Puttakkana Makkalu ; ಸ್ನೇಹಾ ಸಾವಿನ ವಿಚಾರ ಬಂಗಾರಮ್ಮಗೆ ತಿಳಿಯಿತು, ಪುಟ್ಟಕ್ಕನನ್ನೇ ಪ್ರಶ್ನೆ ಮಾಡಿದ ಬಂಗಾರಮ್ಮ !
ಯಾವ ವಿಚಾರ ಬಂಗಾರಮ್ಮನ ಕಿವಿಗೆ ಬೀಳಬಾರದು ಎಂದು ಮನೆಮಂದಿಯೆಲ್ಲ ಅದೆಷ್ಟು ಕಷ್ಟ ಪಡುತ್ತಿದ್ದಾರೋ, ಸ್ನೇಹಾ ಸಾವಿನ ಸುದ್ದಿ ಬಂಗಾರಮ್ಮಗೆ ತಿಳಿದರೆ ಆಕೆ ಖಂಡಿತವಾಗಿ ತಡೆದುಕೊಳ್ಳುವುದು ಇಲ್ಲ ಎಂದು ತಿಳಿದರೂ ಕೂಡ ಬಂಗಾರಮ್ಮಗೆ ಸ್ನೇಹಾ ಸಾವಿನ ಸುದ್ದಿಯನ್ನು ಹೇಗಾದರೂ ಮುಟ್ಟಿಸಬೇಕು ಎಂದುಕೊಂಡು ಇರುತ್ತಾಳೆ. ಬಂಗಾರಮ್ಮ ತನ್ನ ಸೊಸೆ ಸ್ನೇಹಾ ಟ್ರೈನಿಂಗ್ ಗೆ ಹೋಗಿದ್ದಾಳೆ. ಆಕೆ ಯಾವತ್ತೂ ನಮ್ಮಿಂದ ದೂರ ಆಗುವುದಿಲ್ಲ ಎಂದುಕೊಂಡು ಇರುತ್ತಾಳೆ. ಆದರೆ ಬಂಗಾರಮ್ಮ ಅಂದುಕೊಂಡಿದ್ದು ಒಂದು ಅಲ್ಲಿ ನಡೆದಿದ್ದು ಇನ್ನೊಂದು. ಬಂಗಾರಮ್ಮಗೆ ಯಾವ ವಿಚಾರ ಗೊತ್ತಾಗಬಾರದು ಎಂದುಕೊಂಡಿದ್ರೋ ಆ ವಿಚಾರ ಇದೀಗ ಬಂಗಾರಮ್ಮನವರ ಕಿವಿಗೆ ಬಿದ್ದಿದೆ.
ಬಂಗಾರಮ್ಮ ಗೆ ಕರೆ ಮಾಡಿದ ರಾಜಿ ಮೊದಲು ಹೇಳಲೋ ಬೇಡವೋ ಎನ್ನುವ ರೀತಿ ಮೀನಮೇಷ ಎಣಿಸುತ್ತಿರುತ್ತಾಳೆ. ಆದರೆ ಆ ನಂತರ ಪೀಠಿಕೆಯಿಂದ ನೇರ ವಿಚಾರಕ್ಕೆ ಬರುತ್ತಾಳೆ. ನಿಮ್ಮ ಮನೆಯ ಸೊಸೆ ಬದುಕಿದ್ದಾಳೆ ಎಂದು ನೀವು ಅಂದುಕೊಂಡಿದ್ದೀರಿ ಆದರೆ ನಿಮ್ಮ ಸೊಸೆ ಬದುಕಿಲ್ಲ. ಅಂದು ಕಾರು ಆಕ್ಸಿಡೆಂಟ್ ಆಗುವ ವೇಳೆ ನಮಗಿಬ್ಬರಿಗೂ ಬಹಳ ಗಂಭೀರ ಗಾಯ ಆಗಿತ್ತು. ಸ್ನೇಹಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ನೀವು ಬದುಕಿ ಉಳಿದಿದ್ದೀರಾ. ಪಾಪ ಸ್ನೇಹಾ ಆಯಸ್ಸು ಅಷ್ಟೇ ಇತ್ತು ಎಂದು ರಾಜಿ ಹೇಳಿದಾಗ ಬಂಗಾರಮ್ಮಗೆ ಆಕಾಶವೇ ಕೆಳಗೆ ಬಿದ್ದ ಹಾಗೆ ಆಗುತ್ತದೆ.

ಆಕೆಯ ಕಣ್ಣಾಲಿಗಳು ತುಂಬಿ ತನ್ನ ಗಂಡ ಮಕ್ಕಳು ಯಾರು ಈ ವಿಚಾರವನ್ನು ನನ್ನ ಬಳಿ ಪ್ರಸ್ತಾಪ ಮಾಡಲೇ ಇಲ್ಲ ಎಂದು ಮನದಲ್ಲಿಯೇ ನೊಂದುಕೊಂಡು ಕುಸಿದು ಹೋಗುತ್ತಾಳೆ. ಬಂಗಾರಮ್ಮನ ಗೋಳಾಟ ಕಂಡು ಮನೆ ಮಂದಿ ಓಡೋಡಿ ಬರುತ್ತಾರೆ. ಏನಾಯಿತು ಎಂದು ಮೆತ್ತಗೆ ಬಂಗಾರಮ್ಮ ಬಳಿ ಕೇಳಿದಾಗ ಬಂಗಾರಮ್ಮ ಏನಾಯಿತು ಎಂದು ಕೇಳುತ್ತಿದ್ದೀರಿ ಅಲ್ವಾ. ಎಲ್ಲಾ ಆಗಬಾರದ್ದು ನಡೆದೇ ಹೋಯಿತು ಎಂದು ಬಹಳ ಬೇಸರದಿಂದ ಅಳುತ್ತಾ ಹೇಳುತ್ತಾಳೆ.
