Puttakkana Makkalu ; ಪುಟ್ಟಕ್ಕ ಮನೆಯಲ್ಲಿ ಸಹನಾ ಫೋಟೋ ನೋಡಿದ ಮ್ಯಾಕ್ಸ್ ವೆಲ್,ಪುಟ್ಟಕ್ಕನ ಬಳಿ ಸತ್ಯ ಹೇಳ್ತಾನಾ..?
ಮ್ಯಾಕ್ಸ್ ವೆಲ್ ಗೆ ಸಹನಾ ಪುಟ್ಟಕ್ಕನ ಮಗಳು ಎನ್ನುವ ವಿಚಾರ ತಿಳಿಯುವ ಹಂತಕ್ಕೆ ಬಂದಿದೆ. ಮ್ಯಾಕ್ಸ್ ವೆಲ್ ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ವಿಡಿಯೋವನ್ನು ನೋಡಿದ್ದ ಮ್ಯಾಕ್ಸ್ ವೆಲ್ ದೇವಿ ಪುರಕ್ಕೆ ಹೋಗಬೇಕು ಎನ್ನುವ ಆಲೋಚನೆ ಮಾಡಿರುತ್ತಾರೆ. ಅದರ ಪ್ರಕಾರ ದೇವಿಪುರಕ್ಕೆ ಹೋಗುತ್ತಾರೆ. ಪುಟ್ಟಕ್ಕನ ಮೆಸ್ ನಲ್ಲಿ ಊಟ ಮಾಡಿ ಬಹಳ ಖುಷಿ ಪಡುತ್ತಾರೆ .
ಮ್ಯಾಕ್ಸ್ ವೆಲ್ ಮನದಲ್ಲಿ ಅಂದುಕೊಳ್ಳುತ್ತಾನೆ. ಸಚಿನ್ ಹೇಳಿರುವುದು ನೂರಕ್ಕೆ ನೂರು ನಿಜ. ಪುಟ್ಟಕ್ಕ ಮಾಡಿರುವ ಊಟ ಅಮೃತದ ಸಮ ಎನ್ನುವುದು. ಇನ್ನೂ ಆಕೆಯ ಜೊತೆ ಈ ವಿಚಾರ ಹೇಳಿದಾಗ ಪುಟ್ಟಕ್ಕ ಗೆ ಬಹಳ ಖುಷಿ ಆಗುತ್ತದೆ. ಮ್ಯಾಕ್ಸ್ ವೆಲ್ ಗೆ ಪುಟ್ಟಕ್ಕನ ಮುಖ ನೋಡಿ ಆಕೆಯ ಮುಖದ ಭಾವ ಚಿತ್ರವನ್ನು ನಾನು ಎಲ್ಲಿಯೋ ನೋಡಿದ್ದೇನೆ ಎಂದುಕೊಂಡಾಗ ಮೊದಲು ನೆನಪಾಗಿದ್ದು ಸಹನಾ ಟಿಫನ್ ಸೆಂಟರ್. ಪುಟ್ಟಕ್ಕನ ಮನೆಯನ್ನು ನೋಡಿದ ಮ್ಯಾಕ್ಸ್ ವೆಲ್ , ನೀವು ಒಪ್ಪಿಗೆ ಸೂಚಿಸಿದರೆ ನಾನು ಈ ಮನೆಯನ್ನು ವಿಡಿಯೋ ಮಾಡುತ್ತೇನೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಆಯಿತು ಎಂದು ಒಪ್ಪಿಗೆ ಸೂಚಿಸುತ್ತಾನೆ. ಹಾಗೆಯೇ ಪುರುಷೋತ್ತಮ ಮನೆ ಇಡೀ ಮ್ಯಾಕ್ಸ್ ವೆಲ್ ಗೆ ತೋರಿಸುತ್ತಾನೆ. ಮನೆಯ ವಿಡಿಯೋ ಮಾಡುತ್ತಿರುವಾಗ ಅಚಾನಕ್ ಆಗಿ ಸಹನಾ ಫೋಟೋ ವಿದೇಶಿಗನಿಗೆ ಕಾಣಸಿಗುತ್ತದೆ. ಇನ್ನೂ ಸಹನಾ ಬದುಕಿರುವ ಸತ್ಯವನ್ನು ಮ್ಯಾಕ್ಸ್ ವೆಲ್ ಪುಟ್ಟಕ್ಕನ ಬಳಿ ಹೇಳುತ್ತಾನ ಇನ್ನಷ್ಟೇ ತಿಳಿಯಬೇಕಿದೆ.

