Puttakkana Makkalu; ಸಚಿನ್ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸುಮಾ, ಪುಟ್ಟಕ್ಕಗೆ ಕೊಟ್ಟ ಮಾತು ಹೇಗೆ ಉಳಿಸಿಕೊಳ್ಳುತ್ತಾಳೆ?

By ಪೂರ್ವ

ಸಚಿನ್ ಜೊತೆ ಎಷ್ಟು ಬೇಕೋ ಅಷ್ಟು ಇರು ಎಂದು ಪುಟ್ಟಕ್ಕ ಸುಮಾಗೆ ಆಗಾಗ ವಾರ್ನಿಂಗ್ ಮಾಡುತ್ತಿರುತ್ತಾಳೆ. ಪುಟ್ಟಕ್ಕಗೆ ಭಯ ನನ್ನ ಇಬ್ಬರು ಮಕ್ಕಳು ಪ್ರೀತಿ ಮಾಡಿ ಮದುವೆಯಾಗಿದ್ದಾರೆ ಆದರೆ ಒಬ್ಬಳ ಜೀವನ ಮೂರಾ ಬಟ್ಟೆಯಾಗಿದೆ. ಇನ್ನೊಬ್ಬಳು ಆಕೆಯ ಗಂಡನ ಜೊತೆ ಬಹಳ ಖುಷಿಯಾಗಿದ್ದಾಳೆ. ಪುಟ್ಟಕ್ಕನಿಗೆ ಸಹನದೇ ಚಿಂತೆ ನನ್ನ ಮಗಳು ಸಹನ ಬಂದೆ ಬರುತ್ತಾಳೆ ಆಕೆ ಸತ್ತಿಲ್ಲ ಆಕೆ ಬದುಕಿದ್ದಾಳೆ ನನ್ನ ಮಗಳನ್ನು ನಾನು ಈ ಊರಿಗೆ ಕರೆದುಕೊಂಡು ಬರುವವರೆಗೂ ಈ ಊರಿನ ಕಡೆ ಮುಖ ಮಾಡಿ ಕೂಡ ಮಲಗುವುದಿಲ್ಲ ಎಂದು ಪುಟ್ಟಕ್ಕ ಶಪಥ ಮಾಡಿದ್ದಾಳೆ

ಇನ್ನು ಸುಮಾಗೆ ಪುಟ್ಟಕ್ಕ ಆಗಾಗ ವಾರ್ನಿಂಗ್ ಮಾಡುತ್ತಿರುತ್ತಾಳೆ ಯಾರನ್ನು ಕೂಡ ಹಚ್ಚಿಕೊಳ್ಳಬೇಡ ಗೆಳೆಯ ಆಗಿದ್ದರೆ ಚೆಂದ. ಅದು ಬಿಟ್ಟು ಆತನ ಜೊತೆ ಪ್ರೀತಿ ಪ್ರೇಮ ಇದು ಓಡಾಡುವುದು ನನ್ನ ಗಮನಕ್ಕೆ ಬಂದರೆ ನಾನು ಸುಮ್ಮನೆ ಇರುವವಳಲ್ಲ ಯಾವತ್ತೂ ಆ ರೀತಿಯ ಕೆಲಸವನ್ನು ನೀನು ಮಾಡಬೇಡ ಎಂದು ಆಣೆ ಪ್ರಮಾಣವನ್ನ ಪುಟ್ಟಕ್ಕ ತೆಗೆದುಕೊಂಡಿದ್ದಾಳೆ. ಆದರೆ ಇದೀಗ ಸುಮಾ ಸಚಿನ್ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ.ಇನ್ನು ಸುಮಾ ಬಳಿ ಸಚಿನ್ ಅನ್ನು ಪುರುಷೋತ್ತಮ ಕರೆದುಕೊಂಡು ಹೋಗುತ್ತಾನೆ. ಹಾಗೆಯೇ ಸುಮಗೆ ನಿನ್ನ ಪ್ರೀತಿಯನ್ನು ಹೇಳಿಕೊ ಎಂದು ಪುರುಷೋತ್ತಮ ಹೇಳುತ್ತಾನೆ. ಇನ್ನು ಸುಮಾ ಜೊತೆ ನಾಟಕ ಮಾಡುವುದಕ್ಕಿಂತ ಆಕೆಗೆ ನಿಜ ವಿಚಾರ ಹೇಳುವುದು ಸೂಕ್ತ ಎಂದು ತಾನು ಪ್ರೀತಿ ಮಾಡುತ್ತಿರುವ ವಿಚಾರವನ್ನು ಸುಮಾ ಬಳಿ ಹೇಳುತ್ತಾನೆ

