Puttakkana Makkalu ; ಸಹನಾ ಬದುಕಿರುವ ವಿಚಾರ ಸ್ನೇಹಾಗೆ ಗೊತ್ತಾಯ್ತು? ಸಿಂಗಾರಮ್ಮ ಕಥೆ ಏನು..?
ಸ್ನೇಹಾಗೆ ಸಹನಾ ಬದುಕಿರುವ ವಿಚಾರ ತಿಳಿಯಿತು. ಸಹನಾ ಸ್ನೇಹಾಗೆ ಪತ್ರದ ಬರೆದು ಆ ಮೂಲಕ ಎಚ್ಚರಿಕೆಯನ್ನು ನೀಡಿರುತ್ತಾಳೆ. ಆದರೆ ಸ್ನೇಹಾಗೆ ಸಹನಾ ಬರೆದ ಪತ್ರದ ಮೇಲೆ ಡೌಟ್ ಮೂಡುತ್ತದೆ. ಯಾಕೆಂದರೆ ಆ ಪತ್ರದಲ್ಲಿ ಬರೆದ ಅಕ್ಷರಗಳು ಮಾತ್ರ ಸಹನಾ ಅಕ್ಕದ್ದು ಅಲ್ವಾ ಎನ್ನುವ ವಿಚಾರ. ಎಲ್ಲರೂ ಸಹನಾ ಸತ್ತು ಹೋಗಿದ್ದಾಳೆ ಎಂದೇ ತೀರ್ಮಾನ ಮಾಡಿದ್ದರು. ಆದರೆ ಸಹನಾ ಸತ್ತಿಲ್ಲ ಆಕೆ ಬದುಕಿದ್ದಾಳೇ. ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವ ಆಲೋಚನೆಯಲ್ಲಿ ಇದ್ದಾಳೆ ಎನ್ನುವ ವಿಚಾರ ಯಾರಿಗೂ ತಿಳಿಯುವುದಿಲ್ಲ.
ತನ್ನ ಗುರಿ ಮುಟ್ಟುವ ವರೆಗೆ ನಾನು ಮನೆಯ ಹೊಸಿಲು ಕೂಡ ತಿಳಿಯುವುದಿಲ್ಲ ಎಂದು ಹೇಳುತ್ತಾಳೆ. ಇನ್ನು ಕಾಳಿ ಗೆ ಮಾತ್ರ ಸಹನಾ ನಿಲುವಿನ ಬಗ್ಗೆ ಅರಿತುಕೊಳ್ಳುತ್ತಾನೆ. ಸಹನಾ ಚೆನ್ನಾಗಿರಲಿ , ಅದಕ್ಕೋಸ್ಕರ ನಾನು ಏನು ಮಾಡಲು ಕೂಡ ಸಿದ್ಧನಿದ್ದೇನೆ ಎಂದು ಅಂದುಕೊಳ್ಳುತ್ತಿರುತ್ತಾನೆ. ಸಹನಾ ಎಂದರೆ ಕಾಳಿಗೆ ಚಿಕ್ಕ ವಯಸ್ಸಿನಿಂದಲೂ ಬಹಳ ಪ್ರೀತಿ ಆದರೆ ಸಹನಾ ಗೆ ಕಾಳಿಯ ಮೇಲೆ ಕಿಂಚಿತ್ತು ಪ್ರೀತಿ ಇರುವುದಿಲ್ಲ. ಮುರಳಿಯನ್ನು ಪ್ರೀತಿ ಮಾಡಿದ ಸಹನ ಬಹಳಷ್ಟು ನೋವು ತಿಂದುಕೊಂಡೆ ಅಲ್ಲಿ ಬದುಕಿರುತ್ತಾಳೆ. ಮುರಳಿ ವಿನುತನನ್ನು ಮದುವೆ ಆಗುವ ವೇಳೆ ವಿನುತ ಬಳಿ ಮುರಳಿ ಸರ್‌ನ ತುಂಬಾ ಚೆನ್ನಾಗಿ ನೋಡಿಕೋ ಅವರು ತುಂಬಾ ಒಳ್ಳೆಯವರು ಎಂದು ಹೇಳಿರುತ್ತಾಳೆ .

