿಬಿಟ್ಟಳಲ್ಲ ಎನ್ನುವ ಬೇಸರ ಆಕೆಗೆ ಕಾಡುತ್ತದೆ. ನನ್ನ ಮಗಳು ನನ್ನಿಂದಲೇ ನಿಜ ವಿಚಾರವನ್ನು ಮುಚ್ಚಿಡುವ ಹಾಗೆ ಆಯ್ತಲ್ಲ ಆಕೆಗೆ ನನ್ನ ಮೇಲೆ ಸ್ವಲ್ಪ ಕೂಡ ಕನಿಕರವೇ ಇಲ್ಲದಾಗಿ ಹೋಗಿದೆ ಎಂದು ಕಂಬನಿ ಇಡುತ್ತಾಳೆ. ಮೊದಲು ಸಹನಾಳನ್ನು ತನ್ನ ಮಗಳಾಗಿ ಸ್ವೀಕಾರ ಮಾಡಲು ಹಿಂದೇಟು ಹಾಕುತ್ತಾಳೆ ಪುಟ್ಟಕ್ಕ. ಆದರೆ ಕೊನೆಗೆ ಸಹನಳನ್ನು ಬಿಗಿದಪ್ಪಿ ಕಂಬನಿ ಮಿಡಿಯುತ್ತಾಳೆ.

ಸಹನಾ ಜೀವನ ಹಾಳಾಯ್ತೆಂದು ಮರುಕ ಪಟ್ಟ ಪುಟ್ಟಕ್ಕ?

ಇನ್ನು ಮುರಳಿ ಗೆ ಮಾತ್ರ ಸಹನಾ ಬದುಕಿರುವ ವಿಚಾರ ತಿಳಿದು ಖುಷಿ ಆಗುತ್ತದೆ. ಜೊತೆಗೆ ಸಂಕಟ ಪಡುತ್ತಾನೆ. ತಾನು ಪ್ರೀತಿಸಿದ ಹೆಂಡತಿ ಜೀವಂತವಾಗಿ ಇದ್ದು ನಾನು ಬೇರೆ ಮದುವೆ ಆಗಿ ಬಿಟ್ಟೆನಲ್ಲ ಎಂದು ಬಹಳ ಹೆಸರಪಟ್ಟುಕೊಂಡು ಇರುತ್ತಾನೆ. ಇತ್ತ ಸಹನಾ ಮುರಳಿಯ ಜೊತೆ ಬಹಳ ಕಠೋರವಾಗಿ ನಡೆದುಕೊಳ್ಳುತ್ತಾಳೆ. ಆಕೆಗೆ ಮುರಳಿ ಹಾಗೂ ವಿನುತ ಬಹಳ ಒಟ್ಟಾಗಿ ಜೀವನ ಸಾಗಿಸಬೇಕು ಹಾಗೆಯೇ ಯಾವುದೇ ಮನಸ್ತಾಪ ಇಲ್ಲದೆ ಜೀವನದಲ್ಲಿ ಖುಷಿಯಾಗಿರಬೇಕು ಎಂದು ಆಸೆ ಇರುತ್ತದೆ.ಅದಕ್ಕೆ ಮುರಳಿ ಮೇಲೆ ಅದೆಷ್ಟೇ ಪ್ರೀತಿ ಇದ್ದರೂ ಪ್ರೀತಿಯೇ ಇಲ್ಲದ ಹಾಗೆ ನಡೆದುಕೊಳ್ಳುತ್ತಾಳೇ.

ಮಗಳ ಜೀವನದ ಬಗ್ಗೆ ಚಿಂತಿಸುತ್ತಿರುವ ಪುಟ್ಟಕ್ಕ

ಇನ್ನು ಸಹನಾ ಳನ್ನು ನೋಡಿದ ಪುಟ್ಟಕ್ಕ ತನ್ನ ಮಗಳ ಕ್ಷಮೆ ಕೇಳುತ್ತಾಳೆ. ವಿನುತ ಹಾಗೂ ಮುರಳಿ ಇಬ್ಬರು ಮದುವೆ ಆಗಲು ನಾನು ಕಾರಣ. ಮುರಳಿ ಸ್ವಲ್ಪ ವೈಟ್ ಮಾಡುತ್ತಿದ್ದರೆ ಸಹನಾ ಜೊತೆ ಜೀವನ ಚೆನ್ನಾಗಿಯೇ ಇರುತ್ತಿತ್ತು ಎಂದು ಹೇಳಿ ಅಳುತ್ತಾಳೆ. ಆಕೆಗೆ ಗೊತ್ತಿಲ್ಲ ಸಹನಾ ಮುರಳಿ ಮದುವೆ ಆಗುವ ವೇಳೆ ಅಲ್ಲಿಯೇ ಇದ್ದಳೆಂದು . ಕೊನೆಗೆ ಸುಮಾ ತನ್ನ ಅಕ್ಕನ ಬಳಿ ಕೇಳುತ್ತಾಳೆ ಅಕ್ಕ ಮುರಳಿ ಭಾವನ ಮದುವೆಗೆ ನಿನ್ನ ಅಂಗಡಿಯಿಂದ ತಾನೇ ಕ್ಯಾಟರಿಂಗ್ ಮಾಡಿದ್ದು ಎಂದು ಕೇಳಿದಾಗ ಬಹಳ ಶಾಕ್ ಆಗುತ್ತದೆ ಅಂದರೆ ಸಹನ ಗೆ ಮುರಳಿ ಮದುವೆಯಾಗುತ್ತಿರುವ ವಿಚಾರ ಗೊತ್ತಿತ್ತಾ ಎಂದು ಬೆರಗಾಗಿ ಪ್ರಾಣ ಮುಖ ನೋಡಿದಾಗ ಸಹನ ನನಗೆ ಗೊತ್ತಿದೆ ನಾನು ಅವರ ಜೀವನದಲ್ಲಿ ಎಂದಿಗೂ ಅಡ್ಡ ಬರುವುದಿಲ್ಲ ಅವರು ಚೆನ್ನಾಗಿರಲಿ ಅವರ ಮದುವೆಗೆ ನಾನೇ ಊಟದ ವ್ಯವಸ್ಥೆಯನ್ನು ಮಾಡಿದ್ದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಗೆ ಮಾತ್ರ ಇನ್ನೂ ದುಃಖ ಹೆಚ್ಚಾಗುತ್ತದೆ. ನಿನ್ನ ಕೈಯ್ಯಾರೆ ನಿನ್ನ ಜೀವನ ಹಾಳು ಮಾಡಿಕೊಂಡೆ ಅಲ್ವಾ ಎಂದು ಕಂಬನಿ ಮಿಡಿಯುತ್ತಾಳೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X