Puttakkana Makkalu ;ಸ್ನೇಹಾ ಪ್ರಯತ್ನಕ್ಕೆ ಕೊನೆಗೂ ಸಂದ ಜಯ, ಸಿಂಗಾರಮ್ಮನ ಕಪಿ ಮುಷ್ಟಿಯಿಂದ ಹೊರ ಬಂದ ಬಂಗಾರಮ್ಮ..!
ಸ್ನೇಹಾ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಸ್ನೇಹ ಗೆ ಯಾವತ್ತೂ ಮನೆಯಲ್ಲಿರುವಾಕೆ ನಮ್ಮ ಅತ್ತೆ ಅಲ್ಲ ಎನ್ನುವುದು ಮನಸ್ಸಿಗೆ ಬರಲಿಲ್ಲ. ಅಷ್ಟು ಚೆನ್ನಾಗಿ ಸಿಂಗಾರಮ್ಮ ನಾಟಕವಾಡಿದ್ದರು. ತನ್ನ ತಾಯಿಯ ನಡವಳಿಕೆ ಬದಲಾಗಿದ್ದರು ತನ್ನ ತಾಯಿ ಹೇಳಿದ ಮಾತನ್ನು ತಪ್ಪಿ ನಡೆದುಕೊಂಡವರಲ್ಲ. ಆದ ಕಾರಣ ತನ್ನ ತಾಯಿಯ ಮಾತನ್ನು ಮೀರುತ್ತಿರಲಿಲ್ಲ. ಕಂಠಿ ಗೆ ತನ್ನ ತಾಯಿಯ ಮಾತೆ ವೇದ ವಾಕ್ಯ . ಆಕೆಯ ಮಾತನ್ನು ಚಾಚೂ ತಪ್ಪದೆ ಸ್ವೀಕಾರ ಮಾಡುತ್ತಿದ್ದ ಅದರ ಪ್ರಕಾರವಾಗಿ ನಡೆದುಕೊಳ್ಳುತ್ತಿದ್ದ.
ಇನ್ನು ಸ್ನೇಹಾ ಗೆ ಕೂಡ ಸಿಂಗಾರಮ್ಮ ನ ಮೇಲೆ ಡೌಟ್ ಬರಲೇ ಇಲ್ಲ. ಇನ್ನು ಮೇಷ್ಟ್ರು ಬಂದು ಸ್ನೇಹಾ ಬಳಿ ಬಂಗಾರಮ್ಮ ಅದರ ನಡವಳಿಕೆ ಬಗ್ಗೆ ಹೇಳುತ್ತಾರೆ. ಆಗ ಸ್ನೇಹಾಗೆ ಡೌಟ್ ಬರುತ್ತದೆ. ಅದಲ್ಲದೆ ಕಾನ್ಸ್ಟೇಬಲ್ ಒಬ್ಬರು ಕೂಡ ಬಂದು ನಿಮ್ಮ ಮನೆಯಲ್ಲಿ ಇರುವವರು ಸಿಂಗಾರಮ್ಮ. ಬಂಗಾರಮ್ಮ ಅವರು ನಿಮ್ಮ ಮನೆಯಲ್ಲಿ ಇಲ್ಲ ಅವರಿಗೆ ಏನಾದರೂ ಹೆಚ್ಚು ಕಮ್ಮಿ ಆಗಿದೆಯೋ ಗೊತ್ತಿಲ್ಲ. ಇದರಿಂದ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ವಾರ್ನಿಂಗ್ ಅನ್ನು ಕೂಡ ನೀಡಿರುತ್ತಾರೆ.

ಆಗ ಸ್ನೇಹ ಗೆ ಕೊಂಚ ಅನುಮಾನ ಸಿಂಗಾರಮ್ಮನ ಮೇಲೆ ಮೂಡುತ್ತದೆ. ಆದರೆ ಯಾವುದನ್ನೂ ಕೂಡ ಆಕೆ ಹೇಳಿಕೊಳ್ಳುವುದಿಲ್ಲ. ಇನ್ನು ಕಂಠಿ ಬಳಿ ಇದೆಲ್ಲವನ್ನ ಹೇಳಿದರೆ ಆತನಿಗೆ ಬಹಳ ಕೋಪ ಬರುತ್ತಿತ್ತು. ಎಲ್ಲಾದರೂ ನನ್ನನ್ನು ಸ್ವಲ್ಪ ಬೈದರು ಕೂಡ ನನ್ನಿಂದ ಅದನ್ನು ತೊಳೆದುಕೊಳ್ಳಲು ಸಾಧ್ಯವಿಲ್ಲ. ಆದ ಕಾರಣ ನಾನು ಈ ವಿಚಾರವನ್ನು ತನ್ನ ಗಂಡನಿಂದ ಮುಚ್ಚಿಡಬೇಕು ಎಂದು ಡಿಸೈಡ್ ಮಾಡುತ್ತಾಳೆ. ಇನ್ನು ಸಿಂಗಾರಮ್ಮನ ಬಂಡವಾಳ ಬಯಲಾದ ಮೇಲೆ ಸ್ನೇಹ ತನ್ನ ಅತ್ತೆಯ ಹುಡುಕಾಟದಲ್ಲಿ ನಿರತಳಾಗುತ್ತಾಳೆ.