ಸ್ನೇಹಾ ನಿಧನಕ್ಕೆ ಕಂಬನಿ ಮಿಡಿದ ಬಂಗಾರಮ್ಮ
ಸ್ನೇಹಾ ನಿಧನದ ವಿಚಾರ ನನ್ನ ಬಳಿ ಯಾರಾದರೂ ಹೇಳಬಹುದಿತ್ತು. ಇಂತಹ ದೊಡ್ಡ ವಿಚಾರವನ್ನು ನೀವು ಮುಚ್ಚಿಟ್ಟಿದ್ದು ಯಾಕೆ. ನಾನು ಅಷ್ಟೊಂದು ಬೇಡವಾದೇನಾ ಎಂದು ಜೋರಾಗಿ ಅಳುತ್ತಾಳೆ. ಬಂಗಾರಮ್ಮನ ಸಮಾಧಾನ ಮಾಡಲು ಯಾರಿಂದಲೂ ಸಾಧ್ಯ ಆಗಲೇ ಇಲ್ಲ. ರಾಧಾ ಮಾತ್ರ ಬಹಳ ಖುಷಿಯಿಂದ ಒಳಗೊಳಗೇ ನಗುತ್ತಿರುತ್ತಾಳೆ. ಬಂಗಾರಮ್ಮ ಆ ಸಂದರ್ಭ ಮನೆಯವರ ಬಳಿ ಹೇಳುತ್ತಾಳೆ. ನೀವು ನನಗೆ ಸಿಂಗಾರಮ್ಮನಿಗಿಂತ ಹೆಚ್ಚಾಗಿ ನೋವನ್ನು ನೀಡಿದ್ದೀರಿ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಇನ್ನು ಪುಟ್ಟಕ್ಕನ ಮನೆಗೆ ಆಗಮಿಸಿದ ಬಂಗಾರಮ್ಮ ನೋವಿನಲ್ಲಿ ಪುಟ್ಟಕ್ಕ ನ ಜೊತೆ ಮಾತಿಗೆ ಇಳಿಯುತ್ತಾಳೆ. ಸ್ನೇಹಾ ಎಲ್ಲಿದ್ದಾಳೆ ಎಂದು ಕೇಳಿದಾಗ ಸಹನಾ ಮೆತ್ತಗೆ ಟ್ರೈನಿಂಗ್ ಗೆ ಹೋಗಿದ್ದಾಳೆ ಅತ್ತೆ ಎಂದು ಹೇಳುತ್ತಾಳೆ.
ಪುಟ್ಟಕ್ಕನ ಮನೆಗೆ ನೋವಿನಿಂದ ಆಗಮಿಸಿದ ಬಂಗಾರಮ್ಮ
ಆ ನಂತರ ಯಾವಾಗ ಬರುತ್ತಾಳೆ ಎಂದಾಗ ಟ್ರೈನಿಂಗ್ ಮುಗಿದ ಕೂಡಲೇ ಬರುತ್ತಾಳೆ ಎಂದು ಸಹನಾ ಹೇಳುತ್ತಾಳೆ. ಬಂಗಾರಮ್ಮ ಪುನಃ ಯಾವಾಗ ಟ್ರೈನಿಂಗ್ ಮುಗಿಯುತ್ತದೆ ಎಂದಾಗ ಪುಟ್ಟಕ್ಕ ತಬ್ಬಿಬ್ಬಾಗುತ್ತಾಳೆ . ಏನೋ ಒಂದು ಉತ್ತರ ನೀಡಬೇಕು ಎಂದುಕೊಂಡಾಗ ಬಂಗಾರಮ್ಮ ಬಹಳ ಬೇಸರದಿಂದ ಪುಟ್ಟಕ್ಕ ನಿನ್ನನ್ನು ಅದೆಷ್ಟು ನಾನು ನಂಬಿದ್ದೆ ಆದರೆ ಸ್ನೇಹಾ ಸಾವಿನ ವಿಚಾರ ನನ್ನ ಬಳಿ ಹೇಳಬೇಕು ಎಂದು ನಿನಗೆ ಅನ್ನಿಸ್ಲಿಲ್ವಾ. ನಿನ್ನನ್ನು ನಾನು ಬಹಳಷ್ಟು ನಂಬಿದ್ದೆ, ಆದರೆ ನೀನು ಮಾಡಿದ್ದಾದರೂ ಏನು ಬಹಳ ಬೇಸರದಿಂದ ಹೇಳಿ ಅಳುತ್ತಾಳೆ. ನನ್ನ ಸೊಸೆ ಇನ್ನಿಲ್ಲ. ಆದರೆ ನನ್ನ ಬಳಿ ಈ ವಿಚಾರ ಹೇಳಿದರೆ ನನಗೆ ಆಗಲೇ ತಿಳಿಯುತ್ತಿತ್ತು. ಎಲ್ಲರೂ ಮೋಸ ಮಾಡಿದರೂ ಎಂದು ಅಳುತ್ತಾ ಸೋಪಾ ಮೇಲೆ ಕುಳಿತುಕೊಳ್ಳುತ್ತಾಳೆ. ಹಾಗೆಯೇ ಪ್ರಜ್ಞಾಹೀನ ಸ್ಥಿತಿ ತಲುಪುತ್ತಾಳೆ.


Click it and Unblock the Notifications











