Puttakkana Makkalu ; ಸ್ನೇಹಾ ಕುಟುಂಬದ ಮೇಲೆ ಸಿಂಗಾರಮ್ಮ ನ ಕಣ್ಣು, ಅತ್ತೆಯ ನಡೆ ನೋಡಿ ಅನುಮಾನಗೊಂಡ ಸ್ನೇಹಾ?
ಸ್ನೇಹ ಕುಟುಂಬಕ್ಕೆ ಸಿಂಗಾರಮ್ಮ ನಿಂದಲೆ ಆಪತ್ತು ಎದುರಾಗಿದೆ ಎನ್ನುವುದು ಸಹನಾ ಗಮನಕ್ಕೆ ಬಂದಿದೆ. ಸಹನಾ ಬಂಗಾರಮ್ಮ ನ ಬಗ್ಗೆ ಇರುವ ಅನುಮಾನವನ್ನು ಪೊಲೀಸರ ಬಳಿ ತೋಡಿಕೊಳ್ಳುತ್ತಾಳೆ. ಆಗ ಯಾರು ಅವರ ಫೋಟೋ ತೋರಿಸಿ ಎಂದು ಪೊಲೀಸಪ್ಪ ಹೇಳಿದಾಗ ಸಹನಾ ಬಳಿ ಇರುವ ಸಿಂಗಾರಮ್ಮ ನ ಫೋಟೋ ತೋರಿಸುತ್ತಾಳೆ. ಇದನ್ನು ನೋಡಿದ ಪೊಲೀಸರಿಗೆ ಶಾಕ್ ಆಗುತ್ತದೆ. ಅರೆ ಸಿಂಗಾರಮ್ಮ ಈಕೆ ಅಂತ ಹೇಳುತ್ತಾರೆ
ಮಾತು ಮುಂದುವರೆಸಿದ ಪೊಲೀಸಪ್ಪ ಬಹಳ ಖತರ್‌ನಾಕ್ ಕಳ್ಳಿ. ಮೊನ್ನೆಯಷ್ಟೇ ಜೈಲಿನಿಂದ ಹೊರಗೆ ಹೋಗಿದ್ದಾಳೆ. ಇದೀಗ ಇಲ್ಲಿ ಏನು ಮಾಡುತ್ತಿದ್ದಾಳೆ ಎಂದು ಪೊಲೀಸರು ಹೇಳುತ್ತಾರೆ. ಇದನ್ನು ಕೇಳಿದ ಸಹನಾ ಗೆ ಬಹಳ ಭಯ ಆಗುತ್ತದೆ. ಹಾಗೆಯೇ ಪೊಲೀಸ್, ಇವಳು ಸಾಮಾನ್ಯ ಅಲ್ಲ. ಹೋದಲ್ಲೆಲ್ಲ ಏನಾದರು ಕಿತಾಪತಿ ಮಾಡುತ್ತಿರುತ್ತಾಳೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸಹನಾ ಹಾಗೂ ಕಾಳಿ ಗೆ ಬಹಳ ಭಯ ಆಗುತ್ತದೆ. ಇನ್ನು ಬಂಗಾರಮ್ಮ ಹಾಗಾದರೆ ಎಲ್ಲಿ ಎನ್ನುವ ಅನುಮಾನ ಆಕೆಗೆ ಮೂಡುತ್ತದೆ.