ಅತ್ತೆಯ ಹುಡುಕಾಟದಲ್ಲಿ ಸ್ನೇಹಾ
ಆಕೆಗೆ ತನ್ನ ಅತ್ತೆ ಜೀವಪಾಯದಿಂದ ಪಾರಾಗಬೇಕು ಆಕೆ ಸಂತೋಷವಾಗಿರಬೇಕು ಎಂದು ಅಂದುಕೊಳ್ಳುತ್ತಾಳೆ. ಹಾಗೆಯೇ ಬಂಗಾರಮ್ಮನನ್ನು ಹುಡುಕುತ್ತಿರುವ ವಿಚಾರ ಸಿಂಗಾರಮ್ಮನ ಗಮನಕ್ಕೆ ಬಾರದ ಹಾಗೆ ಹುಡುಕಾಟ ಶುರು ಮಾಡುತ್ತಾಳೆ ಹಾಗೆಯೇ ಆಕೆ ಕೊನೆಗೆ ತನ್ನ ಅತ್ತೆ ಇರುವ ಸ್ಥಳವನ್ನು ಕಂಡು ಹುಡುಕಿ ಓಡೋಡಿ ಬರುತ್ತಾಳೆ. ಇದು ಬಂಗಾರಮ್ಮನ ಸಿಂಗಾರಮ್ಮನ ಕಡೆಯವರು ಕಟ್ಟಿ ಹಾಕಿರುತ್ತಾರೆ. ಆಕೆಗೆ ಪ್ರಜ್ಞೆ ಕೂಡ ಇರುವುದಿಲ್ಲ. ಆ ಕೂಡಲೇ ಅಲ್ಲಿಗೆ ಬಂದ ಸ್ನೇಹ ತನ್ನ ಹತ್ತಿರದಿಂದ ನೋಡಿ ಬಹಳ ಖುಷಿ ಪಡುತ್ತಾಳೆ.
ಅತ್ತೆಯ ಸ್ಥಿತಿ ಕಂಡು ಮರುಗಿದ ಸ್ನೇಹಾ
ಆಕೆಗೆ ತನ್ನ ಅತ್ತೆಯನ್ನು ಇಂತಹ ಸ್ಥಿತಿಯಲ್ಲಿ ನೋಡಿ ಬಹಳ ಬೇಸರವಾಗುತ್ತದೆ. ಬೇಗ ಬೇಗ ಅತ್ತೆಯನ್ನು ಎಚ್ಚಾರಗೊಳಿಸಿ ಅತ್ತೆಗೆ ಕಟ್ಟಿದ್ದ ಹಗ್ಗವನ್ನು ಮೆಲ್ಲಗೆ ಬಿಚ್ಚುತ್ತಾಳೆ ಇನ್ನೂ ಬಂಗಾರಮ್ಮಗೆ ಸ್ನೇಹನ ನೋಡಿ ಬಹಳ ಖುಷಿಯಾಗುತ್ತದೆ. ಸ್ನೇಹ ನೀನು ಇಲ್ಲಿಗೆ ಹೇಗೆ ಬಂದೆ ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ. ಹಾಗೆಯೇ ಸಿಂಗಾರಮ್ಮ ಮಾಡಿದ ಕಿತಾಪತಿ ಇಂಚಿಂಚೂ ಸ್ನೇಹನ ಬಳಿ ಹೇಳುತ್ತಾಳೆ. ಇನ್ನು ಸ್ನೇಹಾ ಸಿಂಗಾರಮ್ಮ ಗೆ ಸರಿಯಾದ ಪಾಠ ಕಲಿಸುವುದಂತೂ ಸತ್ಯ .
ಸ್ನೇಹ ಬಳಿ ಸತ್ಯ ಬಿಚ್ಚಿಟ್ಟ ಬಂಗಾರಮ್ಮ
ಇನ್ನು ಸ್ನೇಹಾ ಬಳಿ ಬಂಗಾರಮ್ಮ ಹಳೆಯ ಘಟನೆಗಳನ್ನ ಎಳೆ ಎಳೆಯಾಗಿ ಬಿಚ್ಚಿಡುತ್ತಾಳೆ. ಸಿಂಗಾರಮ್ಮ ಹಾಗೂ ನಾನು ಅಕ್ಕ ತಂಗಿ ಆದರೆ ಆಕೆಗೆ ನನ್ನ ಮೇಲೆ ಕಿಂಚಿತ್ತು ಪ್ರೀತಿ ಇಲ್ಲ ನನ್ನ ಮೇಲೆ ಆಕೆಗೆ ದ್ವೇಷನೆ ಹೆಚ್ಚಾಗಿದೆ. ಏನು ಸಿಂಗಾರಮಗೆ ಬಹಳ ದುರಾಸೆ ಕೂಡ ಆ ಕಾರಣಕ್ಕಾಗಿ ನನ್ನನ್ನು ಈ ಸ್ಥಿತಿಗೆ ತಳ್ಳಿದ್ದಾಳೆ. ನನಗೆ ಖಂಡಿತವಾಗಿಯೂ ಭರವಸೆ ಇತ್ತು. ಖಂಡಿತವಾಗಿಯೂ ನನ್ನನ್ನು ಬಿಡಿಸಿಕೊಳ್ಳಲು ಯಾರಾದರೂ ಬಂದೆ ಬರುತ್ತಿರಿ ಎಂದು ಹೇಳಿ ಬಂಗಾರಮ್ಮ ಅಳುತ್ತಾಳೆ.


Click it and Unblock the Notifications