ಇನ್ನು ಸ್ನೇಹಾ ಬೆಂಗಳೂರಿಗೆ ಬಂದಿರುತ್ತಾಳೆ ಆಕೆಗೆ ಪತ್ರ ಬರೆದಿರುವುದು ಯಾರು ಎನ್ನುವುದು ತಿಳಿದುಕೊಳ್ಳಲು ಮುಂದಾಗುತ್ತಾಳೆ. ಆಕೆ ನೇರವಾಗಿ ಸಹನಾ ಹೋಟೆಲ್ ಇಟ್ಟುಕೊಂಡು ಇರುವ ಬಳಿಗೆ ಬರುತ್ತಾಳೆ. ಇನ್ನು ಸಹನಾ ನಡೆಸುತ್ತಿರುವ ಫುಡ್ ಟ್ರಕ್ ಮೇಲೆ ಪುಟ್ಟಕ್ಕ ಫುಡ್ ಟ್ರಕ್ ಎಂದು ಬರೆದಿರುತ್ತದೆ. ಇದನ್ನು ಸ್ನೇಹಾ ಮೊದಲಿಗೆ ಗಮನಿಸುವುದಿಲ್ಲ. ಕಾರಿನಿಂದ ಇಳಿದು ಬಂದ ಸ್ನೇಹಾ ಮೊದಲಿಗೆ ವಿಚಾರಣೆ ಮಾಡುತ್ತಾಳೆ ಅದಾದ ಬಳಿಕ ಲೆಟರ್ ಬರೆದಿರುವ ಬಗ್ಗೆ ವಿಚಾರಣೆ ಮಾಡುತ್ತಾಳೆ. ಆದರೆ ಅದ್ಯಾವುದೂ ಸರಿಯಾದ ಮಾಹಿತಿ ಸಿಗದೇ ಆಕೆ ಅಲ್ಲಿಂದ ಹೋಗುತ್ತಾಳೆ.
ಸಹನಾ ಮೆಸ್ ಬಳಿ ಬಂದ ಸ್ನೇಹಾ
ಸ್ನೇಹ ಸಹನಾ ಮೆಸ್ ಗೆ ಬರುವ ವೇಳೆ ಕಾಳಿ ಹಾಗೂ ಸಹನಾ ಇರುವುದಿಲ್ಲ. ಇನ್ನು ಸ್ನೇಹಾ ಫುಡ್ ಟ್ರಕ್ ಬಳಿಗೆ ಬಂದಾಗ ಚೋಟು ಸಹನಾ ಬಳಿ ಸಹನಾ ಅಕ್ಕ ಸ್ನೇಹಾ ಅಕ್ಕ ಬಂದಿದ್ದರು ಏನೋ ಲೆಟರ್ ಎಂದೆಲ್ಲ ಮಾತನಾಡಿದರು ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಹನಾ ಗೆ ಆತಂಕ ಆಗುತ್ತದೆ ಸ್ನೇಹಾ ಇಲ್ಲಿಗೆ ಬಂದಿದ್ದಳಾ. ಆಕೆ ಇಲ್ಲಿಗೆ ಬಂದಿದ್ದಳು ಎಂದರೆ ಖಂಡಿತವಾಗಿಯೂ ಆಕೆಗೆ ಡೌಟ್ ಬಂದಿದೆ. ನಾನು ನಡೆಸುತ್ತಿರುವ ಫುಡ್ ಟ್ರಕ್ ಎಂದು ಆಕೆಗೆ ತಿಳಿಯಲಿಲ್ವ ಎಂದು ಕೇಳುತ್ತಾಳೆ. ಹೀಗೆ ಸಹನಾ ಚೋಟು ಬಳಿ ವಿಚಾರಣೆ ಮಾಡುತ್ತಾಳೆ ಆದರೆ ಇತ್ತ ಸ್ನೇಹಾ ಗೆ ಆ ಫುಡ್ ಟ್ರಕ್ ಮೇಲೆ ಪುಟ್ಟಕ್ಕ ಫುಡ್ ಟ್ರಕ್ ಎಂದು ಬರೆದಿರುವುದು ಒಮ್ಮೆ ಯೋಚನೆ ಆಗುತ್ತದೆ.
