Puttakkana Makkalu ; ಪುಟ್ಟಕ್ಕನ ಮನೆಗೆ ಬಂದ ವಿದೇಶಿಗ,ಸಚಿನ್ ಬಗ್ಗೆ ಇನ್ನಷ್ಟು ಇಂಪ್ರೆಸ್ ಆದ ಸುಮಾ..!

By ಪೂರ್ವ

ಸಚಿನ್ ಪುಟ್ಟಕ್ಕನ ಮೆಸ್ ಬಗ್ಗೆ ಆತನ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದ ಅದರಿಂದಾಗಿ ಪುಟ್ಟಕ್ಕನ ಮೆಸ್ ಬಹಳ ಫೇಮಸ್ ಕೂಡ ಆಯಿತು. ಪುಟ್ಟಕ್ಕ ಎಲ್ಲರಿಗೂ ಕೂಡ ರುಚಿ ರುಚಿಯಾದ ಅಡುಗೆ ಮಾಡಿ ಉಣ ಬಡಿಸುದರು. ಪುಟ್ಟಕ್ಕನ ಅಡುಗೆ ತಿಂದವರು ಮತ್ತೆ ಮತ್ತೆ ಬೇಕು ಎಂದು ಆಸೆ ಪಡುತ್ತಿರುತ್ತಾರೇ. ಹಾಗೆಯೇ ಸಚಿನ್ ಗೆ ಪುಟ್ಟಕ್ಕನ ಕೈ ರುಚಿ ಬಹಳ ಹಿಡಿಸಿದೆ ಆತ ಈ ವಿಚಾರವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದ ಇದನ್ನು ನೋಡಿದ ವಿದೇಶೀಗ ಪುಟ್ಟಕ್ಕನ ಮೆಸ್ ಬಳಿಗೆ ಹುಡುಕಿಕೊಂಡು ಬರುತ್ತಾನೆ.

ಆ ವಿದೇಶಿಗನಿಗೆ ಸಹನಾ ಪರಿಚಯ ಇರುತ್ತದೆ. ಆಕೆಯ ಮೆಸ್ ನಲ್ಲಿ ಕೂಡ ಪುಟ್ಟಕ್ಕನ ಭಾವ ಚಿತ್ರ ಇಟ್ಟುಕೊಂಡು ಪೂಜೆ ಮಾಡುತ್ತಿರುತ್ತಾಳೆ. ಇದನ್ನು ನೋಡಿದ ವಿದೇಶಿಗ ಈ ಫೋಟೋದಲ್ಲಿ ಇರುವವರು ಯಾರು ನಿಮಗೆನಾಗಬೇಕು ಎಂದು ಪ್ರಶ್ನೆ ಮಾಡುತ್ತಾನೆ. ಇದನ್ನು ಕೇಳಿದಾಗ ಸಹನಾಗೆ ಬಹಳ ಸಿಟ್ಟು ಬರುತ್ತದೆ. ಆದರೆ ಆಕೆ ತನ್ನ ಅವ್ವ ಎಂದು ಯಾರೊಂದಿಗೆ ಕೂಡ ಹೇಳಿಕೊಳ್ಳುವುದು ಇಲ್ಲ. ಆಕೆಗೆ ಭಯ ಎಲ್ಲಾದರೂ ನಾನು ಇಲ್ಲಿದ್ದೇನೆ ಎಂದು ಅವ್ವಗೆ ಗೊತ್ತಾದರೆ ನಾನು ಅಂದುಕೊಂಡ ಕೆಲಸ ಮಾಡಲು ಖಂಡಿತವಾಗಿಯೂ ಸಾಧ್ಯ ಇಲ್ಲ . ಹೀಗಾಗಿ ನಾನು ಯಾರಿಗೂ ಪುಟ್ಟಕ್ಕನ ಮಗಳು ಎನ್ನುವ ವಿಚಾರವನ್ನು ರಿವಿಲ್ ಮಾಡಬಾರದು ಎಂದುಕೊಂಡು ಇರುತ್ತಾಳೆ. ಇನ್ನೂ ಆ ವಿದೇಶಿಗ ಕೊಂಚ ಬೇಸರ ಮಾಡಿಕೊಂಡು ದೇವಿಪುರಕ್ಕೇ ತೆರಳುತ್ತಾನೆ.