ಖಂಡಿತವಾಗಿಯೂ ಬಂಗಾರಮ್ಮಗೆ ಏನಾದರು ಆಗಿದೆ ಎಂದು ಅಂದುಕೊಳ್ಳುತ್ತಾರೆ ಸಹನಾ.ಇನ್ನು ಕಾಳಿಯ ಬಳಿ ಸಹನಾ ಹೇಳುತ್ತಾಳೆ. ಕಾಳಿ ಸ್ನೇಹಾ ಕುಟುಂಬ ಬಹಳ ಆಪತ್ತಿನಲ್ಲಿ ಇದೆ. ಅದಕ್ಕೆ ನಾವು ಏನಾದರು ಮಾಡಲೇ ಬೇಕಾಗಿದೆ. ನಾನು ಬದುಕಿದ್ದೇನೆ ಎಂದು ತಿಳಿದರೂ ಕೂಡ ಪರವಾಗಿಲ್ಲ ಬಾ ಊರಿನ ಕಡೆಗೆ ಹೋಗೋಣ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಾಳಿ ಸರಿ ಆಯಿತು ಎಂದು ಸಹನಾ ಳನ್ನು ಊರಿಗೆ ಕರೆದುಕೊಂಡು ಹೋಗುತ್ತಾನೆ. ಮುಖ ಕ್ಕೆ ಮಾಸ್ಕ್ ಹಾಕಿದ್ದ ಸಹನಾ ಊರಿನ ಹತ್ತಿರ ಬರುತ್ತಿದ್ದ ಹಾಗೆಯೇ ಆಕೆಗೆ ಹಳೆಯದೆಲ್ಲ ಒಂದೊಂದು ನೆನಪಿಗೆ ಬರುತ್ತಿರುತ್ತದೆ.
ಊರಿನತ್ತ ಮುಖ ಹಾಕಿದ ಸಹನಾ
ಇನ್ನು ಊರಿನಲ್ಲಿ ಬಾರ್ ಮತ್ತೆ ನಡೆಯುತ್ತದೆ ಎಂದು ತಿಳಿದು ಪುಟ್ಟಕ್ಕ ಹಾಗೂ ಸ್ನೇಹಾ ಬಹಳ ಕೋಪ ಗೊಂಡು ಈ ಊರಿನಲ್ಲಿ ಬಾರ್ ಬರಬಾರದು . ಇದರಿಂದ ಜನರಿಗೆ ಬಹಳ ಆಪತ್ತು ಎದುರಾಗುತ್ತದೆ ಇದಕ್ಕೆಲ್ಲ ಪರ್ಮಿಷನ್ ಕೊಟ್ಟವರು ಯಾರು ಎಂದೆಲ್ಲ ಪ್ರಶ್ನೆ ಮೂಡುತ್ತದೆ. ಇನ್ನು ಆ ಊರಿನ ರಾಜಕಾರಿಣಿ ಯೊಬ್ಬ ನಾನೇ ಈ ಬಾರ್ ಓಪನ್ ಮಾಡಲು ಪರ್ಮಿಷನ್ ಕೊಟ್ಟಿದ್ದು, ಆದರೆ ಈ ಬಾರ್ ನಡೆಸುತ್ತಿರುವವರು ಯಾರು ಎಂದು ನಿಮಗೆ ತಿಳಿದರೆ ಶಾಕ್ ಆಗುತ್ತಿರಾ? ಎಂದು ಹೇಳುತ್ತಾರೆ.

ಬಾರ್ ಓಪನ್ ಮಾಡದಂತೆ ತಡೆದ ಊರಮಂದಿ
ಇದನ್ನು ಕೇಳಿದ ಸ್ನೇಹಾ ಯಾರದು ಬಾರ್ ಓಪನ್ ಮಾಡುತ್ತಿರುವವರು ಎಂದಾಗ ಆತ ಬಂಗಾರಮ್ಮ ನಡೆಸುತ್ತಿರುವ ಬಗ್ಗೆ ಮಾಹಿತಿಯನ್ನು ನೀಡುತ್ತಾನೆ. ಇದನ್ನು ಕೇಳಿದ ಊರು ಊರಿಗೆ ಶಾಕ್ ಆಗುತ್ತದೆ. ಹೋದ ಸಲ ಬಂಗಾರಮ್ಮ ಅವರೇ ಬಾರ್ ಮಾಡುವುದು ಬೇಡ ಎಂದು ಅಬ್ಜೆಕ್ಷನ್ ಹಾಕಿದ್ದರು. ಆದರೆ ಇದೀಗ ಬಂಗಾರಮ್ಮ ಅವರೇ ಬಾರ್ ಹಾಕಿದ್ದಾರೆ ಎಂದರೆ ನಂಬಲು ಆಗದೆ ಸ್ನೇಹಾ ಗೆ ಅತ್ತೆಯ ಮೇಲೆ ಅನುಮಾನ ಶುರುವಾಗುತ್ತದೆ.ಇನ್ನು ಸಹನಾ ಊರಿಗೆ ಬಂದು ಸ್ನೇಹಗಾಗಿ ಹುಡುಕಾಟ ನಡೆಸಿದ್ದಾಳೆ. ಆದರೆ ಸ್ನೇಹಾ ಮಾತ್ರ ಅತ್ತೆಯ ಬಾರ್ ನೋಡಿ ಶಾಕ್ ಆಗಿದ್ದಾಳೆ. ಅತ್ತೆ ಯಾವತ್ತೂ ನಮ್ಮನ್ನು ಒಂದು ಮಾತು ಕೇಳದೆ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ ಇದೀಗ ಅತ್ತೆ ಬಾರ್ ಮಾಡುತ್ತಿದ್ದಾರೆ ಎಂದರೆ ಸ್ನೇಹಾ ಗೆ ನಂಬಲು ಆಗುತ್ತಿಲ್ಲ.


Click it and Unblock the Notifications