ರಾಧಾ ಮಸಲತ್ತಿಗೆ ಕರಗದ ಸ್ನೇಹಾ
ಇನ್ನೂ ಸ್ನೇಹಾ ಗೆ ರಾಧಾ ಮೇಲೆ ಬಹಳ ಸಿಟ್ಟಿರುತ್ತದೆ. ಆದರೆ ಆ ಸಿಟ್ಟನ್ನು ಯಾರ ಜೊತೆಯೂ ಹೇಳಲು ಆಗುವುದು ಇಲ್ಲ. ಹೇಗಾದರೂ ಮಾಡಿ ರಾಧಾಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಅತ್ತೆ ಕೈ ಗೆ ಒಪ್ಪಿಸಬೇಕು. ಎಂದುಕೊಂಡು ಇರುತ್ತಾಳೆ. ಆದರೆ ಸಿಂಗಾರ ಮ್ಮ ನನ್ನು ಅತ್ತೆ ಎಂದು ತಿಳಿದುಕೊಂಡಿರುವ ಸ್ನೇಹಾ ಇನ್ನಷ್ಟೇ ಸತ್ಯ ತಿಳಿಯಬೇಕಾಗಿದೆ. ಹಾಗೆಯೇ ಬಂಗಾರ ಮ್ಮ ನವರ ರಕ್ಷಣೆಗೆ ಮುಂದಾಗಬೇಕಿದೆ.
ಬಂಗಾರಮ್ಮ ನ ರಕ್ಷಣೆ ಮಾಡುತ್ತಾಳ ಸ್ನೇಹಾ..?
ಸಿಂಗಾರಮ್ಮ ಹಾಗೂ ಬಂಗಾರಮ್ಮ ನೋಡುವ ರೀತಿಯಲ್ಲಿ ಒಂದೇ ಥರ ಇರುತ್ತಾರೆ. ಆದರೆ ಅವರಿಬ್ಬರ ಸ್ವಭಾವ ಮಾತ್ರ ಬಹಳ ತದ್ವಿರುದ್ಧವಾಗಿದೆ. ಇನ್ನೂ ಬಂಗಾರಮ್ಮ ಸ್ವಭಾವ ನೋಡಿದ ಅನೇಕರಿಗೆ ಈಕೆ ಬಂಗಾರಮ್ಮನ ಎನ್ನುವ ಅನುಮಾನ ಮೂಡದೆ ಇರದು. ನಂಜಮ್ಮ ಗೆ ಕೂಡ ಈಕೆ ಬಂಗಾರಮ್ಮನೇನಾ ನನ್ನನ್ನು ನೋಡಿದಾಗ ಯಾವತ್ತೂ ಸಿಡಿ ಸಿಡಿ ಮಾಡುತ್ತಿದ್ದಳು ಆದರೆ ಇದೀಗ ಒಂದು ಮಾತು ಆಡದೆ ಇದ್ದಾಳಲ್ಲ ಎಂದು ಮನದಲ್ಲಿ ಯೋಚನೆ ಮಾಡುತ್ತಾಳೆ

ಬಂಗಾರಮ್ಮ ನ ಮೇಲೆ ಅನುಮಾನ ಪಟ್ಟ ರಾಧಾ
ರಾಧಾಗೆ ಬಂಗಾರಮ್ಮ ವರ್ತನೆ ವಿಚಿತ್ರ ಎನಿಸಿದೆ. ನಾನು ಗೂಂಡಾಗಳನ್ನು ಇಟ್ಟು ಹೊಡೆಸಿದ್ದೇನೆ . ಆದರೆ ಆಗ ಈ ಅತ್ತೆ ನನ್ನ ಮುಖವನ್ನು ವಿಡಿಯೋ ಕಾಲ್ ನಲ್ಲಿ ನೋಡಿದ್ದರು ಆದರೆ ಇದೀಗ ಆಕೆ ನನಗೆ ಹಾಗೂ ಈ ವಿಡಿಯೋಗೆ ಸಂಬಂಧವೇ ಇಲ್ಲದ ಹಾಗೆ ಮಾತನಾಡುತ್ತಿದ್ದಾರಲ್ಲ ಎಂದು ಆಲೋಚನೆ ಇರುತ್ತದೆ


Click it and Unblock the Notifications