kannada serial puttakkana makkalu written 15th August

ಸುಮಾ ಬಳಿ ಪ್ರೀತಿ ಹೇಳಿಕೊಂಡ ಸಚಿನ್

ಸುಮಾ ನಾನು ನಿನ್ನನ್ನು ಮನಸಾರೆ ಪ್ರೀತಿ ಮಾಡುತ್ತಿದ್ದೇನೆ ನನಗೆ ನನ್ನವರು ಯಾರು ಎನ್ನುವುದು ಇಲ್ಲ ಆದರೆ ಅದು ನನಗೆ ತಿಳಿದು ಇಲ್ಲ ನೀನು ನನ್ನ ಜೊತೆ ಇರುವ ತನಕ ನಾನು ಬಹಳ ಖುಷಿಯಾಗಿದ್ದೆ. ಆದರೆ ಇನ್ನೇನು ನನಗೆ ಗೊತ್ತಿಲ್ಲ. ನಿನ್ನ ಜೊತೆ ಸುಮ್ಮನೆ ನಾಟಕ ಮಾಡಿಕೊಂಡು ಇರಲು ನನಗೆ ಸಾಧ್ಯವಿಲ್ಲ ಆದ ಕಾರಣ ಐ ಲವ್ ಯು ಸುಮ ನೀನಂದರೆ ನನಗೆ ಬಹಳ ಇಷ್ಟ ನಿನಗೆ ನಾನು ಇಷ್ಟಾನಾ? ನನಗೆ ಹೇಳು ಒಂದು ವೇಳೆ ನನ್ನ ಪ್ರೀತಿ ನಿನಗೆ ಇಷ್ಟವಾಗಿಲ್ಲ ಎಂದರೆ ನಾನು ಖಂಡಿತ ನಿನ್ನನ್ನು ಯಾವುದಕ್ಕೂ ಬಲವಂತ ಮಾಡುವುದಿಲ್ಲ ಎಂದು ಹೇಳುತ್ತಾನೆ.

ಸಚಿನ್ ಮಾತಿಗೆ ಮರುಳಾದ ಸುಮಾ

ಇದನ್ನು ಕೇಳಿದ ಆಕೆಗೆ ಬಹಳ ಬೇಸರ ಆಗುತ್ತದೆ. ಸಚಿನ್ ಸಹನಾ ಮುಖ ನೋಡಿಯೇ ಅಲ್ಲಿಂದ ಹೊರಟು ನಿಲ್ಲುತ್ತಾನೆ. ಆಗ ಸುಮಾ ಓಡಿಬಂದು ಸಚಿನ್ ನನ್ನ ತಬ್ಬಿ ಕೊಳ್ಳುತ್ತಾಳೆ. ಇದನ್ನ ನೋಡಿದ ಸಚಿನ್ಗೆ ಬಹಳ ಖುಷಿಯಾಗುತ್ತದೆ. ಇನ್ನು ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮ ಕಂಠಿಯ ಗದ್ದೆಗೆ ಎಂಟ್ರಿ ಕೊಟ್ಟಿದ್ದಾಳೆ,

kannada serial puttakkana makkalu written 15th August

ಗದ್ದೆಯತ್ತ ಸಿಂಗಾರಮ್ಮನ ಚಿತ್ತ

ಸಿಂಗಾರಮ್ಮನ ನೋಡಿ ಕಂಠಿಯ ಗೆಳೆಯ ಮುಂಗುಸಿ ಓಡಿಕೊಂಡು ಬರುತ್ತಾನೆ ಅವ್ವ ನೀವೇನು ಇದೇತನಕ ಬರಲು ಹೋದಿರಿ ಎಂದು ಕೇಳಿದಾಗ ಅವರಿಗೆ ಏನು ಹೇಳದೆ ನೀವೇನು ಹೇಳಿ ಮಾಡುತ್ತಿದ್ದೀರಾ ಎಂದು ಜೋರಾಗಿ ಕೇಳುತ್ತಾಳೆ. ಇದನ್ನು ಕೇಳಿದ ಮುಂಗುಸಿ ಹೇಳುತ್ತಾನೆ ನಾವು ಗಿಡಗಳಿಗೆ ಗೊಬ್ಬರವನ್ನು ಹಾಕಲು ಬಂದಿದ್ದೇವೆ ಎಂದು ಹೇಳುತ್ತಾನೆ ಇದನ್ನ ಕೇಳಿದೆ ಸಿಂಗಾರಮ್ಮ ಅಲ್ಲಿಂದ ಹೊರಟು ಹೋಗುತ್ತಾಳೆ. ಇನ್ನು ಕಂಠಿಯ ಗೆಳೆಯನಿಗೆ ಅವ್ವ ಸರಿಯಾಗಿ ಮಾತನಾಡದೆ ಹೋಗಿದ್ದ ನೋಡಿ ಬಹಳ ಅನುಮಾನ ಶುರುವಾಗುತ್ತದೆ ಅಣ್ಣನ ಹತ್ರ ಹೇಳೋಣ ಎಂದು ಕಂಠಿಗೆ ಕರೆ ಮಾಡಿ ಹೇಳುತ್ತಾರೆ. ಇನ್ನೂ ಸಿಂಗಾರಮ್ಮನ ಮಗ ಬಂಗಾರಮ್ಮನ ಆಸ್ತಿಯ ಮೇಲೆ ಕಣ್ಣು ಹಾಕಿದ್ದಾರೆ ಹೇಗಾದರೂ ಮಾಡಿ ಇದನ್ನೆಲ್ಲ ಮಾರಿ ಒಳ್ಳೆಯ ದುಡ್ಡು ಸಂಪಾದನೆ ಮಾಡಬೇಕೆಂದು ಆತ ಅಂದುಕೊಂಡು ಇರುತ್ತಾನೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X