kannada-serial-puttakkana-makkalu-written-15th-july

ಇನ್ನೂ ಪುಟ್ಟಕ್ಕನ ಮೆಸ್ ಹುಡುಕಿಕೊಂಡು ಹೊರಟ ಡೇವಿಡ್ ಗೆ ಕೊನೆಗೆ ಪುಟ್ಟಕ್ಕನ ಮೆಸ್ ಸಿಗುತ್ತದೆ. ಪುಟ್ಟಕ್ಕನ ಮೆಸ್ ಬಳಿ ಬಂದ ಡೇವಿಡ್ ಗೆ ಬಹಳ ಖುಷಿ ಆಗುತ್ತದೆ. ಡೇವಿಡ್ ಬಂದಿರುವುದನ್ನು ನೋಡಿ ಪುಟ್ಟಕ್ಕ ಖುಷಿ ಪಡುತ್ತಾಳೆ. ಇನ್ನೂ ಮೆಸ್ ನಲ್ಲಿ ಪುಟ್ಟಕ್ಕ ಹಾಗೆಯೇ ಪುರುಷೋತ್ತಮ, ಸುಮಾ ಗೋಪಾಲ ಎಲ್ಲರೂ ಇರುತ್ತಾರೆ.

ಡೇವಿಡ್ ಮಾತಿಗೆ ಖುಷಿಪಟ್ಟ ಪುಟ್ಟಕ್ಕ

ಪುರುಷೋತ್ತಮ ಡೇವಿಡ್ ಜೊತೆ ಮಾತನಾಡಿದಾಗ ಆತನಿಗೆ ತಿಳಿಯುತ್ತದೆ. ಡೇವಿಡ್ ಪುಟ್ಟಕ್ಕನ ಮೆಸ್ ಅನ್ನು ಹುಡುಕಿಕೊಂಡು ಬಂದಿದ್ದಾರೆ. ಆದರೆ ಹೇಗೆ ಎಂಬುವುದನ್ನು ವಿಚಾರಣೆ ಮಾಡಿದಾಗ ಸಚಿನ್ ಎಂಬಾತ ಪುಟ್ಟಕ್ಕನ ಮೆಸ್ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ. ಅಪ್ಲೋಡ್ ಮಾಡಿದ್ದ ಆ ಕಾರಣದಿಂದ ಆಗಿ ನಾನು ಇಲ್ಲಿಗೆ ಬಂದೆ ಎಂದು ಹೇಳಿದಾಗ ಪುರುಷೋತ್ತಮನಿಗೆ ಖುಷಿ ಆದರೆ ಪುಟ್ಟಕ್ಕಗೆ ಆಶ್ಚರ್ಯ ಆಗುತ್ತದೆ.

kannada-serial-puttakkana-makkalu-written-15th-july

ಸಚಿನ್ ನನ್ನು ಮೆಸ್ ಗೆ ಕರೆಸಿದ ಪುರುಷೋತ್ತಮ

ಆದರೂ ಪುಟ್ಟಕ್ಕ ಮಾತ್ರ ಎನು ಮಾತನಾಡದೆ ಸುಮ್ಮನೆ ನಿಂತಿರುತ್ತಾಳೆ. ಪುರುಷೋತ್ತಮ ಆ ಕೂಡಲೇ ಸಚಿನ್ ಗೆ ಕರೆ ಮಾಡಿ ಬರಲು ಹೇಳುತ್ತಾನೆ. ಸಚಿನ್ ಮಾಡಿದ ಕೆಲಸ ನೋಡಿ ಸುಮಗೆ ಮನದಲ್ಲಿ ಖುಷಿ ಆಗುತ್ತದೆ. ಸುಮಾ ಇಲ್ಲ ಇಲ್ಲ ಎಂದುಕೊಂಡೆ ಪ್ರೀತಿಯಲ್ಲಿ ಬೀಳುತ್ತಿರುವುದು ಮಾತ್ರ ಸತ್ಯ. ಅಮ್ಮನ ಆಣೆ ಪ್ರಮಾಣ ಸಚಿನ್ ನೋಡಿದಾಗ ಸುಮಾ ಗೆ ಮರೆತು ಬಿಡುತ್ತದೆ.

