Puttakkana Makkalu ; ಸುಮಾ ಮನೆಗೆ ಬಂದ ಸಚಿನ್,ಪುಟ್ಟಕ್ಕನ ವಿರೋಧದ ನಡುವೆಯೂ ಭೇಟಿ..!
ಸುಮಾ ಮೇಲೆ ಸಚಿನ್ ಗೆ ಅದ್ಯಾಕೋ ಕೊಂಚ ಅಧಿಕ ಕಾಳಜಿ ಬಂದಿದೆ. ಪುಟ್ಟಕ್ಕ ಸಚಿನ್ ನನ್ನು ನೋಡಿ ಆತನ ಕೆನ್ನೆಗೆ ಬಲವಾಗಿ ಪೆಟ್ಟು ಕೊಟ್ಟಿರುತ್ತಾರೆ. ಆದರೆ ಇದರಿಂದಾಗಿ ಸಚಿನ್ ಗೆ ಬಹಳ ನೋವು ಆಗಿರುತ್ತದೆ. ಮಾಡದ ತಪ್ಪಿಗೆ ಸುಮಾ ತಾಯಿ ಹೀಗೆ ಯಾಕೆ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಸಣ್ಣ ಬೇಸರ ಅವರಲ್ಲಿ ಇರುತ್ತದೆ. ಆದರೂ ಏನು ಮಾತನಾಡದೆ ಸುಮಾ ಹಾಗೂ ಪುರುಷೋತ್ತಮ ನ ಮಾತು ಕೇಳಿದ ಸಚಿನ್ ತನ್ನನ್ನು ತಾನು ಸಮಾಧಾನ ಮಾಡಿಕೊಳ್ಳುತ್ತಾನೆ. ಆದರೆ ಇದೀಗ ಸಚಿನ್ ಪುಟ್ಟಕ್ಕನ ಮನೆ ಬಾಗಿಲಿಗೆ ಬರುತ್ತಾನೆ.
ಪುಟ್ಟಕ್ಕನ ವಿರೋಧದ ನಡುವೆಯೂ ಸುಮಾ ಸಚಿನ್‌ನ ಭೇಟಿ ಆಗಲೇಬೇಕಾದ ಸಂದರ್ಭ ಒದಗಿ ಬಂದಿದೆ. ಯಾಕೆಂದರೆ ಸುಮಾ ಮನೆ ಬಳಿಗೆ ಸಚಿನ್ ಬಂದು ಕರೆ ಮಾಡುತ್ತಾನೆ. ಇದನ್ನು ನೋಡಿದ ಸುಮಾ ಇದ್ಯಾಕೆ ಸಚಿನ್ ಕರೆ ಮಾಡುತ್ತಿದ್ದಾನೆ ಎಂದುಕೊಂಡು ಮೊದಲು ಕರೆ ಕಟ್ ಮಾಡುತ್ತಾಳೆ. ಆಗ ಆತ ಮೆಸೇಜ್ ಮಾಡುತ್ತಾನೆ. ನಾನು ಮನೆಯ ಪಕ್ಕನೆ ಇದ್ದೇನೆ ಎಂದು ಹೇಳಿದಾಗ ಸುಮಾ ಮೆತ್ತಗೆ ಹೋಗಿ ಕಿಟಕಿಯಲ್ಲಿ ನೋಡುತ್ತಾಳೆ. ಆಕೆಗೆ ಅಲ್ಲಿ ಸಚಿನ್ ನಿಂತಿರುವುದು ಕಾಣಿಸುತ್ತದೆ. ಸಚಿನ್ ನನ್ನು ನೋಡಿದ ಸುಮಾ ಗೆ ಶಾಕ್ ಆಗಿ ಆತನಿಗೆ ಕರೆ ಮಾಡುತ್ತಾಳೆ.