ಅಕ್ಕನನ್ನು ತಬ್ಬಿಕೊಂಡ ಸ್ನೇಹಾ
ಸ್ನೇಹ ಒಮ್ಮೆಲೆ ಡ್ರೈವರ್ ಬಳಿ ಗಾಡಿ ತಿರುಗಿಸಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಡ್ರೈವರ್ ವಾಪಸ್ ಫುಡ್ ಟ್ರಕ್ ಬಳಿಯೇ ಗಾಡಿಯನ್ನು ನಿಲ್ಲಿಸುತ್ತಾನೆ. ಸ್ನೇಹ ಮೆತ್ತಗೆ ಕಾರಿನಿಂದ ಇಳಿಯುತ್ತಾಳೆ ಸ್ನೇಹಾ ತನ್ನ ಅಕ್ಕನನ್ನು ನೋಡಿ ಬಹಳ ಖುಷಿಯಿಂದ ಸಹನಾ ಅಕ್ಕ ಎಂದು ಜೋರಾಗಿ ಕರೆಯುತ್ತಾಳೆ. ಸ್ನೇಹನನ್ನು ನೋಡಿದ ಸಹನಾ ಜೋರಾಗಿ ಅಳುತ್ತಾಳೆ. ಆಕೆಗೆ ತನ್ನ ತಂಗಿಗೆ ತಾನು ಬದುಕಿರುವ ವಿಚಾರ ತಿಳಿಯಿತು ಎನ್ನುವ ಬೇಸರ ಒಂದು ಕಡೆ ಆದರೆ. ಸಹನಾ ಗೆ ಸ್ನೇಹಾ ಹಾಗೂ ಮನೆಯವರನ್ನು ಬಿಟ್ಟು ಸ್ವಾಭಿಮಾನಿ ಜೀವನವನ್ನು ಕಟ್ಟಿಕೊಳ್ಳಲು ಸಾಕಷ್ಟು ಕಷ್ಟ ಪಡುತ್ತಿರುವುದು ಒಂದು ಕಡೆ. ಇದೆಲ್ಲವನ್ನೂ ನೋಡಿದ ಸ್ನೇಹಾ ಗೆ ತನ್ನ ಅಕ್ಕನ ಬಗ್ಗೆ ಬಹಳ ಹೆಮ್ಮೆ ಆಗುತ್ತದೆ. ಸಹನಾ ಸತ್ತು ಹೋಗಿದ್ದಳು ಎಂದು ಎಲ್ಲರೂ ಅಂದುಕೊಂಡು ಇದ್ದರೂ ಆದರೆ ಸಹನಾ ಬದುಕಿರುವ ವಿಚಾರ ತಿಳಿದುಕೊಂಡ ಸ್ನೇಹಾ ಗೆ ಮಾತ್ರ ಬಹಳ ಖುಷಿ ಆಗಿದೆ. ಅಕ್ಕ ಮಾಡುತ್ತಿರುವ ಕೆಲಸ ಆಕೆಯ ಯಶಸ್ಸಿನ ಮೆಟ್ಟಿಲಾಗಲಿ ಎಂದು ಹಾರೈಸುತ್ತಾಳೆ.
ಸಿಂಗಾರಮ್ಮ ನ ಆಟಕ್ಕೆ ಫುಲ್ ಸ್ಟಾಪ್ ಹಾಕ್ತಾಳಾ ಸ್ನೇಹಾ..?
ಇನ್ನೇನು ಸ್ನೇಹಾ ಗೆ ಬಂಗಾರ ಮ್ಮ ಸಿಕ್ಕೆ ಬಿಟ್ಟಳು ಎಂದು ಎಲ್ಲರೂ ಅಂದುಕೊಂಡು ಇರುತ್ತಾರೆ.ಆದರೆ ಸಿಂಗಾರಮ್ಮ ಮಾತ್ರ ಪ್ಲಾನ್ ಮಾಡಿ ಬಂಗಾರಮ್ಮ ನ ಅಲ್ಲಿಂದ ಶಿಪ್ಟ್ ಮಾಡಿರುತ್ತಾಳೆ.ಆದರೆ ಸ್ನೇಹಾ ತನ್ನ ಅತ್ತೆ ಸಿಕ್ಕೆಬಿಟ್ಟರು ಎನ್ನುವ ಖುಷಿಯಲ್ಲಿ ಇರಬೇಕಾದರೆ ನಾನು ಬಂಗಾರಮ್ಮ ಅಲ್ಲ ಸಿಂಗಾರಮ್ಮ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾಗೆ ಶಾಕ್ ಆಗುತ್ತದೆ.


Click it and Unblock the Notifications