ಸಿಂಗಾರಮ್ಮನನ್ನು ನೋಡಿ ಬೆಚ್ಚಿಬಿದ್ದ ಪುಟ್ಟಕ್ಕ

ಸಚಿನ್ ಗೆ ಕೂಡ ಸುಮಾ ನ ಕಂಡರೆ ಬಹಳಷ್ಟು ಇಷ್ಟ ಆದರೆ ಅದನ್ನು ತೋರಿಸಲು ಆಗದೆ ಸುಮ್ಮನೆ ಇರುತ್ತಾನೆ. ತನ್ನ ಪ್ರೀತಿಯಿಂದ ಗೆಳೆತನವೂ ಕಟ್ ಆದರೆ ಎನ್ನುವ ಭಯ ಆತನಿಗೆ. ಇನ್ನೂ ಪುಟ್ಟಕ್ಕ ಬಂಗಾರ ಮ್ಮನ ಮನೆಗೆ ತೆರಳಿ ಸಿಂಗಾರಮ್ಮನನ್ನು ನೋಡಿ ಅಮ್ಮಾವರೇ ಎಂದು ಕರೆಯುತ್ತಾಳೆ ಇದನ್ನು ಕೇಳಿಸಿಕೊಂಡ ಸಿಂಗಾರ ಮ್ಮ ಗೆ ಬಹಳ ಕಿರಿ ಕಿರಿ ಆಗುತ್ತದೆ. ಸಿಂಗಾರಮ್ಮ ಬಂಗಾರಮ್ಮ ಕುಟುಂಬವನ್ನು ನಾಶ ಮಾಡಬೇಕು ಎನ್ನುವ ದ್ವೇಷದಲ್ಲಿ ಸಿಂಗಾರಮ್ಮನ ಮನೆಗೆ ಬರುತ್ತಾಳೆ. ಆದರೆ ಪುಟ್ಟಕ್ಕ ಅಮ್ಮಾವರೇ ಎಂದಾಗ ಬಂಗಾರಮ್ಮ ರೂಪದಲ್ಲಿ ಇದ್ದ ಸಿಂಗಾರಮ್ಮ ಪುಟ್ಟಕ್ಕನತ್ತ ಗನ್ ತೋರಿಸುತ್ತಾರೆ. ಇದನ್ನು ನೋಡಿ ಮನೆ ಮಂದಿ ಶಾಕ್ ಗೆ ಒಳಗಾಗುತ್ತಾರೆ. ಆಗ ಕೂಡಲೇ ಕಂಠಿ ಅಡ್ಡ ಬಂದು ಅವ್ವ ಎನು ಮಾಡುತ್ತಿದ್ದಿ ಎನ್ನುವ ಅರಿವು ಇದೆಯಾ ಎಂದು ಕೇಳುತ್ತಾನೆ. ಬಂಗಾರಮ್ಮ ಸಿಂಗಾರಮ್ಮ ಅಕ್ಕ ತಂಗಿ ಎನ್ನುವ ವಿಚಾರ ಕಂಠಿಗೆ ಇನ್ನಷ್ಟೇ ತಿಳಿಯಬೇಕಿದೆ. ತನ್ನ ಅವ್ವನ ರಕ್ಷಣೆಗೆ ಆತ ಮುಂದಾಗಬೇಕಿದೆ .

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X