ಸಚಿನ್ ನೀನು ಯಾಕೆ ಮನೆಯ ಬಳಿ ಈಗ ಬರಲು ಹೋದೆ ಎಂದು ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ಸಚಿನ್, ಸುಮಾ ನಿನ್ನ ರೆಕಾರ್ಡ್ ಬುಕ್ ಕೊಡಬೇಕಿದೆ ಅದಕ್ಕೆ ನಾನು ಬರಬೇಕಾಯಿತು ಎಂದು ಹೇಳುತ್ತಾನೆ. ಇದನ್ನು ಕೇಳಿದ ಸುಮಾ ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಮೆತ್ತಗೆ ಬಾಗಿಲು ತೆಗೆದು ಹೊರ ಹೋಗುತ್ತಾಳೆ ಗೇಟ್ ಬಳಿ ನಿಂತಿದ್ದ ಸಚಿನ್ ಬಳಿ ಕೇಳುತ್ತಾಳೆ ಯಾಕೆ ಸಚಿನ್ ನೀನು ಮನೆಗೆ ಬರಲು ಹೋದೆ. ದಯವಿಟ್ಟು ಇಲ್ಲಿಂದ ಹೊರಟು ಹೋಗು. ನನಗೆ ಇದೆಲ್ಲ ಸರಿ ಬರುವುದು ಇಲ್ಲ ಎಂದು ಹೇಳುತ್ತಾಳೆ.
ಸಚಿನ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುಮಾ
ಇದನ್ನು ಕೇಳಿದ ಸಚಿನ್, ಸುಮಾ ನೀನು ಕ್ಲಾಸ್ ಗೆ ಟಾಪರ್ ಆದ ಕಾರಣ ನಿನಗೆ ಈ ರೆಕಾರ್ಡ್ ಬುಕ್ ಅಗತ್ಯ ಇದೆ . ಅದಕ್ಕಾಗಿ ನಾನು ಇದನ್ನ ತಂದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸುಮಾ ಮೆತ್ತಗೆ ಆಗುತ್ತಾಳೆ. ಕೊನೆಗೆ ಸುಮಾ ಹೇಳುತ್ತಾಳೆ ಆದರೂ ಇದೆಲ್ಲ ನೀನು ಕಾಲೇಜಿನಲ್ಲಿ ಕೂಡ ಬಹುದಾಗಿತ್ತು. ಇನ್ನೂ ಮೇಲೆ ಆದರೂ ಮನೆಯತ್ತಿರ ಬರಲು ಹೋಗಬೇಡ ಎಂದು ಹೇಳುತ್ತಾರೆ ಬಳಿಕ ಅಲ್ಲಿಂದ ಹೊರಟು ಹೋಗುತ್ತಾಳೆ. ಮನೆಯ ಒಳಗೆ ಹೋಗಿ ನಿಲ್ಲಬೇಕಾದರೆ ಗೋಪಾಲ ಎದುರಲ್ಲಿ ನಿಂತುಕೊಂಡು ಇರುತ್ತಾನೆ.

ಗೋಪಾಲನನ್ನು ನೋಡಿ ಶಾಕ್ ಆದ ಸುಮಾ
ಸುಮ ಗೆ ಗೋಪಾಲನನ್ನು ಕಂಡು ಶಾಕ್ ಆಗುತ್ತದೆ. ಇತ್ತ ಸಹನಾ ಮನೆಗೆ ಹೋಗಬೇಕಾದರೆ ಏನಾದರು ಒಂದು ಸಾಧನೆ ಮಾಡಬೇಕು ಎಂದು ಅಂದುಕೊಂಡು ಇದ್ದೆ ಆದರೆ ಆ ಆಸೆಗೆ ಇದೀಗ ಕಲ್ಲು ಬಿದ್ದಿದೆ. ಸಾಧನೆ ಮಾಡುವ ಮೊದಲೇ ಊರಿಗೆ ಹೋಗುವ ಅನಿವಾರ್ಯ ಸ್ಥಿತಿ ಬಂದಿದೆ ಎಂದು ಒಳಗೊಳಗೇ ನೋವು ಪಡುತ್ತಾ ಇರುತ್ತಾಳೆ. ಸಹನಾಗೆ ಮನೆಗೆ ಹೋಗಲು ಇಷ್ಟ ಇರುವುದಿಲ್ಲ. ಯಾರಿಗೂ ಮುಖ ತೋರಿಸಲು ಇಷ್ಟ ಇರುವುದು ಇಲ್ಲ. ಆದರೆ ಮಾಸ್ಕ್ ಹಾಕಿಕೊಂಡು ದೇವಿ ಪುರಕ್ಕೆ ಹೋಗಲು ತಯಾರಾಗುತ್ತಾಳೆ ಸಹನಾ.
ಸ್ನೇಹಾ ಕನಸಿಗೆ ಅಡ್ಡಿ ಆಗುತ್ತಾಳ ರಾಧಾ
ಸ್ನೇಹಾ ಐ ಎ ಎಸ್ ಆಗುವ ಕನಸನ್ನು ಹೊಂದಿರುತ್ತಾಳೆ ಪರೀಕ್ಷೆ ಇನ್ನೇನು ಹತ್ತಿರ ಬರುತ್ತಿದೆ ಎನ್ನುವ ವೇಳೆ ರಾಧಾ ಅಟ್ಟಹಾಸ ಮಿತಿ ಮೀರಿದೆ. ಸ್ನೇಹಾ ಪರೀಕ್ಷೆಯಲ್ಲಿ ಫೈಲ್ ಆಗಬೇಕು ಎಂದು ಆಗಾಗ ಹೇಳುತ್ತ ಇರುತ್ತಾಳೆ . ಹಾಗೆಯೇ ಮೈನ್ ಸ್ವಿಚ್ ಆಫ್ ಮಾಡುತ್ತಾಳೆ.


Click it and Unblock the Notifications











